Maruti Suzuki Brezza: ಜನರು ಇದೇ ಕಾರು ಬೇಕು ಬೇಕು ಎಂದು ಖರೀದಿ ಮಾಡುತ್ತಿದ್ದಾರೆ. ಇದಕ್ಕೆ ಇರುವ ಟಾಪ್ 8 ಕಾರಣಗಳು

Why do people choose the Maruti Suzuki Brezza

Maruti Suzuki Brezza: ನಮಸ್ಕಾರ ಸ್ನೇಹಿತರೆ ನಮ್ಮ ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿ ಕಳೆದ ಸಾಕಷ್ಟು ವರ್ಷಗಳಿಂದಲೂ SUV ಸೆಗ್ಮೆಂಟ್ ನಲ್ಲಿ ಮಿಂಚುತ್ತಿರುವಂತಹ ಕಾರಿನ ಬಗ್ಗೆ ಇವತ್ತಿನ ಲೇಖನಿಯಲ್ಲಿ ಹೇಳಲು ಹೊರಟಿದ್ದೇವೆ. ನಾವು ಮಾತಾಡ್ತಿರೋದು ಮಾರುತಿ ಸುಜುಕಿ ಸಂಸ್ಥೆ Maruti Suzuki Brezza ಕಾರಿನ ಬಗ್ಗೆ. ತನ್ನ ಸೆಗ್ಮೆಂಟಿನ ಅತ್ಯಂತ ಹೆಚ್ಚು ಮಾರಾಟ ಆಗುವಂತಹ ಕಾರುಗಳ ಲಿಸ್ಟ್ ನಲ್ಲಿ ಕಾಣಿಸಿಕೊಳ್ಳುವಂತಹ ಈ ಕಾರು ಯಾಕಾಗಿ ಭಾರತೀಯ ಗ್ರಾಹಕರಿಂದ ಅಷ್ಟೊಂದು ಪ್ರೀತಿಗೆ ಒಳಪಟ್ಟಿದೆ ಎಂಬುದನ್ನು ತಿಳಿದುಕೊಳ್ಳೋಣ.

Why do people choose the Maruti Suzuki Brezza
Why do people choose the Maruti Suzuki Brezza

Maruti Suzuki Brezza ಕಾರನ್ನು ಎಲ್ಲರು ಇಷ್ಟಪಡಲು ಕಾರಣಗಳೇನು?- Why do people choose the Maruti Suzuki Brezza

