ಪುಷ್ಪ ಸಿನೆಮಾದ ರೆಕಾರ್ಡ್ ಗಳನ್ನೂ ಬ್ರೇಕ್ ಮಾಡುತ್ತಿರುವಾಗ ಕೆಜಿಎಫ್-2 ಸಿನಿಮಾ ನೋಡಿ ಅಲ್ಲು ಅರ್ಜುನ್ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮೆಲ್ಲರ ಕನ್ನಡ ಚಿತ್ರರಂಗದ ಹೆಮ್ಮೆಯ ಚಿತ್ರವಾಗಿರುವ ಕೆಜಿಎಫ್ ಚಾಪ್ಟರ್ 2 ಚಿತ್ರ ಈಗಾಗಲೇ ಬರೋಬ್ಬರಿ ಒಂದು ವಾರವನ್ನು ಮುಗಿಸಿ ಎರಡನೇ ವಾರಕ್ಕೆ ಕಾಲಿಟ್ಟಿದೆ ಎಂದು ಹೇಳಬಹುದಾಗಿದೆ. ಈಗಾಗಲೇ ಬಾಕ್ಸಾಫೀಸ್ ನಲ್ಲಿ 750 ಕೋಟಿಗೂ ಅಧಿಕ ಬಾಕ್ಸಾಫೀಸ್ ಕಲೆಕ್ಷನ್ ಮಾಡಿರುವ ಕೆಜಿಎಫ್ ಚಾಪ್ಟರ್ 2 ಚಿತ್ರ ಸಾವಿರ ಕೋಟಿ ಕಲೆಕ್ಷನ್ ಮಾಡುವ ಗುರಿಯತ್ತ ಮುನ್ನುಗುತ್ತಿದೆ. ನಿಜಕ್ಕೂ ಕೂಡ ಕನ್ನಡ ಚಿತ್ರರಂಗದ ಒಂದು ಚಿತ್ರ ಇಂತಹ ದೊಡ್ಡ ಸಾಧನೆಯನ್ನು ಮಾಡುತ್ತದೆ ಎಂಬುದಾಗಿ ಯಾರು ಕೂಡ ಊಹಿಸಿಕೊಳ್ಳಲು ಸಾಧ್ಯವಿಲ್ಲ.

ರಾಕಿಂಗ್ ಸ್ಟಾರ್ ಯಶ್ ಹಾಗೂ ಪ್ರಶಾಂತ್ ನೀಲ್ ಅವರ ಕನಸಿಗೆ ವಿಜಯ್ ಕಿರಗಂದೂರು ರವರು ನಿಜವಾದ ಬೆಂಬಲವಾಗಿ ನಿಂತು ಕೇವಲ ಅವರ ಮಾರುಕಟ್ಟೆಯನ್ನು ಮಾತ್ರವಾಗದೆ ಕನ್ನಡ ಚಿತ್ರರಂಗದ ಮಾರುಕಟ್ಟೆಯನ್ನು ಕೂಡ ವಿಸ್ತರಿಸಿದ್ದಾರೆ. ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ವೀಕ್ಷಿಸಿರುವ ಪರಭಾಷೆ ಸೆಲೆಬ್ರಿಟಿಗಳು ಕೂಡ ಈಗಾಗಲೆ ಚಿತ್ರದ ಕುರಿತಂತೆ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ. ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ಹೊಗಳುವ ಸರದಿ ಈಗ ತೆಲುಗು ಚಿತ್ರ ರಂಗದ ಸ್ಟೈಲಿಶ್ ಹಾಗೂ ಐಕಾನಿಕ್ ಸ್ಟಾರ್ ಆಗಿರುವ ಅಲ್ಲು ಅರ್ಜುನ್ ಅವರದ್ದಾಗಿದೆ. ಹೌದು ಗೆಳೆಯರೇ ಅಲ್ಲು ಅರ್ಜುನ್ ರವರು ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ವೀಕ್ಷಿಸಿದ್ದು ತಮ್ಮ ಅಭಿಪ್ರಾಯವನ್ನು ಈ ಕುರಿತಂತೆ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಅಲ್ಲು ಅರ್ಜುನ್ ರವರು ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ವೀಕ್ಷಿಸಿ ಏನು ಅಂದಿದ್ದಾರೆ ಅನ್ನುವುದನ್ನು ತಿಳಿಯೋಣ ಬನ್ನಿ.

