Get Loan: ಬೇರೆ ಬ್ಯಾಂಕ್ ಗಳು ಲೋನ್ ಕೊಡುತ್ತಿಲ್ಲ- ಅದಕ್ಕೆ ಎಂಟ್ರಿ ಕೊಟ್ರ ಬರೋಡ ಬ್ಯಾಂಕ್. ಇನ್ನು 10 ಲಕ್ಷದ ವರೆಗೂ ಸುಲಭ ಲೋನ್.
Get Loan; ನಮಸ್ಕಾರ ಸ್ನೇಹಿತರೆ ನರೇಂದ್ರ ಮೋದಿ(Narendra Modi) ಅವರ ಸರ್ಕಾರ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕ ಸಹಾಯವನ್ನು ನೀಡುವಂತಹ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳಲ್ಲಿ ಇ ಮುದ್ರಾ ಯೋಜನೆ(E Mudra Loan Scheme) ಕೂಡ ಒಂದು. ಈ ಮೂಲಕ ಆರ್ಥಿಕ ಸಮಸ್ಯೆಯನ್ನು ಹೊಂದಿರುವವರಿಗೆ ಆರ್ಥಿಕ ಸಹಾಯವನ್ನು ನೀಡುವಂತಹ ಕೆಲಸವನ್ನು ಮಾಡಲಾಗುತ್ತಿದೆ ಎಂದು ಹೇಳಬಹುದಾಗಿದೆ. ಇವತ್ತಿನ ಲೇಖನಿಯಲ್ಲಿ ನಾವು ಬ್ಯಾಂಕ್ ಆಫ್ ಬರೋಡ ಗ್ರಾಹಕರಿಗೆ ಈ ಲೋನ್ ಯೋಜನೆ ಯಾವ ರೀತಿಯಲ್ಲಿ ಸಿಗುತ್ತೆ ಎನ್ನುವುದರ ಬಗ್ಗೆ ವಿವರಣೆಯನ್ನು ನೀಡಲು ಹೊರಟಿದ್ದೇವೆ.
ಬ್ಯಾಂಕ್ ಆಫ್ ಬರೋಡ – E ಮುದ್ರಾ ಯೋಜನೆ – Details of E Mudra Loan Scheme
ಸರ್ಕಾರದ ಅಧಿಕೃತ ನಿಯಮಗಳ ಪ್ರಕಾರ ಮುದ್ರಾ ಲೋನ್ ಯೋಜನೆ ಅಡಿಯಲ್ಲಿ ಬ್ಯಾಂಕ್ ಆಫ್ ಬರೋಡದ ಗ್ರಾಹಕರು ಯಾವುದೇ ಕೊಲೆಟರಲ್ ಇಲ್ಲದೆ 10 ಲಕ್ಷ ರೂಪಾಯಿಗಳ ವರೆಗೂ ಕೂಡ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಬ್ಯಾಂಕಿನಿಂದ ನೀವು ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ 10 ಲಕ್ಷ ರೂಪಾಯಿಗಳ ವರೆಗೂ ಕೂಡ ಹೊಸ ವ್ಯಾಪಾರವನ್ನು ಪ್ರಾರಂಭ ಮಾಡಲು ಅಥವಾ ಈಗಾಗಲೇ ಇರುವಂತಹ ವ್ಯಾಪಾರವನ್ನು ಇನ್ನಷ್ಟು ವಿಸ್ತರಿಸಲು ಸಾಲವನ್ನು ಪಡೆದುಕೊಳ್ಳಬಹುದು. ಆದರೆ ಈ ಸಂದರ್ಭದಲ್ಲಿ ಸಾಕಷ್ಟು ವಿಚಾರಗಳು ಪ್ರಮುಖವಾಗಿ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂಬುದನ್ನು ಕೂಡ ನೀವು ಅರ್ಥಮಾಡಿಕೊಳ್ಳಬೇಕು.
ನಿಮಗೆ ದಿಡೀರ್ ಎಂದು ಹಣದ ಅವಶ್ಯಕತೆ ಇದ್ದರೇ- ಮೂರೇ ನಿಮಿಷದಲ್ಲಿ 3 ಲಕ್ಷ ಕೊಡುತ್ತಾರೆ ಈ ಕಂಪನಿ. ವೆರಿಫಿಕೇಷನ್ ಇರಲ್ಲ, ನೇರವಾಗಿ ಬ್ಯಾಂಕ್ ಖಾತೆಗೆ.