  1. ಪ್ರತಿಯೊಂದು ವಿಧದಲ್ಲಿ ಕೂಡ Maruti Suzuki Brezza ಕಾರು ನಿಮಗೆ ಲಾಭವನ್ನು ನೀಡುವಂತಹ ಕಾರುಗಳಲ್ಲಿ ಕಾಣಿಸಿಕೊಳ್ಳುತ್ತದೆ. ನ್ಯಾಯಯುತ ಬೆಲೆಯಿಂದ ಹಿಡಿದು, ಮೈಲೇಜ್, ಪರ್ಫಾರ್ಮೆನ್ಸ್ ವಿಭಾಗದಲ್ಲಿ ಕೂಡ ಟಾಪ್ ಲೆವೆಲ್ ಕಾರ್ ಆಗಿ ಕಾಣಿಸಿಕೊಳ್ಳುತ್ತದೆ.
  2. Maruti Suzuki Brezza ಕಾರು ಉತ್ತಮವಾದ ನಿಲುವನ್ನು ಹೊಂದಿದೆ. ಜನದಟ್ಟಣೆ ಆಗಿರುವಂತಹ ಟ್ರಾಫಿಕ್ ನಲ್ಲಿ ಕೂಡ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಇದರಲ್ಲಿರುವಂತಹ ಕಾಂಪ್ಯಾಕ್ಟ್ ನೆಸ್ ಜನನಿಬಿಡ ಪ್ರದೇಶಗಳಲ್ಲಿ ಕೂಡ ಇದನ್ನು ಪಾರ್ಕ್ ಮಾಡುವುದಕ್ಕೆ ಸುಲಭವಾಗಿಸುತ್ತದೆ. ಉತ್ತಮವಾದ ಗ್ರೌಂಡ್ ಕ್ಲಿಯರೆನ್ಸ್ ಕೂಡ ಇದೆ.
  3. ವಿಶಾಲವಾದ ಕ್ಯಾಬಿನ್ ಮೂಲಕ ಕೂಡ ಇದನ್ನು ಡ್ರೈವ್ ಮಾಡಲು ಇನ್ನಷ್ಟು ಕಂಫರ್ಟ್ ಎನಿಸುವಂತೆ ಮಾಡುತ್ತದೆ. ಇದರಲ್ಲಿರುವಂತಹ ಎಲೆಕ್ಟ್ರಿಕ್ ಸನ್ರೂಫ್, HUD ಡಿಸ್ಪ್ಲೇ, 360 ಡಿಗ್ರಿ ಕ್ಯಾಮೆರಾ, ಇದರ ಜೊತೆಗೆ 9 ಇಂಚಿನ ಇನ್ಫೋಟೈನ್ಮೆಂಟ್ ಟಚ್ ಸ್ಕ್ರೀನ್ ಸಿಸ್ಟಮ್ ಅನ್ನು ಕೂಡ ನೀವು ಕಾಣಬಹುದಾಗಿದೆ.
  4. Maruti Suzuki Brezza ಅತ್ಯಂತ ಪವರ್ಫುಲ್ ಇಂಜಿನ್ ಗಳನ್ನು ಕೂಡ ಹೊಂದಿದೆ. 1.5l K15C ಡ್ಯುಯಲ್ ಜೆಟ್ ವಿವಿಟಿ ಪೆಟ್ರೋಲ್ ಇಂಜಿನ್ ಅನ್ನು ಇದರಲ್ಲಿ ಅಳವಡಿಸಲಾಗಿದೆ. ಇದರಲ್ಲಿರುವಂತಹ ಸ್ಮಾರ್ಟ್ ಹೈಬ್ರಿಡ್ ಟೆಕ್ನಾಲಜಿ ಕೂಡ ಉತ್ತಮವಾದ ರೇಂಜ್ ನೀಡುವುದಕ್ಕೆ ಪ್ರಯತ್ನಪಡುತ್ತದೆ. 102Bhp ಪವರ್ ಹಾಗೂ 137Nm ಪೀಕ್ ಟಾರ್ಕ್ ಅನ್ನು ಇದು ಜನರೇಟ್ ಮಾಡುತ್ತದೆ. ಇದೇ ಕಾರಣಕ್ಕಾಗಿ ಇದು ಪವರ್ ಫುಲ್ ಇಂಜಿನ್ ಅನ್ನು ಹೊಂದಿರುವಂತಹ ಕಾರುಗಳಲ್ಲಿ ಕಾಣಿಸಿಕೊಳ್ಳುತ್ತದೆ.
  5. Maruti Suzuki Brezza ಕಾರು ನಿಮಗೆ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಎರಡರಲ್ಲಿ ಕೂಡ ಲಭ್ಯವಿದೆ. ಇದರಲ್ಲಿ ಇರುವಂತಹ ಆರು ಸ್ಪೀಡ್ ಯೂನಿಟ್ ಗಳು ಇದರ ಪವರ್ಫುಲ್ ಪರ್ಫಾರ್ಮೆನ್ಸ್ ಅನ್ನು ಇನ್ನಷ್ಟು ಹೆಚ್ಚಿಸುತ್ತದೆ. ಆಟೋಮೆಟಿಕ್ ವೇರಿಯಂಟ್ ನಲ್ಲಿ ಇರುವಂತಹ ಪೆಡಲ್ ಶಿಫ್ಟರ್ ಇದಕ್ಕೆ ಇನ್ನಷ್ಟು ಪ್ರೀಮಿಯಂ ಅನುಭವವನ್ನು ನೀಡುತ್ತದೆ.
