Instant Personal Loan: ಎಲ್ಲರೂ ಲೋನ್ ಕೊಡುವುದು ನೋಡಿ, ಅಮೆಜಾನ್ ಲೋನ್ ಕೊಡಲು ನಿರ್ಧಾರ. ಟಕ್ ಅಂತ ಎರಡು ನಿಮಿಷದಲ್ಲಿ ಲೋನ್ ಪಡೆಯಿರಿ.
Instant Personal Loan: ನಮಸ್ಕಾರ ಸ್ನೇಹಿತರೇ ನಮಗೆ ಸಾಕಷ್ಟು ವಸ್ತುಗಳ ಅಗತ್ಯತೆ ಇರುತ್ತದೆ ಹಾಗೂ ಅವುಗಳನ್ನು ಖರೀದಿಸುವಂತಹ ಅವಶ್ಯಕತೆ ಇರುತ್ತದೆ. ಆದರೆ ಈ ಕೆಲಸವನ್ನು ಮಾಡೋದಕ್ಕೆ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಬೇಕಾಗಿರುವುದು ಕೂಡ ಅಗತ್ಯವಾಗಿರುತ್ತದೆ. ಲ್ಯಾಪ್ಟಾಪ್ ಮೊಬೈಲ್ ನಂತಹ ವಸ್ತುಗಳನ್ನು ಖರೀದಿಸುವುದು ಪ್ರಮುಖ ಎಂಬುದು ನಾವೆಲ್ಲರೂ ತಿಳಿದುಕೊಂಡಿದ್ದೇವೆ.
Table of Contents
ಆದರೆ ಆ ಸಂದರ್ಭದಲ್ಲಿ ಹಣ ಇಲ್ಲದೆ ಇದ್ದಲ್ಲಿ ಖರೀದಿಸಲು ಸಾಧ್ಯವಾಗುವುದಿಲ್ಲ. ಇವತ್ತಿನ ಲೇಖನಿಯಲ್ಲಿ Amazon Play Later ಮೂಲಕ ಯಾವ ರೀತಿಯಲ್ಲಿ ಲೋನ್ ಪಡೆದುಕೊಳ್ಳಬಹುದು ಎನ್ನುವುದರ ಬಗ್ಗೆ ನಿಮಗೆ ವಿವರಿಸಲು ಹೊರಟಿದ್ದೇವೆ. ಇಲ್ಲಿ ಸಾಲವನ್ನು ಪಡೆದು ನಿಮಗೆ ಬೇಕಾಗಿರುವಂತಹ ವಸ್ತುಗಳನ್ನು ಖರೀದಿಸಿ EMI ಮೂಲಕ ನೀವು ಕಂತುಗಳ ರೂಪದಲ್ಲಿ ಸಾಲದ ಹಣವನ್ನು ಕಟ್ಟಬಹುದಾಗಿದೆ.
Amazon Play Later ಅಂದ್ರೆ ಏನು? – What is Amazon Pay Later
ಆನ್ಲೈನ್ ಶಾಪಿಂಗ್ ನಲ್ಲಿ ಹಣ ಇಲ್ಲದೆ ಹೋದಲ್ಲಿ Amazon Play Later ಮೂಲಕ ಹಣವನ್ನು ಸಾಲವನ್ನು ಪಡೆಯುವುದರ ಮೂಲಕ ಕಟ್ಟಬಹುದು. ಇದನ್ನು ಎರಡು ರೀತಿಯಲ್ಲಿ ಪಡೆದುಕೊಳ್ಳಲಾಗುತ್ತದೆ. ಇದರಲ್ಲಿ ಎರಡು ರೀತಿಯ ವಿಧಗಳಿದ್ದು ಮೊದಲನೇದಾಗಿ ನೀವು ಸಾಲ ಪಡೆದುಕೊಂಡ ನಂತರದ ತಿಂಗಳಿನಲ್ಲಿಯೇ ಇದನ್ನು ಒಂದೇ ಸಮನೆ ಕಟ್ಟಬೇಕು. ಎರಡನೆಯ ಆಯ್ಕೆ ರೂಪದಲ್ಲಿ ನೀವು ಇದನ್ನು ಪ್ರತಿ ತಿಂಗಳು EMI ರೂಪದಲ್ಲಿ ಕಟ್ಟಬೇಕಾಗುತ್ತದೆ.
