Personal Loan: ದೇಶದ ಪ್ರತಿಷ್ಠಿತ ಸಂಸ್ಥೆ L&T Finance ನಲ್ಲಿ 7 ಲಕ್ಷದ ವರೆಗೂ ಲೋನ್- ಗಿರವಿ ಬೇಡ, ಅರ್ಜಿ ಹಾಕಿ ಸಾಕು.
Personal Loan: ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ಮನೆಯ ನವೀಕರಣ, ಮದುವೆ ಖರ್ಚು, ಮೆಡಿಕಲ್ ಖರ್ಚು, ಅಥವಾ ಯಾವುದೇ ರೀತಿಯ ವಸ್ತುಗಳನ್ನು ಖರೀದಿಸುವುದಕ್ಕಾಗಿ ನೀವು ಲೋನ್ ಪಡೆದುಕೊಳ್ಳಲು ಪ್ಲಾನಿಂಗ್ ಮಾಡುತ್ತಿದ್ದರೆ L&T Finance ಮೂಲಕ ನೀವು ಸುಲಭ ರೀತಿಯಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳಬಹುದಾಗಿದೆ. ಈ ಪರ್ಸನಲ್ ಲೋನ್ ಮೂಲಕ ನೀವು 7 ಲಕ್ಷಗಳವರೆಗೂ ಕೂಡ ಲೋನ್ ಪಡೆದುಕೊಳ್ಳಬಹುದಾಗಿದೆ. ಯಾವುದೇ ಇನ್ಕಮ್ ಪ್ರೂಫ್ ಇಲ್ಲದೆ L&T Finance ಮೂಲಕ ಪರ್ಸನಲ್ ಲೋನ್ ಸುಲಭ ರೀತಿಯಲ್ಲಿ ನಿಮಗೆ ಸಿಗುತ್ತದೆ.
Table of Contents
L&T Finance ಪರ್ಸನಲ್ ಲೋನ್ ನ ಲಾಭಗಳು Benefits of Personal Loan from L & T Finance
- 72 ಗಂಟೆಗಳ ಒಳಗಾಗಿ ನೀವು ಇಲ್ಲಿ ಪರ್ಸನಲ್ ಲೋನ್ ಅನ್ನು ನಿಮ್ಮ ಖಾತೆಗೆ ಟ್ರಾನ್ಸ್ಫರ್ ಮಾಡಿಕೊಳ್ಳಬಹುದಾಗಿದೆ ಹಾಗೂ ಕಡಿಮೆ ಬಡ್ಡಿ ಕೂಡ ಇರುತ್ತೆ.
- ಯಾವುದೇ ಇನ್ಕಮ್ ಪ್ರೂಫ್ ಇಲ್ಲದೆ ಕೂಡ ಲೋನ್ ಪಡೆದುಕೊಳ್ಳಬಹುದು.
- ಭಾರತದ ಯಾವುದೇ ಮೂಲೆಯಲ್ಲಿ ನೀವು ಮನೆಯಲ್ಲಿ ಕುಳಿತುಕೊಂಡು ಸಂಪೂರ್ಣವಾಗಿ ಆನ್ಲೈನ್ ಪ್ರಶಸ್ ಮೂಲಕ ಪರ್ಸನಲ್ ಲೋನ್ ಪಡೆದುಕೊಳ್ಳಬಹುದಾಗಿದೆ.
- 12 ರಿಂದ 48 ತಿಂಗಳುಗಳ ಫ್ಲೆಕ್ಸಿಬಲ್ EMI ಸಮಯಾವಕಾಶವನ್ನು ಇಲ್ಲಿ ನೀಡಲಾಗುತ್ತಿದೆ.
- ಇದು ಪೂರ್ವ ಅನುಮೋದಿತ ಸಾಲವಾಗಿದ್ದು 7 ಲಕ್ಷಗಳವರೆಗೆ ಸುಲಭ ರೂಪದಲ್ಲಿ ಪರ್ಸನಲ್ ಲೋನ್ ಸಿಗುತ್ತೆ(ಅರ್ಹರಾದವರಿಗೆ ಮಾತ್ರ).
L&T Finance ಪರ್ಸನಲ್ ಲೋನ್ ಬಡ್ಡಿ & ಚಾರ್ಜಸ್.
- L&T Finance ಪರ್ಸನಲ್ ಲೋನ್ ಮೇಲೆ ಇರುವಂತಹ ಬಡ್ಡಿಯನ್ನು ನೋಡುವುದಾದರೆ ವಾರ್ಷಿಕವಾಗಿ 11 ರಿಂದ 19 ಪ್ರತಿಶತ ಇರುತ್ತದೆ.
- ಪ್ರೊಸೆಸಿಂಗ್ ಫೀಸ್ ಎರಡು ಪ್ರತಿಶತ ಇರುತ್ತದೆ ಹಾಗೂ ತಡವಾಗಿ EMI ಕಟ್ಟಿದ್ರೆ ಆ ಹಣದ ಮೇಲೆ ಮೂರು ಪ್ರತಿಶತ ಶುಲ್ಕವನ್ನು ವಿಧಿಸಲಾಗುತ್ತದೆ.
