ಗಂಡಸರು ಕೂಡ ಹೊರಲಾಗಂತಹ ಲಗೇಜ್ ಗಳನ್ನೂ ಹೊರುತ್ತಾ ಕೂಲಿಯಾಗಿ ಕಂಡ ಮಹಿಳೆ ಯಾರೆಂದು ತಿಳಿದಾಗ ಎಲ್ಲರೂ ಶಾಕ್ ಆಗಿದ್ದು ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಸಾಮಾನ್ಯವಾಗಿ ಮನೆಯ ಗಂಡುಮಕ್ಕಳು ಹೊರಗಡೆ ಹೋಗಿ ಕೆಲಸ ಮಾಡಿಕೊಂಡು ಬರುತ್ತಾರೆ ಎಂಬುದನ್ನು ನೀವು ಕೇಳಿರುತ್ತೀರಿ ನೋಡಿರುತ್ತೀರಿ. ಹೆಣ್ಣು ಮಕ್ಕಳು ಸಾಮಾನ್ಯವಾಗಿ ಮನೆಯಲ್ಲಿ ಇದ್ದು ಮನೆಕೆಲಸಗಳನ್ನು ನೋಡಿಕೊಂಡಿರುತ್ತಾರೆ. ಆದರೆ ಇಂದು ನಾವು ಹೇಳಲು ಹೊರಟಿರುವ ಹೆಣ್ಣುಮಗಳ ಕಥೆಯನ್ನು ಕೇಳಿದರೆ ಖಂಡಿತವಾಗಿ ನಿಮ್ಮ ಕಣ್ಣಲ್ಲಿ ನೀರು ಬರುವುದರಲ್ಲಿ ಯಾವುದೇ ಅನುಮಾನವಿಲ್ಲ.

ಸಾಮಾನ್ಯವಾಗಿ ಹೆಣ್ಣು ಮಕ್ಕಳು ಎಂದರೆ ಫ್ಯಾಷನ್ ಲೋಕದಲ್ಲಿ ತಮ್ಮ ಪಾಡಿಗೆ ತಾವಿರುತ್ತಾರೆ. ಅವರಿಗೆ ಸುಖದ ಸುಪ್ಪತ್ತಿಗೆ ಜೀವನವೇ ಬೇಕು ಹೊರತು ಕಷ್ಟಪಡಲು ಹಿಂಜರಿಯುತ್ತಾರೆ. ಹೆಚ್ಚೆಂದರೆ ಮನೆಯ ಕೆಲಸಗಳನ್ನು ಮಾಡಬಹುದು ಇಲ್ಲದೆ ಗೃಹಿಣಿಯಾಗಿ ಇರಬಹುದು. ಆದರೆ ಮನೆಯ ಹೊರಗೆ ಬಂದು ದೊಡ್ಡಮಟ್ಟದ ದೈಹಿಕ ಪರಿಶ್ರಮವನ್ನು ವಿನಿಯೋಗಿಸಿ ಮಾಡುವಂತಹ ಕೆಲಸಗಳನ್ನು ಮಾಡುವುದು 99% ಅನುಮಾನವೇ ಸರಿ. ಆದರೆ ನಾವು ಇಂದು ಹೇಳು ಹೊರಟಿರುವ ಹೆಣ್ಣುಮಗಳ ಖಾತೆಯನ್ನು ಇದರ ತದ್ವಿರುದ್ಧವಾಗಿ ನೀವು ಅರಿತುಕೊಳ್ಳಬೇಕಾಗಿದೆ.

kooli scaled 1 | ಗಂಡಸರು ಕೂಡ ಹೊರಲಾಗಂತಹ ಲಗೇಜ್ ಗಳನ್ನೂ ಹೊರುತ್ತಾ ಕೂಲಿಯಾಗಿ ಕಂಡ ಮಹಿಳೆ ಯಾರೆಂದು ತಿಳಿದಾಗ ಎಲ್ಲರೂ ಶಾಕ್ ಆಗಿದ್ದು ಯಾಕೆ ಗೊತ್ತೇ??
ಗಂಡಸರು ಕೂಡ ಹೊರಲಾಗಂತಹ ಲಗೇಜ್ ಗಳನ್ನೂ ಹೊರುತ್ತಾ ಕೂಲಿಯಾಗಿ ಕಂಡ ಮಹಿಳೆ ಯಾರೆಂದು ತಿಳಿದಾಗ ಎಲ್ಲರೂ ಶಾಕ್ ಆಗಿದ್ದು ಯಾಕೆ ಗೊತ್ತೇ?? 3

