Car insurance buy Tips: ಕಾರ್ ಇನ್ಸೂರೆನ್ಸ್ ಖರೀದಿಸುವುದಕ್ಕಿಂತ ಮುಂಚೆ ಈ ನಾಲ್ಕು ಸಲಹೆಗಳನ್ನು ಪ್ರಮುಖವಾಗಿ ಗಮನಿಸಿ.

Here are some things to think about before you get your first auto insurance or decide to renew your policy.

Car insurance buy Tips: ನಮಸ್ಕಾರ ಸ್ನೇಹಿತರೆ ಒಂದು ವೇಳೆ ಕಾರಿನ ಮಾಲೀಕರು ನೀವಾಗಿದ್ದರೆ ಖಂಡಿತವಾಗಿ ಸಾಕಷ್ಟು ಖರ್ಚುಗಳನ್ನು ನೀವು ಎದುರಿಸಬೇಕಾಗುತ್ತದೆ ಎಂಬುದನ್ನು ಕೂಡ ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾಗಿರುತ್ತದೆ. ಅವುಗಳಲ್ಲಿ ವಿಮೆಯ ಖರ್ಚು ಕೂಡ ಒಂದಾಗಿರುತ್ತದೆ. ಅಪಘಾತದ ನಂತರ ಪ್ರಮುಖವಾಗಿ ನಿಮ್ಮ ಡ್ಯಾಮೇಜ್ಗಳನ್ನು ಪರಿಹಾರ ರೂಪದಲ್ಲಿ ಪಡೆದುಕೊಳ್ಳಲು ಇನ್ಸೂರೆನ್ಸ್(car insurance) ಅತ್ಯಂತ ಪ್ರಮುಖವಾಗಿ ಬೇಕಾಗಿರುವ ವಸ್ತುವಾಗಿರುತ್ತದೆ.

ಇತ್ತೀಚಿನ ಟಾಪ್ ಸುದ್ದಿಗಳು- Ration Card: ಬದಲಾಗುತ್ತಿದೆ ರೇಷನ್ ಕಾರ್ಡ್ ನಿಯಮಗಳು. ಹೀಗೆ ಮಾಡದೆ ಇದ್ದರೇ ನಿಮ್ಮ ರೇಷನ್ ಕಾರ್ಡ್ ರದ್ದು.

ಸಾಕಷ್ಟು ಬಾರಿ ನೀವು ತೆಗೆದುಕೊಳ್ಳುವಂತಹ ತಪ್ಪು ನಿರ್ಧಾರಗಳಿಂದಾಗಿ ಹೆಚ್ಚಿನ ಪ್ರೀಮಿಯಂ ಹಣವನ್ನು ಇನ್ಸೂರೆನ್ಸ್ ಗಾಗಿ ಪಾವತಿ ಮಾಡಬೇಕಾಗಿರುತ್ತದೆ. ಇದೇ ಕಾರಣಕ್ಕಾಗಿ ಕಾರ್ ಇನ್ಸೂರೆನ್ಸ್ ಪ್ರೀಮಿಯಂ ಹಣವನ್ನು ಕಡಿಮೆ ಮಾಡಲು ಇರುವಂತಹ ಕೆಲವೊಂದು ಉಪಾಯಗಳನ್ನು ಇವತ್ತಿನ ಈ ಲೇಖನಿಯಲ್ಲಿ ಕೆಲವೊಂದು ಪಾಯಿಂಟ್ಗಳ ಮುಖಾಂತರ ನಿಮಗೆ ನೀಡುವುದಕ್ಕೆ ಹೊರಟಿದ್ದೇವೆ. ತಪ್ಪದೆ ಲೇಖನಿಯನ್ನು ಕೊನೆಯವರೆಗೂ ಓದಿ.

Car insurance buy Tip 1- ರಿಸರ್ಚ್ Do Reserach about Multiple Car insurance

ನೀವು ನಿಮ್ಮ ಪ್ರೀಮಿಯಂ ಹಣವನ್ನು ಕಡಿಮೆ ಮಾಡಿಕೊಳ್ಳಬೇಕು ಎಂದಾದಲ್ಲಿ ಕೇವಲ ಒಂದೇ ಕಂಪನಿಯ ಇನ್ಸೂರೆನ್ಸ್ ಕಂಪನಿಗೆ ಹೋಗಬಾರದು. ಇಂಟರ್ನೆಟ್ ಸೌಲಭ್ಯದ ಮೂಲಕ ವೆಬ್ಸೈಟ್ಗಳಲ್ಲಿ ಬೇರೆ ಬೇರೆ ಕಂಪನಿಯ ಕಾರ್ ಇನ್ಸೂರೆನ್ಸ್ ಗಳನ್ನು ಹೋಲಿಕೆ ಮಾಡಿ ಅವುಗಳಲ್ಲಿ ಯಾವುದು ನಿಮಗೆ ಉತ್ತಮ ಲಾಭವನ್ನು ನೀಡುತ್ತದೆ ಎನ್ನುವುದನ್ನು ಸಂಪೂರ್ಣವಾಗಿ ತಾಳೆ ಹಾಕಿ ನೋಡಿ ನಂತರವಷ್ಟೇ ಆಯ್ಕೆ ಮಾಡಬೇಕಾಗಿರುತ್ತದೆ. ಆದಷ್ಟು ನೀವು ಕಡಿಮೆ ಬೆಲೆಯ ಪ್ರೀಮಿಯಂ ನಲ್ಲಿ ಸಿಗುವಂತಹ ಇನ್ಸೂರೆನ್ಸ್ ಅನ್ನು ಆಯ್ಕೆ ಮಾಡುವುದು ಒಳ್ಳೆಯದಾಗಿರುತ್ತದೆ.

