Business Idea: ಕೇವಲ 20 ಸಾವಿರದಲ್ಲಿ ಬರೋಬ್ಬರಿ 5 ಲಕ್ಷ ಲಾಭ ಪಡೆಯೋದು ಹೇಗೆ ಗೊತ್ತೇ? ಈ ಬಿಸಿನೆಸ್ ಮಾಡಿ ನೋಡಿ.

Low Investment Business Idea Explained in Kannada- Below is the Complete details of it.

Business Idea in Kannada: ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರೂ ಕೂಡ ಅತ್ಯಂತ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭವನ್ನು ಪಡೆಯುವಂತಹ ವ್ಯಾಪಾರ ಮಾಡುವ ಬಗ್ಗೆ ಯೋಚನೆ ಮಾಡುತ್ತಿರುತ್ತಾರೆ. ಅಂಥವರಿಗೆ ಖಂಡಿತವಾಗಿ ಇವತ್ತಿನ ಲೇಖನಿಯನ್ನುವುದು ಸಾಕಷ್ಟು ಉಪಯೋಗಕಾರಿಯಾಗಲಿದೆ. ಇವತ್ತಿನ ಲೇಖನಿಯಲ್ಲಿ ನಾವು ನಿಂಬೆ ಹುಲ್ಲನ್ನು(lemongrass business) ಬೆಳೆಸುವುದರ ಮೂಲಕ ಯಾವ ರೀತಿಯಲ್ಲಿ ಲಾಭವನ್ನು ಪಡೆದುಕೊಳ್ಳಬಹುದು ಎನ್ನುವುದರ ಬಗ್ಗೆ ಹೇಳಲು ಹೊರಟಿದ್ದೇವೆ. ಪರಿಣಿತರು ಹೇಳುವ ಪ್ರಕಾರ ಒಂದು ಹೆಕ್ಟರ್ ಭೂಮಿಯಲ್ಲಿ ರೈತರು 12ರಿಂದ 13 ಟನ್ ಗಳ ಲೆಮನ್ ಗ್ರಾಸ್ ಅನ್ನು ಬೆಳೆಯಬಹುದಾಗಿದೆ ಎಂದು ಹೇಳಲಾಗುತ್ತದೆ.

Low Investment Business Idea Explained in Kannada- Below is the Complete details of it.

ಅಂದಾಜು ಮಾಹಿತಿಯ ಪ್ರಕಾರ ಒಂದು ವರ್ಷಕ್ಕೆ 60 ರಿಂದ 65 ಟನ್ ಗಳಷ್ಟು lemongrass ಅನ್ನು ಉತ್ಪಾದನೆ ಮಾಡಲಾಗುತ್ತದೆ ಹಾಗೂ ಅದರಿಂದ ಅಂದರೆ ಒಂದು ಟನ್ ಲೆಮನ್ ಗ್ರಾಸ್ ನಿಮಗೆ 5 ಲೀಟರ್ ಎಣ್ಣೆಯನ್ನು ಪೂರೈಸುತ್ತದೆ. ಮಾರುಕಟ್ಟೆಯಲ್ಲಿ ಲೆಮನ್ ಗ್ರಾಸ್ ಎಣ್ಣೆಗೆ(lemon grass oil) ಲೀಟರ್ಗೆ 1500 ರೂಪಾಯಿಗಳಷ್ಟು ಬೇಡಿಕೆ ಇದೆ ಎಂಬುದಾಗಿ ತಿಳಿದುಬಂದಿದೆ. ಖಂಡಿತವಾಗಿ ಇದೊಂದು ಲಾಭದಾಯಕ ಉದ್ಯಮ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಎಕ್ಸ್ಪರ್ಟ್ ಗಳು ಹೇಳುವ ಪ್ರಕಾರ ಇದನ್ನು ಮೊದಲ ಬಾರಿಗೆ ನಾಟಿ ಮಾಡಲು 50,000 ರೂಪಾಯಿಗಳ ಖರ್ಚು ಬೇಕಾಗುತ್ತದೆ ಎಂದು ಹೇಳಿದ್ದಾರೆ. ಗಿಡಗಳ ಸುತ್ತ ಕಲ್ಲು ಮಣ್ಣನ್ನು ತೆಗೆದರೆ ಲೆಮನ್ ಗ್ರಾಸ್ ಸಿದ್ದ ಆಗೋದಕ್ಕೆ 20 ರಿಂದ 25 ಸಾವಿರ ರೂಪಾಯಿ ಖರ್ಚು ಮಾಡಿದರೆ ಸಾಕು ಅಂತಾನು ಕೂಡ ತಿಳಿದು ಬರುತ್ತೆ. ಇದರ ಜೊತೆಗೆ ವರ್ಷಕ್ಕೆ ರೈತ ನಾಲ್ಕರಿಂದ ಐದು ಲಕ್ಷ ರೂಪಾಯಿಗಳ ಆದಾಯವನ್ನು ಕೂಡ ಪಡೆದುಕೊಳ್ಳಲು ಸಾಧ್ಯ ಎನ್ನುವುದಾಗಿ ಎಕ್ಸ್ಪರ್ಟ್ ಗಳು ಹೇಳುತ್ತಾರೆ.

