Government Scheme: ಗೃಹಲಕ್ಷ್ಮಿ ಒಂದೇ ಯೋಜನೆಯಲ್ಲ- ಗೃಹಿಣಿಯರಿಗೆ ಇದಕ್ಕಿಂತ ಬೆಸ್ಟ್ ಯೋಜನೆ ಮತ್ತೊಂದಿಲ್ಲ. ಲಕ್ಷ ಲಕ್ಷ ಲಾಭ ಫಿಕ್ಸ್

Government Scheme: ನಮಸ್ಕಾರ ಸ್ನೇಹಿತರೆ ನೀವು ಸಾಕಷ್ಟು ಬಾರಿ ಗಮನಿಸಬಹುದು ಮನೆಯ ಗ್ರಹಿಣಿಯರು ಮನೆ ಖರ್ಚಿಗಾಗಿ ಸಿಗುವಂತಹ ಹಣವನ್ನೇ ಸಾಕಷ್ಟು ಬಾರಿ ಉಳಿತಾಯ ಮಾಡಿ ಒಂದು ವೇಳೆ ಮನೆಯಲ್ಲಿ ಏನಾದರೂ ಅಗತ್ಯ ಬಿದ್ದಲ್ಲಿ ಈ ಉಳಿತಾಯದ ಹಣದಿಂದಲೇ ಅದನ್ನು ಪೂರೈಸಿಕೊಳ್ಳುವ ಮನೋಭಾವನೆ ಅವರಲ್ಲಿ ಇರುತ್ತದೆ. ಅಂಥವರಿಗಾಗಿ ಕಡಿಮೆ ಹೂಡಿಕೆಯಲ್ಲಿ ದೊಡ್ಡ ಪ್ರಮಾಣದ ಲಾಭವನ್ನು ಪಡೆದುಕೊಳ್ಳುವಂತಹ ಒಂದು ಹೂಡಿಕೆಯ ಯೋಜನೆಯ ಬಗ್ಗೆ ಇಂದಿನ ಲೇಖನಿಯಲ್ಲಿ ನಿಮಗೆ ಹೇಳಲು ಹೊರಟಿದ್ದು ಖಂಡಿತವಾಗಿ ಪ್ರತಿಯೊಬ್ಬರೂ ವಿಶೇಷವಾಗಿ ಗ್ರಹಿಣಿಯರು ಯೋಜನೆಯ(Investment For Housewife) ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳುವುದು ಅತ್ಯಂತ ಪ್ರಮುಖವಾಗಿದೆ.

Best Government schemes for Women or house wife in India explained in Kannada – Kannada News

ಮನೆಯಗ್ರಹಿಣಿಯರು ಮಾಡುವಂತಹ 500 ಹಾಗೂ ಸಾವಿರ ರೂಪಾಯಿಗಳ ಹೂಡಿಕೆಯಿಂದಲೇ ದೊಡ್ಡ ಪ್ರಮಾಣದಲ್ಲಿ ರಿಟರ್ನ್ ಅನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ಮಹಿಳೆಯರಿಗೆ ಹೂಡಿಕೆ ಮಾಡುವುದಕ್ಕೆ ಸಾಕಷ್ಟು ಆಯ್ಕೆಗಳು ಕೂಡ ಇದ್ದು ಅವುಗಳಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್(PPF), SIP ಹಾಗೂ ರಿಕರಿಂಗ್ ಡಿಪೋಸಿಟ್(RD) ಗಳಂತಹ ಹೂಡಿಕೆಯನ್ನು ಕೂಡ ನೀವು ಮಾಡಬಹುದಾಗಿದೆ. ಮೊದಲಿಗೆ PPF ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಈ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಂದರೆ ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ನೀವು 500 ರೂಪಾಯಿ ಇಂದ ಪ್ರಾರಂಭಿಸಿ 1.5 ಲಕ್ಷ ರೂಪಾಯಿಗಳ ವರೆಗೂ ಕೂಡ ಹೂಡಿಕೆ ಮಾಡಬಹುದಾಗಿದೆ. 15 ವರ್ಷಗಳ ಕಾಲ ನೀವು ಇದರಲ್ಲಿ ಹೂಡಿಕೆ ಮಾಡಬೇಕಾಗಿದ್ದು 7.1 ಪ್ರತಿಶತ ಬಡ್ಡಿ ದರದಲ್ಲಿ ನಿಮಗೆ ಬಡ್ಡಿ ಸಿಗುತ್ತದೆ ಹಾಗೂ ಅವಧಿ ಮುಗಿದ ನಂತರ ನಿಮಗೆ ಬಡ್ಡಿ ಸಮೇತ ಹಣ ಸಿಗುತ್ತದೆ. ಉದಾಹರಣೆಗೆ ನೀವು ಈ ಯೋಜನೆಯಲ್ಲಿ ಒಂದು ತಿಂಗಳಿಗೆ ಸಾವಿರ ರೂಪಾಯಿ ಹೂಡಿಕೆ ಮಾಡುತ್ತಾ ವರ್ಷಕ್ಕೆ 12,000 ಹಾಗೂ 15 ವರ್ಷಗಳಿಗೆ 1.80 ಲಕ್ಷ ರೂಪಾಯಿಗಳನ್ನು ಜಮಾ ಮಾಡಿದ ಹಾಗೆ ಆಗುತ್ತದೆ. ಹೀಗಾಗಿ ಬಡ್ಡಿಯ ಹಣವನ್ನು ಸೇರಿಸಿ ಮೆಚುರಿಟಿಯ ಸಂದರ್ಭದಲ್ಲಿ ನೀವು ಒಟ್ಟಾರೆಯಾಗಿ 3,25,457 ರೂಪಾಯಿಗಳನ್ನು ಪಡೆದುಕೊಳ್ಳಬಹುದಾಗಿದೆ.

