Mahindra XUV400 Diwali Offer: ಮಹಿಂದ್ರಾ ಕಾರಿನ ಮೇಲೆ ಬರೋಬ್ಬರಿ 3.6 ಲಕ್ಷ ರೂಪಾಯಿ ಭರ್ಜರಿ ಆಫರ್- ವಿಶೇಷತೆ, ಬೆಲೆ ತಿಳಿದರೆ ಇಂದೇ ಖರೀದಿ ಮಾಡ್ತೀರಾ.

Mahindra XUV400 Car details and diwali offer details

Mahindra XUV400 Diwali Offer: ನಮಸ್ಕಾರ ಸ್ನೇಹಿತರೇ ದೀಪಾವಳಿ ಹಬ್ಬದ ಸಂದರ್ಭದಲ್ಲಿ ನೀವೆಲ್ಲರೂ ಕೂಡ ತಿಳಿದಿರುವ ಹಾಗೆ ಪ್ರತಿಯೊಂದು ಕಂಪನಿಗಳು ಕೂಡ ತಮ್ಮ ಪ್ರಾಡಕ್ಟ್ ಗಳನ್ನು ರಿಯಾಯಿತಿ ಬೆಲೆಯಲ್ಲಿ ಮಾರಾಟ ಮಾಡುತ್ತವೆ. ಅದರಲ್ಲಿಯೂ ವಿಶೇಷವಾಗಿ ನೀವು ಒಂದು ವೇಳೆ ಈ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಹೀಂದ್ರ(Mahindra Cars) ಸಂಸ್ಥೆಯ ಕಾರುಗಳನ್ನು ಖರೀದಿಸುವಂತಹ ಯೋಜನೆಯನ್ನು ಹಾಕಿಕೊಂಡಿದ್ದರೆ ಖಂಡಿತವಾಗಿ ನೀವು ಕೂಡ ಈ ದೀಪಾವಳಿ ಹಬ್ಬದ ಸಂದರ್ಭದಲ್ಲಿ ದೊಡ್ಡ ಮಟ್ಟದ ಉಳಿತಾಯ ಮಾಡಬಹುದಾಗಿದೆ. ಹೌದು ನಾವ್ ಮಾತಾಡ್ತಿರೋದು Mahindra XUV400 ಎಲೆಕ್ಟ್ರಿಕ್ ಕಾರಿನ ಮೇಲೆ ನೀಡಲಾಗುತ್ತಿರುವ 3.60 ಲಕ್ಷ ರೂಪಾಯಿಗಳ ಡಿಸ್ಕೌಂಟ್ ಆಫರ್ ಬಗ್ಗೆ.

Mahindra XUV400 ದೀಪಾವಳಿ ಆಫರ್ | Mahindra XUV400 Diwali Offer Details

Mahindra XUV400 ಕಾರಿನ ಮೇಲೆ ಈ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಹೀಂದ್ರ ಸಂಸ್ಥೆಯಿಂದ ಬರೋಬ್ಬರಿ 3.60 ಲಕ್ಷ ರೂಪಾಯಿಗಳ ರಿಯಾಯಿತಿ ದರವನ್ನು ಜಾರಿಗೊಳಿಸಲಾಗಿದೆ (Mahindra XUV400 Diwali Offer). ಇನ್ನು ಈ ಬಾರಿ ಮಹೀಂದ್ರ ಸಂಸ್ಥೆಯಲ್ಲಿ ಇನ್ನೂ ಬೇರೆ ವಾಹನಗಳ ಮೇಲೆ ರಿಯಾಯಿತಿಯನ್ನು ಜಾರಿಗೊಳಿಸಲಾಗಿದೆ ಇದರ ಬಗ್ಗೆ ನೀವು ನಿಮ್ಮ ಹತ್ತಿರದ ಶೋರೂಮ್ ಅಥವಾ ಅಧಿಕೃತ ವೆಬ್ಸೈಟ್ ಮೂಲಕ ತಿಳಿದುಕೊಳ್ಳಬಹುದಾಗಿದೆ. ಯಾಕೆಂದರೆ ಇದು ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ರೀತಿಯ ರಿಯಾಯಿತಿಯನ್ನು ಜಾರಿಗೆ ತರಲಾಗಿದೆ.

ಇದನ್ನು ಕೂಡ ಓದಿ: Get Loan: ಬೇರೆ ಬ್ಯಾಂಕ್ ಗಳು ಲೋನ್ ಕೊಡುತ್ತಿಲ್ಲ- ಅದಕ್ಕೆ ಎಂಟ್ರಿ ಕೊಟ್ರ ಬರೋಡ ಬ್ಯಾಂಕ್. ಇನ್ನು 10 ಲಕ್ಷದ ವರೆಗೂ ಸುಲಭ ಲೋನ್.

