ಬೇರೆ ಏನು ಬೇಡ, ಇದೊಂದು ಬದಲಾವಣೆ ಮಾಡಿದರೆ ಸಾಕು, ಆರ್ಸಿಬಿ ತಂಡ ಕಪ್ ಗೆಲ್ಲಲಿದೆ ಎಂದ ಕ್ರಿಕೆಟ್ ಪಂಡಿತರು. ಯಾವುದು ಆ ಬದಲಾವಣೆ ಗೊತ್ತೇ??

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಮಾರ್ಚ್ ತಿಂಗಳ ಕೊನೆಯಲ್ಲಿ ಆರಂಭವಾಗಿರುವಂತಹ ಈ ಬಾರಿಯ ಐಪಿಎಲ್ ಈಗಾಗಲೇ ಟೂರ್ನಮೆಂಟ್ ನ ಅರ್ಧಕ್ಕೆ ಬಂದು ನಿಂತಿದೆ ಎಂದು ಹೇಳಬಹುದಾಗಿದೆ. ಹೌದು ಮೊದಲಾರ್ಧ ಈಗಾಗಲೇ ಮುಗಿದಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗಾಗಲೇ ಏಳು ಪಂದ್ಯಗಳಲ್ಲಿ 5 ಪಂದ್ಯಗಳನ್ನು ಗೆದ್ದು 10 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ ನಲ್ಲಿ ಎರಡನೇ ಸ್ಥಾನದಲ್ಲಿ ಮಿಂಚುತ್ತಿದೆ.

ಇನ್ನು ದ್ವಿತೀಯಾರ್ಧದಲ್ಲಿ ಮೊದಲ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಾಲ್ಕು ಸತತ ಗೆಲುವನ್ನು ದಾಖಲಿಸಿರುವ ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಆಡಲಿದೆ. ಹೀಗಾಗಿ ತಂಡಕ್ಕೆ ಕಠಿಣ ಪ್ರತಿರೋಧ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ. ಪೇಪರ್ ಮೇಲೆ ಇಷ್ಟೊಂದು ಸ್ಟ್ರಾಂಗ್ ಆಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಒಂದೇಒಂದು ವೀಕ್ನೆಸ್ಸ್ ಎಂದರೆ ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯುವ ಉದಯೋನ್ಮುಖ ಓಪನಿಂಗ್ ಬ್ಯಾಟ್ಸ್ ಮನ್ ಆಗಿರುವ ಅನುಜ್ ರಾವತ್. ಹೌದು ಗೆಳೆಯರೆ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಅರ್ಧಶತಕ ಬಾರಿಸಿದ್ದನ್ನು ಬಿಟ್ಟರೆ ಬೇರೆ ಯಾವ ಪಂದ್ಯಗಳಲ್ಲಿ ಕೂಡ ಹೇಳಿಕೊಳ್ಳುವಷ್ಟು ಬ್ಯಾಟಿಂಗ್ ಪ್ರದರ್ಶನವನ್ನು ನೀಡಿಲ್ಲ. ಇದು ಕೊಂಚ ಮಟ್ಟಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

rcb 2022 3 | ಬೇರೆ ಏನು ಬೇಡ, ಇದೊಂದು ಬದಲಾವಣೆ ಮಾಡಿದರೆ ಸಾಕು, ಆರ್ಸಿಬಿ ತಂಡ ಕಪ್ ಗೆಲ್ಲಲಿದೆ ಎಂದ ಕ್ರಿಕೆಟ್ ಪಂಡಿತರು. ಯಾವುದು ಆ ಬದಲಾವಣೆ ಗೊತ್ತೇ??
ಬೇರೆ ಏನು ಬೇಡ, ಇದೊಂದು ಬದಲಾವಣೆ ಮಾಡಿದರೆ ಸಾಕು, ಆರ್ಸಿಬಿ ತಂಡ ಕಪ್ ಗೆಲ್ಲಲಿದೆ ಎಂದ ಕ್ರಿಕೆಟ್ ಪಂಡಿತರು. ಯಾವುದು ಆ ಬದಲಾವಣೆ ಗೊತ್ತೇ?? 3

