Get Instant Loan: ಯಾವುದೇ ಗ್ಯಾರಂಟಿ ಇಲ್ಲದೆ, ದಿಡೀರ್ ಎಂದು ನಿಂತಲ್ಲೇ ಲೋನ್ ಬೇಕೇ? ಈ ಆಪ್ ನಲ್ಲಿ ಅರ್ಜಿ ಹಾಕಿ. 20 ಸೆಕೆಂಡ್ ನಲ್ಲಿ ಹಣ.
Get Instant Loan: ನಮಸ್ಕಾರ ಸ್ನೇಹಿತರೇ ಸಾಕಷ್ಟು ಪರಿಸ್ಥಿತಿಗಳಲ್ಲಿ ನಮಗೆ ಚಿಕ್ಕ ದೊಡ್ಡ ಪ್ರಮಾಣದ ಪರ್ಸನಲ್ ಲೋನ್ ಅಗತ್ಯ ಇರುತ್ತದೆ. ಆ ಸಂದರ್ಭದಲ್ಲಿ ಸಾಕಷ್ಟು ಜನರಿಗೆ ಎಲ್ಲಿ ಸಾಲವನ್ನು ಪಡೆಯಬೇಕು ಎನ್ನುವುದರ ಬಗ್ಗೆ ಮಾಹಿತಿ ಇರುವುದಿಲ್ಲ. ಇವತ್ತಿನ ಲೇಖನಿಯಲ್ಲಿ ಯಾವ ರೀತಿಯಲ್ಲಿ 12ರಿಂದ 15 ಸಾವಿರ ರೂಪಾಯಿಗಳ ವರೆಗೆ ಇನ್ಸ್ಟಂಟ್ ಲೋನ್(Instant Loan) ಪಡೆದುಕೊಳ್ಳಬಹುದು ಅನ್ನುವುದರ ಬಗ್ಗೆ ನಿಮಗೆ ತಿಳಿಸಲು ಹೊರಟಿದ್ದೇವೆ. ಹೀಗಾಗಿ ತಪ್ಪದೆ ಲೇಖನಿಯನ್ನು ಕೊನೆವರೆಗೂ ಓದಿ.
Table of Contents
ಸಾಕಷ್ಟು ಬಾರಿ ನಿಮಗೆ ಹಣದ ಅತ್ಯಂತ ಅಗತ್ಯತೆ ಇರುವಾಗ ಬೇರೆಯವರನ್ನು ಕೇಳಿದಾಗ ಅವರು ಕೂಡಲೇ ನಿಮಗೆ ಹಣವನ್ನು ನೀಡುವುದಿಲ್ಲ ಎನ್ನುವುದು ನಿಮಗೆ ತಿಳಿದಿರುವಂತಹ ವಿಚಾರವಾಗಿದೆ. ಯಾವುದೇ ದೊಡ್ಡ ಮಟ್ಟದ ಪೇಪರ್ ವರ್ಕ್ ಇಲ್ಲದೆ ಅಥವಾ ಜಾಮಿನಿ ಇಲ್ಲದೆ ನಿಮಗೆ ಸಾಲವನ್ನು ಒದಗಿಸುವಂತಹ ಕೆಲಸವನ್ನು ಈ ಲೋನ್ ಅಪ್ಲಿಕೇಶನ್ ಮೂಲಕ ಮಾಡಲಾಗುತ್ತದೆ. ಖಂಡಿತವಾಗಿ ನಿಮಗೆ ಸಾಲ ಬೇಕಾಗುವಂತಹ ಸಂದರ್ಭದಲ್ಲಿ ಈ ವಿಧಾನದ ಮೂಲಕ ಸುಲಭ ರೂಪದಲ್ಲಿ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.
Gpay ಮೂಲಕ ಸಾಲ ಪಡೆದುಕೊಳ್ಳಬಹುದು – Now you can get instant loan from GPay
ಜನಪ್ರಿಯ ಆನ್ಲೈನ್ ಪೇಮೆಂಟ್ ಅಪ್ಲಿಕೇಶನ್ ಆಗಿರುವಂತಹ ಗೂಗಲ್ ಪೇ ತನ್ನ Google pay business ಮೂಲಕ 15,000 ವರೆಗೂ ಕೂಡ ಇನ್ಸ್ಟಂಟ್ ಲೋನ್ ನೀಡುವಂತಹ ಕೆಲಸವನ್ನು ಪ್ರಾರಂಭಿಸಿದೆ. ಈ ಮೂಲಕ ಚಿಕ್ಕ ಪುಟ್ಟ ವ್ಯಾಪಾರವನ್ನು ಮಾಡುವಂತಹ ಸಣ್ಣ ವ್ಯಾಪಾರಿಗಳಿಗೆ ಇದೊಂದು ಪರಿಹಾರ ರೀತಿಯಲ್ಲಿ ಕಾಣಿಸಿಕೊಳ್ಳುವಂತಹ ಯೋಜನೆಯಾಗಿದೆ.