SIP ವಿಚಾರಕ್ಕೆ ಬರುವುದಾದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಜನರು ಹೂಡಿಕೆ ಮಾಡುತ್ತಿರುವಂತಹ ಯೋಜನೆ ಇದಾಗಿದೆ. ಇರಲಿ ಸಿಗುವಂತಹ ಸಾಮಾನ್ಯ ಬಡ್ಡಿದರ 12 ಪ್ರತಿಶತ ಆಗಿದ್ದು ಇದರಲ್ಲಿ ಬಡ್ಡಿಯ ದರ ಪದೇ ಪದೇ ಮೇಲೆ ಕೆಳಗೆ ಹೋಗುವ ಸಾಧ್ಯತೆ ಕೂಡ ಇದೆ. ಪ್ರತಿ ತಿಂಗಳಿಗೆ ಸಾವಿರ ರೂಪಾಯಿಗಳ ಹೂಡಿಕೆಯ ಜೊತೆಗೆ ನೀವು 15 ವರ್ಷಗಳಲ್ಲಿ 1.80 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿರುತ್ತೀರಿ. 12% ಬಡ್ಡಿದರ ಸೇರಿದರೆ ಒಟ್ಟಾರೆಯಾಗಿ ನೀವು ಮೆಚುರಿಟಿಯ ಸಂದರ್ಭದಲ್ಲಿ 5,04,576 ರೂಪಾಯಿಗಳನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ.

ರಿಕರಿಂಗ್ ಡೆಪಾಸಿಟ್(Recurring Deposit) ಹೂಡಿಕೆಗೆ ಒಂದೊಳ್ಳೆ ಆಯ್ಕೆ ಆಗಿದೆ ಅಂತ ಹೇಳಬಹುದು. ನೀವು ಈ ಯೋಜನೆಯಲ್ಲಿ ಪೋಸ್ಟ್ ಆಫೀಸ್ ನಲ್ಲಿ ಐದು ವರ್ಷಗಳಿಗಾಗಿ ಕೂಡ ಯೋಜನೆಯನ್ನು ಪ್ರಾರಂಭಿಸಬಹುದಾಗಿದೆ. ಇದರ ಮೇಲೆ ನಿಮಗೆ ಸುರಕ್ಷಿತವಾದ 6.5% ಬಡ್ಡಿದರವನ್ನು ಕೂಡ ಪಡೆಯಬಹುದು. ಐದು ವರ್ಷಗಳಲ್ಲಿ ನೀವು ಮಾಡುವ 60,000 ಹೂಡಿಕೆಯ ಮೇಲೆ ನೀವು ರಿಟರ್ನ್ ರೂಪದಲ್ಲಿ 70,989 ರೂಪಾಯಿಗಳನ್ನು ನೀವು ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ ಮಾತ್ರವಲ್ಲ ಅದು ನೀವು ಫಿಕ್ಸೆಡ್ ಡೆಪಾಸಿಟ್(Fixed Deposit) ನಲ್ಲಿ ಕೂಡ ಪ್ರಯತ್ನಪಡಬಹುದಾಗಿದೆ.

ಸಾಮಾನ್ಯವಾಗಿ ಸಾಕಷ್ಟು ಮಹಿಳೆಯರು ಕೆಲಸ ಮಾಡುತ್ತಿರಬಹುದು ಇಲ್ಲವೇ ಕೇವಲ ಮನೆಯಲ್ಲಿ ಗ್ರಹಿಣಿಯರಾಗಿರಬಹುದು ಅವರಿಗೆ ಇಂತಹ ಸುಲಭರೂಪದ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ದೊಡ್ಡ ಪ್ರಮಾಣದಲ್ಲಿ ಹಣವನ್ನು ಸ್ವೀಕರಿಸಿ ಇಡಬಹುದಾದಂತಹ ಸುವರ್ಣ ಅವಕಾಶವನ್ನು ಇಂತಹ ಯೋಜನೆಗಳು ನೀಡುವೆ ಎಂದು ಹೇಳಬಹುದಾಗಿದೆ. ಹೀಗಾಗಿ ಖಂಡಿತವಾಗಿ ಆರ್ಥಿಕ ಸಲಹೆಗಾರರ(Financial Advisor) ಬಳಿ ಈ ಯೋಜನೆಗಳಲ್ಲಿ ಹೂಡಿಕೆ ಮಾಡುವ ಬಗ್ಗೆ ಸಲಹೆಯನ್ನು ಪಡೆದುಕೊಂಡು ಮುಂದುವರೆಯುವಂತಹ ನಿರ್ಧಾರವನ್ನು ತೆಗೆದುಕೊಳ್ಳಬಹುದಾಗಿದೆ.

Comments are closed.