ಒಟ್ಟಾರೆಯಾಗಿ ಹೇಳುವುದಾದರೆ ಅನುಜ್ ರಾವತ್ ರವರು ಪವರ್ ಪ್ಲೇ ನಲ್ಲಿ ಆಡುತ್ತಿರುವಾಗಲೇ ಔಟ್ ಆಗುತ್ತಿದ್ದಾರೆ. ಏಳು ಪಂದ್ಯಗಳಿಂದ ಕೇವಲ 116 ಎಸೆತಗಳನ್ನು ಎದುರಿಸಿದ ಕೇವಲ 129 ರನ್ನುಗಳನ್ನು ಬಾರಿಸಿದ್ದಾರೆ. ಇವರ ಕಾರಣದಿಂದಾಗಿಯೇ ನಾಯಕ ಹಾಗೂ ಓಪನಿಂಗ್ ಬ್ಯಾಟ್ಸ್ ಮನ್ ಆಗಿರುವ ಡುಪ್ಲೆಸಿಸ್ ರವರು ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡುವ ಪರಿಸ್ಥಿತಿ ಎದುರಾಗಿದೆ. ಇನ್ನು ಬೆಂಗಳೂರು ತಂಡದ ಮತ್ತೊಂದು ತಲೆ ನೋ’ವಿನ ವಿಚಾರವೆಂದರೆ ವಿರಾಟ್ ಕೊಹ್ಲಿ ರವರ ಕಳಪೆ ಫಾರ್ಮ್. ಇವೆರಡು ವಿಚಾರಗಳು ತಂಡದ ಉಳಿದ ಆಟಗಾರರ ಮೇಲೆ ಕೂಡ ಪ್ರಭಾವವನ್ನು ಬೀರುತ್ತಿದೆ.

ಇಷ್ಟೆಲ್ಲ ಕೊರತೆಗಳ ನಡುವೆ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಧ್ಯಮ ಕ್ರಮಾಂಕದ ಹಾಗೂ ಕೊನೆಯ ಕ್ರಮಾಂಕದ ಆಟಗಾರರು ಅಂದರೆ ಗ್ಲೆನ್ ಮ್ಯಾಕ್ಸ್ವೆಲ್ ಶಾಬಾಜ್ ಅಹಮದ್ ಹಾಗೂ ದಿನೇಶ್ ಕಾರ್ತಿಕ್ ರವರು ತಂಡದ ಬ್ಯಾಟಿಂಗ್ ಕ್ರಮಾಂಕವನ್ನು ನಿಭಾಯಿಸುತ್ತಿದ್ದಾರೆ. ಹೀಗಾಗಿಯೇ ತಂಡದ ಬ್ಯಾಟಿಂಗ್ ಕೊರತೆ ಎದ್ದು ಕಾಣುತ್ತಿಲ್ಲ. ಆದರೆ ಗುರಿಯನ್ನು ಚೇಸಿಂಗ್ ಮಾಡುವ ವೇಳೆ ಆರಂಭಿಕ ಆಟಗಾರರು ಬೇಗನೆ ಔಟಾದರೆ ತಂಡದ ಮೊರಾಲ್ ಡೌನ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ಈಗಾಗಲೇ ದ್ವಿತೀಯಾರ್ಧ ಆರಂಭವಾಗಲಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆರಂಭಿಕ ಆಟಗಾರರಲ್ಲಿ ಕೆಲವೊಂದು ಬದಲಾವಣೆ ಮಾಡುವ ಸಾಧ್ಯತೆ ಇದೆ.

