Ration Card: ಬದಲಾಗುತ್ತಿದೆ ರೇಷನ್ ಕಾರ್ಡ್ ನಿಯಮಗಳು. ಹೀಗೆ ಮಾಡದೆ ಇದ್ದರೇ ನಿಮ್ಮ ರೇಷನ್ ಕಾರ್ಡ್ ರದ್ದು.
Ration Card: ನಮಸ್ಕಾರ ಸ್ನೇಹಿತರೇ ಸರಕಾರ ರೇಷನ್ ಕಾರ್ಡ್(ration card) ಅನ್ನು ಕೆಲವೊಂದು ಪ್ರಮುಖ ನಿಯಮಗಳ ಜೊತೆಗೆ ಜನಸಾಮಾನ್ಯರಿಗೆ ನೀಡುವಂತಹ ಕೆಲಸವನ್ನು ಮಾಡಿದೆ ಎನ್ನುವುದನ್ನು ಪ್ರತಿಯೊಬ್ಬರು ಕೂಡ ತಿಳಿದುಕೊಳ್ಳಬೇಕಾಗಿರುತ್ತದೆ. ಆದರೆ ಕೆಲವೊಂದು ನಿಯಮಗಳು ಜನಸಾಮಾನ್ಯರು ಪಾಲಿಸುತ್ತಿಲ್ಲ ಎನ್ನುವುದು ಕೂಡ ಚಿಂತಾಜನಕ ವಿಚಾರವಾಗಿದೆ. ಇತ್ತೀಚಿನ ದಿನಗಳಲ್ಲಿ ಇದೇ ರೀತಿ ನಿಯಮಗಳನ್ನು ಮೀರುತ್ತಿರುವ ಕಾರಣಕ್ಕಾಗಿ ಸಾಕಷ್ಟ ಜನರು ರೇಷನ್ ಕಾರ್ಡ್ ಕ್ಯಾನ್ಸಲೇಷನ್ ಅನ್ನು ಎದುರಿಸಬೇಕಾದಂತಹ ಪರಿಸ್ಥಿತಿಯನ್ನು ತಂದುಕೊಂಡಿದ್ದಾರೆ ಎಂದು ಹೇಳಬಹುದು.
ಇತ್ತೀಚಿಗೆ ಬಿಡುಗಡೆಯಾದ ಸುದ್ದಿಗಳು- Instant Personal Loan: ಎಲ್ಲರೂ ಲೋನ್ ಕೊಡುವುದು ನೋಡಿ, ಅಮೆಜಾನ್ ಲೋನ್ ಕೊಡಲು ನಿರ್ಧಾರ. ಟಕ್ ಅಂತ ಎರಡು ನಿಮಿಷದಲ್ಲಿ ಲೋನ್ ಪಡೆಯಿರಿ.
Table of Contents
ರೇಷನ್ ಕಾರ್ಡ್ ನಿಯಮಗಳು(ration card rules)
ರೇಷನ್ ಕಾರ್ಡ್ ಅನ್ನು ನಮ್ಮ ಅಗತ್ಯತೆಗಳಿಗೆ ಬಳಸುವುದು ಮಾತ್ರವಲ್ಲದೆ ಅದಕ್ಕೆ ನಿಗದಿಪಡಿಸಲಾಗಿರುವಂತಹ ನಿಯಮಗಳನ್ನು ಕೂಡ ನಾವು ಫಾಲೋ ಮಾಡುವುದು ಅತ್ಯಂತ ಪ್ರಮುಖವಾಗಿರುತ್ತದೆ ಎಂಬುದನ್ನು ಕೂಡ ನೀವು ನೆನಪಿನಲ್ಲಿಟ್ಟುಕೊಳ್ಳಬೇಕು. ಎಲ್ಲಕ್ಕಿಂತ ಪ್ರಮುಖವಾಗಿ ಸರ್ಕಾರ ರೇಷನ್ ಕಾರ್ಡ್ ವಿಚಾರದಲ್ಲಿ ಕೂಡ ಕೆಲವೊಂದು ಪ್ರಮುಖ ನಿಯಮಗಳನ್ನು ಜಾರಿಗೆ ತಂದಿದ್ದು, ಒಂದು ವೇಳೆ ಅದರ ಉಲ್ಲಂಘನೆ ಯಿಂದಾಗಿ ನಿಮ್ಮ ರೇಷನ್ ಕಾರ್ಡ್ ರದ್ದಾದರೆ, ಅದರಲ್ಲೂ ವಿಶೇಷವಾಗಿ ಬಿಪಿಎಲ್ ರೇಷನ್ ಕಾರ್ಡ್(BPL Ration card) ನಿಂದ ನಿಮಗೆ ಸಿಗಬೇಕಾಗಿರುವಂತಹ ಸರ್ಕಾರದ ಯಾವುದೇ ಪ್ರಯೋಜನ ಅಥವಾ ಸರ್ಕಾರಿ ಯೋಜನೆಗಳ ಲಾಭವನ್ನು ಪಡೆದುಕೊಳ್ಳುವಂತಹ ಅವಕಾಶ ಕೂಡ ಸಿಗುವುದಿಲ್ಲ.
