ಬೇರೆ ಎಲ್ಲ ಸಿನಿಮಾ ನಿಲ್ಲಿಸಿ ಪುಷ್ಪ 2 ಗೆ ಹೊಸ ಟಾರ್ಗೆಟ್ ನೊಂದಿಗೆ ಮುಂದೆ ಬಂದ ಅಲ್ಲು ಅರ್ಜುನ್, ಆ ಟಾರ್ಗೆಟ್ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಲಾಕ್ ಡೌನ್ ಮುಗಿದನಂತರ ಮೊತ್ತಮೊದಲು ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಿದ ಚಿತ್ರವೆಂದರೆ ಅದು ಅಲ್ಲು ಅರ್ಜುನ್ ನಟನೆಯ ಪುಷ್ಪ ಚಿತ್ರ. ಈಗಾಗಲೇ ನಿಮಗೆಲ್ಲ ತಿಳಿದಿರುವಂತೆ ಪುಷ್ಪಾ ಚಿತ್ರದ ಎಲ್ಲಾ ದಾಖಲೆಯನ್ನು ಕೂಡ ಇತ್ತೀಚಿಗಷ್ಟೇ ಬಿಡುಗಡೆಯಾಗಿರುವ ರಾಜಮೌಳಿ ನಿರ್ದೇಶನದ ಜೂನಿಯರ್ ಎನ್ಟಿಆರ್ ಹಾಗೂ ರಾಮಚರಣ್ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಆರ್ ಆರ್ ಆರ್ ಚಿತ್ರ ಅಳಿಸಿಹಾಕಿದೆ.

ಇದಾದ ನಂತರ ಇತ್ತೀಚಿಗಷ್ಟೇ ಬಿಡುಗಡೆಯಾಗಿರುವ ನಮ್ಮ ಕನ್ನಡ ಚಿತ್ರರಂಗದ ಹೆಮ್ಮೆಯ ಚಿತ್ರವಾಗಿರುವ ಪ್ರಶಾಂತ್ ನೀಲ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಕೆಜಿಎಫ್ ಚಾಪ್ಟರ್ 2 ಚಿತ್ರ ಕೂಡ ಭಾರತೀಯ ಬಾಕ್ಸ್ ಆಫೀಸ್ ಇತಿಹಾಸದಲ್ಲಿ ತನ್ನದೇ ಆದಂತಹ ಹೊಸ ಇತಿಹಾಸವನ್ನು ನಿರ್ಮಿಸುತ್ತಿದೆ. ನೀನು ಈಗಾಗಲೇ ಪುಷ್ಪ ಚಿತ್ರದ ಎರಡನೇ ಭಾಗ ಕೂಡ ಅತಿ ಶೀಘ್ರದಲ್ಲೇ ಚಿತ್ರೀಕರಣ ಆರಂಭಿಸಲಿದೆ.

pushpa 2 | ಬೇರೆ ಎಲ್ಲ ಸಿನಿಮಾ ನಿಲ್ಲಿಸಿ ಪುಷ್ಪ 2 ಗೆ ಹೊಸ ಟಾರ್ಗೆಟ್ ನೊಂದಿಗೆ ಮುಂದೆ ಬಂದ ಅಲ್ಲು ಅರ್ಜುನ್, ಆ ಟಾರ್ಗೆಟ್ ಏನು ಗೊತ್ತೇ??
ಬೇರೆ ಎಲ್ಲ ಸಿನಿಮಾ ನಿಲ್ಲಿಸಿ ಪುಷ್ಪ 2 ಗೆ ಹೊಸ ಟಾರ್ಗೆಟ್ ನೊಂದಿಗೆ ಮುಂದೆ ಬಂದ ಅಲ್ಲು ಅರ್ಜುನ್, ಆ ಟಾರ್ಗೆಟ್ ಏನು ಗೊತ್ತೇ?? 2

ಈ ಸಂದರ್ಭದಲ್ಲಿ ಅಲ್ಲು ಅರ್ಜುನ್ ರವರು ಪುಷ್ಪ ಚಿತ್ರದ ಎರಡನೇ ಭಾಗದ ಚಿತ್ರೀಕರಣ ಮುಗಿಯುವವರೆಗೂ ಕೂಡ ಬೇರೆ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎನ್ನುವ ನಿಯಮವನ್ನು ಹಾಕಿಕೊಂಡಿದ್ದಾರೆ. ಇಷ್ಟು ಮಾತ್ರವಲ್ಲದೆ ಸುಕುಮಾರ ನಿರ್ದೇಶನದ ಪುಷ್ಪ ಚಿತ್ರದ ಎರಡನೇ ಭಾಗದ ಚಿತ್ರತಂಡದವರು ಈಗಾಗಲೇ ಒಂದು ಟಾರ್ಗೆಟ್ ಕೂಡ ಫಿಕ್ಸ್ ಮಾಡಿಕೊಂಡಿದ್ದಾರೆ. ಹೌದು ಈಗಾಗಲೇ ಭಾರತೀಯ ಚಿತ್ರರಂಗದಲ್ಲಿ ಈ ವರ್ಷ ಆರ್ ಆರ್ ಆರ್ ಹಾಗೂ ಕೆಜಿಎಫ್ ಚಾಪ್ಟರ್ 2 ಚಿತ್ರಗಳು ನಿರ್ಮಿಸಿರುವ ದಾಖಲೆಯನ್ನು ಹಾಗೂ ಬಾಕ್ಸಾಫೀಸ್ ಕಲೆಕ್ಷನ್ ರೆಕಾರ್ಡನ್ನು ಮುರಿಯುವ ಟಾರ್ಗೆಟ್ ಅನ್ನು ಪುಷ್ಪ ಚಿತ್ರದ ಎರಡನೇ ಭಾಗ ಈಗಾಗಲೇ ಹಾಕಿಕೊಂಡಿದೆಯಂತೆ. ಇದಕ್ಕಾಗಿ ಚಿತ್ರತಂಡ ಈಗಾಗಲೇ ಎಲ್ಲಾ ಸದ್ಯತೆಗಳನ್ನು ಮಾಡಿಕೊಂಡಿದ್ದು ಇದಕ್ಕಾಗಿ ಅವಿರತ ಪ್ರಯತ್ನವನ್ನು ಮಾಡಲು ಸಿದ್ಧವಾಗಿದೆ. ಇದು ಎಷ್ಟರಮಟ್ಟಿಗೆ ನಿಜವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Comments are closed.