Jobs: ನಿಮ್ಮದು 10 ನೇ ತರಗತಿ ಪಾಸ್ ಆಗಿದ್ಯಾ? ಹಾಗಿದ್ದರೆ, ಈ ಕೂಡಲೇ ಅರ್ಜಿ ಹಾಕಿ. ಪೋಸ್ಟ್ ಆಫೀಸ್ ನಲ್ಲಿ ಕೆಲಸ.
Jobs: ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಒಂದು ಕೆಲಸವನ್ನು ಪಡೆಯಲು ಎಷ್ಟರಮಟ್ಟಿಗೆ ಕಾಂಪಿಟೇಶನ್ ಇದೆ ಎನ್ನುವುದನ್ನು ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾದ ಅಗತ್ಯವಿಲ್ಲ ಎಂಬುದಾಗಿ ಭಾವಿಸುತ್ತೇವೆ. ಅದರಲ್ಲಿ ವಿಶೇಷವಾಗಿ ಸರ್ಕಾರಿ ಕೆಲಸಗಳನ್ನು ಪಡೆಯಲು ಹರಸಾಹಸವನ್ನು ಪಡಬೇಕಾಗುತ್ತದೆ. ಆದರೆ ಇವತ್ತಿನ ಲೇಖನಿಯಲ್ಲಿ ನಾವು ನಿಮಗೆ ಕೇವಲ 10ನೇ ತರಗತಿ ಪಾಸ್ ಆದ್ರೆ ಯಾವ ರೀತಿಯಲ್ಲಿ ಸರ್ಕಾರಿ ಕೆಲಸವನ್ನು ಪಡೆದುಕೊಳ್ಳುವುದು ಎನ್ನುವುದರ ಬಗ್ಗೆ ಹೇಳಲು ಹೊರಟಿದ್ದೇವೆ.
Post office Jobs opening details: Eligibility, Documents and salary details explained.
ಹೌದು ಮಿತ್ರರೇ, ಭಾರತೀಯ ಅಂಚೆ ಇಲಾಖೆಯ(post office) ವತಿಯಿಂದ ಖಾಲಿ ಇರುವಂತಹ ಹುದ್ದೆಗಳಿಗೆ ಆಹ್ವಾನವನ್ನು ನೀಡಲಾಗಿದ್ದು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ ಕೆಲಸವನ್ನು ಪಡೆದುಕೊಳ್ಳಬಹುದಾಗಿದೆ ಎಂಬುದಾಗಿ ತಿಳಿದು ಬಂದಿದೆ. ಬನ್ನಿ ಈ ಕೆಲಸಕ್ಕೆ ಬೇಕಾಗಿರುವಂತಹ ಅರ್ಹತೆಗಳು ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳೋಣ.
ಪೋಸ್ಟ್ ಆಫೀಸ್ ಕೆಲಸವನ್ನು ಪಡೆದುಕೊಳ್ಳಲು ಇರಬೇಕಾಗಿರುವ ಶೈಕ್ಷಣಿಕ ಅರ್ಹತೆ | Education Qualification
ಭಾರತದ ಅಂಚೆ ಇಲಾಖೆ ಕಳೆದ ಸಾಕಷ್ಟು ವರ್ಷಗಳ ಇತಿಹಾಸವನ್ನು ಹೊಂದಿದ್ದು ಇಲ್ಲಿನ ಕೆಲಸ ಕೂಡ ಸರ್ಕಾರಿ ಕೆಲಸವೇ ಆಗಿದೆ. ಇನ್ನು ಈಗ ಆಹ್ವಾನಿಸಿರುವಂತಹ ಕೆಲಸಕ್ಕೆ ಮಾನ್ಯವಾಗಿರುವಂತಹ ಯಾವುದೇ ವಿದ್ಯಾಸಂಸ್ಥೆಗಳಿಂದಲೂ ಕೂಡ 10 ಅಥವಾ 12ನೇ ತರಗತಿ ಪಾಸ್ ಆಗಿರಬೇಕು ಎಂಬುದಾಗಿ ತಿಳಿಸಲಾಗಿದೆ. ಪದವಿ ಪೂರೈಸಿರುವವರಿಗೂ ಕೂಡ ಕೆಲಸ ಸಿಗಲಿದೆ.
ಇದನ್ನು ಕೂಡ ಓದಿ: ಮೂರೇ ನಿಮಿಷದಲ್ಲಿ 3 ಲಕ್ಷ ಕೊಡುತ್ತಾರೆ ಈ ಕಂಪನಿ. ವೆರಿಫಿಕೇಷನ್ ಇರಲ್ಲ, ನೇರವಾಗಿ ಬ್ಯಾಂಕ್ ಖಾತೆಗೆ.
ಆಹ್ವಾನಿಸಲಾಗಿರುವಂತಹ ಪೋಸ್ಟ್ ಆಫೀಸ್ ಹುದ್ದೆಗಳ ವಿವರ | Post Office Job Opening Details
ಈ ಬಾರಿ ಆಹ್ವಾನಿಸಲಾಗಿರುವಂತಹ ಪೋಸ್ಟ್ ಆಫೀಸ್ ಹುದ್ದೆಗಳಲ್ಲಿ ಅಂಚೆ ಸಹಾಯಕ ಹುದ್ದೆಗೆ 598 ಸ್ಥಾನಗಳು ಖಾಲಿ ಇವೆ. ಅಸಿಸ್ಟೆಂಟ್ ಹುದ್ದೆಗೆ 143 ಸ್ಥಾನಗಳು ಖಾಲಿ ಇವೆ. ಪೋಸ್ಟ್ ಮ್ಯಾನ್ ಹುದ್ದೆಗೆ 585 ಸ್ಥಾನಗಳು ಖಾಲಿ ಇವೆ. ಗಾರ್ಡ್ ಹುದ್ದೆಗೆ ಮೂರು ಸ್ಥಾನಗಳು ಖಾಲಿ ಇವೆ. ಮಲ್ಟಿ ಟಾಸ್ಕಿಂಗ್ ಸಿಬ್ಬಂದಿ ಹುದ್ದೆಗೆ 570 ಸ್ಥಾನಗಳು ಖಾಲಿ ಇವೆ. ಇನ್ನು ಇವುಗಳು ಸ್ಪೋರ್ಟ್ಸ್ ಕೋಟಾ ಗಳಿಗೆ ಮೀಸಲಾಗಿರುವಂತಹ ಹುದ್ದೆಗಳಾಗಿವೆ.
