KL Rahul: ಭಾರತ ತಂಡದಲ್ಲಿ ಅಷ್ಟೇನು ಕೆಲಸಕ್ಕೆ ಬಾರದೆ ಇದ್ದರೂ, ನಿಜ ಜೀವನದಲ್ಲಿ ರಾಹುಲ್ ಮಾಡಿದ ಕಾರ್ಯಕ್ಕೆ ನೆಟ್ಟಿಗರ ಮೆಚ್ಚುಗೆ.

KL Rahul Latest Updates

KL Rahul: ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಾಳೆ ಭಾನುವಾರ ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ಮೊದಲ ಪಂದ್ಯವನ್ನು ಆಡುವ ಮೂಲಕ ಭಾರತೀಯ ಕ್ರಿಕೆಟ್ ತಂಡ ಈ ಬಾರಿಯ ವಿಶ್ವಕಪ್ ನಲ್ಲಿ ತನ್ನ ಖಾತೆಯನ್ನು ತೆರೆಯುವಂತಹ ಪ್ರಯತ್ನದಲ್ಲಿದೆ. ಇಂದಿನ ಲೇಖನಿಯಲ್ಲಿ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಪ್ರಮುಖ ಪಾತ್ರವನ್ನು ನಿರ್ವಹಿಸುವಂತಹ ಆಟಗಾರ ಆಗಿರುವ ಕೆಎಲ್ ರಾಹುಲ್(KL Rahul ) ಅವರ ಬಗ್ಗೆ ಮಾತನಾಡಲು ಹೊರಟಿದ್ದೇವೆ. ಕಳಸಾಕಷ್ಟು ಸಮಯಗಳಿಂದ ಕಳಪೆ ಪ್ರದರ್ಶನವನ್ನು ನೀಡುತ್ತಿದ್ದ ಕೆ ಎಲ್ ರಾಹುಲ್ ನಂತರ ಇಂಜಿರಿಗೆ ಕೂಡ ಒಳಗಾಗಿದ್ದರು.

ಗೃಹಲಕ್ಷ್ಮಿ ಒಂದೇ ಯೋಜನೆಯಲ್ಲ- ಗೃಹಿಣಿಯರಿಗೆ ಇದಕ್ಕಿಂತ ಬೆಸ್ಟ್ ಯೋಜನೆ ಮತ್ತೊಂದಿಲ್ಲ. ಲಕ್ಷ ಲಕ್ಷ ಲಾಭ ಫಿಕ್ಸ್. Government Scheme

ನಂತರ ಏಷ್ಯಾ ಕಪ್(Asia Cup) ನಲ್ಲಿ ಕಮ್ ಬ್ಯಾಕ್ ಮಾಡೋ ಮೂಲಕ ಈಗ ಮತ್ತೊಮ್ಮೆ ತಮ್ಮ ನಿಜವಾದ ಫಾರ್ಮ್ ಗೆ ಮರಳಿದ್ದಾರೆ ಎಂದರು ತಪ್ಪಾಗಲಾರದು. ಅವರ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಯಾವೆಲ್ಲಾ ರೀತಿಯಲ್ಲಿ ಟ್ರೋಲ್ ಹಾಗೂ ಟೀಕೆಗಳು ನಡೆಯುತ್ತವೆ ಎನ್ನುವುದನ್ನು ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾದ ಅಗತ್ಯವಿಲ್ಲ ಎಂಬುದಾಗಿ ಭಾವಿಸುತ್ತೇವೆ. ಇನ್ನು ಈ ಬಾರಿ ಭಾರತದಲ್ಲಿ ನಡೆಯುತ್ತಿರುವಂತಹ ವಿಶ್ವಕಪ್ ನಲ್ಲಿ(World Cup 2023) ಕೂಡ ರಾಹುಲ್ ಅವರ ಮೇಲೆ ಸಾಕಷ್ಟು ನಿರೀಕ್ಷೆ ಇದೆ ಆದರೆ ಅದಕ್ಕಿಂತ ವಿಶೇಷವಾದ ಒಂದು ವಿಚಾರವನ್ನು ಇವತ್ತು ನಿಮಗೆ ಹೇಳಲು ಹೊರಟಿದ್ದೇವೆ.