  6. ಇದರಲ್ಲಿರುವಂತಹ ಇಂಧನದ ದಕ್ಷತೆ ಈ ಕಾರನ್ನು ಇನ್ನಷ್ಟು ಇಷ್ಟಪಡುವುದಕ್ಕೆ ಮತ್ತೊಂದು ಕಾರಣವಾಗಿದೆ. ಮ್ಯಾನುವಲ್ ನಲ್ಲಿ 17.03 ಹಾಗೂ ಆಟೋಮ್ಯಾಟಿಕ್ ನಲ್ಲಿ 18.06 ಕಿಲೋಮೀಟರ್ಗಳ ಮೈಲೇಜ್ ಅನ್ನು ಪಡೆದುಕೊಳ್ಳಬಹುದು. ಹೊಸ Maruti Suzuki Brezza ದಲ್ಲಿ ಮ್ಯಾನುವಲ್ ನಲ್ಲಿ 20.15 ಹಾಗೂ ಆಟೋಮೆಟಿಕ್ ನಲ್ಲಿ ಮೈಲೇಜನ್ನು ನೀವು ಪಡೆದುಕೊಳ್ಳಬಹುದಾಗಿದೆ.
  7. ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ಗಳ ಬೆಲೆ ಏರಿಕೆ ಹಾಗೂ ಅವುಗಳ ಮೇಲಿನ ಅವಲಂಬಿಕೆ ಕಡಿಮೆಯಾಗುತ್ತಿರುವ ಬೆನ್ನಲ್ಲಿ CNG ವೇರಿಯಂಟ್ ಅನ್ನು ಕೂಡ ಜಾರಿಗೆ ತರಲಾಗಿದ್ದು ಅವುಗಳಲ್ಲಿ ಕೂಡ ಇಂದಿನ ದಕ್ಷತೆಯನ್ನು ನೀವು ಸುಲಭ ರೂಪದಲ್ಲಿ ಕಾಣಬಹುದಾಗಿದೆ. Maruti Suzuki Brezza CNG ಕಾರನ್ನು ಒಂದು ವೇಳೆ ನೀವು ಖರೀದಿ ಮಾಡಿದ್ರೆ ಒಂದು ಕೆಜಿಗೆ 25.51 ಕಿಲೋಮೀಟರ್ಗಳ ಮೈಲೇಜ್ ಅನ್ನು ನೀವು ಸುಲಭವಾಗಿ ರೂಪದಲ್ಲಿ ಪಡೆದುಕೊಳ್ಳಬಹುದಾಗಿದ್ದು ಇದು ನಿಜಕ್ಕೂ ಕಾರನ್ನು ಖರೀದಿ ಮಾಡುವವರಿಗೆ ಒಂದೊಳ್ಳೆ ಅವಕಾಶವಾಗಿದೆ.
  8. ಪ್ರತಿಯೊಬ್ಬರು ಕೂಡ ಕಾರು ಖರೀದಿಯನ್ನು ಮಾಡುವ ಸಂದರ್ಭದಲ್ಲಿ ಗಣನೆಗೆ ತೆಗೆದುಕೊಳ್ಳುವ ವಿಚಾರಗಳಲ್ಲಿ ಪ್ರಮುಖವಾಗಿ ಸುರಕ್ಷತೆ ಕೂಡ ಒಂದಾಗಿದೆ. Maruti Suzuki Brezza ಕಾರಿನಲ್ಲಿ ಕೂಡ ESP ಜೊತೆಗೆ ಹಿಲ್ ಹೋಲ್ಡ್ ಅಸಿಸ್ಟ್ ಪ್ರೋಗ್ರಾಮ್ ಅನ್ನು ಕೂಡ ನೀವು ಕಾಣಬಹುದಾಗಿದೆ. 20ಕ್ಕೂ ಹೆಚ್ಚಿನ ಸೇಫ್ಟಿ ಪ್ರೊಗ್ರಾಮ್ ಗಳನ್ನು ನೀವು ಈ ಕಾರಿನಲ್ಲಿ ಕಾಣಬಹುದಾಗಿದ್ದು ಕಾರಿನ ಸೇಫ್ಟಿಯ ಬಗ್ಗೆ ಯಾವುದೇ ರೀತಿಯ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಇವಿಷ್ಟು ಕಾರಣಗಳಿಗಾಗಿ Maruti Suzuki Brezza ಕಾರನ್ನು ಖರೀದಿಸಲು ಗ್ರಾಹಕರು ಇಷ್ಟಪಡುತ್ತಾರೆ.

Comments are closed.