ಎಲ್ಲಾ ಕಡೆ ಗಾಳಿಸುದ್ದಿಗಳು ಹರಡುತ್ತಿರುವ ಸಮಯದಲ್ಲಿ ತಮ್ಮ ಆರೋಗ್ಯದ ಬಗ್ಗೆ ತಾನೇ ಮಾಹಿತಿ ಹಂಚಿಕೊಂಡ ಶಿವಣ್ಣ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ 3 ಜನರೇಶನ್ ನಿಂದಲೂ ಕೂಡ ನಟಿಸಿಕೊಂಡು ಬರುತ್ತಿರುವಂತಹ ಹಾಗೂ ಈಗಲೂ ಕೂಡ ಅದೇ ಮಟ್ಟದ ಕ್ರೇಜ್ ಹಾಗೂ ಅಭಿಮಾನಿ ಬಳಗವನ್ನು ಹೊಂದಿರುವ ಏಕೈಕ ನಟ ಎಂದರೆ ಅದು ನಮ್ಮೆಲ್ಲರ ನೆಚ್ಚಿನ ಕರುನಾಡ ಚಕ್ರವರ್ತಿ ಶಿವಣ್ಣ. ಹೌದು ಗೆಳೆಯರೇ ಶಿವಣ್ಣ ಅಂದಿನಿಂದಲೂ ಕೂಡ ಕನ್ನಡ ಚಿತ್ರರಂಗದಲ್ಲಿ ತಮ್ಮ ನಟನೆ ನೃತ್ಯ ಹಾಗೂ ಸಾಹಸಗಳ ಮೂಲಕ ಅಪಾರವಾದ ಅಭಿಮಾನಿ ಬಳಗವನ್ನು ಹೊಂದಿರುವವರು. ಇಂದಿಗೂ ಕೂಡ ವಯಸ್ಸು ಐವತ್ತು ದಾಟಿದ್ದರು 25ರ ಹರೆಯದ ಯುವಕನಂತೆ ಚಾರ್ಮಿಂಗ್ ಹಾಗೂ ಸೂಪರ್ ಆಕ್ಟಿವ್ ಆಗಿ ನಟನೆ ಮಾಡುತ್ತಾರೆ.

ಅದಕ್ಕಾಗಿಯೇ ಶಿವಣ್ಣ ಇಂದಿಗೂ ಕೂಡ ಎಲ್ಲರಿಗೂ ಇಷ್ಟ ಆಗೋದು. ಈ ವಯಸ್ಸಿನಲ್ಲಿ ಕೂಡ ಅವರು ತಮ್ಮ ನಟನಾ ವೃತ್ತಿಗೆ ತೋರಿಸುವಂತಹ ಕಾಳಜಿ ಹಾಗೂ ಗೌರವ ಮತ್ತು ಡೆಡಿಕೇಶನ್ ಎಂತಹ ಯುವನಟರನ್ನು ಕೂಡ ನಾಚಿಸುತ್ತಿದೆ ಹಾಗೂ ಇನ್ನಷ್ಟು ಸಾಧಿಸಬೇಕೆನ್ನುವ ಪ್ರೇರೇಪಣೆ ನೀಡುತ್ತದೆ. ಇನ್ನು ಶಿವಣ್ಣನವರ ಕುರಿತಂತೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಗಾಳಿಸುದ್ದಿಗಳು ಓಡಾಡುತ್ತಿದ್ದವು. ಶಿವಣ್ಣನವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಸುದ್ದಿಗಳು ಕೂಡ ಅಭಿಮಾನಿಗಳಲ್ಲಿ ಚಿಂತೆಯನ್ನು ಮೂಡಿಸಿದ್ದವು. ಇದಕ್ಕೆ ಈಗ ಸ್ವತಹ ಶಿವಣ್ಣನವರ ಮಾಧ್ಯಮದ ಮುಂದೆ ಬಂದು ಪ್ರತಿಕ್ರಿಯೆ ನೀಡಿದ್ದಾರೆ.

ಹೌದು ಈ ವಿಷಯದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಶಿವಣ್ಣ ಕೇವಲ ಹೃದಯದ ಚಕಪ್ ಗಾಗಿ ಬಂದಿದ್ದೇನೆ ಅಷ್ಟೇ. ವೈದ್ಯರು ಚೆಕಪ್ ಗಾಗಿ ಸಲಹೆ ನೀಡಿದ್ದರು ನಾನು ಸಾಮಾನ್ಯವಾಗಿ ಮೂರು ನಾಲ್ಕು ತಿಂಗಳಿಗೊಮ್ಮೆ ಹೃದಯದ ತಪಾಸಣೆ ಮಾಡಿಸುತ್ತೇನೆ ಅದೇ ರೀತಿಯಲ್ಲಿ ಈಗ ಕೂಡ ಮಾಡಿದ್ದೇನೆ. ಇದರಲ್ಲಿ ಚಿಂತೆ ಕೊಡುವ ವಿಷಯ ಬೇರೆ ಏನು ಇಲ್ಲ ಎಂಬುದಾಗಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಕುಟುಂಬದವರೆಲ್ಲರಿಗೂ ಕೂಡ ಹೃದಯದ ಸಮಸ್ಯೆ ಇರುವುದನ್ನು ಕೂಡ ಉಲ್ಲೇಖಿಸಿದ್ದಾರೆ. ತಪಾಸಣೆ ಮುಗಿಸಿಕೊಂಡು ಬಂದಿರುವ ಶಿವಣ್ಣ ತಮ್ಮ ಮುಂದಿನ ಚಿತ್ರದ ಚಿತ್ರೀಕರಣಕ್ಕಾಗಿ ಅತಿಶೀಘ್ರದಲ್ಲಿ ಚಿತ್ರತಂಡವನ್ನು ಸೇರಿಕೊಳ್ಳಲಿದ್ದೇನೆ ಎಂಬುದಾಗಿ ಕೂಡ ಸಂದರ್ಶನದಲ್ಲಿ ಹೇಳಿದ್ದಾರೆ. ಹೀಗಾಗಿ ಶಿವಣ್ಣನವರ ಅಭಿಮಾನಿಗಳು ಚಿಂತೆ ಪಡುವ ವಿಷಯವೇನು ಇಲ್ಲ ಎಂಬುದಾಗಿ ಹೇಳಬಹುದಾಗಿದೆ.

Comments are closed.