ಈ ಫೋಟೋದಲ್ಲಿರುವ ದಡ್ಡ ವ್ಯಕ್ತಿ ಯಾರು ಎಂದು ಆಯ್ಕೆ ಮಾಡಿ, ನಿಮ್ಮ ವ್ಯಕಿತ್ವವನ್ನು ತಿಳಿಯಿರಿ, ಆಯ್ಕೆ ಮಾಡಿ ನಂತರ ನೋಡಿ.

ನಮಸ್ಕಾರ ಸ್ನೇಹಿತರೇ, ನಮ್ಮೆಲ್ಲರ ವಿಚಾರಗಳೂ ಬೇರೆ ಬೇರೆ, ನಮ್ಮೆಲ್ಲರ ಯೋಚನೆಗಳೂ ಬೇರೆ ಬೇರೆ, ನೋಟ ಬೇರೆ, ನಡೇ ನಡಿಗಳು ಬೇರೆ. ಒಬ್ಬರು ಇರುವ ಹಾಗೇ ಇನ್ನೊಬ್ಬರು ಇರಲು ಸಾಧ್ಯವೇ ಇಲ್ಲ, ಹಾಗ್ಯೇ ನಮ್ಮ ಆಯ್ಕೆಗಳೂ ಕೂಡ ವಿಭಿನ್ನವಾಗಿವೆ. ಬಣ್ಣವಾಗಿರಬಹುದು, ಪ್ರಾಣಿಯಾಗಿರಬಹುದು, ವಸ್ತುವಾಗಿರಬಹುದು, ಅಥವಾ ಒಂದು ಒಗಟಿನ ಬಗ್ಗೆ ನಮ್ಮ ಉತ್ತರವಾಗಿರಬಹುದು, ಒಂದೇ ರೀತಿಯ ಚಿಂತನೆ, ಆಲೋಚನೆ, ವರ್ತನೆ ಮನಷ್ಯನಲ್ಲಿ ಇರಲು ಸಾಧ್ಯವೇ ಇಲ್ಲ,

dadda | ಈ ಫೋಟೋದಲ್ಲಿರುವ ದಡ್ಡ ವ್ಯಕ್ತಿ ಯಾರು ಎಂದು ಆಯ್ಕೆ ಮಾಡಿ, ನಿಮ್ಮ ವ್ಯಕಿತ್ವವನ್ನು ತಿಳಿಯಿರಿ, ಆಯ್ಕೆ ಮಾಡಿ ನಂತರ ನೋಡಿ.
ಈ ಫೋಟೋದಲ್ಲಿರುವ ದಡ್ಡ ವ್ಯಕ್ತಿ ಯಾರು ಎಂದು ಆಯ್ಕೆ ಮಾಡಿ, ನಿಮ್ಮ ವ್ಯಕಿತ್ವವನ್ನು ತಿಳಿಯಿರಿ, ಆಯ್ಕೆ ಮಾಡಿ ನಂತರ ನೋಡಿ. 3

ಒಬ್ಬರಿಗಿಂತ ಒಬ್ಬರು ವಿಭಿನ್ನವಾಗಿಯೇ ಇರುತ್ತಾರೆ. ಕೆಲವೊಮ್ಮೆ ನಮ್ಮ ಆಯ್ಕೆಯು ನಮ್ಮ ವ್ಯಕ್ತಿತ್ವವನ್ನು ಹೇಳುತ್ತದೆ. ಉದಾಹರಣೆಗೆ ಒಂದು ವ್ಯಕ್ತಿತ್ವ ಪರೀಕ್ಷೆಯನ್ನು ಮಾಡಿದರೆ ಅದರಲ್ಲಿ ನೀವು ಆಯ್ಕೆ ಮಾಡುವ ಉತ್ತರ ನೀವು ಎಂಥಹ ಸ್ವಭಾವವನ್ನು ಹೊಂದಿರುವವರು ಎಂಬುದನ್ನು ಹೇಳುತ್ತೇವೆ. ಇಲ್ಲಿ ನಾವೊಂದು ವ್ಯಕ್ತಿತ್ವ ಪರೀಕ್ಷೆಯನ್ನು ನಿಮಗಾಗಿ ಮಾಡುತ್ತಿದ್ದೇವೆ. ಅದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ. ಈ ಚಿತ್ರದಲ್ಲಿ ದಡ್ಡ ಅಥವಾ ಮೂರ್ಖ ಯಾರು ಎಂಬುದನ್ನು ಹೇಳಬೇಕು. ನಿಮ್ಮ ಆಯ್ಕೆ 1, 2, 3, 4 ಈ ನಾಲ್ಕು ಸಂಖ್ಯೆಗಳಲ್ಲಿ ಒಂದಾಗಿರಬೇಕು.

