Ola Diwali Offer: ದೀಪಾವಳಿ ಹಬ್ಬದ ಗಿಫ್ಟ್ ನೀಡಿದ ಓಲ ಸಂಸ್ಥೆ. ಓಲಾ ಸ್ಕೂಟರ್ಗಳ ಮೇಲೆ ಭರ್ಜರಿ ರಿಯಾಯಿತಿ.

As part of its ongoing Bharat EV Fest, Ola Electric, one of India's largest EV companies, has announced a variety of exciting offers for Diwali.

Ola Diwali Offer: ನಮಸ್ಕಾರ ಸ್ನೇಹಿತರೇ ಈಗಾಗಲೇ ಕೇವಲ ನಮ್ಮ ಭಾರತ ದೇಶದಲ್ಲಿ ಮಾತ್ರವಲ್ಲದೆ ಇಡೀ ಜಗತ್ತಿನಲ್ಲಿ ಒಂದು ಬದಲಾವಣೆ ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ಕಂಡುಬರುತ್ತದೆ. ಪೆಟ್ರೋಲ್ ಬೆಲೆ ಹೆಚ್ಚಾಗುತ್ತಿರುವ ಕಾರಣ ಹಾಗೂ ಪರಿಸರ ಮಾಲಿನ್ಯ ಕೂಡ ಹೆಚ್ಚಾಗುತ್ತಿರುವಂತಹ ಕಾರಣದಿಂದಾಗಿ ಪ್ರತಿಯೊಬ್ಬರು ಕೂಡ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚು ಮಾಡಿದ್ದಾರೆ. ಅದರಲ್ಲಿ ವಿಶೇಷವಾಗಿ ಎಲೆಕ್ಟ್ರಿಕ್ ಸ್ಕೂಟರ್ ಗಳ ಬಳಕೆ ಹೆಚ್ಚಾಗಿದ್ದು ಈ ಎಲೆಕ್ಟ್ರಿಕ್ ಸ್ಕೂಟರ್ ಗಳ ಇಂಡಸ್ಟ್ರಿಯಲ್ಲಿ Ola ಸಂಸ್ಥೆ ಸಿಂಹ ಪಾಲನ್ನು ಜಾಗತಿಕ ಮಟ್ಟದಲ್ಲಿ ಹೊಂದಿದೆ ಎಂದು ಹೇಳಬಹುದು. ಇನ್ನು, ಇವತ್ತಿನ ಲೇಖನಿಯಲ್ಲಿ ದೀಪಾವಳಿ ಹಬ್ಬದ ವಿಶೇಷವಾಗಿ Ola ತನ್ನ ಗ್ರಾಹಕರಿಗೆ ನೀಡುತ್ತಿರುವಂತಹ ರಿಯಾಯಿತಿ ಹಾಗೂ ಆಫರ್ ಗಳ ಬಗ್ಗೆ ಹೇಳಲು ಹೊರಟಿದ್ದು ತಪ್ಪದೆ ಲೇಖನವನ್ನು ಕೊನೆವರೆಗೂ ಓದಿ.

ಇದನ್ನು ಕೂಡ ಓದಿ: Buy Alto K10: ಕೇವಲ 44 ಸಾವಿರ ರೂಪಾಯಿ ಕೊಟ್ಟು ಕಾರ್ ಅನ್ನು ಮನೆಗೆ ತಗೊಂಡ್ ಹೋಗಿ- ಜೊತೆ 45 ಸಾವಿರ ಆಫರ್ ಕೂಡ. ಹಬ್ಬ ಮಾಡ್ಕೊಳಿ.

Ola ಎಲೆಕ್ಟ್ರಿಕ್ ಸ್ಕೂಟರ್ ಗಳ ಮೇಲೆ ದೀಪಾವಳಿ ಆಫರ್ – Ola Diwali Offer

ದೀಪಾವಳಿ ಹಬ್ಬದ ಸಂದರ್ಭದಲ್ಲಿ ನೀವು ಯಾರಿಗಾದರೂ ಗಿಫ್ಟ್ ನೀಡಬೇಕು ಅಂತ ಇದ್ರೆ ಅಥವಾ ನೀವೇ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸಬೇಕು ಎನ್ನುವಂತಹ ಯೋಜನೆಯನ್ನು ಹಾಕಿಕೊಂಡಿದ್ರೆ Ola S1 ಸೀರೀಸ್ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ನೀವು ರಿಯಾಯಿತಿ ಬೆಲೆಯಲ್ಲಿ ಪಡೆದುಕೊಳ್ಳಬಹುದಾಗಿದೆ ಎಂಬುದನ್ನು ಓಲಾ ಸಂಸ್ಥೆ ಹೇಳಿಕೊಂಡಿದೆ. ಈ ದೀಪಾವಳಿ ಹಬ್ಬದ ಸೀಸನ್ ನಲ್ಲಿ ಸಾಕಷ್ಟು ರೀತಿಯ ಆಫರ್ (Ola Diwali Offer) ಗಳು ಸಿಗ್ತಾ ಇದ್ದು ಬನ್ನಿ ಅವುಗಳ ಬಗ್ಗೆ ಕೂಡ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