Amazon Play Later ಲೋನ್ ಪಡೆದುಕೊಳ್ಳುವ ಸಂದರ್ಭದಲ್ಲಿ ಗಮನಿಸಬೇಕಾಗಿರುವ ಅಂಶಗಳು. – Things to keep in mind before getting Instant Personal Loan from Amazon Pay Later.
ಮೊದಲಿಗೆ ನೀವು ಅಮೆಜಾನ್ ಬಳಕೆದಾರರಾಗಿರಬೇಕು ಹಾಗೂ ನಿಮ್ಮ ಕ್ರೆಡಿಟ್ ಸ್ಕೋರ್ ಆಧಾರದ ಮೇಲೆ ನಿಮಗೆ ಹಣ ಎಷ್ಟು ಸಿಗುತ್ತದೆ ಎಂಬುದು ನಿರ್ಧಾರವಾಗುತ್ತದೆ. ಪ್ರಾರಂಭಿಕ ಸಮಯಗಳಲ್ಲಿ ನಿಮಗೆ ಕಡಿಮೆ ಲೋನ್ ಸಿಗುತ್ತದೆ ಸಮಯ ಕಳೆಯುತ್ತಾ ಹೋದಂತೆ ಲೋನ್ ಹೆಚ್ಚಾಗುತ್ತಾ ಹೋಗುತ್ತದೆ. ಆಧಾರ್ ಕಾರ್ಡ್ ಮೊಬೈಲ್ ನಂಬರ್ ಜೊತೆಗೆ ಲಿಂಕ್ ಆಗಿರುವುದು ಪ್ರಮುಖವಾಗಿರುತ್ತದೆ.

ಒಂದು ವೇಳೆ ಸಾಲವನ್ನು ಪಡೆದುಕೊಂಡ ನಂತರದ ತಿಂಗಳಿನ ಒಂದರಿಂದ ಐದನೇ ತಾರೀಖಿನೊಳಗೆ ಹಣವನ್ನು ಕಟ್ಟಿದರೆ ಯಾವುದೇ ಶುಲ್ಕವನ್ನು ನೀಡಬೇಕಾದ ಅಗತ್ಯ ಇರುವುದಿಲ್ಲ. ನಿಮಗೆ ನೊ ಕಾಸ್ಟ್ ಇಎಂಐ ಸಿಗುತ್ತದೆ ಆದರೆ ಬಡ್ಡಿದರ 14 ರಿಂದ 24 ಪ್ರತಿಶತ ಆಗಿರುತ್ತದೆ. ಕ್ರೆಡಿಟ್ ಸ್ಕೋರ್ ಹೆಚ್ಚಾಗುತ್ತಿದ್ದಂತೆ ನಿಮಗೆ ಸಾಲು ಸಿಗುವಂತಹ ಹಣದ ಪ್ರಮಾಣ ಕೂಡ ಹೆಚ್ಚಾಗುತ್ತದೆ. ಇಲ್ಲಿಂದ ಸಿಗುವಂತಹ ಹಣ ಕೇವಲ ನಿಮ್ಮ ವಸ್ತು ಖರೀದಿಗೆ ಮಾತ್ರ ಯಾವುದೇ ರೀತಿಯಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುವುದಿಲ್ಲ.
Amazon Play Later ನಲ್ಲಿ ಲೋನ್ ಗೆ ಅಪ್ಲೈ ಮಾಡುವ ವಿಧಾನ ಹಾಗೂ ಬೇಕಾಗಿರುವ ಡಾಕ್ಯುಮೆಂಟ್ಗಳು- Documents required and How to apply for Loan.
ಮೊದಲಿಗೆ amazon ಅಪ್ಲಿಕೇಶನ್ ಓಪನ್ ಮಾಡಿ Your Account ಆಯ್ಕೆ ಮೇಲೆ ಕ್ಲಿಕ್ ಮಾಡಬೇಕಾಗಿರುತ್ತದೆ. ಅಲ್ಲಿ ಸ್ವಲ್ಪ ಸ್ಕ್ರಾಲ್ ಮಾಡಿದ ನಂತರ ಕಾಣಿಸಿಕೊಳ್ಳುವಂತಹ Amazon Play Later ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ಇಲ್ಲಿ ಕೇಳಲಾಗಿರುವಂತ ಡಾಕ್ಯುಮೆಂಟ್ ಗಳನ್ನು ನೀಡಿದ ನಂತರ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿರುವಂತಹ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ.
