Buy TATA Car: ಬೈಕ್ ನಂತೆ ಸೂಪರ್ ಮೈಲೇಜ್ ನೀಡುವ TATA ಕಾರ್ ಅನ್ನು ಖರೀದಿ ಮಾಡಿ, ಹಣ ಉಳಿಸಿ.

Buy TATA Car- TATA Altroz Car Specifications, features and Mileage details explained in kannada

ನಮಸ್ಕಾರ ಸ್ನೇಹಿತರೇ ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿ ನಿಜಕ್ಕೂ ಕೂಡ ಟಾಟಾ ಸಂಸ್ಥೆಯ ಕಾರು ಪ್ರತಿಯೊಬ್ಬರ ಭರವಸೆಯನ್ನು ಗೆದ್ದಿರುವಂತಹ ಕಾರ್ ಆಗಿದೆ. ಟಾಟಾ ಸಂಸ್ಥೆ ಕಾರುಗಳನ್ನು ಭಾರತದ ಮಾರುಕಟ್ಟೆಯಲ್ಲಿ ಅತ್ಯಂತ ಸುರಕ್ಷಿತ ಕಾರುಗಳು ಎಂಬುದಾಗಿ ಕೂಡ ಪರಿಗಣಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಈ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಆಫರ್ ಜೊತೆಗೆ ಉತ್ತಮವಾದ ಫೀಚರ್ ಗಳನ್ನು ಹೊಂದಿರುವಂತಹ ಟಾಟಾ ಅಲ್ಟ್ರೋಜ್(Tata Altroz) ಕಾರಿನ ಬಗ್ಗೆ ಇವತ್ತಿನ ಲೇಖನೆಯಲ್ಲಿ ಮಾತನಾಡಲು ಹೊರಟಿದ್ದೇವೆ.

ಇತ್ತೀಚಿಗಿನ ಸುದ್ದಿಗಳು- ಕಾರ್ ಇನ್ಸೂರೆನ್ಸ್ ಖರೀದಿಸುವುದಕ್ಕಿಂತ ಮುಂಚೆ ಈ ನಾಲ್ಕು ಸಲಹೆಗಳನ್ನು ಪ್ರಮುಖವಾಗಿ ಗಮನಿಸಿ.

Buy TATA Car- TATA Altroz Car Specifications, features and Mileage details explained in kannada

Tata Altroz ಕಾರು ಹ್ಯಾಚ್ಬ್ಯಾಕ್ ಸೆಗ್ಮೆಂಟ್ ನಲ್ಲಿ ಕಾಣಿಸಿಕೊಳ್ಳುವಂತಹ ಕಾರ್ ಆಗಿದೆ. ಈ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ಕಾರು 6.60 ರಿಂದ 10.74 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ನಿಮಗೆ ಶೋರೂಮ್ನಲ್ಲಿ ಸಿಗುತ್ತದೆ. ಇದರಲ್ಲಿ ನಿಮಗೆ 20 ಸಾವಿರ ರೂಪಾಯಿಗಳ ಕ್ಯಾಶ್ ಡಿಸ್ಕೌಂಟ್, ಹತ್ತು ಸಾವಿರ ರೂಪಾಯಿಗಳ ಎಕ್ಸ್ಚೇಂಜ್ ಬೋನಸ್ ಹಾಗೂ ಐದು ಸಾವಿರ ರೂಪಾಯಿಗಳ ಕಾರ್ಪೊರೇಟ್ ಬೋನಸ್ ಕೂಡ ಸಿಗುತ್ತದೆ.

Tata Altroz ನಿಮಗೆ ಬೇರೆ ಬೇರೆ ವೇರಿಯಂಟ್ ಸೇರಿದಂತೆ ಪೆಟ್ರೋಲ್ ಹಾಗೂ CNG ನಲ್ಲಿ ಕೂಡ ದೊರಕುತ್ತದೆ. ಇನ್ನು ಇದರ ಇಂಜಿನ್ ಆಪ್ಷನ್ ಗಳ ಬಗ್ಗೆ ಮಾತನಾಡುವುದಾದರೆ 1.2 ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಇಂಜಿನ್, 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ನಲ್ಲಿ ಕೂಡ ಕಾಣಬಹುದಾಗಿದೆ. ಇದರ ಜೊತೆಗೆ 1.5 ಲೀಟರ್ ಡೀಸೆಲ್ ಇಂಜಿನ್ ಅನ್ನು ಕೂಡ ನೀವು Tata Altroz ನಲ್ಲಿ ಕಾಣಬಹುದಾಗಿದೆ. ಆರು ಸ್ಪೀಡ್ DCT ಹಾಗೂ ಐದು ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ ಮಿಷನ್ ಆಯ್ಕೆಯನ್ನು ಕೂಡ ನೀವು ಈ ಕಾರಿನಲ್ಲಿ ಪಡೆಯಬಹುದಾಗಿದೆ.