ಹೌದು ಗೆಳೆಯರೇ ಇಂದು ನಾವು ಮಾತನಾಡಲು ಹೊರಟಿರುವ ಹೆಣ್ಣುಮಗಳ ಹೆಸರು ಸಂಧ್ಯಾ ಎನ್ನುವುದಾಗಿ. ಈಕೆಯ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಮಟ್ಟದಲ್ಲಿ ವೈರಲ್ ಆಗಿ ಪ್ರತಿಯೊಬ್ಬರ ಬಾಯಿ ಮಾತಾಗಿದ್ದಾರೆ ಎಂದು ಹೇಳಬಹುದಾಗಿದೆ. ಸಂಧ್ಯಾ ಜಬಲ್ಪುರ್ ರೈಲ್ವೆ ಸ್ಟೇಷನ್ ನಲ್ಲಿ ಲಗೇಜನ್ನು ಹೊರುವಂತಹ ಕೂಲಿ ಆಳಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಒಬ್ಬ ಹೆಣ್ಣುಮಗಳು ರೈಲ್ವೆ ಸ್ಟೇಷನ್ ನಲ್ಲಿ ಗಂಡು ಮಕ್ಕಳು ಕೂಡ ಹೊರಲು ಕಷ್ಟವಾಗುವಂತಹ ಲಗೇಜುಗಳನ್ನು ಹೊತ್ತು ಕೆಲಸ ಮಾಡುತ್ತಿರುವುದು ಯಾಕೆ ಎನ್ನುವುದಾಗಿ ನೀವು ಆಶ್ಚರ್ಯವನ್ನು ವ್ಯಕ್ತಪಡಿಸಬಹುದಾಗಿದೆ. ಇದೇ ಪ್ರಶ್ನೆಯನ್ನು ಆಕೆಯ ಬಳಿ ಕೇಳಿದಾಗ ಆಕೆ ನೀಡಿದ ಉತ್ತರ ಎಲ್ಲರ ಕಣ್ಣಲ್ಲಿ ಕೂಡ ನೀರು ಬರುವಂತೆ ಮಾಡಿದೆ. ಅಷ್ಟಕ್ಕೂ ಸಂಧ್ಯಾಳ ಈ ಪರಿಸ್ಥಿತಿಗೆ ಕಾರಣ ಯಾರು ಹಾಗೂ ಏನು ಎನ್ನುವುದನ್ನು ಸವಿವರವಾಗಿ ತಿಳಿಯೋಣ ಬನ್ನಿ.

ಹೌದು ಸ್ನೇಹಿತರೆ ಸಂಧ್ಯಾ ರವರ ಜೀವನ ಕೂಡ ಮೊದಲು ಇಷ್ಟೊಂದು ಕಷ್ಟ ಮಯವಾಗಿರಲಿಲ್ಲ. ಸಂಧ್ಯಾ ಕೂಡ ಮದುವೆಯಾಗಿ ಮೂರು ಮಕ್ಕಳೊಂದಿಗೆ ಗಂಡನ ಜೊತೆಗೆ ಸುಖವಾಗಿ ಜೀವನವನ್ನು ನಡೆಸುತ್ತಿದ್ದರು. ನಾನು ಕೆಲಸಕ್ಕೆ ಹೋಗುತ್ತೇನೆ ಎಂದರೂ ಕೂಡ ಬಿಡದೆ ಗಂಡ ತಾನೇ ನಿಮ್ಮನ್ನೆಲ್ಲ ದುಡಿದು ಸಾಕುತ್ತೇನೆ ನೀನು ಮನೆಯಲ್ಲಿದ್ದುಕೊಂಡು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವ ಕಾರ್ಯವನ್ನು ಮಾಡಿದರೆ ಸಾಕು ಎನ್ನುವುದಾಗಿ ಹೇಳುತ್ತಿದ್ದ.

ಅದೇ ಮಾತಿನಂತೆ ಗಂಡ ಒಂದು ದಿವಸ ಕೆಲಸಕ್ಕೆ ಎಂದು ಹೋದವನು ಮರಳಿ ಬರಲಿಲ್ಲ. ಹೌದು ಆತ ಅವತ್ತು ಕೆಲಸಕ್ಕೆಂದು ಹೋದವನು ಬಂದಿದ್ದು ನಿರ್ಜೀವ ಶ’ವವಾಗಿ. ಅದನ್ನು ನೋಡಿದ ಸಂಧ್ಯಾ ಕುಸಿದು ಬಿದ್ದಿದ್ದಳು. ಗಂಡನಿಲ್ಲದ ಜೀವನವನ್ನು ಹೇಗೆ ಜೀವಿಸಲಿ ಮಕ್ಕಳನ್ನು ಹೇಗೆ ಸಾಕಲಿ ಎನ್ನುವ ದುಗುಡ ದುಮ್ಮಾನಗಳು ಆಕೆಯ ಮನಸ್ಸನ್ನು ಛಿ’ದ್ರ ಗೊಳಿಸಿದವು. ಮಕ್ಕಳಿಗೆ ಒಳ್ಳೆಯ ಜೀವನ ಹಾಗೂ ಶಿಕ್ಷಣವನ್ನು ನೀಡುವಂತಹ ಸಂಪೂರ್ಣ ಜವಾಬ್ದಾರಿ ಈಗ ಸಂಧ್ಯಾ ಮೇಲೆ ಇತ್ತು. ಒಂಟಿ ಮಹಿಳೆ ತನ್ನ ಮಕ್ಕಳೊಂದಿಗೆ ಈ ಪ್ರಪಂಚದಲ್ಲಿ ಹೇಗೆತಾನೆ ಬದುಕಲು ಸಾಧ್ಯ ಹೇಳಿ.

