Electric SUV: 700 ಕಿಲೋಮೀಟರ್ಗಿಂತ ಹೆಚ್ಚಿನ ರೇಂಜ್ ನೀಡುತ್ತೆ ಈ ಎಲೆಕ್ಟ್ರಿಕ್ ಕಾರ್. ಖರೀದಿಸಬೇಕಾ ಇಲ್ಲಿದೆ ನೋಡಿ ಮಾಹಿತಿ.
Electric SUV: ನಮಸ್ಕಾರ ಸ್ನೇಹಿತರೆ ಯಾವ ರೀತಿಯಲ್ಲಿ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಜಾಗತಿಕ ಮಟ್ಟದಲ್ಲಿ ಎಲೆಕ್ಟ್ರಿಕ್ ಕಾರುಗಳ ಬೇಡಿಕೆ ಹೆಚ್ಚಾಗುತ್ತಿದೆ ಎಂಬುದನ್ನು ನೀವು ನೋಡುತ್ತಿದ್ದೀರಿ. ಅದೇ ರೀತಿಯಲ್ಲಿ ಈಗ Lucid Motors ಎನ್ನುವಂತಹ ಅಮೆರಿಕಾದ ಎಲೆಕ್ಟ್ರಿಕ್ ಕಾರ್ಯ ನಿರ್ಮಾಣ ಕಂಪನಿ ಈಗ ಲೇಟೆಸ್ಟ್ ಆಗಿ ನಡೆದಿರುವಂತಹ ಲಾಸ್ ಎಂಜಲೀಸ್ ನ ಆಟೋ ಶೋ ದಲ್ಲಿ ತನ್ನ ಹೊಸ ಎಲೆಕ್ಟ್ರಿಕ್ ಕಾರ್ ಆಗಿರುವ Gravity ಎಲೆಕ್ಟ್ರಿಕ್ ಕಾರ್ ಅನ್ನು ಲಾಂಚ್ ಮಾಡಿದೆ.
Lucid Gravity electric SUV Range, features and Specifications explained in kannada
Gravity SUV ಎಲೆಕ್ಟ್ರಿಕ್ ಕಾರ್ ಮಾರುಕಟ್ಟೆಯಲ್ಲಿ ಆರಂಭಿಕವಾಗಿ ಸಾಕಷ್ಟು ದೊಡ್ಡ ಮಟ್ಟದ ಸದ್ದು ಮಾಡುತ್ತಿದೆ. ಈ ಕಾರು ಟೆಸ್ಲಾ ಹಾಗೂ ವೋಲ್ವೋ ಕಂಪನಿಯ ಎಲೆಕ್ಟ್ರಿಕ್ ಕಾರುಗಳಿಗೂ ಕೂಡ ಟಾಪ್ ಕಾಂಪಿಟಿಷನ್ ನೀಡುತ್ತಿದೆ. ಇದು ಕೇವಲ 88000 ಡಾಲರ್ ಅಂದರೆ ಭಾರತೀಯ ರೂಪಾಯಿಯಲ್ಲಿ ಕೇವಲ 66 ಲಕ್ಷ ರೂಪಾಯಿಗಳಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ ಎಂಬುದಾಗಿ ತಿಳಿದುಬಂದಿದೆ.
ಲೂಸಿಡ್ ಮೋಟಾರ್ಸ್ ಹೇಳಿರುವ ಪ್ರಕಾರ Gravity SUV ಕಾರು ಏಳು ಜನರು ಕುಳಿತುಕೊಳ್ಳುವಂತಹ ಆಸನದ ವ್ಯವಸ್ಥೆಯನ್ನು ಹೊಂದಿದೆ. 680 ಕೆಜಿಗಳಷ್ಟು ತೂಕವನ್ನು ಹೊರುವಂತಹ ಸಾಮರ್ಥ್ಯವನ್ನು ಕೂಡ ಈ ಎಲೆಕ್ಟ್ರಿಕ್ ಕಾರು (Lucid Gravity electric SUV) ಹೊಂದಿದೆ. 5 ಮೀಟರ್ ಉದ್ದವನ್ನು ಹೊಂದಿರುವಂತಹ ಈ ಕಾರು 2.2 ಮೀಟರ್ ಅಗಲವನ್ನು ಹೊಂದಿದೆ.
Gravity SUV ಎಲೆಕ್ಟ್ರಿಕ್ ಕಾರ್ ನಲ್ಲಿ ನೀವು ಸಾಕಷ್ಟು ಐಷಾರಾಮಿ ಫೀಚರ್ಗಳನ್ನು ಕೂಡ ಕಾಣಬಹುದಾಗಿದೆ. ರೇಂಜ್ ಡಿಸೈನ್ ಹಾಗೂ ಒಳಗೆ ಇರುವಂತಹ ಸ್ಪೇಸ್ ವಿಚಾರದಲ್ಲಿ ಕೂಡ ಈ ಕಾರು ಪರ್ಫೆಕ್ಟ್ ಆಗಿದೆ. ಇನ್ನು ಕಾರಿನ ಹಿಂಭಾಗದ ಸೀಟ್ನಲ್ಲಿ ಕೂಡ ರೂಫ್ ಅನ್ನು ಅಳವಡಿಸಲಾಗಿದೆ. ಇದರಿಂದಾಗಿ ಕಾರು ಇನ್ನಷ್ಟು ಪ್ರೀಮಿಯಂ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಕಾರಿನ ಲುಕ್ ಹಾಗೂ ಸ್ಟೈಲ್ ಅನ್ನು ಸಾಕಷ್ಟು ಅಪ್ಗ್ರೇಡ್ ಮಾಡಲಾಗಿದೆ.