ಕೇವಲ ಕ್ರಿಕೆಟ್ ಸಾಧನೆಗಾಗಿ ಮಾತ್ರವಲ್ಲದೆ ಕೆಲವೊಂದು ಸಮಾಜ ಸೇವೆಗಳಿಗಾಗಿ ಕೂಡ ಕೆ ಎಲ್ ರಾಹುಲ್ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಜನಪ್ರಿಯರಾಗಿದ್ದಾರೆ. ಬಡ ಕುಟುಂಬದಲ್ಲಿ ಜನಿಸಿರುವಂತಹ ವಿದ್ಯಾರ್ಥಿನಿಗೆ ಈಗ ಡಾಕ್ಟರ್(doctor) ಆಗುವ ಕನಸಿಗೆ ಕೆಎಲ್ ರಾಹುಲ್ ಅವರು ಸಾತ್ ನೀಡುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಸುಡುಗಾಡು ಸಿದ್ದರ ಜನಾಂಗದಲ್ಲಿ ಜನಿಸಿರುವಂತಹ ಸೃಷ್ಟಿ ಕುಲಾವಿ ಅವರಿಗೆ ವಿದ್ಯಾಭ್ಯಾಸಕ್ಕೆ ಅವರ ಬಡತನ ಅಡ್ಡಿಯಾಗಿದ್ದು ಆದರೆ ಈಗ ಬಿಜೆಪಿ ಮುಖಂಡರ ಮೂಲಕ ಈ ವಿಚಾರ ಕೆ ಎಲ್ ರಾಹುಲ್ ಅವರಿಗೆ ತಲುಪಿದ್ದು ಈ ವಿಚಾರದಲ್ಲಿ ಅವರು ತಮ್ಮ ಸಹಾಯ ಹಸ್ತವನ್ನು ಚಾಚಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಸ್ವಂತ ಉದ್ಯಮದ ಕನಸು ಇದ್ದರೆ ದೀಪಾವಳಿಗೂ ಮುನ್ನ ಈ ಬಿಸಿನೆಸ್ ಆರಂಭಿಸಿ. ಲಕ್ಷ ಲಕ್ಷ ಆದಾಯ. Business Idea In Kannada

ವರ್ಷವಿಡಿ ಕ್ರಿಕೆಟ್(Cricket ) ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತಹ ಕೆಎಲ್ ರಾಹುಲ್ ರವರು ನಿಜಕ್ಕೂ ಕೂಡ ಇಂತಹ ಬಡ ಮಕ್ಕಳ ಕೂಗನ್ನು ಕೂಡ ಕೇಳಿ ಸಮಾಜದ ಪ್ರಚಾರದಿಂದ ಕೂಡ ದೂರವಾಗಿ ಯಾರಿಗೂ ತಿಳಿಯದಂತೆ ಮಾಡುತ್ತಿರುವ ಸಹಾಯ ನಿಜಕ್ಕೂ ಕೂಡ ಪ್ರತಿಯೊಬ್ಬರೂ ಪ್ರಶಂಸೆ ಮಾಡಬೇಕಾಗಿರುವಂತಹ ವಿಚಾರವಾಗಿದೆ. ಧಾರವಾಡ ಜಿಲ್ಲೆಯಲ್ಲಿ ನಡೆದಿರುವಂತಹ ಈ ಘಟನೆ ಸಾಕಷ್ಟು ಮಾಧ್ಯಮಗಳಲ್ಲಿ ವೈರಲ್ ಆಗಿದ್ದು ಕೆ ಎಲ್ ರಾಹುಲ್ ಹಾಗೂ ಬಿಜೆಪಿ ಮುಖಂಡ ಆಗಿರುವಂತಹ ಮಂಜುನಾಥ ಹೆಬಸೂರು ಅವರಿಗೂ ಕೂಡ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ ಎನ್ನಬಹುದಾಗಿದೆ. ಕೆ ಎಲ್ ರಾಹುಲ್ ಅವರನ್ನು ಟೀಕೆ ಮಾಡುವವರಿಗೆ ಇದೊಂದು ಪಾಠವಾಗಿರಲಿದೆ ಅನ್ನಬಹುದು.

ಈ ಹಿಂದೆ ಹುಬ್ಬಳ್ಳಿಯಲ್ಲಿ ಕೂಡ ತಾಯಿಯನ್ನು ಕಳೆದುಕೊಂಡು ಪಿಯುಸಿಯಲ್ಲಿ 600 ರಲ್ಲಿ 571 ಅಂಕಗಳನ್ನು ಪಡೆದಿದ್ದ ಅಮೃತ್ ಮಾವಿನ ಕಟ್ಟೆ ಎಂಬಂತಹ ಬಡ ವಿದ್ಯಾರ್ಥಿಗು ಕೂಡ ಕೆಎಲ್ ರಾಹುಲ್ ರವರು ಪದವಿ ವ್ಯಾಸಂಗವನ್ನು ಮಾಡಲು ಆರ್ಥಿಕ ಸಹಾಯವನ್ನು ನೀಡಿದ್ದನ್ನು ಕೂಡ ಈ ಸಂದರ್ಭದಲ್ಲಿ ನಾವು ಸ್ಮರಿಸಿಕೊಳ್ಳಬಹುದಾಗಿದೆ. ಕೆಎಲ್ ರಾಹುಲ್ ರವರು ಕ್ರಿಕೆಟ್ಗಿಂತಲೂ ಕೂಡ ದೊಡ್ಡ ಮಟ್ಟದ ವ್ಯಕ್ತಿತ್ವವನ್ನು ಹೊಂದಿರುವಂತಹ ಚಿನ್ನದ ಮನಸ್ಸಿನ ವ್ಯಕ್ತಿ ಎಂದು ಹೇಳಬಹುದು.

Comments are closed.