ಈ ಸಂದರ್ಭದಲ್ಲಿ ನಿಮ್ಮ ಕ್ರೆಡಿಟ್ ಸ್ಕೋರನ್ನು ಕೂಡ ಪರೀಕ್ಷಿಸಲಾಗುತ್ತದೆ. ನಿಮ್ಮ ಕ್ರೆಡಿಟ್ ಲಿಮಿಟ್ ಅನ್ನು ಪರಿಶೀಲಿಸಿದ ನಂತರ ಅದಕ್ಕೆ ಅರ್ಹ ಆಗಿರುವಂತಹ ಹಣವನ್ನು ನಿಮ್ಮ Amazon Play Later ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಇದರ ನಂತರ ಯಾವಾಗಲೂ ನಿಮ್ಮ ಅಗತ್ಯತೆಗಳು ಇರುತ್ತವೆಯೋ ಇಲ್ಲಿಂದ ನೀವು ಹಣವನ್ನು ಉಪಯೋಗಿಸಿಕೊಳ್ಳಬಹುದಾಗಿದೆ. ಇನ್ನು ಈ ಲೋನ್ (Instant Personal Loan) ಪಡೆದುಕೊಳ್ಳಲು ಬೇಕಾಗಿರುವಂತಹ ಪ್ರಮುಖ ಡಾಕ್ಯುಮೆಂಟ್ಗಳು ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಆಗಿರುತ್ತವೆ.
Amazon Pay Later ನಲ್ಲಿ ಲೋನ್ ಪಡೆದುಕೊಳ್ಳಲು ಬೇಕಾಗಿರುವಂತಹ ಅರ್ಹತೆಗಳು ಹಾಗೂ ಎಷ್ಟು ಲೋನ್ ಪಡೆದುಕೊಳ್ಳಬಹುದು? – Eligibility to get a Loan
ಮೊದಲಿಗೆ ನಿಮ್ಮ ಕ್ರೆಡಿಟ್ ಸ್ಕೋರ್ 600 ಅಂಕಗಳಿಂದ ಮೇಲಾಗಿದೆ ಬೇಕು. ನಿಮ್ಮ ಅಕೌಂಟ್ ಆಕ್ಟಿವ್ ಆಗಿರಬೇಕು ಆಧಾರ್ ಕಾರ್ಡ್ ಮೊಬೈಲ್ ನಂಬರ್ ಗೆ ಲಿಂಕ್ ಆಗಿರ್ಬೇಕು. ವಯಸ್ಸು 23 ಆಗಿರಬೇಕು. ಈ ಹಿಂದೆ ಲೋನ್ ಪಡೆದುಕೊಂಡು ಸರಿಯಾಗಿ ಕಟ್ಟಿದರೆ ಮಾತ್ರ ನಿಮಗೆ ಲೋನ್ ಸಿಗುತ್ತದೆ. 14 ರಿಂದ 24 ಪ್ರತಿಶತ ಬಡ್ಡಿದರ ನಿಮ್ಮ ಲೋನ್ ಮೇಲೆ ವಿಧಿಸಲಾಗುತ್ತದೆ. ಕ್ರೆಡಿಟ್ ಸ್ಕೋರ್ ಚೆನ್ನಾಗಿದ್ದಷ್ಟು ನಿಮಗೆ ಉತ್ತಮ ರೀತಿಯ ಲೋನ್ ಸೌಲಭ್ಯ ಸಿಗುತ್ತದೆ. ಆರಂಭಿಕವಾಗಿ ನಿಮಗೆ ಕಡಿಮೆ ಮಟ್ಟದ ಹಣವನ್ನು ಲೋನ್ ರೂಪದಲ್ಲಿ ನೀಡಲಾಗುತ್ತದೆ. 3000 ರೂಪಾಯಿಯಿಂದ ಅರವತ್ತು ಸಾವಿರ ರೂಪಾಯಿವರೆಗೂ ಕೂಡ ಲೋನ್ ನೀಡಲಾಗುತ್ತದೆ.
Comments are closed.