Yash 19: ಯಶ್ ರವರ ಮುಂದಿನ ಸಿನೆಮಾಗೆ ಮಲಯಾಳಿ ಚೆಲುವೆ ಬಹುತೇಕ ಫಿಕ್ಸ್.
Yash 19: ನಮಸ್ಕಾರ ಸ್ನೇಹಿತರೇ ರಾಕಿಂಗ್ ಸ್ಟಾರ್ ಯಶ್(Rocking Star Yash) ರವರ ಜನಪ್ರಿಯತೆ ಯಾವ ಲೆವೆಲ್ ನಲ್ಲಿ ಈಗಾಗಲೇ ಅಂತರಾಷ್ಟ್ರೀಯ ಮಟ್ಟದಲ್ಲಿ ಇದೆ ಅನ್ನೋದನ್ನ ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾದ ಅಗತ್ಯ ಇಲ್ಲ ಎನ್ನುವುದಾಗಿ ಭಾವಿಸುತ್ತೇವೆ. ಇಲ್ಲಿವರೆಗೂ ಯಶ್ ಅವರು ಸಂಪಾದಿಸುವರು ಜನಪ್ರಿಯತೆ ಹಾಗೂ ಬೇಡಿಕೆ ಗಿಂತ ಹೆಚ್ಚಾಗಿ ಇನ್ನು ಮುಂದೆ ಅವರು ನಿಭಾಯಿಸ ಬೇಕಾಗಿರುವ ಜವಾಬ್ದಾರಿ ಸಾಕಷ್ಟು ಹೆಚ್ಚಾಗಿದೆ ಎಂದು ಹೇಳಬಹುದು. ಯಾಕೆಂದ್ರೆ ಈಗ ಅವರು ಕನ್ನಡ ಚಿತ್ರರಂಗದ ಪ್ರತಿನಿಧಿಯಾಗಿ ಜಾಗತಿಕವಾಗಿ ಕಾಣಿಸಿಕೊಳ್ಳುವಂತಹ ನಟ. ಹೀಗಾಗಿ ಅವರು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರ ಕೂಡ ಕನ್ನಡ ಚಿತ್ರರಂಗದ ಮಾರುಕಟ್ಟೆಯನ್ನು ನಿರ್ಧರಿಸುತ್ತೆ ಎಂದರು ಕೂಡ ತಪ್ಪಾಗಲ್ಲ.
Yash 19 Movie heroine details explained by Kannada News Team- Kannada News
ಅದರಲ್ಲೂ ವಿಶೇಷವಾಗಿ ಈಗ ಅವರ ಮುಂದಿನ ಸಿನಿಮಾ ಅಂದ್ರೆ ಯಶ್ 19(Yash 19) ಸಿನಿಮಾ ಹೇಗಿರಲಿದೆ ಯಾವಾಗ ಅನೌನ್ಸ್ಮೆಂಟ್ ಅನ್ನೋ ಚರ್ಚೆಗಳು ಜಾಗತಿಕ ಮಟ್ಟದಲ್ಲಿ ನಡೆಯುತ್ತಿದೆ. ಒಂದು ಕಡೆ ನಿರ್ದೇಶಕರು ಯಾರು ಅನ್ನೋ ಚರ್ಚೆಗಳು ನಡೆಯುತ್ತಾ ಇದ್ದರೆ ಇನ್ನೊಂದು ಕಡೆ ಯಶ್ ಅವರಿಗೆ ನಾಯಕಿಯಾಗಿ ಯಾರು ಕಾಣಿಸಿಕೊಳ್ಳುತ್ತಾರೆ ಅನ್ನೋ ಚರ್ಚೆಗಳು ಕೂಡ ಸಾಕಷ್ಟು ಕಡೆಗಳಲ್ಲಿ ಓಡಾಡುತ್ತಿದೆ. ಯಾಕೆಂದರೆ ಕೆಜಿಎಫ್ ಚಾಪ್ಟರ್ 3(KGF CHAPTER 3) ಆ ರೇಂಜ್ ನಲ್ಲಿ ಭಾರತೀಯ ಚಿತ್ರರಂಗದಲ್ಲಿ ಇಂಪ್ಯಾಕ್ಟ್ ಸೃಷ್ಟಿಸಿದೆ ಎಂದು ಹೇಳಬಹುದು.
ಮೂಲಗಳಿಂದ ತಿಳಿದು ಬಂದಿರುವ ಪ್ರಕಾರ ಯಶ್ ಅವರ ಮುಂದಿನ ಸಿನಿಮಾವನ್ನು ಕೇರಳದ ಮೂಲದ ನಿರ್ದೇಶಕಿ ಆಗಿರೋ ಗೀತು ಮೋಹನ್ ದಾಸ್(Geethu Mohandas) ರವರು ನಿರ್ದೇಶನ ಮಾಡಲಿದ್ದಾರೆ ಎನ್ನುವುದಾಗಿ ತಿಳಿದುಬಂದಿದೆ. ಗೋವಾದಲ್ಲಿ ನಡೆಯುವ ಸ್ಮ’ ಗ್ಲಿಂಗ್ ವಿಚಾರದ ಬಗ್ಗೆ ಸಿನಿಮಾದ ಕಥೆಯನ್ನು ತಯಾರಿಸಲಾಗಿದೆ ಅನ್ನೋ ಮಾಹಿತಿ ಕೂಡ ಸಿಕ್ಕಿದೆ. ಈಗ ಮೂಡಿ ಬರುತ್ತಿರುವ ಪ್ರಶ್ನೆ ಏನೆಂದರೆ, ನಾಯಕನಾಗಿ ಯಶ್ ಇದ್ದಾರೆ ನಿರ್ದೇಶಕಿಯಾಗಿ ಗೀತು ಮೋಹನ್ ದಾಸ್ ಇದ್ದಾರೆ ಆದರೆ ನಾಯಕಿಯಾಗಿ ಯಾರನ್ನು ಆಯ್ಕೆ ಮಾಡಬಹುದು ಅನ್ನೋ ಕುತೂಹಲಕ್ಕೆ ಕೆರಳಿದೆ.
