Railway: ಟಿಕೆಟ್ ಇಲ್ಲದೆ ಪ್ರಯಾಣ ಮಾಡಬಹುದೇ? ಯಾರಿಗೂ ತಿಳಿಯದ ರೈಲಿನ ನಿಯಮ ಏನು ಹೇಳುತ್ತೆ. ಈ ರೂಲ್ಸ್ ತಿಳ್ಕೊಂಡ್ರೆ ಹಬ್ಬಾನೇ.

Rules and Regulations of Ticket in Indian Railway

Railway: ನಮಸ್ಕಾರ ಸ್ನೇಹಿತರೆ ಪ್ರಯಾಣ ದೊಡ್ಡದಿರಲಿ ಅಥವಾ ಚಿಕ್ಕದಿರಲಿ ನಮ್ಮ ಭಾರತೀಯರು ಹೆಚ್ಚಾಗಿ ರೈಲ್ವೆ ಪ್ರಯಾಣವನ್ನೇ ಆಯ್ಕೆ ಮಾಡುತ್ತಾರೆ. ಉತ್ತಮವಾದ ಸೀಟ್ಗಳು, ಎಸಿ ಬೋಗಿಗಳು, ಆಹಾರದ ಸಪ್ಲೈ ಸೇರಿದಂತೆ ಪ್ರತಿಯೊಂದು ಪ್ರಯೋಜನಗಳನ್ನು ಕೂಡ ನೀವು ರೈಲ್ವೆ ಪ್ರಯಾಣದ ಸಂದರ್ಭದಲ್ಲಿ ರೈಲ್ವೆ ಇಲಾಖೆಯಿಂದ (Indian railway department) ಪಡೆದುಕೊಳ್ಳಬಹುದಾಗಿದೆ. ಹಬ್ಬದ ಸಂದರ್ಭದಲ್ಲಿ ನಿಮಗೆಲ್ಲರಿಗೂ ತಿಳಿದಿರಬಹುದು ರೈಲ್ವೆ ಟಿಕೆಟ್ ಅನ್ನು ಪಡೆದುಕೊಳ್ಳುವುದು ಅಷ್ಟೊಂದು ಸುಲಭದ ಮಾತಲ್ಲ. ಟಿಕೆಟ್ ಬೆಲೆ ಕೂಡ ಹೆಚ್ಚಾಗಿರುತ್ತದೆ ಮಾತ್ರವಲ್ಲದೆ ಟಿಕೆಟ್ ಸಿಗೋದು ಕೂಡ ಕಷ್ಟ ಅದಕ್ಕಾಗಿ ಸಾಕಷ್ಟು ವಾರ ತಿಂಗಳುಗಳ ಮುಂಚೇನೆ ಸಾಕಷ್ಟು ಜನರು ರೈಲ್ವೆ ಟಿಕೆಟ್ ಬುಕ್ ಮಾಡ್ತಾರೆ. ಹಾಗಿದ್ರೆ ಬನ್ನಿ ಇವತ್ತಿನ ಲೇಖನಿಯಲ್ಲಿ ರೈಲ್ವೆ ಟಿಕೆಟ್ ಇಲ್ಲದೆ ಪ್ರಯಾಣ ಮಾಡೋದು ಎಷ್ಟು ಸರಿ ಎಷ್ಟು ತಪ್ಪು ಎನ್ನುವುದನ್ನು ತಿಳಿದುಕೊಳ್ಳೋಣ.

ಇದನ್ನು ಕೂಡ ಓದಿ: Personal Loan: ಕಷ್ಟದ ಸಮಯದಲ್ಲಿ ಬ್ಯಾಂಕ್ ಲೋನ್ ಕೊಟ್ಟಿಲ್ಲ ಅಂದ್ರೆ- ಈ ಆಪ್ ಅಲ್ಲಿ ಲೋನ್ ತಗೋಳಿ. ಟಕ ಟಕ ಅಂತ ಅಕೌಂಟ್ ಗೆ ಹಾಕ್ತಾರೆ

Rules and Regulations of Ticket in Indian Railway

ಸಾಮಾನ್ಯವಾಗಿ ತಿಳಿದುಕೊಂಡಿರುವ ಪ್ರಕಾರ ಒಂದು ವೇಳೆ ನೀವು ಯಾವುದೇ ರೈಲ್ವೆ ಟಿಕೆಟ್ ಇಲ್ಲದೆ ಪ್ರಯಾಣ ಮಾಡುವಾಗ ಸಿಕ್ಕಿಬಿದ್ದರೆ ಅದು ದಂಡನಾರ್ಹ ಅಪರಾಧ ಎಂಬುದನ್ನು ರೈಲ್ವೆ ಇಲಾಖೆಯ ನಿಯಮಗಳಲ್ಲಿ ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಈ ರೀತಿ ಮಾಡಿದ್ರೆ ನಿಮ್ಮ ಮೇಲೆ ದಂಡವನ್ನು ವಿಧಿಸಲಾಗುತ್ತದೆ ಅಥವಾ ಜೈಲು ಶಿಕ್ಷೆ ಆಗುತ್ತದೆ ಇಲ್ಲವೇ ಎರಡು ಶಿಕ್ಷೆಯನ್ನು ಕೂಡ ನೀವು ಅನುಭವಿಸಬೇಕಾಗುತ್ತದೆ.