ಗೃಹಲಕ್ಷ್ಮಿ ಒಂದೇ ಯೋಜನೆಯಲ್ಲ- ಗೃಹಿಣಿಯರಿಗೆ ಇದಕ್ಕಿಂತ ಬೆಸ್ಟ್ ಯೋಜನೆ ಮತ್ತೊಂದಿಲ್ಲ. ಲಕ್ಷ ಲಕ್ಷ ಲಾಭ ಫಿಕ್ಸ್. Government Scheme

ಕೇವಲ ಲೀಟರ್ಗೆ ಲೆಮನ್ ಗ್ರಾಸ್ ಎಣ್ಣೆಯನ್ನು ನೀವು 1500 ರೂಪಾಯಿಗಳಿಗೆ ಮಾರಾಟ ಮಾಡಬಹುದು ಎಂದಾದರೆ ಅದನ್ನು ಯಾವುದಕ್ಕಾಗಿ ಬಳಸಬಹುದು ಎಂಬುದಾಗಿ ಕೂಡ ನೀವು ಕುತೂಹಲದಿಂದ ಕಾಯುತ್ತಿರಬಹುದು. ಈ ಎಣ್ಣೆಯನ್ನು ಸೌಂದರ್ಯವರ್ಧಕ(Cosmetics ) ವಸ್ತುಗಳಲ್ಲಿ ಬಳಸಲಾಗುತ್ತದೆ ಎಂಬುದಾಗಿ ತಿಳಿದು ಬರುತ್ತದೆ. ಕೇವಲ ಇಷ್ಟು ಮಾತ್ರವಲ್ಲದೆ ಸಾಬೂನು ಹಾಗೂ ಇತರ ರೀತಿಯ ವಸ್ತುಗಳಲ್ಲಿ ಕೂಡ ಇದನ್ನು ಬಳಸಲಾಗುತ್ತಿದ್ದು ಔಷಧಿ ತಯಾರಿಕೆಯಲ್ಲಿ( medicine production) ಕೂಡ ಇದರ ಬಳಕೆ ವ್ಯಾಪಕವಾಗಿ ನಡೆಯುತ್ತದೆ ಎಂಬುದಾಗಿ ಎಕ್ಸ್ಪರ್ಟ್ಗಳ ಮೂಲಕ ತಿಳಿದು ಬರುತ್ತದೆ.