ಇನ್ನು ಆರಂಭಿಕ ಆಟಗಾರರ ಆಯ್ಕೆಗೆ ಸಿಗುವಂತಹ ಆಪ್ಷನ್ ಗಳನ್ನು ನೋಡಿದರೆ ಫಿನ್ ಅಲೆನ್ ಸುಯಶ್ ಪ್ರಭುದೇಸಾಯಿ ಹಾಗೂ ಮಹಿಪಾಲ್ ಲೋಮ್ರೋರ್. ಅಲೆನ್ ರವರಿಗೆ ಅವಕಾಶನೀಡಿದರೆ ಈಗಾಗಲೆ ತಂಡದಲ್ಲಿ ಆಡುತ್ತಿರುವ ಅಂತಹ ಒಬ್ಬ ವಿದೇಶಿ ಆಟಗಾರನಿಗೆ ಕೋಕ್ ನೀಡಬಹುದಾದಂತಹ ಸಾಧ್ಯತೆ ಇರುತ್ತದೆ. ಸುಯಶ್ ಈಗಾಗಲೇ ತಂಡದಲ್ಲಿ ಆಡಿರುವಂತಹ ಅನುಭವ ಅವರಿಗಿದೆ. ಹೀಗಾಗಿ ಅವರಿಗೆ ಓಪನಿಂಗ್ ಮಾಡುವ ಅವಕಾಶವನ್ನು ನೀಡಿದರೆ ತಂಡದಲ್ಲಿ ಮತ್ತೊಬ್ಬ ಆಲ್-ರೌಂಡರ್ ಸಂಖ್ಯೆ ಕೂಡ ಹೆಚ್ಚಾಗಲಿದೆ. ಈ ಮೂಲಕ ತಂಡದಲ್ಲಿ ಅವರು ಬದಲಿ ಬೌಲರ್ ಆಗಿ ಕೂಡ ಕಾರ್ಯ ನಿರ್ವಹಿಸಬಹುದಾಗಿದೆ.

anuj rawat | ಬೇರೆ ಏನು ಬೇಡ, ಇದೊಂದು ಬದಲಾವಣೆ ಮಾಡಿದರೆ ಸಾಕು, ಆರ್ಸಿಬಿ ತಂಡ ಕಪ್ ಗೆಲ್ಲಲಿದೆ ಎಂದ ಕ್ರಿಕೆಟ್ ಪಂಡಿತರು. ಯಾವುದು ಆ ಬದಲಾವಣೆ ಗೊತ್ತೇ??
ಬೇರೆ ಏನು ಬೇಡ, ಇದೊಂದು ಬದಲಾವಣೆ ಮಾಡಿದರೆ ಸಾಕು, ಆರ್ಸಿಬಿ ತಂಡ ಕಪ್ ಗೆಲ್ಲಲಿದೆ ಎಂದ ಕ್ರಿಕೆಟ್ ಪಂಡಿತರು. ಯಾವುದು ಆ ಬದಲಾವಣೆ ಗೊತ್ತೇ?? 4

ಇನ್ನು ವಿರಾಟ್ ಕೊಹ್ಲಿ ರವರನ್ನು ಕೂಡ ಓಪನರ್ ಆಗಿ ಆಡಿಸಿದರೆ ಅವರ ಕಳಪೆ ಫಾರ್ಮ್ ನಿಂದ ಹೊರ ಬರುವಂತಹ ಎಲ್ಲಾ ಸಾಧ್ಯತೆಗಳು ಕೂಡ ಇದೆ ಎಂದು ಹೇಳಬಹುದಾಗಿದೆ. ಓಪನರ್ ಆಗಿ ಆಡಿದರೆ ಅವರಿಗೆ ಜವಾಬ್ದಾರಿಯ ವತ್ತಡ ಕಡಿಮೆಯಾಗಲಿದ್ದು ನಿರಾಳವಾಗಿ ಬ್ಯಾಟ್ ಬೀಸ ಬಹುದಾದಂತಹ ಅವಕಾಶ ದೊರೆಯಲಿದೆ. ಹೀಗಾಗಿ ಈಗಾಗಲೇ ದ್ವಿತೀಯಾರ್ಧ ಪ್ರಾರಂಭವಾಗಿದ್ದು ಇದಕ್ಕೂ ಮುನ್ನವೇ ಆರಂಭಿಕ ಆಟಗಾರರ ಕಾಂಬಿನೇಷನ್ ನಲ್ಲಿ ಎಲ್ಲಾ ವಿಚಾರಗಳನ್ನು ಸರಿಪಡಿಸಿಕೊಂಡರೆ ಖಂಡಿತವಾಗಿ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.