Business Idea In Kannada: ಸ್ವಂತ ಉದ್ಯಮದ ಕನಸು ಇದ್ದರೆ ದೀಪಾವಳಿಗೂ ಮುನ್ನ ಈ ಬಿಸಿನೆಸ್ ಆರಂಭಿಸಿ. ಲಕ್ಷ ಲಕ್ಷ ಆದಾಯ.

Business Idea In Kannada: Start these business before Deepavali and become more successful

Business Idea In Kannada: ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರೂ ಕೂಡ ತಮ್ಮದೇ ಆದಂತಹ ಸ್ವಂತ ವ್ಯಾಪಾರದ ಮೂಲಕ ಹಣವನ್ನು ಸಂಪಾದಿಸುವಂತಹ ಕನಸನ್ನು ಕಂಡಿರುತ್ತಾರೆ. ಅದರಲ್ಲಿ ವಿಶೇಷವಾಗಿ ಕಡಿಮೆ ಬಂಡವಾಳ ಹೂಡಿ ದೊಡ್ಡ ಮಟ್ಟದ ಲಾಭವನ್ನು ಪಡೆಯುವ ವ್ಯಾಪಾರವನ್ನು ಪ್ರತಿಯೊಬ್ಬರೂ ಕೂಡ ಆಯ್ಕೆ ಮಾಡುತ್ತಾರೆ. ಇನ್ನೇನು ಕೆಲವೇ ಸಮಯದಲ್ಲಿ ಇಡೀ ಭಾರತವೇ ಆಚರಿಸುವಂತಹ ದೀಪಾವಳಿ ಹಬ್ಬ(Diwali Festival Business) ಆಗಮಿಸಲಿದ್ದು ಈ ಸಂದರ್ಭದಲ್ಲಿ ಯಾವ ವ್ಯಾಪಾರವನ್ನು ಮಾಡಿದರೆ ಕೈತುಂಬ ಸಂಪಾದನೆ ಸಿಗುತ್ತದೆ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ.

Business Idea In Kannada: Start these business before Deepavali and become more successful

ಮೊದಲನೇದಾಗಿ ನೀರಿನಿಂದ ಉರಿಯುವ ದೀಪಗಳನ್ನು ತಯಾರಿಸಿ ಮಾರಾಟ ಮಾಡಬಹುದಾಗಿದೆ. ಈಗಾಗಲೇ ಉತ್ತರ ಭಾರತದ ದೆಹಲಿ ಹಾಗೂ ಮುಂಬೈಗಳಂತಹ ನಗರಗಳಲ್ಲಿ ಈಗಾಗಲೇ ಈ ರೀತಿಯ ದೀಪಗಳ ಬಳಕೆಯನ್ನು ಮೇಡ್ ಇನ್ ಇಂಡಿಯಾದ(Made In India) ಅಡಿಯಲ್ಲಿ ತಯಾರಿಸಿ ಮಾರಾಟ ಮಾಡುವಂತಹ ಪ್ರಕ್ರಿಯೆ ಪ್ರಾರಂಭವಾಗಿದೆ. ಈ ದೀಪದಲ್ಲಿ ಅಳವಡಿಸಲಾಗಿರುವಂತಹ ಸಂವೇದಕಗಳು ನೀರಿನ ಸಂಪರ್ಕಕ್ಕೆ ಬಂದರೆ ಸಾಕು ಕೂಡಲೇ ದೀಪಗಳ ರೀತಿಯಲ್ಲಿ ಹೊಟ್ಟೆ ಉರಿಯುತ್ತದೆ ಎನ್ನುವುದಾಗಿ ಕಂಡುಹಿಡಿಯಲಾಗಿದ್ದು ನೀವು ಇವುಗಳನ್ನು ದೊಡ್ಡ ಪ್ರಮಾಣದಲ್ಲಿ ಹೋಲ್ಸೇಲ್ ರೇಟ್ ಗೆ ಖರೀದಿಸಿ ಇಂತಹ ಪ್ರಯೋಗಾತ್ಮಕ ವಸ್ತುಗಳನ್ನು ಹಬ್ಬದ ಸಂದರ್ಭದಲ್ಲಿ ಮಾರಾಟ ಮಾಡಿದರೆ ಖಂಡಿತವಾಗಿ ದೊಡ್ಡ ಪ್ರಮಾಣದಲ್ಲಿ ಲಾಭವನ್ನು ನೀವು ಪಡೆದುಕೊಳ್ಳಬಹುದಾಗಿದೆ. ಅದರಲ್ಲಿ ವಿಶೇಷವಾಗಿ ದೀಪಾವಳಿ ಹಬ್ಬಕ್ಕಾಗಿ.

