ಕಡಿಮೆ ಬಂಡವಾಳದಿಂದ ಲಕ್ಷ ಲಕ್ಷ ಲಾಭಗಳಿಸಬಹುದಾದ ಸುಲಭ ಉದ್ಯಮ ಯಾವುದು ಗೊತ್ತೇ? ಕೆಲಸ ಬಿಡಿ ನಿಮಗೆ ನೀವೇ ಬಾಸ್ ಆಗಿ.

ನಮಸ್ಕಾರ ಸ್ನೇಹಿತರೇ, ನೀವೇನಾದರೂ ಸ್ವ ಉದ್ಯೋಗ ಮಾಡಲು ಬಯಸಿದ್ದೀರಾ? ಹಾಗಾದರೆ ನಾವೊಂದು ಲಾಭದಾಯಕ ಉದ್ದಿಮೆಯ ಸಲಹೆಯೊಂದಿಗೆ ಬಂದಿದ್ದೇವೆ. ಇಲ್ಲಿ ಬಂಡವಾಳವೂ ಕದಿಮೆ ಜೊತೆಗೆ ಸರ್ಕಾರದಿದ ಸಂಪೂರ್ಣ ಸಹಾಯ ಪಡೆದು ಈ ಉದ್ದಿಮೆಯನ್ನು ಆರಂಭಿಸಬಹುದು.

ನೀವು ಸುಲಭವಾಗಿ ಶುರು ಮಾಡಬಹುದಾದ ಉದ್ದಿಮೆಯೇ ಪೋಹಾ ಘಟಕ ಸ್ಥಾಪಿಸುವುದು. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಸಿದ್ಧಪಡಿಸಿರುವ ಯೋಜನಾ ವಿವರದ ವರದಿಯ ಪ್ರಕಾರ, ಪೋಹಾ ಉತ್ಪಾದನಾ ಘಟಕದ ಯೋಜನಾ ವೆಚ್ಚ ಸುಮಾರು 2.43 ಲಕ್ಷ ರೂಪಾಯಿ ಆಗಬಹುದು. ಅರೇ, ಇದೇನು ಕಡಿಮೆ ಬಂಡವಾಳ ಹೂಡಿಕೆ ಅಂದ್ರಿ ಅಂತಾನಾ.. ಈ ವ್ಯವಹಾರ ಪ್ರಾರಂಭಿಸಲು ಸರ್ಕಾರವು ನಿಮಗೆ 90% ವರೆಗೆ ಸಾಲವನ್ನು ನೀಡುತ್ತದೆ. ಹಾಗಾಗಿ ನೀವೂ ಹೂಡಿಕೆ ಮಾಡಬೇಕಾಗಿರುವ ಹಣ ಕಡಿಮೆಯೇ!

ನೀವು ಕೇವಲ 25 ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡಿ ಈ ಉದ್ದಿಮೆ ಶುರು ಮಾಡಬಹುದು. ತೆಗೆದುಕೊಂಡು ಈ ವ್ಯವಹಾರವನ್ನು ಪ್ರಾರಂಭಿಸಬಹುದು. ಈ ವ್ಯವಹಾರವನ್ನು ಹೇಗೆ ಪ್ರಾರಂಭಿಸಬಹುದು ಮತ್ತು ನಿಮಗೆ ಏನು ಪ್ರಯೋಜನ ಎಂಬುದರ ಮಾಹಿತಿ ಇಲ್ಲಿದೆ. ಈ ಘಟಕ ಸ್ಥಾಪಿಸಲು ಕನಿಷ್ಠ 500 ಚದರ ಅಡಿ ಜಾಗ ಬೇಕು. ಇದಕ್ಕಾಗಿ ನೀವು 1 ಲಕ್ಷ ರೂಪಾಯಿ ವೆಚ್ಚ ಭರಿಸಬೇಕಾಗುತ್ತದೆ. ಪೋಹಾ ಯಂತ್ರ, ಜರಡಿ, ಭಟ್ಟಿ, ಪ್ಯಾಕಿಂಗ್ ಯಂತ್ರ, ಡ್ರಮ್ ಇತ್ಯಾದಿಗಳಿಗೆ 1 ಲಕ್ಷ ರೂಪಾಯಿಗಳನ್ನು ಮೀಸಲಿಡಬೇಕು. ಒಟ್ಟಿಗೆ 2 ಲಕ್ಷ ರೂಪಾಯಿ. ಅಂದ್ರೆ ವರ್ಕಿಂಗ್ ಕ್ಯಾಪಿಟಲ್ ಕೇವಲ 43 ಸಾವಿರ ರೂ.ಗಳು.

ಇನ್ನು ವ್ಯಾಪಾರದ ಬಗ್ಗೆ ಗಮನಹರಿಸುವುದಾದರೆ, ಈ ಘಟಕ ಆರಂಭಿಸಲು ನೀವು ಮೊದಲು ಕಚ್ಚಾ ವಸ್ತುಗಳನ್ನು ಖರೀದಿಸಬೇಕು. ಇದಕ್ಕೆ ಸುಮಾರು 6 ಲಕ್ಷ ರೂ. ಹಾಗೂ ಸುಮಾರು 50 ಸಾವಿರ ರೂ ಇತರೆ ವೆಚ್ಚಗಳಿರುತ್ತವೆ, ಇದರಿಂದ ಸುಮಾರು 1000 ಕ್ವಿಂಟಲ್ ಪೋಹಾ/ ಅವಲಕ್ಕಿ ಉತ್ಪಾದಿಸಬಹುದು. ಅದರ ಮೇಲೆ ಉತ್ಪಾದನಾ ವೆಚ್ಚ 8.60 ಲಕ್ಷ ರೂ. ನೀವು 1000 ಕ್ವಿಂಟಾಲ್ ಪೋಹಾವನ್ನು ಸುಮಾರು 10 ಲಕ್ಷಕ್ಕೆ ಮಾರಾಟ ಮಾಡಬಹುದು. ಅಂದರೆ ಸುಮಾರು 1.40 ಲಕ್ಷ ರೂ. ಲಾಭ ನಿಮಗೆ ಸುಲಭವಾಗಿ ಸಿಗಲಿದೆ.

ಇನ್ನು ಸರ್ಕಾರದಿಂದ ಸಾಲ ಪಡೆಯಲು, ಯೋಜನಾ ವರದಿಯನ್ನು ಸಿದ್ಧಪಡಿಸಿ, ಗ್ರಾಮೋದ್ಯೋಗ ಯೋಜನೆಯಡಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿದರೆ, ಶೇ. 90ರಷ್ಟು ಸಾಲವನ್ನು ಪಡೆಯಬಹುದು. ಗ್ರಾಮೋದ್ಯೋಗವನ್ನು ಉತ್ತೇಜಿಸಲು ಪ್ರತಿ ವರ್ಷ ಕೆವಿಐಸಿಯಿಂದ ಇಂಥ ಸಾಲವನ್ನು ನೀಡಲಾಗುತ್ತದೆ. ಪೋಹಾ ಅಥವಾ ಅವಲಕ್ಕಿಗೆ ವರ್ಷದ 365 ದಿನವೂ ಬೇಡಿಕೆ ಇರುವುದರಿಂದ ಅಸರಿಯಾದ ರೀತಿಯಲ್ಲಿ ನೀವು ಈ ಉದ್ದಿಮೆ ಶುರು ಮಾಡಿದರೆ ಖಂಡಿತ ಉತ್ತಮ ಲಾಭ ಗಳಿಸಬಹುದು

Comments are closed.