ಒಂದು ರೂಪಾಯಿ ಊಡಿಕೆ ಮಾಡದೆ ಸುಲಭ ಟೆಕ್ನಿಕ್ ಬಳಸಿ ಮನೆಯಲ್ಲಿಯೇ ಕೋಟ್ಯಧಿಪತಿಯಾದ 19 ವರ್ಷದ ಹುಡುಗ ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಸಂಪಾದನೆ ಎಂಬುದು ಯಾವಾಗ, ಹೇಗೆ, ಎಲ್ಲಿ ಶುರುವಾಗತ್ತದೆ ಎಂಬುದು ಊಹಿಸಲು ಸಹ ಸಾಧ್ಯವಿಲ್ಲ. ಆದರೇ ಆ ಸಂಪಾದನೆ ಕಳ್ಳತನ, ಮೋಸ ಅವ್ಯವಹಾರದಿಂದ ಕೂಡಿರಬಾರದು ಎಂದು ಮಾತ್ರ ಮನೆಯಲ್ಲಿ ತಂದೆ ತಾಯಿ ಹಿರಿಯರು ಹೇಳುವ ಮಾತು. ಕಾಲೇಜಿನಲ್ಲಿ ಓದುತ್ತಿರುವಾಗಲೇ ತಮ್ಮ ಖರ್ಚಿಗೆ ಬೇಕಾದದ್ದನ್ನ ಪಾರ್ಟ್ ಟೈಮ್ ಕೆಲಸ ಮಾಡುತ್ತಾರೆ. ಆದರೇ ಇಲ್ಲೊಬ್ಬ ವ್ಯಕ್ತಿ ಟೈಂ ಪಾಸಿಗೆಂದು ಶುರುಮಾಡಿದ ಕೆಲಸ ಈಗ ಆತನನ್ನ ಕೋಟ್ಯಾಧೀಶನನ್ನ ಮಾಡಿದೆ. ಈ ಸ್ಟೋರಿ ನೀವೂ ಊಹಿಸಲು ಅಸಾಧ್ಯ‌. ಬನ್ನಿ ಈ ಅಸಮಾನ್ಯ ಯುವಕನ ಅದ್ವಿತೀಯ ಸಾಧನೆ ತಿಳಿಯೋಣ ಬನ್ನಿ.

19 ವರ್ಷದ ಅವಿನಾಶ್ ಆಂದ್ರದವನು. ಇಂಜಿನಿಯರಿಂಗ್ ಕಾಲೇಜಿಗೆ ಪ್ರವೇಶ ಪಡೆದ ಅವಿನಾಶ್ , ಹವ್ಯಾಸಕ್ಕೆಂದು ಇನ್ಸ್ಟಾಗ್ರಾಂ, ಫೇಸ್ ಬುಕ್, ಟ್ವಿಟರ್ ಗಳಲ್ಲಿ ತನ್ನ ಖಾತೆ ತೆರೆದಿದ್ದ. ಖಾತೆಗಳಿಗೆ ಹೆಚ್ಚಿನ ಫಾಲೋವರ್ಸ್ ಪಡೆಯಬೇಕೆಂದು ಒಂದು ಹೊಸ ಉಪಾಯ ಹೂಡಿದ. ಜನರಿಗೆ ಇಷ್ಟವಾಗುವ ಮೀಮ್ಸ್ ಹಾಗೂ ಇಮೇಜ್ ಗಳನ್ನ ಕ್ರಿಯೇಟ್ ಮಾಡಿದ. ನೋಡನೋಡುತ್ತಿದ್ದಂತೆ ಫಾಲೋವರ್ಸ್ ಗಳ ಸಂಖ್ಯೆ ಧೀಡಿರನೇ ಏರಿತು.