ಪ್ರತಿಯೊಂದು ಹಬ್ಬಗಳಲ್ಲಿ ಕೂಡ ಅದರಲ್ಲೂ ವಿಶೇಷವಾಗಿ ದೀಪಾವಳಿ ಹಬ್ಬಕ್ಕೆ ರಂಗೋಲಿಯ ರೂಪದಲ್ಲಿ ಹಾಗೂ ಕೋಳಿ ಮತ್ತು ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಬಣ್ಣಗಳನ್ನು ಉಪಯೋಗಿಸಲಾಗುತ್ತದೆ. ರಾಸಾಯನಿಕ ರಹಿತ ಬಣ್ಣಗಳನ್ನು(Without Chemical Colors) ಚಿಕ್ಕ ಪ್ಲಾಂಟ್ ಪ್ರಾರಂಭಿಸಿ ತಯಾರಿ ಮಾಡುವುದನ್ನು ನೀವು ಮಾಡಿದರೆ ಖಂಡಿತವಾಗಿ ಈ ಸಂದರ್ಭದಲ್ಲಿ ಅಂದರೆ ಹಬ್ಬದ ಸಂದರ್ಭದಲ್ಲಿ ನಿಮಗೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಬೇಡಿಕೆ ಇರುತ್ತದೆ. ಇಂತಹ ಬಣ್ಣಗಳ ಮಾರಾಟವನ್ನು ಮಾಡುವ ಮೂಲಕ ನೀವು ದೊಡ್ಡ ಪ್ರಮಾಣದಲ್ಲಿ ಲಾಭವನ್ನು ಸಂಪಾದಿಸಬಹುದಾದ ಸಾಧ್ಯತೆ ಇದೆ ಯಾಕೆಂದರೆ ಇಂತಹ ವಸ್ತುಗಳಿಗೆ ನಿರ್ಮಾಣ ವೆಚ್ಚ ಸಾಕಷ್ಟು ಬೇಕಾಗಿರುವುದಿಲ್ಲ. ಹೀಗಾಗಿ ಖಂಡಿತವಾಗಿಯೂ ಒಂದೊಳ್ಳೆ ಲಾಭದಾಯಕ ವ್ಯವಹಾರ ಎಂದು ಹೇಳಬಹುದು.

ಇನ್ನು ಪ್ರತಿಯೊಂದು ಮನೆಗಳಿಗೂ ಕೂಡ ಅದರಲ್ಲೂ ವಿಶೇಷವಾಗಿ ಮಕ್ಕಳ ಬರ್ತಡೇ ಇದ್ದಾಗ ಹೋದಾಗ ಬರಿ ಕೈಯಲ್ಲಿ ಹೋಗುವುದು ಅಷ್ಟೊಂದು ನಿಮಗೆ ವರ್ಚಸ್ಸನ್ನು ನೀಡುವುದಿಲ್ಲ. ಈಗಾಗಲೇ ಮಾರುಕಟ್ಟೆಯಲ್ಲಿ ಸರ್ಕಾರ ಚೈನಾದ ವಸ್ತುಗಳನ್ನು ಹೊರ ಹಾಕಬೇಕು ಎನ್ನುವಂತಹ ಪ್ರಯತ್ನವನ್ನು ಮಾಡುತ್ತಿದ್ದು ಇದೇ ಸಂದರ್ಭದಲ್ಲಿ ನೀವು ಮಕ್ಕಳಿಗೆ ನೀಡುವಂತಹ ಆಟಿಕೆಯ ವ್ಯಾಪಾರವನ್ನು(Toys Business) ಪ್ರಾರಂಭಿಸಬಹುದಾಗಿದೆ. ಕಡಿಮೆ ಬಂಡವಾಳದಲ್ಲಿ ಸಾರ್ವಕಾಲಿಕವಾಗಿ ಪ್ರತಿಯೊಂದು ಸೀಸನ್ಗಳಲ್ಲಿ ಕೂಡ ಯಶಸ್ವಿಯಾಗಿ ಕಾಣಿಸುವಂತಹ ಉದ್ಯಮದಲ್ಲಿ ಇದು ಕೂಡ ಒಂದಾಗಿದೆ ಎಂದು ಹೇಳಬಹುದು.