Ola ಎಲೆಕ್ಟ್ರಿಕ್ ಸ್ಕೂಟರ್ ಖರೀದಿದಾರರು ದೀಪಾವಳಿ ಹಬ್ಬದ ಸಂದರ್ಭದಲ್ಲಿ 26,500 ವರೆಗೂ ಕೂಡ ಉಳಿತಾಯ ಮಾಡಬಹುದಾಗಿದೆ. Ola S1 Air S1 X Plus ಎಲೆಕ್ಟ್ರಿಕ್ ಸ್ಕೂಟರ್ ಗಳ ಮೇಲೆ ಬ್ಯಾಟರಿ ಮೇಲೆ ಎಕ್ಸ್ಟೆಂಡೆಡ್ ವಾರೆಂಟಿ ಜೊತೆಗೆ ಅರ್ಧಕ್ಕೆ ಅರ್ಧದಷ್ಟು ರಿಯಾಯಿತಿ ಕೂಡ ಸಿಗುತ್ತದೆ. Ola S1 Pro Gen 2 ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ನಿಮಗೆ 7,000ಗಳ ಮೌಲ್ಯದ ಉಚಿತ ಎಕ್ಸ್ಟೆಂಡೆಡ್ ವಾರಂಟಿಯನ್ನು ಕೂಡ ನೀವು ಪಡೆದುಕೊಳ್ಳಬಹುದು. ಇದರ ಮೂಲ ಬೆಲೆ ರೂ.7000 ಆಗಿರುತ್ತದೆ ಹಾಗೂ ಇದರ ಜೊತೆಗೆ ನೀವು ರೂ.2000 ಮೌಲ್ಯದ ವಿಸ್ತೃತ ವಾರೆಂಟಿ ಯನ್ನು ಕೂಡ ಪಡೆದುಕೊಳ್ಳಬಹುದಾಗಿದೆ.

ಒಂದು ವೇಳೆ ನಿಮ್ಮ ಬಳಿ ಹಳೆಯ ದ್ವಿಚಕ್ರ ವಾಹನ ಇದ್ದರೆ S1 Pro Gen 2 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿ ಮಾಡುವ ಸಂದರ್ಭದಲ್ಲಿ ಎಕ್ಸ್ಚೇಂಜ್ ರೂಪದಲ್ಲಿ ಹತ್ತು ಸಾವಿರ ರೂಪಾಯಿಗಳವರೆಗಿನ ಮೌಲ್ಯವನ್ನು ಕೂಡ ಪಡೆದುಕೊಳ್ಳಬಹುದಾಗಿದೆ. Ola ಸಂಸ್ಥೆಯ ಇನ್ನೆರಡು ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಆಗಿರುವಂತಹ S1 Air ಹಾಗೂ S1 Plus ಎಲೆಕ್ಟ್ರಿಕ್ ಸ್ಕೂಟರ್ ಗಳ ಮೇಲೆ ಕೂಡ 5000 ರೂಪಾಯಿಗಳವರೆಗಿನ ರಿಯಾಯಿತಿಯನ್ನು ಕೂಡ ನೀಡಲಾಗುತ್ತಿದೆ.

ದೀಪಾವಳಿ ಹಬ್ಬದ ವಿಶೇಷವಾಗಿ Ola ಸಂಸ್ಥೆ ಕೆಲವೊಂದು ಬ್ಯಾಂಕುಗಳ ಕ್ರೆಡಿಟ್ ಕಾರ್ಡ್ ಮೇಲೆ ನೋ ಕಾಸ್ಟ್ ಇಎಂಐ, ಜೀರೋ ಡೌನ್ ಪೇಮೆಂಟ್, 7,500 ಗಳ ರಿಯಾಯಿತಿ ವರೆಗೂ ಕೂಡ ನೀಡ್ತಾ ಇದೆ. ಯಾವುದೇ ಪ್ರೊಸೆಸಿಂಗ್ ಫೀಸ್ ಇಲ್ಲದೆ ಕೇವಲ 5.99 ಪ್ರತಿಶತ ಬಡ್ಡಿ ದರದಲ್ಲಿ Ola ಸಂಸ್ಥೆ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಮಾರಾಟ ಮಾಡುತ್ತಿದೆ. ಈ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಉಚಿತ ಟೆಸ್ಟ್ ರೈಡ್ ಸೇರಿದಂತೆ 999 ರೂಪಾಯಿಗಳ ಗಿಫ್ಟ್ ಗಳನ್ನು ಕೂಡ ನೀಡಲಾಗುತ್ತಿದೆ ಎನ್ನುವದಾಗಿ ತಿಳಿದು ಬಂದಿದ್ದು ಇದಕ್ಕಾಗಿ ನೀವು ನಿಮ್ಮ ಹತ್ತಿರದ Ola ಶೋರೂಂಗೆ ಹೋಗಿ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

Comments are closed.