Kannada Biggboss 10: ಬಿಗ್ ಬಾಸ್ ವಿನ್ನರ್ ಗೆಲ್ಲುವಂತಹ 50 ಲಕ್ಷ ಹಣದಲ್ಲಿ ಕೊನೆಗೆ ಅವರ ಕೈಗೆ ಸಿಗುವುದು ಎಷ್ಟು?

Here is the complete details Kannada Biggboss 10 Prize Money.

Kannada Biggboss 10 Pize Money details: ನಮಸ್ಕಾರ ಸ್ನೇಹಿತರೆ ನಮ್ಮ ಭಾರತದ ಕಿರುತರೆಯ ಕ್ಷೇತ್ರದಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ದೊಡ್ಡ ಹಾಗೂ ಅತ್ಯಂತ ಶ್ರೀಮಂತ ರಿಯಾಲಿಟಿ ಶೋ ರೂಪದಲ್ಲಿ ಕಾಣಿಸಿಕೊಳ್ಳುವಂತಹ ಕಾರ್ಯಕ್ರಮ ಅಂದ್ರೆ ಅದು ಖಂಡಿತವಾಗಿ ಬಿಗ್ ಬಾಸ್ (Biggboss). ನೂರು ದಿನಗಳ ಕಾಲ ಬೇರೆ ಬೇರೆ ಕ್ಷೇತ್ರದ ಸೆಲೆಬ್ರಿಟಿಗಳು ಒಂದು ಮನೆಯಲ್ಲಿ ಇದ್ದು ಕೊನೆಯಲಿ ಜಯಿಸಿ ಬರುವಂತಹ ವ್ಯಕ್ತಿಗೆ 50 ಲಕ್ಷ ರೂಪಾಯಿಗಳ ನಗದು ಬಹುಮಾನ ಜೊತೆಗೆ ಬೇರೆ ಬೇರೆ ಉಡುಗೊರೆಗಳನ್ನು ಕೂಡ ನೀಡಲಾಗುತ್ತದೆ. ಇವತ್ತಿನ ಲೇಖನಿಯಲ್ಲಿ ಕೂಡ ನಾವು ಇದೇ ಸತ್ಯವನ್ನು ನಿಮ್ಮ ಮುಂದೆ ಇಡಲು ಹೊರಟಿದ್ದೇವೆ.

Here is the complete details Kannada Biggboss 10 Prize Money.

ಇನ್ನು ಈ ಬಾರಿ ಕನ್ನಡದಲ್ಲಿ ನೋಡಿದರೆ ಹತ್ತನೇ ಸೀಸನ್ ನ ಬಿಗ್ ಬಾಸ್ ಪ್ರಾರಂಭವಾಗಿದೆ. ಈ ಬಾರಿಯ ವಿಜೇತರಿಗೆ ಕೂಡ ಅರ್ಧ ಕೋಟಿ ಅಂದ್ರೆ 50 ಲಕ್ಷ ರೂಪಾಯಿಗಳ ನಗದು ಬಹುಮಾನ ದೊರಕುತ್ತದೆ. ಸಾಕಷ್ಟು ಜನರು ತಿಳಿದುಕೊಂಡಿರುವ ಪ್ರಕಾರ ಗೆದ್ದಿರುವಂತಹ ಸ್ಪರ್ಧಿಗಳಿಗೆ ಸಂಪೂರ್ಣವಾಗಿ 50 ಲಕ್ಷ ರೂಪಾಯಿ ಹಣವನ್ನು ವಾಹಿನಿ ನೀಡುತ್ತದೆ ಎಂಬುದಾಗಿ. ಆದರೆ ನೀವು ತಿಳಿದುಕೊಳ್ಳಬೇಕಾಗಿರುವುದು ಏನೆಂದರೆ ಇದರಲ್ಲಿ ಬಹು ಪಾಲು ಸರ್ಕಾರದ ತೆರಿಗೆ ಹಣಕ್ಕೆ ಹೋಗುತ್ತದೆ ಅದರಲ್ಲೂ ವಿಶೇಷವಾಗಿ GST ಟ್ಯಾಕ್ಸ್ ಅನ್ನು ಕೂಡ ಕಟ್ಟ ಬೇಕಾಗಿರುತ್ತದೆ.

ಮತ್ತಷ್ಟು ಸುದ್ದಿಗಳು: Earn Money: ಮನೆಯಲ್ಲಿಯೇ ಕುಳಿತು ವಾಟ್ಸಪ್ಪ್ ಅನ್ನು ಬಳಸಿಕೊಂಡು ಹಣ ಗಳಿಸಿ- ನಿಮಗೆ ನೀವೇ ಬಾಸ್. ಯಾವುದೇ ಇನ್ವೆಸ್ಟ್ಮೆಂಟ್ ಬೇಕಾಗಿಲ್ಲ.

ಬಿಗ್ ಬಾಸ್ ಸ್ಪರ್ಧಿ ನಗದು ಬಹುಮಾನದ ಬಗ್ಗೆ ಬಹಿರಂಗವಾಗಿ ಹೇಳಿದ್ದೇನು?