ಗೂಗಲ್ ಪೇ ಅಪ್ಲಿಕೇಶನ್ ಮೂಲಕ ಇದುವರೆಗೂ ಕೇವಲ ಹಣವನ್ನು ಮಾತ್ರ ಟ್ರಾನ್ಸ್ಫರ್ ಮಾಡುವಂತಹ ಕೆಲಸವನ್ನು ಮಾಡಲಾಗುತ್ತಿತ್ತು ಆದರೆ ಈಗ ಈ ರೀತಿ ಸಣ್ಣ ಪ್ರಮಾಣದಿಂದ ಪ್ರಾರಂಭಿಸಿ ದೊಡ್ಡ ಪ್ರಮಾಣದವರೆಗೂ ಕೂಡ ಸಾಲವನ್ನು ಪಡೆದುಕೊಳ್ಳಬಹುದಾಗಿದ್ದು ಯಾವ ವಿಧಾನವನ್ನು ಅನುಸರಿಸುವ ಮೂಲಕ ಗೂಗಲ್ ಪೇ ಮೂಲಕ ಸಾಲವನ್ನು ಪಡೆದುಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ.
Gpay ಮೂಲಕ ಸಾಲವನ್ನು ಪಡೆದುಕೊಳ್ಳುವ ವಿಧಾನ- How to Apply for GPay Instant Loan
ಮೊದಲಿಗೆ ನೀವು ಗೂಗಲ್ ಪೇ ಬಿಜಿನೆಸ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿರಬೇಕು ಹಾಗೂ ಅದರಲ್ಲಿ ಖಾತೆಯನ್ನು ಹೊಂದಿರಬೇಕು. ಆ ಅಪ್ಲಿಕೇಶನ್ ನಲ್ಲಿ ಕಾಣಿಸಿಕೊಳ್ಳುವಂತಹ ಲೋನ್ ವಿಭಾಗದ ಆಫರ್ಸ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಅಲ್ಲಿ ಕಾಣಿಸಿಕೊಳ್ಳುವಂತಹ ಗೆಟ್ ಸ್ಟಾರ್ಟ್ ಆಪ್ಶನ್ ಅನ್ನು ಆಯ್ಕೆ ಮಾಡಿದ ನಂತರ ನೀವು ನಿಮಗೆ ಸಾಲವನ್ನು ನೀಡುವಂತಹ ಬೇರೆ ಬೇರೆ ಕಂಪನಿಗಳ ಮುಖಪುಟದಲ್ಲಿ ಪ್ರವೇಶವನ್ನು ಮಾಡುತ್ತೀರಿ.
ಲೇಟೆಸ್ಟ್ ಸುದ್ದಿ- ಎಲ್ಲರೂ ಲೋನ್ ಕೊಡುವುದು ನೋಡಿ, ಅಮೆಜಾನ್ ಲೋನ್ ಕೊಡಲು ನಿರ್ಧಾರ. ಟಕ್ ಅಂತ ಎರಡು ನಿಮಿಷದಲ್ಲಿ ಲೋನ್ ಪಡೆಯಿರಿ.
ಇಲ್ಲಿ ನೀವು ಗೂಗಲ್ ಖಾತೆಯ ಮೂಲಕ ಲಾಗಿನ್ ಆಗುವ ಮೂಲಕ ಹಾಗೂ ಅಲ್ಲಿ ಕೇಳಲಾಗುವಂತಹ ನಿಮ್ಮ ವೈಯಕ್ತಿಕ ವಿವರಗಳನ್ನು ಹಾಗೂ ಡಾಕ್ಯುಮೆಂಟ್ ಗಳನ್ನು ಒದಗಿಸುವ ಮೂಲಕ, ಸಾಲದ ಮೊತ್ತ ಎಷ್ಟು ಬೇಕು ಹಾಗೂ ಯಾವ ಅವಧಿಯ ಒಳಗೆ ಎಷ್ಟು ಕಂತುಗಳಲ್ಲಿ ಪಾವತಿ ಮಾಡುತ್ತೀರಿ ಎನ್ನುವುದನ್ನು ಆಯ್ಕೆ ಮಾಡುವ ಮೂಲಕ ಗೂಗಲ್ ಪೇ ಬಿಸಿನೆಸ್ ಸಾಲವನ್ನು ನೀವು ಪಡೆದುಕೊಳ್ಳಬಹುದಾಗಿದೆ.
Comments are closed.