Mahindra XUV400 ಕಾರಿನ ಭಾರತೀಯ ಬೆಲೆ: Mahindra XUV400 Price details

ಭಾರತದ ಮಾರುಕಟ್ಟೆಯಲ್ಲಿ ಹಾಗೂ ರೋಡುಗಳಲ್ಲಿ ಸರಿಹೊಂದುವ ರೀತಿಯಲ್ಲಿ ಮಹೇಂದ್ರ ಸಂಸ್ಥೆ ಈ ಕಾರನ್ನು ನಿರ್ಮಾಣ ಮಾಡಿದೆ ಎಂದು ಹೇಳಬಹುದಾಗಿದೆ. ಇದೇ ಕಾರಣಕ್ಕಾಗಿ ಭಾರತ ದೇಶದಲ್ಲಿ ಲಾಂಚ್ ಆದಂತಹ ಕೆಲವೇ ಸಮಯಗಳಲ್ಲಿ ಇದು ಸಾಕಷ್ಟು ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿದೆ. Mahindra XUV400 ಕಾರಿನ ಬೆಲೆಯ ಬಗ್ಗೆ ಮಾತನಾಡುವುದಾದರೆ 15.99 ಲಕ್ಷ ರೂಪಾಯಿಗಳಿಂದ ಪ್ರಾರಂಭಿಸಿ 19.39 ಲಕ್ಷ ರೂಪಾಯಿಗಳ ಬೆಲೆಯಲ್ಲಿ ನೀವು ಎಕ್ಸ್ ಶೋರೂಮ್ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ.

ಇನ್ನು ನೀವು Mahindra XUV400 ಕಾರಿನಲ್ಲಿ ಎರಡು ವೇರಿಯಂಟ್ಗಳನ್ನು ಪಡೆದುಕೊಳ್ಳಬಹುದಾಗಿದೆ. 5 ಕಲರ್ ಆಪ್ಷನ್ ಗಳನ್ನು ಕೂಡ ನೀವು ಪಡೆದುಕೊಳ್ಳಬಹುದಾಗಿದ್ದು ಐದು ಸೀಟರ್ಗಳ ಜೊತೆಗೆ 378 ಲೀಟರ್ ಬೂಟ್ಸ್ ಸ್ಪೇಸ್ ಅನ್ನು ಕೂಡ ನೀವು ಪಡೆದುಕೊಳ್ಳಬಹುದು. (Mahindra XUV400 Diwali Offer)

Mahindra XUV400 Car details and diwali offer details
Mahindra XUV400 Car details and diwali offer details

Mahindra XUV400 ಎಲೆಕ್ಟ್ರಿಕ್ ಕಾರಿನ ಫೀಚರ್ ಗಳು | Mahindra XUV400 Car features and Specifications

Mahindra XUV400 ಕಾರಿನಲ್ಲಿ ನೀವು 7 ಇಂಚಿನ ಇನ್ಫೋಟೈನ್ಮೆಂಟ್ ಟಚ್ ಸ್ಕ್ರೀನ್ ಸಿಸ್ಟಮ್ ಅನ್ನು ಕಾಣಬಹುದಾಗಿದೆ. ಡಿಜಿಟಲ್ ಇನ್ಸ್ಟ್ರುಮೆಂಟಲ್ ಕ್ಲಸ್ಟರ್ ಜೊತೆಗೆ ನೀವು ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೋ ಅನ್ನು ಕೂಡ ನೀವು ಪಡೆದುಕೊಳ್ಳಬಹುದಾಗಿದೆ. 60ಕ್ಕೂ ಹೆಚ್ಚಿನ ಕನೆಕ್ಟೆಡ್ ಕಾರ್ ಟೆಕ್ನಾಲಜಿಯನ್ನು ಅಳವಡಿಸಲಾಗಿದೆ. ಸ್ಟಾರ್ಟ್ ಹಾಗೂ ಸ್ಟಾಪ್ ಗಾಗಿ ಪುಷ್ ಬಟನ್ ಅನ್ನು ಅಳವಡಿಸಲಾಗಿದೆ. ಕ್ಲೈಮೇಟ್ ಕಂಟ್ರೋಲ್ ವಯರ್ಲೆಸ್ ಮೊಬೈಲ್ ಚಾರ್ಜಿಂಗ್ ಅನ್ನು ಕೂಡ ನೀವು ಪಡೆದುಕೊಳ್ಳಬಹುದು.

