Business Idea: ಇಲ್ಲಿದೆ ನೋಡಿ ಸುಲಭ Business ಐಡಿಯಾ. ಒಂದು ರೂಪಾಯಿ ಕೂಡ ಹೂಡಿಕೆ ಮಾಡದೆ ಇದ್ದರೂ, ಲಕ್ಷ ಲಕ್ಷ ಗಳಿಸಬಹುದು.

These are the business idea you can start without investment or with zero investment.

Business Idea: ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರು ಕೂಡ ಜೀವನದಲ್ಲಿ ತಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಆದಾಯವನ್ನು ಅಂದರೆ ಕೆಲಸ ಮಾಡುತ್ತಿದ್ದರೆ ಸಂಬಳವನ್ನು ಇಲ್ಲವೇ ವ್ಯಾಪಾರ ಮಾಡುತ್ತಿದ್ದರೆ ಲಾಭವನ್ನು ಅಪೇಕ್ಷಿಸುತ್ತಾರೆ. ಆದರೆ ಸಾಮಾನ್ಯವಾಗಿ ಹೆಚ್ಚಿನವರು ಕೆಲಸಕ್ಕಿಂತ ಹೆಚ್ಚಾಗಿ ತಮ್ಮದೇ ಕಂಟ್ರೋಲ್ ನಲ್ಲಿ ಇರುವಂತಹ ವ್ಯಾಪಾರವನ್ನು ಮಾಡಲು ಯೋಚಿಸುತ್ತಾರೆ.

ಆದರೆ ವ್ಯಾಪಾರ ಮಾಡುವುದು ಕೂಡ ಅಷ್ಟೊಂದು ಸುಲಭವಲ್ಲ ಯಾಕೆಂದರೆ ಮೊದಲಿಗೆ ಸಾಕಷ್ಟು ಹಣವನ್ನು ನೀವು ಬಂಡವಾಳ ರೂಪದಲ್ಲಿ ಹೂಡಿಕೆ ಮಾಡಬೇಕಾಗುತ್ತದೆ ಅದಾದ ನಂತರ ಲಾಭ ಬಂದರೆ ಮಾತ್ರ ನೀವು ಹಾಕಿರುವ ಹಣ ನಿಮ್ಮ ಕೈಗೆ ವಾಪಸ್ ಸಿಗುತ್ತದೆ ಎಂದು ಹೇಳಬಹುದು. ಇಂತಹ ಕನ್ಫ್ಯೂಷನ್ ಜಗತ್ತಿನಲ್ಲಿ ನಾವು ನಿಮಗೆ ಒಂದು ಸುಲಭದ Business Idea ಅನ್ನು ನೀಡಲು ಹೊರಟಿದ್ದು ಇದಕ್ಕಾಗಿ ನೀವು ಯಾವುದೇ ಹಣವನ್ನು ಕೂಡ ಖರ್ಚು ಮಾಡಬೇಕಾಗಿರುವ ಅಗತ್ಯವಿಲ್ಲ ಎಂಬುದನ್ನು ಕೂಡ ಮೊದಲಿಗೆ ನೀವು ತಿಳಿದುಕೊಳ್ಳಬೇಕು.

These are the business idea you can start without investment or with zero investment.

ಇತ್ತೀಚಿನ ದಿನಗಳಲ್ಲಿ ನೀವು ರಾಜಕೀಯ ನಾಯಕರುಗಳನ್ನು(Politics Leader’s Social Media Handling) ಗಮನಿಸಿರಬಹುದು ಕೇವಲ ಸಾಮಾಜಿಕವಾಗಿ ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಅವರು ತಮ್ಮ ಜನಪ್ರಿಯತೆ ಹೆಚ್ಚಬೇಕು ಎನ್ನುವ ಕಾರಣಕ್ಕಾಗಿ ಸೋಶಿಯಲ್ ಮೀಡಿಯಾ ಖಾತೆಗಳನ್ನು ತೆರೆದಿರುತ್ತಾರೆ. ಅವುಗಳನ್ನು ನಿರ್ವಹಿಸಿಕೊಂಡು ಹೋಗುವಂತಹ ಕೆಲಸವನ್ನು ಮಾಡುವಂತಹ ಸಾಕಷ್ಟು ಜನರ ಅವಶ್ಯಕತೆ ಕೂಡ ಅವರಿಗೆ ಇರುತ್ತದೆ.