Car insurance buy Tip 2- ಇನ್ಸೂರೆನ್ಸ್ ನಲ್ಲಿ ಏನಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ

ಸಾಮಾನ್ಯವಾಗಿ ಸಾಕಷ್ಟು ಕಾರು ಇನ್ಸೂರೆನ್ಸ್ ಗಳಲ್ಲಿ ನೀವು ಗಮನಿಸಿರಬಹುದು ಬೇಡದೆ ಇದ್ದರೂ ಕೂಡ ಸಾಕಷ್ಟು ಆಡ್ ಆನ್ ಗಳನ್ನು ಸೇರಿಸಿರುತ್ತಾರೆ ಹೀಗಾಗಿ ನಿಮಗೆ ಬೇಡದೆ ಇರುವಂತಹ ಫೀಚರ್ಗಳನ್ನು ಇನ್ಸೂರೆನ್ಸ್ ನಿಂದ ತೆಗೆದುಹಾಕುವ ಮೂಲಕವೂ ಕೂಡ ಸಾಕಷ್ಟು ಹಣವನ್ನು ಉಳಿತಾಯ ಮಾಡಬಹುದಾಗಿದೆ. ಇನ್ನು ಯಾವೆಲ್ಲ ಅನಾಹುತಗಳನ್ನು ಇನ್ಸೂರೆನ್ಸ್ ಕವರ್ ಮಾಡುತ್ತದೆ ಎನ್ನುವುದನ್ನು ಕೂಡ ನೀವು ಖರೀದಿಸುವ ಮುಂಚೆ ನೋಡಿಕೊಳ್ಳಬೇಕಾಗುತ್ತದೆ. ಅದರಲ್ಲೂ ವಿಶೇಷವಾಗಿ ಪ್ರಾಕೃತಿಕ ವಿಕೋಪ ಗಳಿಂದಾಗಿ ಆಗುವಂತಹ ಡ್ಯಾಮೇಜ್ಗಳನ್ನು ಕೂಡ ಕವರ್ ಮಾಡುವಂತಹ ವಿಮೆಯನ್ನು ಆಯ್ಕೆ ಮಾಡಿಕೊಳ್ಳಿ.

Here are some things to think about before you get your first auto insurance or decide to renew your policy.
Here are some things to think about before you get your first auto insurance or decide to renew your policy.
Car insurance buy Tip 3 – ವಿಮೆಯನ್ನು ಪಾವತಿ ಮಾಡುವ ವಿಚಾರ

ಮೊದಲು ಕೇವಲ ಇನ್ಸೂರೆನ್ಸ್ ಅನ್ನು ಕಾರಿನ ಆಧಾರದ ಮೇಲೆ ಪ್ರೀಮಿಯಂ ಅನ್ನು ನಿರ್ಧರಿಸಲಾಗುತ್ತಿತ್ತು ಎಂಬುದಾಗಿ ತಿಳಿದು ಬಂದಿದೆ. ಇದರಿಂದಾಗಿ ಪ್ರೀಮಿಯಂ ಹಣವನ್ನು ಕಟ್ಟುವುದು ಕೂಡ ಹೆಚ್ಚಾಗಿ ಕಾಣುತ್ತಿತ್ತು. ಆದರೆ ಈಗ ನೀವು ಕಾರನ್ನು ಎಷ್ಟು ಬಳಕೆ ಮಾಡಿರುತ್ತೀರೋ, ಅದರ ಲೆಕ್ಕಾಚಾರದ ಮೇಲೆ ನೀವು ಇನ್ಸೂರೆನ್ಸ್ ಪ್ರೀಮಿಯಂ ಅನ್ನು ಕೂಡ ಕಟ್ಟಬಹುದಾದಂತಹ ಅವಕಾಶವನ್ನು ಪಡೆದುಕೊಳ್ಳುತ್ತೀರಿ. ಇದರಿಂದಾಗಿ ನೀವು ಹೆಚ್ಚಳ ರೂಪದಲ್ಲಿ ಪ್ರೀಮಿಯಂ ಕಟ್ಟಬೇಕಾದ ಅವಶ್ಯಕತೆ ಇಲ್ಲ.

Car insurance buy Tip 4- No claim bonus

ಒಂದು ವೇಳೆ ನೀವು ಇನ್ಸೂರೆನ್ಸ್ನಲ್ಲಿ ಒಂದು ವರ್ಷದವರಿಗೆ ಯಾವುದೇ ಕ್ಲೇಮ್ ಅನ್ನು ಮಾಡದೆ ಹೋದಲ್ಲಿ ಆ ಸಂದರ್ಭದಲ್ಲಿ ಇನ್ಸೂರೆನ್ಸ್ ಕಂಪನಿ ಆ ವಿಮೆಯ ಹಣವನ್ನು ಮುಂದಿನ ವರ್ಷದ ವಿಮೆಗೆ 20 ರಿಂದ 50 ಪ್ರತಿಶತ ರಿಯಾಯಿತಿ ರೂಪದಲ್ಲಿ ನೀಡುತ್ತದೆ ಎಂಬುದನ್ನು ಕೂಡ ನೀವು ಇಲ್ಲಿ ಅರ್ಥ ಮಾಡಿಕೊಳ್ಳಬೇಕಾಗಿರುತ್ತದೆ. ಈ ಕ್ಲೈಮ್ ಆಗದೇ ಇರುವಂತಹ ಬೋನಸ್ ಗಳಿಂದ ನೀವು ಹೊಸ ಕಾರಿನ ಖರೀದಿಯ ನಂತರ ಆ ಕಾರಿನ ಮೇಲು ಕೂಡ ವರ್ಗಾವಣೆ ಮಾಡಬಹುದಾಗಿದೆ.

Comments are closed.