ಪೋಸ್ಟ್ ಆಫೀಸ್ ಹುದ್ದೆಗಳಿಗೆ ಸಿಗಲಿರುವ ಸಂಬಳ(post office job salary) | Salary details
ಮೊದಲಿಗೆ ಅಂಚೆ ಸಹಾಯಕರಿಗೆ 25500 ಗಳಿಂದ 81,100ಗಳವರೆಗೂ ಕೂಡ ಸ್ಯಾಲರಿ ಇದೆ. ಅಸಿಸ್ಟೆಂಟ್ ಗಳಿಗೂ ಕೂಡ ಅದೇ ರೀತಿಯ ಸಂಭಾವನೆಯ ಹಂತವನ್ನು ನಿಗದಿಪಡಿಸಲಾಗಿದೆ. ಪೋಸ್ಟ್ ಮ್ಯಾನ್ ಹುದ್ದೆಯ ಸಂಬಳದ ವಿಚಾರದ ಬಗ್ಗೆ ಮಾತನಾಡುವುದಾದರೆ 21,700 ಗಳಿಂದ ಪ್ರಾರಂಭಿಸಿ 69,100 ರೂಪಾಯಿಗಳ ಪ್ರತಿ ತಿಂಗಳ ಸಂಬಳವನ್ನು ನಿಗದಿಪಡಿಸಲಾಗಿದೆ. ಗಾಡ್ ಹುದ್ದೆಗು ಕೂಡ ಇದೇ ಸಂಬಳವನ್ನು ನಿಗದಿಪಡಿಸಲಾಗಿದೆ. ಮಲ್ಟಿ ಟಾಸ್ಕಿಂಗ್ ಸಿಬ್ಬಂದಿಗಳಿಗೆ 18000 ಗಳಿಂದ ಪ್ರಾರಂಭಿಸಿ 56900 ವರೆಗೂ ಕೂಡ ಸಂಬಳವನ್ನು ನಿಗದಿಪಡಿಸಲಾಗಿದೆ.
ಕೆಲಸಕ್ಕೆ ಸೇರಲು ಇರಬೇಕಾಗಿರುವ ವಯೋಮಿತಿ ಹಾಗೂ ಅರ್ಜಿ ಶುಲ್ಕದ ಮಾಹಿತಿ | Online Application Details
ಅಂಚೆ ಇಲಾಖೆ ಅಧಿಕೃತವಾಗಿ ಈ ಆಹ್ವಾನಿತ ಹುದ್ದೆಗಳಿಗೆ ಇರಬೇಕಾಗಿರುವಂತಹ ವಯೋಮಾನ್ಯತೆಯನ್ನು ಕೂಡ ಅಧಿಕೃತವಾಗಿ ಬಹಿರಂಗಪಡಿಸಿದೆ. ಅಭ್ಯರ್ಥಿಯ ವಯಸ್ಸು ಕನಿಷ್ಠ 18 ಆಗಿರಬೇಕು ಹಾಗೂ ಗರಿಷ್ಠ 27 ವರ್ಷವನ್ನು ಮೀರಿರಬಾರದು. ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಯಾವುದೇ ರೀತಿಯ ಶುಲ್ಕ ಇರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿದೆ. Gen OBC EWS ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದ ರೂಪದಲ್ಲಿ ನೂರು ರೂಪಾಯಿಗಳನ್ನು ಪಡೆದುಕೊಳ್ಳಲಾಗುತ್ತದೆ.
ಪೋಸ್ಟ್ ಆಫೀಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು | Last Date and Important details
ಸಾಕಷ್ಟು ಜನರು ಈ ಪೋಸ್ಟ್ ಆಫೀಸ್ ಹುದ್ದೆಗೆ ಅರ್ಜಿ ಸಲ್ಲಿಸಲು ಕಾಯುತ್ತಿರುತ್ತಿರು ತ್ತಾರೆ ಹೀಗಾಗಿ ಈ ಹುದ್ದೆಗೆ ಅರ್ಜಿ ಸಲ್ಲಿಸಲು ನವೆಂಬರ್ 10 ಆರಂಭದ ದಿನಾಂಕವಾಗಿದ್ದು ಹಾಗೂ ಕೊನೆಯ ದಿನಾಂಕ ಡಿಸೆಂಬರ್ 9 ಆಗಿದೆ. ಆಸಕ್ತರು ಈ ದಿನಾಂಕದೊಳಗೆ ಅರ್ಜಿಯನ್ನು ಪೋಸ್ಟ್ ಆಫೀಸ್ನ ಅಧಿಕೃತ ವೆಬ್ಸೈಟ್ನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೂಲಕ ಕೆಲಸವನ್ನು ಪಡೆದುಕೊಳ್ಳುವಂತಹ ಮುಂದಿನ ಹಂತದ ಪ್ರಕ್ರಿಯೆಯನ್ನು ಪ್ರಾರಂಭಿಸಬಹುದು.
Comments are closed.