Jobs: 10 ನೇ ತರಗತಿ ಪಾಸ್ ಆಗಿದ್ದರೇ ಸಾಕು- ಅರ್ಜಿ ಹಾಕಿ ಪೋಸ್ಟ್ ಆಫೀಸ್ ನಲ್ಲಿ ಕೆಲಸ ಪಡೆಯಿರಿ. ಒಳ್ಳೆಯ ಸಂಬಳ ಕೂಡ ಇದೆ.
Jobs: ನಮಸ್ಕಾರ ಸ್ನೇಹಿತರೆ ಯಾರೆಲ್ಲ ಕೆಲಸ ಇಲ್ಲದೆ ಮನೆಯಲ್ಲಿ ಕುಳಿತಿದ್ದಾರೋ ಖಂಡಿತವಾಗಿ ಅವರಿಗೆಲ್ಲ ಇವತ್ತು ಗುಡ್ ನ್ಯೂಸ್ ಹೇಳಲು ಹೊರಟಿದ್ದೇವೆ. ಬೇರೆ ಬೇರೆ ವಿಭಾಗಗಳಲ್ಲಿ ಭಾರತೀಯ ಅಂಚೆ ಕಚೇರಿಯಲ್ಲಿ 1899 ಖಾಲಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಹ್ವಾನಿಸಲಾಗಿದೆ. ಅಧಿಕೃತ ವೆಬ್ಸೈಟ್ನಲ್ಲಿ ಭೇಟಿ ನೀಡುವ ಮೂಲಕ ಅರ್ಹ ಅಭ್ಯರ್ಥಿಗಳು ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದಾಗಿದ್ದು ಬನ್ನಿ ಹೆಚ್ಚಿನ ವಿವರಗಳನ್ನು ಪಡೆದುಕೊಳ್ಳೋಣ.
Table of Contents
ಖಾಲಿ ಇರುವಂತಹ ಹುದ್ದೆಗಳಿಗೆ ಭಾರತೀಯ ಅಂಚೆ ಇಲಾಖೆ ಹತ್ತು ಹನ್ನೆರಡು ಹಾಗೂ ಬಿಎ ಪಾಸ್ ಮಾಡಿರುವಂತಹ ವಿದ್ಯಾರ್ಥಿಗಳಿಗೆ ಅಥವಾ ಅಭ್ಯರ್ಥಿಗಳಿಗೆ ಅವಕಾಶವನ್ನು ನೀಡಲು ಹೊರಟಿದೆ. ಇನ್ನು ಈ ನೇಮಕಾತಿ ಸ್ಪೋರ್ಟ್ಸ್ ಕೋಟಾದಲ್ಲಿ ನಡೆಯಲಿದೆ ಎನ್ನುವಂತಹ ಮಾಹಿತಿ ಇದೆ. 1899 ಹುದ್ದೆಗಳು ಖಾಲಿ ಇದೆ ಎಂಬುದಾಗಿ ತಿಳಿದುಬಂದಿದ್ದು ಡಿಸೆಂಬರ್ 9 ಅರ್ಜಿ ಸಲ್ಲಿಸುವುದಕ್ಕೆ ಕೊನೆಯ ದಿನಾಂಕವಾಗಿದೆ. ಯಾವ ರೀತಿ ಅರ್ಜಿ ಸಲ್ಲಿಸಬೇಕು ಹಾಗೂ ಸಂಬಳ ಎಷ್ಟು ಎನ್ನುವಂತಹ ಸಂಪೂರ್ಣ ವಿವರಗಳನ್ನು ಕೂಡ ಇವತ್ತಿನ ಲೇಖನಿಯಲ್ಲಿ ನಿಮಗೆ ನೀಡಲಿದ್ದೇವೆ.
Jobs: ಪೋಸ್ಟ್ ಇಲಾಖೆಯಲ್ಲಿ ಕೆಲಸ ಪಡೆಯುವುದಕ್ಕೆ ಇರಬೇಕಾಗಿರುವ ಅರ್ಹತೆಗಳು- Eligibility to get job in Post office.