ಇದನ್ನು ಕೂಡ ಓದಿ: Maruti Suzuki Brezza: ಜನರು ಇದೇ ಕಾರು ಬೇಕು ಬೇಕು ಎಂದು ಖರೀದಿ ಮಾಡುತ್ತಿದ್ದಾರೆ. ಇದಕ್ಕೆ ಇರುವ ಟಾಪ್ 8 ಕಾರಣಗಳು
ಲೂಸಿಡ್ ಕಂಪನಿ Gravity SUV ಎಲೆಕ್ಟ್ರಿಕ್ ಕಾರಿನ ಒಳ ವಿನ್ಯಾಸವನ್ನು ಸಾಕಷ್ಟು ವಿಭಿನ್ನವಾಗಿ ಡಿಸೈನ್ ಮಾಡಿದೆ. ದೊಡ್ಡ ಪ್ರಮಾಣದ ಕರ್ವ್ ಆಗಿರುವಂತಹ 34 ಇಂಚಿನ ಸಿಸ್ಟಮ್ ಅನ್ನು ಇದರಲ್ಲಿ ಅಳವಡಿಸಿರುವುದನ್ನು ನೀವು ನೋಡಬಹುದಾಗಿದ್ದು ಇದು ಅರ್ಧ ಪ್ರಮಾಣದಲ್ಲಿ ಡ್ರೈವರ್ ನ ಡ್ಯಾಶ್ ಬೋರ್ಡ್ ಅನ್ನು ಕೂಡ ಕವರ್ ಮಾಡುತ್ತದೆ. ಕಾರ್ಯ ಸಿಸ್ಟಮ್ ಕಂಟ್ರೋಲ್ ಅನ್ನು ನೀಡಲು ಪೈಲೆಟ್ ಪ್ಯಾನೆಲ್ ಅನ್ನು ಕೂಡ ನೀವು ಸೆಂಟ್ರಲ್ ಕನ್ಸೋಲ್ ರೂಪದಲ್ಲಿ ಕಾಣಬಹುದಾಗಿದೆ.
ಲೂಸಿಡ್ ಕಂಪನಿ ಇದುವರೆಗೂ Gravity SUV ಎಲೆಕ್ಟ್ರಿಕ್ ಕಾರ್ (Lucid Gravity electric SUV) ನ ಬ್ಯಾಟರಿ ಬಗ್ಗೆ ಅಧಿಕೃತವಾದ ಮಾಹಿತಿ ಹಂಚಿಕೊಂಡಿಲ್ಲ. ಆದರೆ ಕೆಲವೊಂದು ಮಾಧ್ಯಮ ಮೂಲಗಳ ಪ್ರಕಾರ 88kwh – 118kwh ಕೆಪಾಸಿಟಿಯ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಿರಬಹುದು ಎಂಬುದಾಗಿ ಅಂದಾಜಿಸಲಾಗಿದ್ದು, ಸಿಂಗಲ್ ಚಾರ್ಜ್ ನಲ್ಲಿ 708 ಕಿಲೋಮೀಟರ್ ಮೈಲೇಜ್ ನೀಡಬಹುದು ಎಂಬುದಾಗಿ ಲೆಕ್ಕಾಚಾರ ಹಾಕಲಾಗಿದೆ. ಡಿಸಿ ಫಾಸ್ಟ್ ಚಾರ್ಜಿಂಗ್ ಮೂಲಕ ಈ ಕಾರನ್ನು ಹದಿನೈದು ನಿಮಿಷಗಳ ಮೂಲಕವೂ ಕೂಡ ಚಾರ್ಜ್ ಮಾಡಬಹುದಾಗಿದೆ. 800hp ಪವರ್ ಜನರೇಟ್ ಮಾಡುವಂತಹ ಮೋಟಾರ್ ಅನ್ನು ಈ ಕಾರಿನಲ್ಲಿ ಅಳವಡಿಸಲಾಗಿದೆ. ಈ ಮೂಲಕ ಸೊನ್ನೆಯಿಂದ 96 ಕಿಲೋಮೀಟರ್ ಪ್ರತಿ ಗಂಟೆಗೆ ಸ್ಪೀಡ್ ಅನ್ನು ತಲುಪಲು ಈ ಕಾರಿಗೆ ಕೇವಲ 3.5 ಸೆಕೆಂಡ್ ಸಮಯ ಸಾಕಾಗಿದೆ.
Comments are closed.