ಈಗ ನಾವು ಮಾತನಾಡಲು ಹೊರಟಿರೋದು ತೆಲುಗು ಬಿಗ್ ಬಾಸ್ ನಲ್ಲಿ ವಿನ್ನರ್ ಆಗಿರುವಂತಹ ಸ್ಪರ್ಧಿಯ ಬಗ್ಗೆ. ತೆಲುಗು ಬಿಗ್ ಬಾಸ್ ಸೀಸನ್ 5 ಕಾರ್ಯಕ್ರಮದ ವಿನ್ನರ್ ಆಗಿರುವಂತಹ ಸನ್ನಿ ಹೇಳಿರುವ ಮಾಹಿತಿಯ ಪ್ರಕಾರ ಈ ಮೊದಲು ಕೇವಲ 10 ಲಕ್ಷ ರೂಪಾಯಿಗಳ ಟ್ಯಾಕ್ಸ್ ಅನ್ನು 50 ಲಕ್ಷ ರೂಪಾಯಿಗಳಲ್ಲಿ ಕಡಿತಗೊಳಿಸಲಾಗುತ್ತಿತ್ತು. ಆದರೆ ಈಗ ಜಿಎಸ್‌ಟಿ ಬಂದ ನಂತರ ಹೆಚ್ಚಾಗಿ ಟ್ಯಾಕ್ಸ್ ಅನ್ನು ಕಡಿತಗೊಳಿಸಲಾಗುತ್ತಿದೆ ಅದರಲ್ಲೂ ವಿಶೇಷವಾಗಿ ಸನ್ನಿ ಅವರ ಖುದ್ದಾಗಿ ಬಂದಿರುವಂತಹ ನಗದು ಬಹುಮಾನದ ಬಗ್ಗೆ ಮಾತನಾಡುತ್ತಾ 27 ಲಕ್ಷ ರೂಪಾಯಿಗಳ ಶುಲ್ಕವನ್ನು ಕಟ್ಟಿದ್ದೇನೆ ಎಂಬುದಾಗಿ ಕೂಡ ಹೇಳಿದ್ದಾರೆ. ಆ ಲೆಕ್ಕದಲ್ಲಿ ಅವರ ಕೈಗೆ ಸಿಕ್ಕಿರುವುದು ಕೇವಲ 23 ಲಕ್ಷ ಮಾತ್ರ ಅಂತ ಹೇಳಬಹುದು.

ನೂರು ದಿನಗಳ ಕಾಲ ಮನೆಯಲ್ಲಿ ಆಟವಾಡಿ ಗೆದ್ದಿದ್ದು ನಾನು ಆದರೆ ಬಹುಮಾನದ ಹಣದಲ್ಲಿ ಪಾಲು ಸಿಕ್ಕಿದ್ದು ಮಾತ್ರ ಸರ್ಕಾರಕ್ಕೆ ಎಂಬುದಾಗಿ ಸನ್ನಿ ಹೇಳಿಕೊಂಡಿದ್ದಾರೆ. ಹೆಚ್ಚು ಕಡಿಮೆ 50 ಪ್ರತಿಶತ ಅಂದ್ರೆ ಸರಿಸುಮಾರು 27 ಲಕ್ಷ ರೂಪಾಯಿಗಳವರೆಗು ಕೂಡ ಸರ್ಕಾರಕ್ಕೆ ಟ್ಯಾಕ್ಸ್ ರೂಪದಲ್ಲಿ ಕಟ್ಟಲಾಗಿದೆ. ಆಟ ನನ್ನದು ಬಹುಮಾನ ಮಾತ್ರ ಸರ್ಕಾರದ್ದು ಎನ್ನುವ ರೀತಿಯಲ್ಲಿ ಕೂಡ ಸನ್ನಿ ಈ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ.

ಸಾಕಷ್ಟು ಜನರಿಗೆ ಬಿಗ್ ಬಾಸ್ ನಲ್ಲಿ ಗೆದ್ದಿರುವಂತಹ ಹಣದಲ್ಲಿ ಈ ರೀತಿ ಟ್ಯಾಕ್ಸ್ ಅನ್ನು ಕಡಿತಗೊಳಿಸಿ ಉಳಿದಿರುವ ಹಣವನ್ನು ಮಾತ್ರ ನೀಡಲಾಗುತ್ತದೆ ಎನ್ನುವಂತಹ ಮಾಹಿತಿ ತಿಳಿದಿಲ್ಲ. ಕೇವಲ ತೆಲುಗು ಮಾತ್ರವಲ್ಲದೆ ಕನ್ನಡ ಸೇರಿದಂತೆ ಪ್ರತಿಯೊಂದು ಭಾಷೆಯ ವಿಜೇತರಿಗೆ ನೀಡುವಂತಹ ನಗದು ಬಹುಮಾನದಲ್ಲಿ ಕೂಡ ಇದೇ ರೀತಿ ಟ್ಯಾಕ್ಸ್ ಕಡಿತಗೊಳಿಸಿ ಹಣವನ್ನು ನೀಡಲಾಗುತ್ತದೆ. ಇನ್ನು ಈ ಬಾರಿಯ ಬಿಗ್ ಬಾಸ್ ಕನ್ನಡದಲ್ಲಿ ನೀವು ಯಾರ ಬೆಂಬಲಕ್ಕೆ ಇದ್ದೀರಿ ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿಕೊಡಬಹುದಾಗಿದೆ.

Comments are closed.