Buy TATA Car- TATA Altroz Car Specifications, features and Mileage details explained in kannada
Buy TATA Car- TATA Altroz Car Specifications, features and Mileage details explained in kannada

ಪವರ್ ಟ್ರಾನ್ ಅನ್ನು ಕೂಡ ಹೊಂದಿರುವಂತಹ Tata Altroz ಕಾರಿನ ಮೈಲೇಜ್ ಬಗ್ಗೆ ಮಾತನಾಡುವುದಾದರೆ ಡೀಸೆಲ್ ನಲ್ಲಿ ಪ್ರತಿ ಲೀಟರ್ ಗೆ 18.5 ನಿಂದ 23.60 ಕಿಲೋಮೀಟರ್, CNG ನಲ್ಲಿ ಬೈಕ್ ನ ರೀತಿಯಲ್ಲಿ 26.2 ಕಿಲೋಮೀಟರ್ಗಳ ಮೈಲೇಜ್ ಅನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಇನ್ನು ಈ ಕಾರಿನಲ್ಲಿ ಇರುವಂತಹ ವಿಶೇಷತೆಗಳ ಬಗ್ಗೆ ಗಮನ ವಹಿಸುವುದಾದರೆ ಏಳು ಇಂಚಿನ ಇನ್ಫೋಟೈನ್ಮೆಂಟ್ ಟಚ್ ಸ್ಕ್ರೀನ್ ಸಿಸ್ಟಮ್ ಅನ್ನು ಕೂಡ ನೀವು ಇದರಲ್ಲಿ ಪಡೆದುಕೊಳ್ಳಬಹುದಾಗಿದೆ. ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟಲ್ ಕ್ಲಸ್ಟರ್, ಆಂಬಿಯಂಟ್ ಲೈಟ್ಸ್, ಸಿಂಗಲ್ ಪ್ಯಾನ್ ಅಂಡ್ ರೂಫ್, ಕ್ರೂಸ್ ಕಂಟ್ರೋಲ್, ಕನೆಕ್ಟೆಡ್ ಕಾರ್ ರೀತಿಯ ಸಾಕಷ್ಟು ಅಡ್ವಾನ್ಸ್ ಟೆಕ್ನಾಲಜಿ ಹೊಂದಿರುವಂತಹ ವಿಶೇಷತೆಗಳನ್ನು ನೀವು ಈ ಕಾರಿನಲ್ಲಿ ಗಮನಿಸಬಹುದಾಗಿದೆ.

ಕಾರಿನ ಸುರಕ್ಷತೆಯ ವಿಚಾರಕ್ಕೆ ಬರೋದಾದ್ರೆ ಜಾಗತಿಕ ಅಧಿಕೃತ ಕಂಪನಿ ಆಗಿರುವಂತಹ Global NCAP ದೃಢೀಕರಿಸಿರುವಂತಹ ಪ್ರಕಾರ ವಯಸ್ಕರ ವಿಚಾರ್ದಲ್ಲೇ ಐದು ಸ್ಟಾರ್ ಹಾಗೂ ಮಕ್ಕಳ ವಿಚಾರದಲ್ಲಿ ಮೂರು ಸ್ಟಾರ್ ರೇಟಿಂಗ್ ಅಂದರೆ ಅತ್ಯಂತ ಸುರಕ್ಷಿತ ವಾಹನಗಳಲ್ಲಿ ಒಂದಾಗಿ ಇದನ್ನು ಪರಿಗಣಿಸಬಹುದಾಗಿದೆ. ಎಷ್ಟಾದರೂ ಟಾಟಾ ಸಂಸ್ಥೆಯ ಕಾರ ಅಲ್ವಾ. ಹಿಂದಿನ ಪಾರ್ಕಿಂಗ್ ಸೆನ್ಸರ್, ಆಟೋ ಪಾರ್ಕ್ ಲಾಕ್ ಸೇರಿದಂತೆ ಸಾಕಷ್ಟು ವಿಚಾರಗಳು ನೀವು ಈ ಕಾರಿನಲ್ಲಿ ಕಾಣಬಹುದಾಗಿದೆ.

Comments are closed.