Yash 19 ಸಿನಿಮಾದ ಎಲ್ಲಾ ಪ್ರಿ ಪ್ರೊಡಕ್ಷನ್ ಕಾರ್ಯಗಳು ಭರದಿಂದ ಸಾಗುತಿವೆ ಎಂಬ ಮಾಹಿತಿ ಸಿಕ್ಕಿದ್ದು ಸಿನಿಮಾ ಕೆ ವಿಎನ್ ಪ್ರೊಡಕ್ಷನ್(KVN Production) ಹೌಸ್ ನಿರ್ಮಾಣದಲ್ಲಿ ಮೂಡಿ ಬರಲಿದೆ ಅನ್ನೋ ಮಾಹಿತಿ ಇದೆ. ಇನ್ನು ನಾಯಕಿಯರು ಪಟ್ಟಿಯಲ್ಲಿ ಪೂಜಾ ಹೆಗಡೆ, ಶ್ರದ್ಧಾ ಕಪೂರ್ ಹಾಗೂ ಮೃನಾಲ್ ಠಾಕೂರ್(Mrunal Thakur) ರವರ ಹೆಸರು ಕೂಡ ಕೇಳಿಬಂದಿತ್ತು ಆದರೆ ಈಗ ಕೇಳಿ ಬಂದಿರೋ ಲೇಟೆಸ್ಟ್ ಮಾಹಿತಿಗಳ ಪ್ರಕಾರ ಮಲಯಾಳಂ ಬೆಡಗಿ ಈ ಸಿನಿಮಾ ಗೆ ನಾಯಕಿಯಾಗಿ ಆಯ್ಕೆ ಆಗಬಹುದು ಅನ್ನೋ ಮಾಹಿತಿ ಸಿಕ್ಕಿದೆ.
ಹೌದು ನಾವ್ ಮಾತಾಡ್ತಿರೋದು, ಮಲಯಾಳಂ ಮೂಲದ ನಟಿ ಆಗಿರೋ ಸಂಯುಕ್ತ ಮೆನನ್(Samyuktha Menon) ಅವರ ಬಗ್ಗೆ. ತೆಲುಗು ಹಾಗೂ ತಮಿಳು ಸಿನಿಮಾದಲ್ಲಿ ಮತ್ತು ಮಲಯಾಳಂ ಸಿನಿಮಾಗಳಲ್ಲಿ ಕೂಡ ಹೆಚ್ಚಾಗಿ ಕಾಣಿಸಿಕೊಂಡಿರುವ ಈ ನಟಿ ಯಶ್ ಅವರ ಮುಂದಿನ ಬಹು ನಿರೀಕ್ಷಿತ ಸಿನಿಮಾಗೆ ನಾಯಕಿ ಆಗಬಹುದು ಎನ್ನುವ ಚರ್ಚೆಗಳು ಹೆಚ್ಚಾಗಿ ಕೇಳುತ್ತಿದ್ದು ಮುಂದಿನ ದಿನಗಳಲ್ಲಿ ಇದಕ್ಕಾಗಿ ನಾವು ಕಾದು ನೋಡಬೇಕಾಗಿದೆ.
ಒಂದು ಹೊತ್ತಿನ ಊಟದ ಖರ್ಚಿನಲ್ಲಿ 10 ಲಕ್ಷ ರೂಪಾಯಿ ವಿಮೆ. ನಿಮ್ಮ ಕುಟುಂಬಕ್ಕೆ ಶ್ರೀ ರಕ್ಷೆ. ಪಡೆಯುವ ಸಂಪೂರ್ಣ ವಿವರ. Insurance Policy
ಸುತ್ತಾಡಿ ಸುತ್ತಾಡಿ ನೀವೇ ಸಾಕು ಅಂತೀರಾ, ಆದರೆ ಪೆಟ್ರೋಲ್ ಮುಗಿಯಲ್ಲ. ಬೈಕ್ ನಂತೆ ಮೈಲೇಜ್ ಇರುವ ಕಾರು ಬಿಡುಗಡೆ. Maruti Suzuki Alto K10
ಕರ್ನಾಟಕದ ಜನತೆಗೆ ಬಿಗ್ ಶಾಕ್- ದಿಡೀರ್ ಎಂದು ರೇಷನ್ ಕಾರ್ಡ್ ನಲ್ಲಿ ಹೆಸರು ಡಿಲೀಟ್. ಕಾರಣ ಏನಂತೆ ಗೊತ್ತೇ? Ration card latest Updates
Comments are closed.