USB ಚಾರ್ಜಿಂಗ್ ಸಾಕೆಟ್ಗಳನ್ನು ಕೂಡ ನೀವು ಪಡೆಯಬಹುದಾಗಿದೆ. ಸೇಫ್ಟಿ ಫೀಚರ್ ಗಳ ಬಗ್ಗೆ ಕೂಡ ವಿಶೇಷವಾದ ಗಮನವನ್ನು ವಹಿಸಲಾಗಿದ್ದು ಆರು ಏರ್ ಬ್ಯಾಗ್ ಗಳನ್ನು ಅಳವಡಿಸಲಾಗಿದೆ. ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಟೈಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಹಿಲ್ ಹೋಲ್ಡ್ ಅಸಿಸ್ಟ್, ರಿವರ್ಸ್ ಪಾರ್ಕಿಂಗ್ ಸೆನ್ಸರ್ ಹಾಗೂ ಕ್ಯಾಮರಾದ ಜೊತೆಗೆ ISOFIX ಚೈಲ್ಡ್ ಸೀಟ್ ಆಂಕರ್ ಅನ್ನು ಕೂಡ ನೀವು ಈ ಕಾರಿನಲ್ಲಿ ಪಡೆದುಕೊಳ್ಳಬಹುದು.

Mahindra XUV400 ಕಾರಿನ ಬ್ಯಾಟರಿ ರೇಂಜ್ ಮತ್ತು ಚಾರ್ಜಿಂಗ್ ಮಾಹಿತಿ: Mahindra XUV400 range details

Mahindra XUV400 ಎಲೆಕ್ಟ್ರಿಕ್ ಕಾರ್ ನಲ್ಲಿ ಎರಡು ವೇರಿಯಂಟ್ ಗಳು ಇರುತ್ತವೆ ಎನ್ನುವುದನ್ನು ಈಗಾಗಲೇ ನಾವು ನಿಮಗೆ ಹೇಳಿದ್ದೇವೆ. 34.5kwh ಹಾಗೂ 39.4kwh ಸಾಮರ್ಥ್ಯದ ಎರಡು ಬ್ಯಾಟರಿಗಳ ಆಪ್ಷನ್ ಗಳು ನಿಮಗೆ ಸಿಗುತ್ತವೆ. ಚಿಕ್ಕದಾಗಿರುವಂತಹ ಬ್ಯಾಟರಿ ಪ್ಯಾಕ್ ನಿಮಗೆ 375 km ಗಳ ರೇಂಜ್ ನೀಡುತ್ತದೆ ಹಾಗೂ ದೊಡ್ಡ ಬ್ಯಾಟರಿ ಪ್ಯಾಕ್ ನಿಮಗೆ 456km ಗಳ ರೆಂಜ್ ನೀಡುತ್ತದೆ. ಸಾಮಾನ್ಯ ಚಾರ್ಜರ್ ಮೂಲಕ ಇದನ್ನು ಫುಲ್ ಚಾರ್ಜ್ ಮಾಡೋದು 6.5 ಗಂಟೆಗಳ ಸಮಯವನ್ನು ಪಡೆದುಕೊಳ್ಳುತ್ತದೆ. ಫಾಸ್ಟ್ ಚಾರ್ಜಿಂಗ್ ಮೂಲಕ ನೀವು ಈ ಕಾರನ್ನು 50 ನಿಮಿಷಗಳಿಂದ ಒಂದು ಗಂಟೆಯ ಒಳಗೆ ಮಾಡಬಹುದಾಗಿದೆ. 3.3 ಕಿಲೋ ವ್ಯಾಟ್ ಚಾರ್ಜರ್ ಮೂಲಕ ಚಾರ್ಜ್ ಮಾಡಿ ಫುಲ್ ಚಾರ್ಜ್ ಮಾಡೋದಕ್ಕೆ 13 ಗಂಟೆಗಳ ಸಮಯ ಕೂಡಬೇಕಾಗುತ್ತದೆ. ಸದ್ಯದ ಮಟ್ಟಿಗೆ ತನ್ನ ಸೆಗ್ಮೆಂಟ್ ನಲ್ಲಿ ಎಲೆಕ್ಟ್ರಿಕ್ ವಾಹನಗಳ ಪೈಕಿಯಲ್ಲಿ Mahindra XUV400 ಕಾರು Tata Nexon ಹಾಗೂ MG ZS EV ಕಾರುಗಳ ವಿರುದ್ಧ ಪೈಪೋಟಿ ಮಾಡಬೇಕಾಗಿ ಬಂದಿದೆ.

Comments are closed.