ಹಲವು ದೇಶಗಳಲ್ಲಿ ಬ್ಯಾನ್ ಆದರೂ ಭಾರತದಲ್ಲಿ ನೀವು ದಿನನಿತ್ಯ ಬಳಸುತ್ತಿರುವ ವಸ್ತುಗಳು ಯಾವುವು ಗೊತ್ತಾ??

ನಮಸ್ಕಾರ ಸ್ನೇಹಿತರೇ ನೀವು ದಿನನಿತ್ಯ ಬಳಸುವ ಸೋಪು, ಬಟ್ಟೆ, ಶ್ಯಾಂಪುಗಳು ಭಾರತದಂತಹ ದೇಶಗಳಲ್ಲಿ ಗಲ್ಲಿ ಗಲ್ಲಿಯಲ್ಲೂ ದೊರೆಯುತ್ತಿವೆ. ಆದರೇ ವಿಪರ್ಯಾಸ ಎಂದರೇ ಅಂತಹ ಕೆಲವು ವಸ್ತುಗಳನ್ನು ವಿದೇಶಗಳು ಸಂಪೂರ್ಣವಾಗಿ ನಿಷೇಧಿಸಲ್ಪಟ್ಟಿವೆ. ಆ ದೇಶಗಳಲ್ಲಿ ಈ ವಸ್ತುಗಳನ್ನು ಬಳಸುವುದು ಹಾಗೂ ಮಾರುವುದು ಶಿಕ್ಷಾರ್ಹ ಅಪರಾಧವಾಗಿದೆ. ಅಂತಹ ಕೆಲವು ವಸ್ತುಗಳು ಈ ಕೆಳಗಿನಂತಿವೆ. ಬನ್ನಿ ಆ ವಸ್ತುಗಳನ್ನ ತಿಳಿಯೋಣ.

ಡಿಸ್ಪಿರನ್ ಟ್ಯಾಬ್ಲೇಟ್ – ಭಾರತದಲ್ಲಿ ಕತ್ತು ನೋವಿನಿಂದ ಬಳಲುತ್ತಿರುವ ಬಹುತೇಖ ಜನರು ಮುಗಿಬಿದ್ದು ಮೆಡಿಕಲ್ ಗಳಲ್ಲಿ ಖರೀದಿ ಮಾಡುವುದು ಡಿಸ್ಪಿರನ್ ಟ್ಯಾಬ್ಲೇಟ್ ಗಳನ್ನು. ಇದು ಮಾರುಕಟ್ಟೆಯಲ್ಲಿ ಯಥೇಚ್ಛವಾಗಿ ದೊರೆಯುತ್ತಿದೆ. ಆದರೇ ಇದು ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡ ಪರಿಗಣಿಸಿದ ಕಾರಣ, ಯುರೋಪ್ ಹಾಗೂ ಅಮೇರಿಕಾ ಖಂಡಗಳಲ್ಲಿ ನಿಷೇಧಿಸಲಾಗಿದೆ. ಆದರೇ ಭಾರತದಲ್ಲಿ ಸುಲಭವಾಗಿ ಸಿಗುತ್ತಿದೆ.

ಜೆಲ್ಲಿ ಚಾಕಲೇಟ್ – ಭಾರತದ ಮಕ್ಕಳು ಅಂಗಡಿಯಲ್ಲಿ ಸುಲಭವಾಗಿ ಸಿಗುವ ಜೆಲ್ಲಿ ಚಾಕಲೇಟುಗಳಿಗೆ ಮೊರೆ ಹೋಗುತ್ತಾರೆ. ಆದರೇ ಅಮೇರಿಕಾ, ಐರೋಪ್ಯ ದೇಶಗಳಲ್ಲಿ ಈ ಚಾಕಲೇಟ್ ಸಂಪೂರ್ಣ ನಿಷೇಧಿಸಿದೆ. ಈ ಚಾಕಲೇಟ್ ಮಕ್ಕಳಲ್ಲಿ ಉಸಿರಾಟದ ಸಮಸ್ಯೆ ಹೆಚ್ಚಿಸುತ್ತದೆ ಎಂಬ ವರದಿ ಇದೆ.