ನೀವು ಕೂಡ ಇವುಗಳನ್ನು ಪ್ರಯತ್ನಪಡಬಹುದಾಗಿದ್ದು ಕೇವಲ ನೀವು ಮಾತ್ರವಲ್ಲದೆ ನಿಮ್ಮ ಕೈಯಲ್ಲಿ ಇದೆ ಕ್ಷೇತ್ರದಲ್ಲಿ ಬೇರೆಯವರಿಗೆ ಕೆಲಸ ನೀಡುವಂತಹ ಸಾಮರ್ಥ್ಯ ಕೂಡ ಬರಬಹುದಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹೀಗೆ ಸೆಲೆಬ್ರಿಟಿಗಳ ಖಾತೆಯನ್ನು ಹ್ಯಾಂಡಲ್ ಮಾಡುವಂತಹ ಸಾಕಷ್ಟು ಜನರು ಇರುತ್ತಾರೆ ಎಂಬುದನ್ನು ಕೂಡ ನೀವು ಈ ಮೂಲಕ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಖಾತೆ ಅಭಿವೃದ್ಧಿ ಆಗಿರುತ್ತದೆ ಆದರೆ ಅದನ್ನು ಮೈನ್ಟೈನ್ ಮಾಡುವವರು ಬೇರೆಯವರು ಆಗಿರುತ್ತಾರೆ.

ಇಂತಹ ನಾಯಕರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳನ್ನು ಮೈನ್ಟೈನ್ ಮಾಡಲು ಬೇರೆಯವರನ್ನು ಅಂದರೆ ವೃತ್ತಿಪರ ತಜ್ಞರನ್ನು ನೇಮಿಸಿಕೊಂಡಿರುತ್ತಾರೆ. ನಿಮಗೆ ಒಂದು ವೇಳೆ ಸೋಶಿಯಲ್ ಮೀಡಿಯಾ ದ ಬಗ್ಗೆ ಒಳ್ಳೆಯ ಜ್ಞಾನ ಇದ್ರೆ ನಿಮ್ಮ ಬಳಿ ಕೇವಲ ಒಂದು ಲ್ಯಾಪ್ಟಾಪ್ ಇದ್ರೆ ಸಾಕು ನೀವು ಕೂಡ ಈ ರೀತಿ ಸೆಲೆಬ್ರಿಟಿಗಳ ಅಕೌಂಟ್ ಅನ್ನು ಹ್ಯಾಂಡಲ್(Celebrity Social Media Account Handle) ಮಾಡಬಹುದಾಗಿದೆ. ಅವರು ಕಳುಹಿಸುವಂತಹ ಫೋಟೋಗಳನ್ನು ಒಳ್ಳೆಯ ರೀತಿಯಲ್ಲಿ ಎಡಿಟ್ ಮಾಡಿ ಅದನ್ನು ಉತ್ತಮ ಬರಹಗಳ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವಂತಹ ಕೆಲಸವನ್ನು ನೀವು ಮಾಡಬೇಕಾಗುತ್ತದೆ. ಇದು ಅತ್ಯಂತ ಸುಲಭವಾದ ಕೆಲಸ ಎಂದರು ಕೂಡ ತಪ್ಪಾಗಲ್ಲ. ಆದರೆ ಅತ್ಯಂತ ಜವಾಬ್ದಾರಿಯುತ ಕೆಲಸ ಎನ್ನುವುದನ್ನು ಕೂಡ ಮರೆಯಬಾರದು.