ವಿಂಗಡಣೆ ಸಹಾಯಕ, ಅಂಚೆ ಸಹಾಯಕ, ಪೋಸ್ಟ್ ಮ್ಯಾನ್, ಮೇಲ್ ಗಾರ್ಡ್ ಹಾಗೂ ಮಲ್ಟಿ ಟಾಸ್ಕಿಂಗ್ ಸ್ಟಾಪ್ ಹುದ್ದೆಗೆ ಆಹ್ವಾನವನ್ನು ನೀಡಲಾಗಿದ್ದು ಒಟ್ಟಾರೆಯಾಗಿ 1899 ಹುದ್ದೆಗಳು ಖಾಲಿ (Jobs) ಇವೆ. ಪೋಸ್ಟಲ್ ಸಹಾಯಕ ಹಾಗೂ ಮಲ್ಟಿ ಟಾಸ್ಕಿಂಗ್ ಹುದ್ದೆಗಳಿಗೆ ಪದವಿಯನ್ನು ಪಡೆದುಕೊಂಡಿರಬೇಕು ಹಾಗೂ ಕಂಪ್ಯೂಟರ್ ಜ್ಞಾನ ಖಂಡಿತವಾಗಿ ಹೊಂದಿರಬೇಕು. ಮೇಲ್ಗಡೆ ಹಾಗೂ ಪೋಸ್ಟ್ ಮ್ಯಾನ್ ಹುದ್ದೆಗೆ 12ನೇ ತರಗತಿ ಪಾಸ್ ಆಗಿರಬೇಕು. ಪೋಸ್ಟಲ್ ಸರ್ಕಲ್ ಕೆಲಸಗಳಿಗಾಗಿ 10ನೇ ತರಗತಿ ಕಡ್ಡಾಯವಾಗಿರಬೇಕು. ಕಂಪ್ಯೂಟರ್ ಜ್ಞಾನದ ಜೊತೆಗೆ ಡ್ರೈವಿಂಗ್ ಲೈಸೆನ್ಸ್ ಕೂಡ ನಿಮ್ಮ ಬಳಿ ಇರಬೇಕು. ದ್ವಿಚಕ್ರ ವಾಹನವನ್ನು ಓಡಿಸುವುದನ್ನು ಕೂಡ ಅರಿತುಕೊಂಡಿರಬೇಕು.
ಇದನ್ನು ಕೂಡ ಓದಿ: Bad Credit Loan: ಕ್ರೆಡಿಟ್ ಸ್ಕೋರ್ ಕಡಿಮೆ ಇದ್ರೂ ಕೂಡ ಲೋನ್ ಪಡೆದುಕೊಳ್ಳುವುದು ಹೇಗೆ? ಇದಕ್ಕಿಂತ ಸುಲಭ ಮತ್ತೊಂದಿಲ್ಲ.
ಈ ಕೆಲಸಗಳು ಸ್ಪೋರ್ಟ್ಸ್ ಕೋಟಾದಿಂದ ಬರುವ ಕಾರಣದಿಂದಾಗಿ ನೀವು ರಾಜ್ಯ ಅಥವಾ ರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆಯಲ್ಲಿ ಯಾವುದಾದರೂ ಕ್ರೀಡೆಯನ್ನು ಪ್ರತಿನಿಧಿಸಿರುವಂತಹ ಅರ್ಹತೆ ಹೊಂದಿರಬೇಕಾಗುತ್ತದೆ. ಕನಿಷ್ಠ ಪಕ್ಷ ವಿಶ್ವವಿದ್ಯಾನಿಲಯಗಳು ಆಯೋಜಿಸಿರುವಂತಹ ಕ್ರೀಡಾಪಟುಗಳಲ್ಲಿ ಆದ್ರೂ ಭಾಗವಹಿಸಿರಬೇಕು. ರಾಷ್ಟ್ರೀಯ ಶಾರಿರಿಕ ದಕ್ಷತೆಯಲ್ಲಿ ಅವಾರ್ಡ್ ಅನ್ನು ಹೊಂದಿರಬೇಕು.
ವಯೋಮಿತಿ ಹಾಗೂ ಶುಲ್ಕದ ಮಾಹಿತಿ- More details about Post office job openings
ಅಂಚೆ ಕಚೇರಿಯಿಂದ ಆಹ್ವಾನಿಸಲಾಗಿರುವಂತಹ ಈ ಕೆಲಸಗಳ (Jobs) ಮೇಲೆ ವಯೋಮಿತಿಯ ನಿಯಮವನ್ನು ಕೂಡ ಅಳವಡಿಸಲಾಗಿದೆ. ವಿಂಗಡಣೆ ಸಹಾಯಕ, ಪೋಸ್ಟ್ ಮ್ಯಾನ್, ಅಂಚೆ ಸಹಾಯಕ, ಮೇಲ್ ಗಾರ್ಡ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು 18 ರಿಂದ 27 ವರ್ಷ ವಯಸ್ಸಿನ ನಡುವೆ ಇರಬೇಕು. ಮಲ್ಟಿ ಟಾಸ್ಕಿಂಗ್ ಹುದ್ದೆಗೆ ಅರ್ಜಿ ಸಲ್ಲಿಸುವವರು 18ರಿಂದ 25 ವರ್ಷದ ನಡುವೆ ಇರಬೇಕು. ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಐದು ವರ್ಷಗಳ ಸಡಿಲಿಕೆಯನ್ನು ನೀಡಲಾಗುತ್ತದೆ. ಪರಿಶಿಷ್ಟ ಜಾತಿ ಹಾಗೂ ಪಂಗಡದವರನ್ನು ಹೊರತುಪಡಿಸಿ ಬೇರೆ ಎಲ್ಲರೂ ಕೂಡ ನೂರು ರೂಪಾಯಿಗಳ ಶುಲ್ಕವನ್ನು ನೀಡಬೇಕು.