kooli mahile 3 | ಗಂಡಸರು ಕೂಡ ಹೊರಲಾಗಂತಹ ಲಗೇಜ್ ಗಳನ್ನೂ ಹೊರುತ್ತಾ ಕೂಲಿಯಾಗಿ ಕಂಡ ಮಹಿಳೆ ಯಾರೆಂದು ತಿಳಿದಾಗ ಎಲ್ಲರೂ ಶಾಕ್ ಆಗಿದ್ದು ಯಾಕೆ ಗೊತ್ತೇ??
ಗಂಡಸರು ಕೂಡ ಹೊರಲಾಗಂತಹ ಲಗೇಜ್ ಗಳನ್ನೂ ಹೊರುತ್ತಾ ಕೂಲಿಯಾಗಿ ಕಂಡ ಮಹಿಳೆ ಯಾರೆಂದು ತಿಳಿದಾಗ ಎಲ್ಲರೂ ಶಾಕ್ ಆಗಿದ್ದು ಯಾಕೆ ಗೊತ್ತೇ?? 4

ಹೀಗಾಗಿ ಯಾವ ದಾರಿಯೂ ಇಲ್ಲದೆ ಜಬಲ್ಪುರ ರೈಲ್ವೆ ಸ್ಟೇಷನ್ ನಲ್ಲಿ ಲಗೇಜು ಹೊರುವಂತಹ ಕೂಲಿ ಆಳು ಕೆಲಸದಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತಾರೆ. ಕೆಲವೊಮ್ಮೆ ಬಲಿಷ್ಠ ಗಂಡಸರು ಹೊರಲು ಕಷ್ಟವಾಗುವಂತಹ ಭಾರವಾದ ಲಗೇಜುಗಳನ್ನು ಕೂಡ ಅನಾಯಾಸವಾಗಿ ಎತ್ತಿಕೊಂಡು ಹೋಗುತ್ತಾರೆ. ಅವರಿಗೆ ಎಷ್ಟೊಂದು ಶಕ್ತಿ ಸಿಗುವುದು ಮಕ್ಕಳಿಗೆ ಉತ್ತಮ ಜೀವನವನ್ನು ರೂಪಿಸುವ ಬೇಕಾಗಿರುವ ಜವಾಬ್ದಾರಿ ನನ್ನ ಮೇಲಿದೆ ಎನ್ನುವ ನೆನಪಿನಿಂದ. ಹೀಗಾಗಿ ಎಷ್ಟೇ ಬಾರದಿದ್ದರೂ ಎಷ್ಟೇ ಕಷ್ಟವಿದ್ದರೂ ಕೂಡ ಆ ಕೆಲಸವನ್ನು ಸಲೀಸಾಗಿ ಮಾಡುತ್ತಾ ಹೋಗುತ್ತಿದ್ದಾರೆ.

ಈ ಕುರಿತಂತೆ ಮಾಧ್ಯಮದವರು ಸಂಧ್ಯಾ ರವರ ಬಳಿ ಕೇಳಿದಾಗ ನನಗೆ ಯಾವ ಕೆಲಸವು ಕೂಡ ಚಿಕ್ಕದಲ್ಲ ನನ್ನ ಮಕ್ಕಳ ಜೀವನ ದೃಷ್ಟಿಯಿಂದ ಎಲ್ಲಾ ಕೆಲಸವನ್ನು ಕೂಡ ನಾನು ಮಾಡಲು ಸಿದ್ದಳಾಗಿದ್ದೇನೆ. ಅವರಿಗೆ ಉತ್ತಮ ಜೀವನ ಹಾಗೂ ಶಿಕ್ಷಣ ನೀಡುವುದು ನನ್ನ ಜೀವನದ ಪರಮಗುರಿ ಎಂಬುದಾಗಿ ಮಾತನಾಡಿದ್ದಾರೆ. ನಿಜಕ್ಕೂ ಕೂಡ ಜೀವನದಲ್ಲಿ ಇಷ್ಟೊಂದು ಕಷ್ಟವಿದ್ದರೂ ಆಕೆ ತಮ್ಮ ಮಕ್ಕಳಿಗಾಗಿ ಪಡುತ್ತಿರುವ ಕಷ್ಟ ನಿಜಕ್ಕೂ ಕೂಡ ಪ್ರತಿಯೊಬ್ಬರ ಕಣ್ಣಿನಲ್ಲಿ ನೀರು ತರಿಸುವಂತಹ ನೈಜ ಘಟನೆಯಾಗಿದೆ. ನಿಜಕ್ಕೂ ಕೂಡ ಸಂಧ್ಯಾಳ ಪರಿಶ್ರಮ ಹಾಗೂ ತ್ಯಾಗಕ್ಕೆ ನಾವು ಸಲಾಂ ಹೊಡೆಯಲೇ ಬೇಕು.

Comments are closed.