ಸಾಮಾಜಿಕ ಜಾಲತಾಣಗಳಲ್ಲಿ ಪೇಜ್ ಗಳ ಅಡ್ಮಿನ್ ಆಗಿ ಕಾರ್ಯನಿರ್ವಹಿಸುವ ಮೂಲಕ ನೀವು ಈ ಕೆಲಸವನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಅದರಲ್ಲೂ ವಿಶೇಷವಾಗಿ ನೀವು ಒಂದು ವೇಳೆ ಫೋಟೋ ಎಡಿಟಿಂಗ್ ಹಾಗೂ ಇನ್ನಿತರ ಸ್ಕಿಲ್ಸ್(Photo Editing & Video Editing Skills) ಗಳನ್ನು ಹೊಂದಿದ್ರೆ ಖಂಡಿತವಾಗಿ ನೀವು ಈ ಕೆಲಸದಲ್ಲಿ ಮಿಂಚಬಹುದು ಹಾಗೂ ದೊಡ್ಡ ಪ್ರಮಾಣದಲ್ಲಿ ಹಣವನ್ನು ಕೂಡ ಸಂಪಾದನೆ ಮಾಡಬಹುದು ಮಾತ್ರವಲ್ಲದೇ, ಹೆಚ್ಚಿನ ಸೆಲೆಬ್ರಿಟಿಗಳ ಅಕೌಂಟ್ ಹ್ಯಾಂಡಲಿಂಗ್ ಮಾಡುವುದಕ್ಕೆ ನಿಮಗೆ ಬಂದರೆ ನೀವು ಅದಕ್ಕಾಗಿ ಹೆಚ್ಚಿನ ಜನರನ್ನು ಕೂಡ ನಿಮ್ಮ ಕೈ ಕೆಳಗೆ ಕೆಲಸಕ್ಕೆ ಇಟ್ಟುಕೊಳ್ಳಬಹುದಾಗಿದೆ. ಇದರಿಂದಾಗಿ ನೀವು ಸೋಶಿಯಲ್ ಮೀಡಿಯಾದ ಈ ವಿಧದ ಒಂದು ನೆಟ್ವರ್ಕ್ ಅನ್ನೇ ಸ್ಥಾಪಿಸಬಹುದಾಗಿದೆ.

ಇದಕ್ಕಾಗಿ ನೀವು ಸೆಲೆಬ್ರಿಟಿಗಳು ಹಾಗೂ ಸಮಾಜದಲ್ಲಿ ಗಣ್ಯ ಸ್ಥಿತಿಯಲ್ಲಿ ಇರುವಂತಹ ವ್ಯಕ್ತಿಗಳನ್ನು ಖುದ್ದಾಗಿ ಹೋಗಿ ಸಂಪರ್ಕ ಮಾಡಿ ಅವರ ಅಕೌಂಟ್ ಹ್ಯಾಂಡಲ್ ಮಾಡುವುದಕ್ಕೆ ನೀವು ಪ್ರಸ್ತಾವನೆಯನ್ನು ಇಡಬೇಕಾಗಿದೆ. ಸಾಮಾನ್ಯವಾಗಿ ಅವರಿಗೂ ಕೂಡ ಇಂತಹ ವ್ಯಕ್ತಿಗಳು ಹೆಚ್ಚಿನ ಸಮಯದಲ್ಲಿ ಬೇಕಾಗಿರುತ್ತಾರೆ. ಹೀಗಾಗಿ ನೀವು ಈ ಮೂಲಕ ಯಾವುದೇ ಹಣದ ಹೂಡಿಕೆ ಇಲ್ಲದೆ ದೊಡ್ಡ ಪ್ರಮಾಣದಲ್ಲಿ ಆದಾಯವನ್ನು ಹೊಂದಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಮೀಡಿಯಾ(Digital Media) ಯಾವ ರೀತಿಯಲ್ಲಿ ಮುಂದುವರೆದಿದೆ ಹಾಗೂ ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ಮುಂದುವರಿಯುತ್ತೆ ಅನ್ನೋದು ನಿಮ್ಮ ಕಣ್ಣ ಮುಂದೆ ಇದೆ. ಹಣಗಳಿಸುವುದಕ್ಕೆ ನಿಮಗೆ ಇದೊಂದು ಸುವರ್ಣ ಅವಕಾಶ ಎಂದು ಹೇಳಬಹುದು.

Comments are closed.