ಒಂದು ವೇಳೆ ನಿಮ್ಮ ಆಯ್ಕೆಯು ಸಂಖ್ಯೆ 1 ಆಗಿದ್ದರೆ, ಬೀಳುತ್ತಿರುವ ಕೊಂಬೆಯನ್ನು ಬಿಗಿಯಾಗಿ ಹಿಡಿದು ಕುಳಿತಿರುವ ವ್ಯಕ್ತಿ. ಇದರ ಅರ್ಥ ಇಂಥ ವ್ಯಕ್ತಿಗಳು ಸನ್ನಿವೇಶಗಳಿಗೆ ತಲೆಬಾಗುತ್ತಾರೆ. ಯಾವುದಕ್ಕೂ ವಿರೋಧ ವ್ಯಕ್ತಪಡಿಸುವುದಿಲ್ಲ. ಪರಿಸ್ಥಿತಿಗೆ ಸಿಕ್ಕಿ ತೊಂದರೆಯನ್ನು ಅನುಭವಿಸುತ್ತಾರೆ. ಆದರೆ ಯಾವುದೇ ನಿಯಮವನ್ನೂ ಹಾಗೆಯೇ ಪಾಲಿಸಿಕೊಂಡು ಹೋಗುವ ವ್ಯಕ್ತಿತ್ವ. ಇವರು ಸಾಮಾನ್ಯವಾಗಿ ವಾದಿಸುವುದಿಲ್ಲ ಅಥವಾ ನಿಯಮದಂತೆ ಮಾತನಾಡುವುದಿಲ್ಲ ಮತ್ತು ವಿಷಯಗಳನ್ನು ಶಾಂತವಾಗಿ ನಿರ್ವಹಿಸುತ್ತಾರೆ. ದಯೆ ಹಾಗೂ ಪ್ರಾಮಾಣಿಕತೆಯುಳ್ಳ ವ್ಯಕ್ತಿ ಇವರು.

ಇನ್ನು ನಿಮ್ಮ ಆಯ್ಕೆ 2 ಎಂದಾಗಿದ್ದರೆ, ನೀವು ಯಾವಾಗಲೂ ಅವಸರದ ನಿರ್ಧಾರವನ್ನು ತೆಗೆದುಕೊಳ್ಳುತ್ತೀರಿ. ಯಾವುದೇ ನಿರ್ಧಾರ ಅಥವಾ ತೀರ್ಮಾನಗಳಿಗೆ ಸಮಯ ಕೊಡುವುದಿಲ್ಲ. ನೀವೇನಾದರೂ ಹೆಚ್ಚು ಸಮಯ ತೆಗೆದುಕೊಂಡು ನಿರ್ಧಾರಗಳನ್ನು ಕೈಗೊಂಡರೆ ಅದು ನಿಮಗೆ ಇನ್ನೂ ಉತ್ತಮ ಫಲಿತಾಂಶವನ್ನು ನೀಡುತ್ತದೆ. ನಿಮ್ಮ ಸುತ್ತಮುತ್ತಲಿನ ಜನ ನೀವು ಯಾವುದಕ್ಕೂ ಮಣಿಯದ / ತಲೆಬಾಗದ ವ್ಯಕ್ತಿ ಎಂದು ಪರಿಗಣಿಸುತ್ತಾರೆ.