kgf2 yash allu arjun | ಪುಷ್ಪ ಸಿನೆಮಾದ ರೆಕಾರ್ಡ್ ಗಳನ್ನೂ ಬ್ರೇಕ್ ಮಾಡುತ್ತಿರುವಾಗ ಕೆಜಿಎಫ್-2 ಸಿನಿಮಾ ನೋಡಿ ಅಲ್ಲು ಅರ್ಜುನ್ ಹೇಳಿದ್ದೇನು ಗೊತ್ತೇ??
ಪುಷ್ಪ ಸಿನೆಮಾದ ರೆಕಾರ್ಡ್ ಗಳನ್ನೂ ಬ್ರೇಕ್ ಮಾಡುತ್ತಿರುವಾಗ ಕೆಜಿಎಫ್-2 ಸಿನಿಮಾ ನೋಡಿ ಅಲ್ಲು ಅರ್ಜುನ್ ಹೇಳಿದ್ದೇನು ಗೊತ್ತೇ?? 2

ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ವೀಕ್ಷಿಸಿರುವ ಅಲ್ಲುಅರ್ಜುನ್ ರವರು ಅದ್ಭುತ ಗೆಲುವು ಸಾಧಿಸಿರುವ ಕೆಜಿಎಫ್ ಚಾಪ್ಟರ್ 2 ಚಿತ್ರತಂಡಕ್ಕೆ ಶುಭಾಶಯಗಳು ಹಾಗೂ ರಾಕಿಂಗ್ ಸ್ಟಾರ್ ಯಶ್ ಸಂಜಯ್ ದತ್ ರವೀನ ತಂಡನ್ ಶ್ರೀನಿಧಿ ಶೆಟ್ಟಿ ರವರ ನಟನೆ ಅತ್ಯುತ್ತಮವಾಗಿದೆ. ಸಂಗೀತದಲ್ಲಿ ರವಿ ಬಸ್ರೂರು ರವರ ಚಾಕಚಕ್ಯತೆ ಕಣ್ಮನವನ್ನು ಸೆಳೆಯುತ್ತಿದೆ. ಭುವನ್ ಗೌಡರವರ ಸಿನಿಮಾಟೋಗ್ರಾಫಿ ಅವರ ಕ್ಯಾಮೆರಾ ಕೈಚಳಕದಲ್ಲಿ ಪ್ರತಿಯೊಂದು ಪ್ರೇಮ್ ಕೂಡ ಅದ್ಭುತವಾಗಿ ಮೂಡಿಬಂದಿದೆ ಎಂಬುದಾಗಿ ಹೇಳಿದ್ದಾರೆ. ಇಷ್ಟು ಮಾತ್ರವಲ್ಲದೆ ಚಿತ್ರದ ನಿರ್ದೇಶಕರಾಗಿರುವ ಪ್ರಶಾಂತ್ ನೀಲ್ ರವರ ಕಲ್ಪನಾ ಶೈಲಿ ಹಾಗೂ ನಿರ್ದೇಶನ ಶಕ್ತಿಯನ್ನು ಅಲ್ಲು ಅರ್ಜುನ್ ರವರು ಹಾಡಿಹೊಗಳಿದ್ದಾರೆ. ಮತ್ತು ಚಿತ್ರಕ್ಕಾಗಿ ದುಡಿದಿರುವ ಎಲ್ಲ ತಂತ್ರಜ್ಞರಿಗೂ ಹಾಗೂ ಕಲಾವಿದರಿಗೂ ಕೂಡ ತನ್ನ ಗೌರವವನ್ನು ಅರ್ಪಿಸಿದ್ದಾರೆ. ನಿಜಕ್ಕೂ ಕೂಡ ಪರಭಾಷಾ ಸೆಲೆಬ್ರಿಟಿಗಳು ಕೂಡ ನಮ್ಮ ಚಿತ್ರವನ್ನು ಹೋಗುತ್ತಿರುವುದು ನಮ್ಮ ಕನ್ನಡ ಚಿತ್ರರಂಗದ ಹಿರಿಮೆಯನ್ನು ಮತ್ತಷ್ಟು ಮೇಲೆತ್ತುವಂತೆ ಮಾಡಿದೆ.

Comments are closed.