ಯಾವಾಗ ಫಾಲೋವರ್ಸ್ ಸಂಖ್ಯೆ ಜಾಸ್ತಿಯಾಗತೊಡಗಿತೋ, ವಿವಿಧ ಕಂಪನಿಗಳು ತಮ್ಮ ಬ್ರಾಂಡ್ ನ್ನು ಸಹ ಪ್ರಚಾರ ಮಾಡಿಕೊಡಿ ಎಂದು ಅವಿನಾಶ್ ಗೆ ದುಂಬಾಲು ಬಿದ್ದವು. ಹಣ ಪಡೆದು ಅವಿನಾಶ್ ಆ ಕಂಪನಿಗಳ ಪ್ರಾಡಕ್ಟ್ ನ ಪ್ರಚಾರ ಮಾಡಿದ. ಈ ಮಧ್ಯೆ ಅವಿನಾಶ್ ಸಾಮಾಜಿಕ ಜಾಲತಾಣಗಳಲ್ಲಿ ಫಾಲೋವರ್ಸ್ ನ ಸುಲಭವಾಗಿ ಹೇಗೆ ಹೆಚ್ಚಿಸಿಕೊಳ್ಳಬಹುದೆಂಬ ಟೆಕ್ನಿಕ್ ತಿಳಿಯಿತು. ತಡಮಾಡದೇ ಈ ಕಂಪನಿಗಳಿಗೂ ಸುಲಭವಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಹೇಗೆ ಮಾರ್ಕೆಟಿಂಗ್ ಮಾಡಬೇಕೆಂಬ ಟೆಕ್ನಿಕ್ ಹೇಳಿಕೊಟ್ಟು, ದಿನಕ್ಕೆ ಎರಡರಿಂದ ನಾಲ್ಕು ಸಾವಿರ ಫೀಸು ಪಡೆದ. ನೋಡನೋಡುತ್ತಿದ್ದಂತೆ ಸುಮಾರು 40 ಕಂಪನಿಗಳು ಅವಿನಾಶ್ ನಿಂದ ಸ್ಟ್ರಾಟಿಜಿ ಟೆಕ್ನಿಕ್ ಹೇಳಿಸಿಕೊಳ್ಳಲು ಮುಂದೆ ಬಂದವು.

ಈ ಸಂಖ್ಯೆ ದ್ವಿಗುಣವಾಯಿತು. ಅವಿನಾಶ್ ತನ್ನ ಫೀಸನ್ನು ಸಹ ಏರಿಸಿಕೊಂಡ. ಆರು ತಿಂಗಳೊಳಗೆ ಬರೋಬ್ಬರಿ 80 ಲಕ್ಷ ಹಣ ಅವಿನಾಶ್ ಖಾತೆಗೆ ಬಂದು ಬಿತ್ತು. ಅಷ್ಟಕ್ಕೆ ಸುಮ್ಮನಾಗದೇ, ತಾನೇ ಒಂದು ತಂಡವನ್ನು ಕಟ್ಟಿಕೊಂಡು ಟೆಕ್ನಿಕ್ ಸರ್ವಿಸ್ ಪ್ರೊವೈಡ್ ಮಾಡಲು ಶುರು ಮಾಡಿದ. ಅಷ್ಟೇ ಅಲ್ಲ ಆನ್ ಲೈನ್ ನಲ್ಲೂ ಸಹ ಕ್ಲಾಸುಗಳನ್ನು ತೆಗೆದುಕೊಂಡು ಅದಕ್ಕೆ 500 ರಿಂದ 1000 ಡಾಲರ್ ಚಾರ್ಜ್ ಮಾಡಲು ಶುರುಮಾಡಿದ. ಕೊನೆಗೆ ಅವಿನಾಶ್ ಮಿಲಿಯನೇರ್ ಆದ. ಟೈಂ ಪಾಸಿಗೆಂದು ಶುರು ಮಾಡಿದ ಹವ್ಯಾಸ ಅವಿನಾಶ್ ರನ್ನ ಇಂದು ಕೋಟ್ಯಾಧೀಶರನ್ನಾಗಿ ಮಾಡಿದೆ. ಓದು ಮುಗಿಸಿ ಹೊರಬರುವ ಒಳಗೆ ಈ ಸಾಧನೆ ಮಾಡಿರುವ ಅವಿನಾಶ್ ಗೆ ಮುಂದಿನ ದಿನಗಳಲ್ಲಿಯೂ ಸಹ ಯಶಸ್ಸು ಸಿಗಲಿ.

Comments are closed.