ಹಾಗೆಯೇ ಆಯ್ಕೆಯ ಸಂಖ್ಯೆ 3 ಎಂಬುದಾಗಿದ್ದರೆ, ನೀವು ಯಾವುದೇ ಸಮಯದಲ್ಲೂ ನಂಬಿಕೆ, ಸ್ವವಿಶ್ವಾಸವನ್ನು ಕಳೆದುಕೊಳ್ಳದ ವ್ಯಕ್ತಿ. ಯುದ್ಧದ ಕೊನೆಯವರೆಗೂ ಕೈಬಿಡದೇ ಹೋರಾಡುತ್ತೀರಿ ಎಂದರ್ಥ. ನೀವು ಯಾವುದೇ ಪರಿಸ್ಥಿತಿಗೂ ಶರಣಾಗುವುದಿಲ್ಲ, ಬದಲಿಗೆ ಆರಂಭದಿಂದ ಕೊನೆಯವರೆಗೂ ನಿಂತು ಆ ಸನ್ನಿವೇಶವನ್ನು ಎದುರಿಸುತ್ತೀರಿ. ನೀವು ಪ್ರತಿ ಸನ್ನಿವೇಶದಲ್ಲೂ ಹೊಸ ಆಲೋಚನೆ, ವಿಶೇಷ ತಂತ್ರಗಳನ್ನು ರೂಪಿಸುವುದನ್ನು ನೋಡಿದರೆ ಒಬ್ಬ ವ್ಯಾಪಾರಿಯಾಗಿ ಬೆಳೆಯುವ ನಿರೀಕ್ಷೆ ಇದೆ.

chanakya 7 | ಈ ಫೋಟೋದಲ್ಲಿರುವ ದಡ್ಡ ವ್ಯಕ್ತಿ ಯಾರು ಎಂದು ಆಯ್ಕೆ ಮಾಡಿ, ನಿಮ್ಮ ವ್ಯಕಿತ್ವವನ್ನು ತಿಳಿಯಿರಿ, ಆಯ್ಕೆ ಮಾಡಿ ನಂತರ ನೋಡಿ.
ಈ ಫೋಟೋದಲ್ಲಿರುವ ದಡ್ಡ ವ್ಯಕ್ತಿ ಯಾರು ಎಂದು ಆಯ್ಕೆ ಮಾಡಿ, ನಿಮ್ಮ ವ್ಯಕಿತ್ವವನ್ನು ತಿಳಿಯಿರಿ, ಆಯ್ಕೆ ಮಾಡಿ ನಂತರ ನೋಡಿ. 4

ಇನ್ನು ಕೊನೆಯದಾಗಿ ನಿಮ್ಮ ಆಯ್ಕೆ ಸಂಖ್ಯೆ 4 ಆಗಿದ್ದರೆ, ನೀವು ಒಬ್ಬ ನಿಜವಾದ ಹೋರಾಟಗಾರ! ನಿವು ಒಂದು ಅಂಶವನ್ನು ಪ್ರೂವ್ ಮಾಡಲು ನಿಮ್ಮ ವಿರುದ್ದವೇ ನೀವು ನಿಲ್ಲಬಹುದು, ಅಂಥ ಛಲಗಾರ ವ್ಯಕ್ತಿತ್ವ ಹೊಂದಿರುವವರು. ಈ ಸಂದರ್ಭದಲ್ಲಿ, ಅಂದರೆ ನಿಮ್ಮ ಮುನ್ನುಗ್ಗುವ ವಿಪರೀತತೆಯಿಂದಾಗಿ ನಿಮಗೇ ನೀವು ಸಮಸ್ಯೆ ತಂದುಕೊಳ್ಳುವ ಸನ್ನಿವೇಷವೂ ಇರುತ್ತದೆ. ಆದರೆ ಅಂದುಕೊಂಡದ್ದನ್ನು ಸಾಧಿಸುವವರು ಎನ್ನಬಹುದು. ಈ ನಾಲ್ಕು ಸಂಖ್ಯೆಗಳಲ್ಲಿ ನಿಮ್ಮ ಆಯ್ಕೆ ಸಂಖ್ಯೆಯನ್ನು ಕಮೆಂಟ್ ಮಾಡಿ ತಿಳಿಸಿ. ನಿಮ್ಮ ವ್ಯಕ್ತಿತ್ವ ಎಂಥದ್ದು ಎಂಬುದನ್ನು ಪರಿಶೀಲಿಸಿ.

Comments are closed.