ಆಯ್ಕೆ ಹಾಗೂ ಸಂಬಳದ ವಿವರ- Salary details
ಈ ಹುದ್ದೆಗಳಿಗೆ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ ಹಾಗೂ ಸಿಗುವಂತಹ ಸಂಬಳದ ಬಗ್ಗೆ ಮಾತನಾಡುವುದಾದರೆ, ಪೋಸ್ಟಲ್ ಅಸಿಸ್ಟೆಂಟ್ ಹಾಗೂ ವಿಂಗಡಣೆ ಸಹಾಯಕರಿಗೆ 25500 ರಿಂದ 81100 ರೂಪಾಯಿಗಳ ಸಂಬಳವನ್ನು ನಿಗದಿಪಡಿಸಿಲಾಗಿದೆ. ಮೇಲ್ ಗಾರ್ಡ್ ಹಾಗೂ ಪೋಸ್ಟ್ ಮ್ಯಾನ್ಗಳಿಗೆ 21,700 ಗಳಿಂದ ಪ್ರಾರಂಭಿಸಿ 69,100 ರೂಪಾಯಿಗಳವರೆಗೆ ಸಂಬಳವನ್ನು ನಿಗದಿಪಡಿಸಲಾಗಿದೆ. ಮಲ್ಟಿ ಟಾಸ್ಕಿಂಗ್ ಹುದ್ದೆಗಳಿಗೆ 18 ಸಾವಿರದಿಂದ 56900 ರೂಪಾಯಿಗಳ ಸಂಬಳವನ್ನು ನಿಗದಿಪಡಿಸಿಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನ- How to Apply
Post office Job Openings ವೆಬ್ಸೈಟ್ ಗೆ ಹೋಗುವ ಮೂಲಕ ಮೂಲಕ ಅಲ್ಲಿ ಅಪ್ಲಿಕೇಶನ್ ಹಂತ ಒಂದು ಕಾಣುತ್ತದೆ ಅಲ್ಲಿ ಕೇಳಲಾಗುವಂತಹ ನಿಮ್ಮ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ. ನಿಮ್ಮ ವಯಕ್ತಿಕ ವಿವರಗಳನ್ನು ಭರ್ತಿ ಮಾಡಿದ ನಂತರ ನಿಮ್ಮ ಆದ್ಯತೆಯ ಹುದ್ದೆಗಳನ್ನು ಸೆಲೆಕ್ಟ್ ಮಾಡಿ. ಅಗತ್ಯವಿರುವಂತಹ ಡಾಕ್ಯುಮೆಂಟ್ ಗಳನ್ನು ಭರ್ತಿ ಮಾಡಿದ ನಂತರ ಶುಲ್ಕವನ್ನು ಭರಿಸಬೇಕಾಗುತ್ತದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಂತಹ ಈ ಪ್ರಕ್ರಿಯೆಯಲ್ಲಿ ಎಲ್ಲವನ್ನು ಮಾಡಿದ ನಂತರ ಮತ್ತೊಮ್ಮೆ ಕ್ರಾಸ್ ಚೆಕ್ ಮಾಡೋದು ಒಳ್ಳೆಯದು. ಪ್ರಕ್ರಿಯೆಯನ್ನು ಪೂರೈಸಿದ ನಂತರ ಪ್ರಿಂಟ್ ಔಟ್ ಅನ್ನು ತೆಗೆದುಕೊಳ್ಳಿ. ನವೆಂಬರ್ 10 ರಿಂದ ಈ ಅರ್ಜಿ ಪ್ರಕ್ರಿಯೆ ಪ್ರಾರಂಭವಾಗಿದ್ದು ಡಿಸೆಂಬರ್ 10 ಕೊನೆಯ ದಿನಾಂಕವಾಗಿದೆ. ಕೊನೆಯ ದಿನಾಂಕದವರೆಗೂ ಕೂಡ ಕಾಯ್ದೆ ಕೂಡಲೇ ಅರ್ಜಿಯನ್ನು ಸಲ್ಲಿಸಿ ಹಾಗೂ ಪ್ರತಿದಿನ ನಿಮ್ಮ ಸ್ಟೇಟಸ್ ಅನ್ನು ನೀವು ಚೆಕ್ ಮಾಡಬಹುದು.
Comments are closed.