ತುರ್ತು ಪರಿಸ್ಥಿತಿಯಲ್ಲಿ ಈ ರೀತಿ ಮಾಡಬಹುದು: ಒಂದು ವೇಳೆ ನೀವು ಯಾವುದೋ ಕೆಲಸಕ್ಕಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಬೇಕಾಗಿ ಬಂದಿದೆ ಹಾಗೂ ಅದಕ್ಕಾಗಿ ನೀವು ರೈಲ್ವೆ ಪ್ರಯಾಣವನ್ನೇ ಆಯ್ಕೆ ಮಾಡಬೇಕಾಗಿರುತ್ತದೆ, ಹಾಗೂ ಈ ಸಂದರ್ಭದಲ್ಲಿ ನೀವು ಯಾವುದೇ ಕನ್ಫರ್ಮ್ ಟಿಕೇಟ್ ಅನ್ನು ಬುಕ್ ಮಾಡಿರುವುದಿಲ್ಲ ಆ ಸಂದರ್ಭದಲ್ಲಿ ಏನು ಮಾಡಬೇಕು ಅಂದ್ರೆ ಪ್ಲಾಟ್ ಫಾರ್ಮ್ ಟಿಕೆಟ್(platform ticket) ಅನ್ನು ನೀವು ಪಡೆದುಕೊಳ್ಳಬಹುದಾಗಿದೆ. ಇದು ಒಂದು ಒಳ್ಳೆ ಆಯ್ಕೆಯಾಗಿದೆ.

ಇನ್ನು ರೈಲ್ವೆ ಭೋಗಿಯನ್ನು ಹತ್ತಿದ ಕೂಡಲೇ ನೀವು ಮೊದಲು ಕಾಣಬೇಕಾಗಿರುವುದು TTE ಅನ್ನು. ಅವರ ಬಳಿಗೆ ಹೋಗಿ ನೀವು ಯಾವ ಕಾರಣಕ್ಕಾಗಿ ರೈಲ್ವೆ ಪ್ರಯಾಣ ಮಾಡುತ್ತಿದ್ದೀರಿ ಹಾಗೂ ಯಾವ ತುರ್ತು ಪರಿಸ್ಥಿತಿ ಇದೆ ಎನ್ನುವುದನ್ನು ಸರಿಯಾದ ರೀತಿಯಲ್ಲಿ ಅವರಿಗೆ ಅರ್ಥ ಮಾಡಿಸಬೇಕು. ಈ ಸಂದರ್ಭದಲ್ಲಿ ರೈಲಿನಲ್ಲಿ ನೀವು ಎಲ್ಲಿವರೆಗೆ ಹೋಗಬೇಕು ಅಲ್ಲಿವರೆಗೆ ಹಣ ನೀಡಿ ಟಿಟಿಇ ಬಳಿ ಟಿಕೆಟ್ ಪಡೆದುಕೊಂಡು ಯಾವುದೇ ಚಿಂತೆ ಇಲ್ಲದೆ ಪ್ರಯಾಣ ಮಾಡಬಹುದಾಗಿದೆ.

Rules and Regulations of Ticket in Indian Railway
Rules and Regulations of Ticket in Indian Railway

ನೀವು ಪ್ರಯಾಣಿಸುವ ಜಾಗಕ್ಕೆ ಟಿಕೆಟ್ ಅನ್ನು ಕೂಡ ಅವರಿಂದ ಪಡೆದುಕೊಳ್ಳಬೇಕಾಗುತ್ತದೆ ಹಾಗೂ ಸ್ವಲ್ಪ ಪ್ರಮಾಣದಲ್ಲಿ ಫೈನ್ ಅನ್ನು ಕೂಡ ಕಟ್ಟಬೇಕಾಗುತ್ತದೆ ಯಾಕೆಂದರೆ ನಿಮ್ಮ ಬಳಿ ಕನ್ಫರ್ಮ್ ಟಿಕೆಟ್ ಇಲ್ಲ ಎನ್ನುವ ಕಾರಣಕ್ಕಾಗಿ. ಒಂದು ವೇಳೆ ರೈಲಿನಲ್ಲಿ ಯಾವುದಾದರೂ ಸೀಟ್ ಖಾಲಿ ಇದ್ದರೆ ನೀವು ಟಿಟಿ ಬಳಿ ಕೇಳಿ ಪಡೆದುಕೊಳ್ಳಬಹುದಾಗಿದ್ದು ಈ ರೀತಿ ಕೂಡ ನೀವು ತುರ್ತು ಸಂದರ್ಭದಲ್ಲಿ ರೈಲ್ವೆ ಪ್ರಯಾಣವನ್ನು ಸುರಕ್ಷಿತವಾಗಿ ಮಾಡಬಹುದಾಗಿದೆ.

Comments are closed.