ಪ್ರಧಾನ ಮಂತ್ರಿ ಮುದ್ರಾ ಲೋನ್ ಯೋಜನೆ ಅರ್ಹತೆಗಳು: Mudra Loan Details
ಕೃಷಿಯೇತರ ವ್ಯಾಪಾರಕ್ಕಾಗಿ ಬ್ಯಾಂಕ್ ಆಫ್ ಬರೋಡದಲ್ಲಿ ನೀವು ಮುದ್ರಾ ಲೋನ್ ಯೋಜನೆ ಅಡಿಯಲ್ಲಿ ಹಣವನ್ನು ಪಡೆದುಕೊಳ್ಳಬಹುದು. ಆದಾಯವನ್ನು ತರುವಂತಹ ಪ್ರತಿಯೊಂದು ಕ್ಯಾಟಗರಿಯ ಉದ್ಯಮಗಳು ಕೂಡ ಇಲ್ಲಿ ಶಾಮಿಲಾಗುತ್ತವೆ. ಕೃಷಿ ಗತಿ ವಿಧಿಯ ಒಳಗೆ ಬರುವಂತಹ ವ್ಯಾಪಾರಗಳು ಕೂಡ ಸೇರಿಕೊಳ್ಳುತ್ತವೆ. 10 ಲಕ್ಷ ರೂಪಾಯಿಗಳವರೆಗು ಕೂಡ ಲೋನ್ ಹಣವನ್ನು ಪಡೆದುಕೊಳ್ಳಬಹುದು.
ಮುದ್ರಾ ಲೋನ್ ಯೋಜನೆಯ ಕ್ಯಾಟಗರಿಗಳು
ಶಿಶು ಮುದ್ರಾ ಲೋನ್ ಯೋಜನೆ: ಈ ಯೋಜನೆ ಅಡಿಯಲ್ಲಿ ಐವತ್ತು ಸಾವಿರ ರೂಪಾಯಿಗಳ ವರೆಗೆ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ ಹಾಗೂ ಈ ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯವನ್ನು ಪಡೆದುಕೊಂಡರೆ ಎಲ್ಲಕ್ಕಿಂತ ಕಡಿಮೆ ಬಡ್ಡಿಯನ್ನು ಕಟ್ಟಬೇಕಾಗುತ್ತದೆ.
ಕಿಶೋರ್ ಮುದ್ರಾ ಲೋನ್ ಯೋಜನೆ: ಈ ಯೋಜನೆಯಲ್ಲಿ 50,001 ರೂಪಾಯಿಗಳಿಂದ ಪ್ರಾರಂಭಿಸಿ 5 ಲಕ್ಷಗಳವರೆಗೂ ಕೂಡ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಒಂದು ವೇಳೆ ನೀವು ನಿಮ್ಮ ವ್ಯಾಪಾರವನ್ನು ವಿಸ್ತರಣೆ ಮಾಡುತ್ತಿದ್ದರೆ ಖಂಡಿತವಾಗಿ ಈ ಲೋನ್ ಯೋಜನೆ ನಿಮಗೆ ಉಪಯೋಗಕಾರಿಯಾಗಲಿದೆ.
ತರುಣ್ ಮುದ್ರಾ ಲೋನ್ ಯೋಜನೆ: 5 ಲಕ್ಷದಿಂದ 10 ಲಕ್ಷ ರೂಪಾಯಿ ಲೋನ್ ಹಣವನ್ನು ಈ ಯೋಜನೆ ಅಡಿಯಲ್ಲಿ ಪಡೆದುಕೊಳ್ಳಬಹುದಾಗಿದೆ. ದೊಡ್ಡ ಮಟ್ಟದ ಯಂತ್ರೋಪಕರಣಗಳನ್ನು ಖರೀದಿಸುವ ಸಂದರ್ಭದಲ್ಲಿ ನೀವು ಈ ಲೋನ್ ಪಡೆದುಕೊಳ್ಳಬಹುದು. ಬ್ಯಾಂಕ್ ಆಫ್ ಬರೋಡದಲ್ಲಿ 84 ತಿಂಗಳ ಒಳಗೆ ಸಾಲವನ್ನು ಪಡೆದುಕೊಂಡು ಕಟ್ಟಬೇಕು ಎಂಬುದಾಗಿ ನಿಯಮವಿದು ಹೆಚ್ಚಿನ ಮಾಹಿತಿಗಾಗಿ ನೀವು ನಿಮ್ಮ ಹತ್ತಿರದ ಬ್ಯಾಂಕ್ ಗೆ ಹೋಗಿ ಪರಿಶೀಲಿಸಬಹುದಾಗಿದೆ.
