Dhruva Sarja: ಧ್ರುವ ಸರ್ಜಾ ರವರಿಗೆ ಹುಟ್ಟಿದ ಮಗುವಿನ ಜಾತಕದಲ್ಲಿ ಮಹತ್ವದ ರಹಸ್ಯ ಬಯಲು- ಮುಂದೆ ಏನಾಗುತ್ತಾನೆ ಗೊತ್ತೇ?
Dhruva Sarja: ನಮಸ್ಕಾರ ಸ್ನೇಹಿತರೆ ಕನ್ನಡ ಚಿತ್ರರಂಗದ ಆಕ್ಷನ್ ಪ್ರಿನ್ಸ್ ಆಗಿರುವಂತಹ ಧ್ರುವ ಸರ್ಜಾ(Action Prince Dhruva Sarja) ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ಹೆಣ್ಣು ಮಗುವಿನ ತಂದೆ ಆಗಿದ್ರು. ಆದರೆ ಈಗ ಅವರ ಪತ್ನಿ ಪ್ರೇರಣಶಂಕರ್ ರವರು ಗಣೇಶನ ಹಬ್ಬದ ದಿನದಂದು ತಮ್ಮ ಎರಡನೇ ಮಗು ಅಂದರೆ ಗಂಡು ಮಗುವನ್ನು ಸ್ವಾಗತಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಧ್ರುವ ಸರ್ಜಾ ಅವರ ಅಭಿಮಾನಿಗಳು ಸೇರಿದಂತೆ ಕುಟುಂಬಸ್ಥರು ಹಾಗೂ ಸ್ನೇಹಿತರೆಲ್ಲರೂ ಕೂಡ ಈ ಸುದ್ದಿಯಿಂದ ಸಂತೋಷವಾಗಿದ್ದಾರೆ. ಇತ್ತೀಚಿಗಷ್ಟೇ ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರದ ಕುರಿತಂತೆ ಹಂಚಿಕೊಂಡಿದ್ದ ಧ್ರುವ ಸರ್ಜಾ ಅದಾಗಲೇ ಗಂಡು ಮಗುವಿನ ತಂದೆ ಆಗಿರುವುದು ಪ್ರತಿಯೊಬ್ಬರಿಗೂ ಕೂಡ ಖುಷಿಯನ್ನು ನೀಡಿದೆ.
Horoscope predictions about Dhruva Sarja Son – Kannada Horoscope Predictions
ಹಬ್ಬದ ಸಂದರ್ಭದಲ್ಲಿ ಮತ್ತೊಂದು ಹಬ್ಬದ ರೀತಿಯ ವಾತಾವರಣವನ್ನು ನಿರ್ಮಿಸುವಂತಹ ಸಂತೋಷದ ಸುದ್ದಿ ಸಿಕ್ಕಿರುವುದು ನಿಜಕ್ಕೂ ಕೂಡ ಪ್ರತಿಯೊಬ್ಬರ ಮನಸ್ಸನ್ನು ಗೆದ್ದಿದೆ ಎಂದು ಹೇಳಬಹುದಾಗಿದೆ. ಗಣೇಶನ ಹಬ್ಬದ ದಿನದಂದೆ ಮನೆಗೆ ಗಣಪನ ಆಗಮನವಾಗಿದೆ ಎಂಬುದಾಗಿ ಕುಟುಂಬಸ್ಥರು ಸಂಭ್ರಮದಿಂದ ಈ ಸಂತೋಷದ ಸುದ್ದಿಯನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇದಕ್ಕಿಂತ ಪ್ರಮುಖವಾಗಿ ಧ್ರುವ ಸರ್ಜಾ ಮಗನನ್ನು ನೋಡಲು ಕೂಡಲೆ ಆಸ್ಪತ್ರೆಗೆ ಮೇಘನಾ ರಾಜ್(Meghana Raj) ಹಾಗೂ ಅವರ ತಂದೆ ತಾಯಿ ಇಬ್ಬರು ಕೂಡ ಆಸ್ಪತ್ರೆಗೆ ಆಗಮಿಸಿರುವುದು ಕೂಡ ಎಲ್ಲರ ಮನಸ್ಸಿಗೆ ಮತ್ತಷ್ಟು ಸಂತೋಷವನ್ನು ನೀಡಿದೆ. ಧ್ರುವ ಸರ್ಜಾ ಅವರ ಜೀವನದಲ್ಲಿ ಮತ್ತೊಂದು ಶುಭ ಸೂಚಕ ಸಿಕ್ಕಿದೆ ಎಂದು ಹೇಳಬಹುದಾಗಿದೆ.