ಈ ತರ ಮಾಡಿದ್ರೆ ಆಗುತ್ತೆ ರೇಷನ್ ಕಾರ್ಡ್ ರದ್ದು – You ration card might get cancelled
ಪ್ರಮುಖವಾಗಿ ಕೇಂದ್ರ ಸರ್ಕಾರ ರೇಷನ್ ಕಾರ್ಡ್ ಅನ್ನು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬಡತನದ ರೇಖೆಗಿಂತ ಕೆಳಗಿರುವಂತಹ ಕುಟುಂಬ ಗಳಿಗೆ ಉಚಿತ ಆಹಾರವನ್ನು ನೀಡುವಂತಹ ಹಾಗೂ ಸರ್ಕಾರದ ಯೋಜನೆಗಳನ್ನು ಅವರಿಗೆ ನೀಡುವ ಕಾರಣಕ್ಕಾಗಿ ಅವರಿಗೆ ಬಿಪಿಎಲ್ ರೇಷನ್ ಕಾರ್ಡ್ ಅಂದರೆ ಬಡತನದ ರೇಖೆಗಿಂತ ಕೆಳಗಿರುವಂತಹ ಜನರಿಗೆ ನೀಡುವಂತಹ ರೇಷನ್ ಕಾರ್ಡ್ ರೂಪದಲ್ಲಿ ನೀಡಿರುತ್ತಾರೆ. ಸದ್ಯದ ಮಟ್ಟಿಗೆ ಸರ್ಕಾರ ರಾಜ್ಯದಲ್ಲಿ ಜಾರಿಗೆ ತಂದಿರುವಂತಹ ಗೃಹಲಕ್ಷ್ಮಿ(gruhalakshmi scheme) ಅಥವಾ ಅನ್ನಭಾಗ್ಯ ಯೋಜನೆಗಾಗಿ ಮಾತ್ರ ರೇಷನ್ ಕಾರ್ಡ್ ಅನ್ನು ಬಳಸಿಕೊಳ್ಳಲಾಗುತ್ತಿದೆ ಎನ್ನುವುದಾಗಿ ತಿಳಿದು ಬಂದಿದೆ.
ಕಳೆದ ಆರು ತಿಂಗಳಿನಿಂದ ಯಾರೆಲ್ಲಾ ರೇಷನ್ ಕಾರ್ಡ್ ಪಡೆದುಕೊಳ್ಳುತ್ತಿಲ್ಲವೋ ಅವರ ರೇಷನ್ ಕಾರ್ಡ್ ಗಳನ್ನು ಲೆಕ್ಕಾಚಾರ ಮಾಡಿ ಅಥವಾ ರಿಸರ್ಚ್ ಮೂಲಕ ಹುಡುಕಿ ಅವುಗಳನ್ನು ರದ್ದು ಮಾಡುವಂತಹ ಕೆಲಸಗಳು ಕೂಡ ನಡೆಯುತ್ತಿವೆ. ಈಗಾಗಲೇ ಇದೇ ರೀತಿಯ ನಿಯಮವನ್ನು ಉಲ್ಲಂಘನೆ ಮಾಡಿರುವ ಕಾರಣಕ್ಕಾಗಿ ಅಂದರೆ ಆರು ತಿಂಗಳಿನಿಂದ ರೇಷನ್ ಪಡೆದುಕೊಳ್ಳದೇ ಇರುವಂತಹ 3.47 ಲಕ್ಷ ಬಿಪಿಎಲ್ ರೇಷನ್ ಕಾರ್ಡ್ ದಾರರನ್ನು ಅವರನ್ನು ಹುಡುಕಲಾಗಿದೆ.
ಈ ರೀತಿ ಮಾಡಿದರೆ ರೇಷನ್ ಕಾರ್ಡ್ ರದ್ದಾಗುವುದಿಲ್ಲ- Follow this rules.