ಬ್ಯಾಂಕ್ ಆಫ್ ಬರೋಡದಲ್ಲಿ ಮುದ್ರಾ ಲೋನ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವುದಕ್ಕೆ ಬೇಕಾಗಿರುವ ಡಾಕ್ಯುಮೆಂಟ್ ಗಳು
ಅರ್ಜಿ ಸಲ್ಲಿಸುವವರು ತಮ್ಮ ಹೊಸ ಪಾಸ್ಪೋರ್ಟ್ ಸೈಜ್ ಫೋಟೋ ನೀಡ್ಬೇಕು. ಅರ್ಜಿ ಪತ್ರವನ್ನು ಸರಿಯಾಗಿ ತುಂಬಿಸಬೇಕು ಹಾಗೂ ಗುರುತು ಪತ್ರಗಳನ್ನು ಕೂಡ ನೀಡಬೇಕು. ನಿಮ್ಮ ವ್ಯಾಪಾರದ ಅಧಿಕೃತ ಮಾಹಿತಿಯನ್ನು ತಿಳಿಸುವಂತಹ ಲೈಸೆನ್ಸ್ ಅಥವಾ ಸರ್ಟಿಫಿಕೇಟ್ ಗಳು. ನಿಮ್ಮ ಸಾಲದ ಅವಶ್ಯಕತೆಗಳನ್ನು ತಿಳಿಸುವಂತಹ ಬಾಂಡ್ ಅಥವಾ ಕೊಟೇಶನ್ ಮಾದರಿಯ ವಿವರಗಳು ಬೇಕು.
ಯಾವ ರೀತಿಯಲ್ಲಿ ಲೋನ್ ಗೆ ಅರ್ಜಿ ಸಲ್ಲಿಸುವುದು? How to Apply for Loan.
ಇದಕ್ಕಾಗಿ ನೀವು ಬ್ಯಾಂಕ್ ಆಫ್ ಬರೋಡದ ಅಧಿಕೃತ ವೆಬ್ಸೈಟ್ ಗೆ ಹೋಗಿ ಅಲ್ಲಿ ಇರುವಂತಹ ಅರ್ಜಿ ಪತ್ರವನ್ನು ಡೌನ್ಲೋಡ್ ಮಾಡಿಕೊಂಡು ಸರಿಯಾದ ರೀತಿಯಲ್ಲಿ ತುಂಬಬೇಕು. ಕೇಳಿದಾಗ ಪ್ರತಿಯೊಂದು ವಿವರಗಳನ್ನು ತುಂಬಬೇಕು ಹಾಗೂ ಅದಕ್ಕೆ ಡಾಕ್ಯೂಮೆಂಟ್ ಗಳನ್ನು ಕೂಡ ಅಟ್ಯಾಚ್ ಮಾಡಬೇಕು. ಇದಾದ ನಂತರ ಹತ್ತಿರದ ಬ್ಯಾಂಕ್ ಆಫ್ ಬರೋಡ(Bank of Baroda) ಬ್ರಾಂಚಿಗೆ ಹೋಗಿ ಇದನ್ನು ಅಲ್ಲಿ ನೀಡಬೇಕು ಅಲ್ಲಿ ವೆರಿಫಿಕೇಶನ್ ಮಾಡಿದ ನಂತರ ನಿಮ್ಮ ಖಾತೆಗೆ ನೇರವಾಗಿ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.
ಈ ಮೂಲಕ ವ್ಯಾಪಾರವನ್ನು ಪ್ರಾರಂಭಿಸಬೇಕು ಅಥವಾ ದೊಡ್ಡದು ಮಾಡಬೇಕು ವಿಸ್ತರಿಸಬೇಕು ಎನ್ನುವವರು ಈ ಮೂಲಕ ಬ್ಯಾಂಕ್ ಆಫ್ ಬರೋಡದಲ್ಲಿ ಮುದ್ರಾ ಲೋನ್ ಯೋಜನೆಗೆ ಅರ್ಜಿ ಸಲ್ಲಿಸಿ ಹಣವನ್ನು ಪಡೆದುಕೊಳ್ಳುವುದರ ಮೂಲಕ ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಬಹುದಾಗಿದೆ.
Comments are closed.