Affordable Cars: ಅತ್ಯಂತ ಕಡಿಮೆ ಬಜೆಟ್ ನಲ್ಲಿ ಸನ್ರೂಫ್ ಸೇರಿದಂತೆ ವಿಶೇಷವಾದ ಫೀಚರ್ ಗಳನ್ನು ಹೊಂದಿರುವ ಕಾರುಗಳು ಯಾವುವು ಗೊತ್ತಾ?

Affordable cars with sunroof in India- Automobile News explained in Kannada

Affordable Cars: ನಮಸ್ಕಾರ ಸ್ನೇಹಿತರೆ ಕಾರನ್ನು ಖರೀದಿಸುವುದು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಚಿಕ್ಕವಯಸ್ಸಿನಿಂದಲೂ ಕೂಡ ನಾವು ಖರೀದಿಸುವಂತಹ ನಮ್ಮ ಡ್ರೀಮ್ ವಾಹನದ ಬಗ್ಗೆ ಕನಸನ್ನು ಕಾಣುತ್ತಲೇ ಬಂದಿರುತ್ತೇವೆ ಹಾಗೂ ಒಂದು ದಿನ ಕೆಲಸ ಸಿಕ್ಕಿದ ನಂತರ ಬರುವಂತಹ ಸಂಬಳದಲ್ಲಿ ಉಳಿತಾಯ ಮಾಡಿ ಅಂತಹ ಕಾರುಗಳನ್ನು ಖರೀದಿಸಬೇಕು ಎನ್ನುವಂತಹ ಆಸೆಯನ್ನು ಹೆಚ್ಚಾಗಿ ಮಾಧ್ಯಮ ಹಾಗೂ ಬಡವರ್ಗದ ಕುಟುಂಬದ ಯುವಕರು ಕಂಡಿರುತ್ತಾರೆ. ಹಾಗಿದ್ರೆ ಬನ್ನಿ 10 ಲಕ್ಷ ರೂಪಾಯಿಗಳಿಗಿಂತ ಕಡಿಮೆ ಬೆಲೆಯಲ್ಲಿ ಸಿಗುವಂತಹ ಬೆಸ್ಟ್ ಬಜೆಟ್ ಕಾರುಗಳು(Best Affordable Cars) ಯಾವುವು ಎಂಬುದನ್ನು ತಿಳಿಯೋಣ.

Affordable cars with sunroof in India

Tata Altroz (Affordable cars with sunroof in India): ಟಾಟಾ ಅಲ್ಟ್ರೋಜ್ ಕಾರಿನಲ್ಲಿ ನೀವು ಸನ್ರೂಫ್ ಅನ್ನು ಪಡೆದುಕೊಳ್ಳಬಹುದಾಗಿದೆ. ಟಾಟಾ ಅಲ್ಟ್ರೋಜ್ ಕಾರಿನಲ್ಲಿ ನೀವು ಇಂಜಿನ್ ವಿಚಾರಕ್ಕೆ ಬಂದರೆ ಮೂರು ವೇರಿಯಂಟ್ ಗಳ ಆಯ್ಕೆಯನ್ನು ಪಡೆದುಕೊಳ್ಳುತ್ತಿದೆ ಹಾಗೂ ಸಾಕಷ್ಟು ಟ್ರಾನ್ಸ್ಮಿಷನ್ ಆಯ್ಕೆಯನ್ನು ಕೂಡ ನೀವು ಕಾಣಬಹುದಾಗಿದೆ. ಹೀಗಾಗಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ಯಾವ ವೇರಿಯಂಟ್ ಅನ್ನು ಬೇಕಾದರೂ ಕೂಡ ಖರೀದಿಸಬಹುದಾಗಿದೆ. ಅತ್ಯಂತ ಆಕರ್ಷಕ ಫೀಚರ್ಸ್ ಗಳನ್ನು ಹಾಗೂ ಡಿಸೈನ್ ಗಳನ್ನು ಹೊಂದಿರುವಂತಹ ಟಾಟಾ ಅಲ್ಟ್ರೋಜ್ ಕಾರು ನಿಮಗೆ ಕೇವಲ 7.35 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಕೂಡ ದೊರಕುತ್ತದೆ. ಈ ಕಾರ್ ಕೂಡ ನಿಮಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುವಂತಹ ಬೆಸ್ಟ್ ಬಜೆಟ್ ಕಾರುಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತದೆ.