ಒಂದು ವೇಳೆ ನಿಮ್ಮ ಬಳಿ ಬಿಪಿಎಲ್ ರೇಷನ್ ಕಾರ್ಡ್ ಇದ್ದರೆ ನೀವು ಕೇವಲ ಸರ್ಕಾರಿ ಯೋಜನೆಗಳಿಗಾಗಿ ಮಾತ್ರ ಈ ರೇಷನ್ ಕಾರ್ಡ್ ಗಳನ್ನು ಬಳಕೆ ಮಾಡುವ ಹಾಗಿಲ್ಲ. ಸರ್ಕಾರದಿಂದ ಸಿಗುವಂತಹ ರೇಷನ್ ಅನ್ನು ಕೂಡ ಪಡೆದುಕೊಳ್ಳಲೇಬೇಕು ಎಂಬುದಾಗಿ ಕೂಡ ಈ ನಿಯಮಗಳು ಹೇಳುತ್ತವೆ. ಒಂದು ವೇಳೆ ನೀವು ಕಳೆದ ಆರು ತಿಂಗಳಿನಿಂದ ರೇಷನ್ ಪಡೆದುಕೊಂಡಿಲ್ಲ ಎಂದಾದಲ್ಲಿ ನಿಮ್ಮ ರೇಷನ್ ಕಾರ್ಡ್ ಅನ್ನು ಎರಡನೇ ಮಾತಿಲ್ಲದೆ ರದ್ದು ಮಾಡಲಾಗುತ್ತದೆ. ಇನ್ನೂ ಒಂದು ವೇಳೆ ಆ ವ್ಯಕ್ತಿಯ ಆರೋಗ್ಯ ಕಳೆದ ಆರು ತಿಂಗಳಿನಿಂದ ಸರಿಯಾಗಿಲ್ಲ ಎಂದಾದಲ್ಲಿ ಹಾಗೂ ಆತ ಮರಣ ಹೊಂದಿದ್ದರೆ ಆ ಸಂದರ್ಭದಲ್ಲಿ ಮಾತ್ರ ರೇಷನ್ ಕಾರ್ಡ್ ಅನ್ನು ರದ್ದು ಮಾಡುವುದಿಲ್ಲ.
ನಿಯಮಗಳ ಅಡಿಯಲ್ಲಿ ಬಾರದೆ ಇರುವಂತಹ ರೇಷನ್ ಕಾರ್ಡ್ ಗಳನ್ನು ಕೂಡ ಕ್ಯಾನ್ಸಲ್ ಮಾಡಲಾಗುತ್ತದೆ
ಅಗತ್ಯ ಇಲ್ಲದೆ ಹೋದಲ್ಲಿ ಅಂದರೆ ನೀವು ಬಿಪಿಎಲ್ ರೇಷನ್ ಕಾರ್ಡಿಗೆ ಅರ್ಹರಾಗದೆ ಹೋದಲ್ಲಿ ಆ ಸಂದರ್ಭದಲ್ಲಿ ನೀವು ಬಿಪಿಎಲ್ ಕಾರ್ಡ್ ಸರಂಡರ್ ಮಾಡಬೇಕಾಗುತ್ತದೆ. ಸೂಕ್ತ ಕಾರಣಗಳಿಗೆ ಈ ರೇಷನ್ ಕಾರ್ಡ್ ಅನ್ನು ಬಳಸಿಕೊಳ್ಳದೆ ಹೋದಲ್ಲಿ ಆ ಸಂದರ್ಭದಲ್ಲಿ ನೀವು ರೇಷನ್ ಕಾರ್ಡ್ ಅನ್ನು ವಾಪಸಾತಿ ಮಾಡದೆ ಇದ್ದಾಗ ಸರ್ಕಾರ ನಿಮ್ಮ ರೇಷನ್ ಕಾರ್ಡ್ ಅನ್ನು ಕ್ಯಾನ್ಸಲ್ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಆಹಾರ ಇಲಾಖೆಗೆ ನೀವು ನಿಮ್ಮ ರೇಷನ್ ಕಾರ್ಡ್ ಅಗತ್ಯ ಇಲ್ಲದೆ ಹೋದಲ್ಲಿ ಹಿಂದಿರುಗಿಸಬೇಕು ಹಾಗೂ ಕಳೆದ ಆರು ತಿಂಗಳಿನಿಂದ ಯಾರೆಲ್ಲಾ ರೇಷನ್ ಅನ್ನು ಪಡೆದುಕೊಂಡಿಲ್ಲವೋ ಅವರು ಕೂಡಲೇ ಹೋಗಿ ನ್ಯಾಯಬೆಲೆ ಅಂಗಡಿಯಲ್ಲಿ ರೇಷನ್ ಪಡೆದುಕೊಳ್ಳಬೇಕು ಇಲ್ಲವಾದಲ್ಲಿ ರೇಷನ್ ಕಾರ್ಡ್ ಅನ್ನು ಆಹಾರ ಇಲಾಖೆ ರದ್ದು ಮಾಡಲಿದೆ.
Comments are closed.