- ಅವರಿಗಿಂತ ಮುಂಚೆ ಪೂರ್ತಿ ಹಣವನ್ನು ಕಟ್ಟಿದರೆ ಐದು ಪ್ರತಿಶತ ಶುಲ್ಕ ಹಾಗೂ ಜಿಎಸ್ಟಿಯನ್ನು ಕಟ್ಟಬೇಕಾಗುತ್ತದೆ.
L&T Finance ನಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳುವುದಕ್ಕೆ ಸಬ್ಮಿಟ್ ಮಾಡಬೇಕಾಗಿರುವ ಡಾಕ್ಯೂಮೆಂಟ್ ಗಳು
- ಮುಖ್ಯವಾಗಿ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಬೇಕಾಗಿರುತ್ತದೆ.
- ಬ್ಯಾಂಕ್ ಅಕೌಂಟ್ ಡೀಟೇಲ್ಸ್ ಅನ್ನು ಒದಗಿಸಬೇಕಾಗುತ್ತದೆ.
- ರೆಸಿಡೆನ್ಸಿಯಲ್ ಪ್ರೂಫ್ ನೀಡಬೇಕಾಗಿರುತ್ತದೆ.
L&T Finance ನಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳಲು ಇರಬೇಕಾಗಿರುವ ಅರ್ಹತೆಗಳು
- ಲೋನ್ಗಾಗಿ ಅಪ್ಲೈ ಮಾಡುವಂತಹ ವ್ಯಕ್ತಿಯ ವಯಸ್ಸು 23 ರಿಂದ 57 ವರ್ಷಗಳ ನಡುವೆ ಇರಬೇಕು.
- ಸಿಬಿಲ್ ಸ್ಕೋರ್ ಕನಿಷ್ಠ ಪಕ್ಷ 700 ಅಥವಾ ಅದಕ್ಕಿಂತ ಹೆಚ್ಚಾಗಿರಬೇಕು.
- ಭಾರತೀಯ ನಾಗರಿಕನಾಗಿರಬೇಕು ಹಾಗೂ ಬ್ಯಾಂಕ್ ಅಕೌಂಟ್ ವ್ಯಾಲಿಡ್ ಆಗಿರಬೇಕು.
ಇದನ್ನು ಕೂಡ ಓದಿ: Personal Loan: ಯಾರು ಕೊಡದೆ ಇದ್ದರೂ ಗ್ಯಾರಂಟಿ ಇಲ್ಲದೆ 25 ಲಕ್ಷ ಇವರು ಕೊಡ್ತಾರೆ – ಅರ್ಜಿ ಹಾಕಿ ನೇರವಾಗಿ ಬ್ಯಾಂಕ್ ಖಾತೆಗೆ.
L&T Finance ಪರ್ಸನಲ್ ಲೋನ್ ಗೆ ಅಪ್ಲೈ ಮಾಡುವ ವಿಧಾನ
- ಅಧಿಕೃತ ವೆಬ್ಸೈಟ್ಗೆ ಹೋಗಿ ಲೋನ್ ಅಪ್ಲೈ ಮಾಡುವಂತಹ ಬಟನ್ ಅನ್ನು ಮೊದಲಿಗೆ ಕ್ಲಿಕ್ ಮಾಡಬೇಕು.
- ನಂತರ ನಿಮ್ಮ ಬೇಸಿಕ್ ಡೀಟೇಲ್ಸ್ ಆಗಿರುವಂತಹ ಹೆಸರು ಫೋನ್ ನಂಬರ್ ಇಮೇಲ್ ಐಡಿಯನ್ನು ನಮೂದಿಸಬೇಕು.
- L&T Finance ಸಂಸ್ಥೆಯ ಪ್ರತಿನಿಧಿಗಳು ನಿಮಗೆ ಕರೆ ಮಾಡಿ ಮುಂದಿನ ಪ್ರಕ್ರಿಯೆಗಳನ್ನು ಮುಂದುವರೆಸುತ್ತಾರೆ.
- KYC ಮಾಹಿತಿಗಳನ್ನು ಹಾಗೂ ಡಾಕ್ಯುಮೆಂಟ್ಗಳನ್ನು ಸಬ್ಮಿಟ್ ಮಾಡಬೇಕು ನಂತರ ನಿಮ್ಮ ಲೋನ್ ಪಡೆದುಕೊಳ್ಳುವ ಅರ್ಹತೆಯನ್ನು ಚೆಕ್ ಮಾಡಲಾಗುತ್ತದೆ.
- ಒಂದು ವೇಳೆ ನೀವು ಅರ್ಹರಾಗಿದ್ರೆ ನೀವು ಒದಗಿಸಿರುವಂತಹ ಬ್ಯಾಂಕ್ ಡೀಟೇಲ್ಸ್ ಗೆ ನೇರವಾಗಿ ನಿಮ್ಮ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.
L&T Finance ಸಂಸ್ಥೆಗೆ ನೀವು ಲೋನ್ ಕುರಿತಂತೆ ಇರುವಂತಹ ಗೊಂದಲಗಳನ್ನು ಪರಿಹರಿಸಿಕೊಳ್ಳಲು 7264888777 ನಂಬರ್ಗೆ ಕರೆ ಮಾಡುವ ಮೂಲಕ ಗ್ರಾಹಕ ಪ್ರತಿನಿಧಿಗಳ ಜೊತೆಗೆ ಮಾತನಾಡಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.
Comments are closed.