ಇನ್ನು ಧ್ರುವ ಸರ್ಜಾ ಗಂಡು ಮಗುವನ್ನು ಪಡೆದಿರುವ ಬಗ್ಗೆ ಮಾತನಾಡಿರುವಂತಹ ಮೇಘನಾ ರಾಜ್ ಅವರ ತಂದೆ ಸುಂದರ್ ರಾಜ್(Sundar Raj) ಅವರು ಗಂಡು ಮಗು ಅತ್ಯಂತ ಅದೃಷ್ಟವಾಗಿರುವಂತಹ ಗಜಕೇಸರಿ ರಾಜಯೋಗದಲ್ಲಿ ಜನಿಸಿದೆ ಎನ್ನುವಂತಹ ಸಂತೋಷದ ಸುದ್ದಿಯನ್ನು ಹೇಳಿಕೊಂಡಿದ್ದಾರೆ. ಅತ್ಯಂತ ಅದೃಷ್ಟದ ರಾಜಯೋಗಗಳಲ್ಲಿ ಗಜಕೇಸರಿ ರಾಜ ಯೋಗವನ್ನು ಪರಿಗಣಿಸಲಾಗುತ್ತದೆ ಹಾಗೂ ಧ್ರುವ ಸರ್ಜಾ ಅವರ ಮಗ ಕೂಡ ಅದೇ ಯೋಗದಲ್ಲಿ ಜನಿಸಿರುವುದು ಕುಟುಂಬದ ಸಂತೋಷವನ್ನು ಇನ್ನಷ್ಟು ಹೆಚ್ಚು ಮಾಡಿದೆ ಎಂದು ಹೇಳಬಹುದಾಗಿದೆ. ದೇವರ ಅನುಗ್ರಹ ಮಗುವಿನ ಮೇಲಿದೆ ಎಂಬುದಾಗಿ ಕೂಡ ಸುಂದರ್ ರಾಜ್ ಅವರು ಈ ಸಂದರ್ಭದಲ್ಲಿ ತಮ್ಮ ಸಂತೋಷದ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಧ್ರುವ ಸರ್ಜಾ ಹಾಗೂ ಪ್ರೇರಣಶಂಕರ್(Prerana Shankar) ರವರು ಚಿಕ್ಕ ವಯಸ್ಸಿನಿಂದಲೂ ಕೂಡ ಪರಸ್ಪರ ಸ್ನೇಹಿತರಾಗಿದ್ದು ಸ್ನೇಹಿತರ ನಡುವಿನ ಸಂಬಂಧ ಪ್ರೀತಿಗೆ ತಿರುಗಿ 2019 ರಲ್ಲಿ ಕುಟುಂಬಸ್ಥರು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆ ಆಗಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಕನ್ನಡ ಚಿತ್ರರಂಗದ ಅತ್ಯಂತ ಮೆಚ್ಚಿನ ಜೋಡಿಗಳಲ್ಲಿ ಇವರಿಬ್ಬರೂ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ ಎನ್ನುವುದನ್ನು ಕೂಡ ನಾವು ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳಬೇಕಾಗುತ್ತದೆ. 2022 ರಲ್ಲಿ ಮೊದಲ ಬಾರಿಗೆ ಈ ದಂಪತಿಗಳಿಗೆ ಇಬ್ಬರು ಕೂಡ ಹೆಣ್ಣು ಮಗುವಿಗೆ ತಂದೆ ತಾಯಿಗಳಾಗುತ್ತಾರೆ. ಚಿರು ಸರ್ಜಾ ಅವರನ್ನು ಕಳೆದುಕೊಂಡಿದ್ದ ಕುಟುಂಬಕ್ಕೆ ನಿಜಕ್ಕೂ ಕೂಡ ಈ ಸುದ್ದಿ ಸಾಕಷ್ಟು ನೆಮ್ಮದಿಯನ್ನು ನೀಡಿತ್ತು ಎಂದು ಹೇಳಬಹುದು.
ಸದ್ಯಕ್ಕೆ ಧ್ರುವ ಸರ್ಜಾ ಅವರು ಮಾರ್ಟಿನ್ ಸಿನಿಮಾದ(Martin Kannada Film) ಬಿಡುಗಡೆಗಾಗಿ ಕಾಯುತ್ತಿದ್ದು ಗಂಡು ಮಗುವಿನ ಆಗಮನ ಎನ್ನುವುದು ಮತ್ತೊಂದು ಶುಭ ಸೂಚನೆಯನ್ನು ನೀಡಿದಂತಾಗಿದೆ ಎಂದು ಹೇಳಬಹುದಾಗಿದೆ. ಅಭಿಮಾನಿಗಳು ಪ್ರತಿಯೊಬ್ಬರೂ ಕೂಡ ಮಾರ್ಟಿನ್ ಸಿನಿಮಾದ ಬಿಡುಗಡೆಗಾಗಿ ಕಾಯುತ್ತಿದ್ದು ಈ ವರ್ಷದ ಒಳಗಾಗಿ ಬಿಡುಗಡೆಯಾಗುವ ಸಾಧ್ಯತೆ ಹೆಚ್ಚಾಗಿದೆ ಎನ್ನುವಂತಹ ಮಾಹಿತಿ ಕೂಡ ಸಿಕ್ಕಿದ್ದು ಇದು ಎಷ್ಟು ಸತ್ಯ ಅನ್ನುವುದನ್ನು ನಾವು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾದ ಅಗತ್ಯವಿದೆ ಏಕೆಂದರೆ ಧ್ರುವ ಸರ್ಜಾ ಅವರ ಪ್ರತಿಯೊಂದು ಸಿನಿಮಾಗಳು ಕೂಡ ಎರಡರಿಂದ ಮೂರು ವರ್ಷಗಳಿಗೆ ಒಮ್ಮೆ ಬಿಡುಗಡೆಯಾಗುತ್ತಿದ್ದು ಈ ಸಿನಿಮಾ ಕೂಡ ಅದೇ ರೀತಿ ಆಗುತ್ತಾ ಎನ್ನುವುದನ್ನು ಕಾದು ನೋಡಬೇಕಾಗಿದೆ.
Comments are closed.