Hyundai Exter: ಹುಂಡೈ ಕಂಪನಿಯ ಈ ವಿಶೇಷ ಕಾರು ಚಿಕ್ಕ SUV ಕಾರ್ ಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತದೆ. ಈ ಕಾರಿನ ಇಂಜಿನ್ ಬಗ್ಗೆ ಮಾತನಾಡುವುದಾದರೆ 1.2 ಲೀಟರ್ ಆಸ್ಪಿರೇಟೆಡ್ ಪೆಟ್ರೋಲ್ ಇಂಜಿನ್ ಅಲ್ಲಿ ಕೂಡ ನೀವು ಕಾಣಬಹುದಾಗಿದೆ. ಖಂಡಿತವಾಗಿ ಪವರ್ ಫುಲ್ ಪರ್ಫಾರ್ಮೆನ್ಸ್ ನೀಡುವಂತಹ ಸಾಮರ್ಥ್ಯವನ್ನು ಈ ಕಾರು ಹೊಂದಿದೆ. AMT ಮತ್ತು ಮ್ಯಾನುವಲ್ ಗೇರ್ ಬಾಕ್ಸ್ ಗಳನ್ನು ನೀವು ಈ ಕಾರಿನಲ್ಲಿ ಕಾಣಬಹುದಾಗಿದೆ. ಸನ್ರೂಫ್ ಜೊತೆಗೆ ಸಿಗುವಂತಹ ಈ ಕಾರು ನಿಮಗೆ 8 ಲಕ್ಷ ರೂಪಾಯಿಗಳ ಮಾರ್ಕೆಟ್ ಬೆಲೆಯಲ್ಲಿ ಸಿಗಲಿದೆ.

Tata Punch: ಮಾರುಕಟ್ಟೆಯಲ್ಲಿ ಅತ್ಯಂತ ಹೆಚ್ಚು ಮಾರಾಟ ಆಗುವ ಕಾರುಗಳಲ್ಲಿ ಒಂದಾಗಿರುವಂತಹ ಟಾಟಾ ಪಂಚ್ ಕೂಡ ಈ ಲಿಸ್ಟಿನಲ್ಲಿ ಕಾಣಿಸಿಕೊಳ್ಳುತ್ತದೆ. ಐದು ಸ್ಪೀಡ್ ಹಾಗೂ ಆರು ಆಟೋಮೆಟಿಕ್ ಟ್ರಾನ್ಸ್ ಮಿಷನ್ ನಲ್ಲಿ ಕೂಡ ನೀವು ಈ ಕಾರನ್ನು ಪಡೆಯಬಹುದಾಗಿದೆ. ಇಲ್ಲಿ ಕೂಡ 1.2 ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಇಂಜಿನ್ ಅನ್ನು ಕಾಣಬಹುದಾಗಿದೆ. ಇದರ ಜೊತೆಗೆ ಟಾಟಾ ಪಂಚ್ ಮಾರುಕಟ್ಟೆಯಲ್ಲಿ ನಿಮಗೆ 8.35 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಕೈಗೆ ಸಿಗಲಿದೆ.

Mahindra XUV300: ಮತ್ತೊಂದು ಭಾರತದ ಕಂಪನಿಯಾಗಿರುವಂತಹ ಮಹೀಂದ್ರ ಸಂಸ್ಥೆಯ ಈ ಕಾರು 8.66 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ನಿಮಗೆ ಸಿಗುತ್ತದೆ ಹಾಗೂ ಇದರಲ್ಲಿ 1.2, 1.2 ಹಾಗೂ 1.5 ಲೀಡರ್ಗಳ ಮೂರು ಇಂಜಿನ್ ಆಯ್ಕೆಗಳು ಕೂಡ ನಿಮಗೆ ದೊರೆಯುತ್ತದೆ ಎಂಬುದನ್ನು ಈ ಮೂಲಕ ನೀವು ತಿಳಿದುಕೊಳ್ಳಬಹುದಾಗಿದೆ. ಇದರಲ್ಲಿ ವಿಶೇಷವಾದ ಸನ್ರೂಫ್ ಅನ್ನು ಕೂಡ ನೀವು ಕಾಣಬಹುದಾಗಿದೆ. ಇವುಗಳೇ ಮಿತ್ರರೇ 10 ಲಕ್ಷ ರೂಪಾಯಿಗಳ ಒಳಗೆ ಸಿಗುವಂತಹ ಸನ್ರೂಫ್ ಅನ್ನು ಹೊಂದಿರುವ ಬೆಸ್ಟ್ ಬಜೆಟ್ ಕಾರುಗಳು ಎಂದು ಹೇಳಬಹುದಾಗಿದೆ.

Comments are closed.