ಒಂದು ಹೊತ್ತಿನ ಊಟದ ಖರ್ಚಿನಲ್ಲಿ 10 ಲಕ್ಷ ರೂಪಾಯಿ ವಿಮೆ. ನಿಮ್ಮ ಕುಟುಂಬಕ್ಕೆ ಶ್ರೀ ರಕ್ಷೆ. ಪಡೆಯುವ ಸಂಪೂರ್ಣ ವಿವರ. Insurance Policy
ಸುತ್ತಾಡಿ ಸುತ್ತಾಡಿ ನೀವೇ ಸಾಕು ಅಂತೀರಾ, ಆದರೆ ಪೆಟ್ರೋಲ್ ಮುಗಿಯಲ್ಲ. ಬೈಕ್ ನಂತೆ ಮೈಲೇಜ್ ಇರುವ ಕಾರು ಬಿಡುಗಡೆ. Maruti Suzuki Alto K10
ಕರ್ನಾಟಕದ ಜನತೆಗೆ ಬಿಗ್ ಶಾಕ್- ದಿಡೀರ್ ಎಂದು ರೇಷನ್ ಕಾರ್ಡ್ ನಲ್ಲಿ ಹೆಸರು ಡಿಲೀಟ್. ಕಾರಣ ಏನಂತೆ ಗೊತ್ತೇ? Ration card latest Updates

ಇನ್ನೇನು ಸಾಲು ಸಾಲಾಗಿ ಹಬ್ಬಗಳು ಕಾಣಿಸಿಕೊಳ್ಳುತ್ತಿದ್ದು ಬಟ್ಟೆಯ ವ್ಯಾಪಾರವನ್ನು ಕೂಡ ಮಾಡಿ ನೀವು ಹಣವನ್ನು ಗಳಿಸಬಹುದಾಗಿದೆ ಎಂದು ಹೇಳಬಹುದಾಗಿದೆ. ಇದರ ಜೊತೆಗೆ ಇನ್ನೇನು ಕ್ರಿಸ್ಮಸ್(Christmas) ನಂತಹ ಹಬ್ಬಗಳು ಕೂಡ ಬರ್ತಾ ಇದ್ದು ಆ ಸಂದರ್ಭದಲ್ಲಿ ಅಲಂಕಾರಿಕ ಲೈಟುಗಳನ್ನು ಕೂಡ ನೀವು ಮಾರಾಟ ಮಾಡಬಹುದಾಗಿದೆ. ಕೇವಲ ಹಬ್ಬದ ಸಂದರ್ಭದಲ್ಲಿ ಮಾತ್ರವಲ್ಲದೆ ಮನೆಯಲ್ಲಿ ವಿಶೇಷ ಕಾರ್ಯಕ್ರಮಗಳ ಸಂದರ್ಭದಲ್ಲಿ ಕೂಡ ಅಲಂಕಾರಿಕ ಲೈಟ್ಗಳನ್ನು ಗ್ರಾಹಕರು ಖರೀದಿಸುತ್ತಾರೆ ಎನ್ನುವುದನ್ನು ಕೂಡ ನೀವು ಇಲ್ಲಿ ನೆನಪಿಸಿಕೊಳ್ಳಬೇಕಾಗುತ್ತದೆ. ಇವಿಷ್ಟು ವ್ಯಾಪಾರಗಳನ್ನು ನೀವು ಕಡಿಮೆ ಬಂಡವಾಳದಲ್ಲಿ ಹಬ್ಬದ ಸಂದರ್ಭದಲ್ಲಿ ಮಾಡುವ ಮೂಲಕ ದೊಡ್ಡ ಪ್ರಮಾಣದಲ್ಲಿ ಲಾಭವನ್ನು ಗಳಿಸಬಹುದಾಗಿದೆ.

Comments are closed.