ಕಿಂಡರ್ ಜಾಯ್ – ಮಕ್ಕಳ ಫೇವರೇಟ್ ಚಾಕಲೇಟ್. ಭಾರತದ ಅಂಗಡಿಗಳಲ್ಲಿ ಸುಲಭವಾಗಿ ದೊರೆಯುತ್ತಿದೆ. ಆದರೇ ಅಮೇರಿಕಾದಲ್ಲಿ ಇದನ್ನು ಮಕ್ಕಳಿಗೆ ಮಾರುವುದು ಶಿಕ್ಷಾರ್ಹ ಅಪರಾಧವಾಗಿದೆ.

ರೆಡ್ ಬುಲ್ ಎನರ್ಜಿ ಡ್ರಿಂಕ್ – ಭಾರತದ ಯುವಕರ ಸ್ಟೈಲಿಶ್ ಡ್ರಿಂಕ್ ಅಂದರೇ ರೆಡ್ ಬುಲ್ ಎನರ್ಜಿ ಡ್ರಿಂಕ್. ಡೆನ್ಮಾರ್ಕ್ ದೇಶದಲ್ಲಿ ಈ ಡ್ರಿಂಕ್ ನ್ನು ಸಂಪೂರ್ಣ ನಿಷೇಧಿಸಲಾಗಿದೆ. ಈ ಡ್ರಿಂಕ್ ಕುಡಿಯುವುದರಿಂದ ಹೃದಯಾಘಾತ ಸಂಭವಿಸುವ ಸಾಧ್ಯತೆ ಇದೆ ಎಂಬ ವರದಿ ಇದೆ. ಆದರೆ ಭಾರತದಲ್ಲಿ ಈ ಡ್ರಿಂಕ್ ಗಲ್ಲಿ ಗಲ್ಲಿಗಳಲ್ಲಿ ಯಥೇಚ್ಛವಾಗಿ ದೊರೆಯುತ್ತಿದೆ.

ವಿಕ್ಸ್: ಕೆಮ್ಮು, ನೆಗಡಿ ಮತ್ತು ದಟ್ಟಣೆಯಿಂದ ತ್ವರಿತ ಪರಿಹಾರ ಪಡೆಯಲು ವಿಕ್ಸ್ ವಾಪೊರಬ್ ಭಾರತದಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಆದಾಗ್ಯೂ, ಇದನ್ನು ಅನೇಕ ಯುರೋಪಿಯನ್ ಮತ್ತು ಉತ್ತರ ಅಮೆರಿಕಾದ ದೇಶಗಳಲ್ಲಿ ನಿಷೇಧಿಸಲಾಗಿದೆ. ವರದಿಯಾಗಿರುವಂತೆ, ವಿಕ್ಸ್ ವಾಪೋರಬ್‌ನಲ್ಲಿ ಕಂಡುಬರುವ ಘಟಕಾಂಶವು ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು ಎಂದು.

ಲೈಫ್ ಬಾಯ್ ಸೋಪ್ – ಲೈಫ್ ಬಾಯ್ ಎಲ್ಲಿದೆಯೋ ಅಲ್ಲಿದೆ ಆರೋಗ್ಯ ಎಂಬ ಜಾಹೀರಾತು ನೋಡಿರುತ್ತಿರಿ. ಆದರೇ ಈ ಸೋಪ್ ನ್ನು ಅಮೇರಿಕಾ ಸಂಪೂರ್ಣ ನಿಷೇಧಿಸಿದೆ. ಅಲ್ಲಿ ಈ ಸೋಪು ಬಳಸುವುದರಿಂದ ಚರ್ಮದ ರೋಗಗಳು ಬರುತ್ತವೆ ಎಂಬ ವರದಿ ಇದೆಯಂತೆ. ಅಲ್ಲಿ ಈ ಸೋಪನ್ನ ಕೇವಲ ಸಾಕುನಾಯಿಗಳ ಸ್ನಾನಕ್ಕೆ ಬಳಸಲಾಗುತ್ತದೆಯಂತೆ. ಆದರೇ ಭಾರತದಲ್ಲಿ ಈ ಸೋಪು ಹಲವರ ಮನೆಯ ಮಾಮೂಲಿ ಸೋಪ್ ಆಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.

Comments are closed.