ಸ್ವಂತ ಉದ್ಯಮದ ಕನಸು ಇದ್ದರೆ ದೀಪಾವಳಿಗೂ ಮುನ್ನ ಈ ಬಿಸಿನೆಸ್ ಆರಂಭಿಸಿ. ಲಕ್ಷ ಲಕ್ಷ ಆದಾಯ. Business Idea In Kannada

ಅತ್ಯಂತ ಕಡಿಮೆ ಬಂಡವಾಳದಲ್ಲಿ ಹೆಚ್ಚಿನ ಲಾಭವನ್ನು ಪಡೆಯಬಹುದಾದಂತಹ ಉದ್ಯಮ ಇದಾಗಿದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಇಲ್ಲಿ ಕೂಡ ರೈತರಿಗೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತದೆ ಎಂಬುದನ್ನು ಕೂಡ ಮರೆಯುವಂತಿಲ್ಲ. ಖಂಡಿತವಾಗಿ ಲೆಮನ್ ಗ್ರಾಸ್ ಎಣ್ಣೆಗೆ 1200 ರೂಪಾಯಿಯಿಂದ 1500 ಪ್ರತಿ ಲೀಟರ್ ಸಿಗುತ್ತದೆ ನಿಜ, ಆದರೆ ಇದನ್ನು ಮಾರಾಟ ಮಾಡುವುದೇ ರೈತರಿಗೆ ಇರುವಂತಹ ದೊಡ್ಡ ಸಮಸ್ಯೆಯಾಗಿದೆ. ಈ ಎಣ್ಣೆಯನ್ನು ಮಾರಾಟ ಮಾಡಲು ರೈತರ ಸಾಕಷ್ಟು ಕಷ್ಟ ಪಡಬೇಕಾದಂತಹ ಪರಿಸ್ಥಿತಿ ಕೂಡ ಈಗ ಸದ್ಯಕ್ಕೆ ಮಾರುಕಟ್ಟೆಯಲ್ಲಿ ಇದೆ. ಬೇಡಿಕೆ ಜೊತೆಗೆ ಅದನ್ನು ಸರಿಯಾದ ರೀತಿಯಲ್ಲಿ ಸರಿಯಾದ ಕಡೆಗೆ ಬೇಡಿಕೆ ಇರುವ ಜಾಗಕ್ಕೆ ಪೂರೈಸುವ ಕಷ್ಟವನ್ನು ಕೂಡ ರೈತರು ಹೊಂದುತ್ತಿದ್ದಾರೆ.

ಎಕ್ಸ್ಪರ್ಟ್ ಗಳು ಹೇಳುವ ಪ್ರಕಾರ ಸದ್ಯದ ಮಟ್ಟಿಗೆ ಮಾರುಕಟ್ಟೆಯಲ್ಲಿ ತೈಲ ಖರೀದಿಯ(oil purchase) ವಿಭಾಗದಲ್ಲಿ ಬೇಡಿಕೆ ಸಾಕಷ್ಟು ಕಡಿಮೆಯಾಗಿದೆ ಎನ್ನುವುದಾಗಿ ತಿಳಿದು ಬಂದಿದ್ದು ಇದೇ ಕಾರಣಕ್ಕಾಗಿ ಲೆಮನ್ ಗ್ರಾಸ್ ಎಣ್ಣೆಯನ್ನು ಮಾರಾಟ ಮಾಡುವಂತಹ ರೈತರಿಗೆ ತಮ್ಮ ಎಣ್ಣೆಯನ್ನು ಮಾರಾಟ ಮಾಡುವ ಪ್ರಕ್ರಿಯೆ ಸಾಕಷ್ಟು ಕಷ್ಟವಾಗುತ್ತಿದ್ದು ನಿರೀಕ್ಷಿತ ರೀತಿಯಲ್ಲಿ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ಕೂಡ ಇಲ್ಲಿರುವಂತಹ ಮತ್ತೊಂದು ದೊಡ್ಡ ಸಮಸ್ಯೆಯಾಗಿದೆ.

Comments are closed.