ಬುದ್ದಿವಂತರು ಅಪ್ಪಿ ತಪ್ಪಿಯೂ ಕೂಡ ಈ 5 ವಿಷಯಗಳನ್ನು ಎಂದಿಗೂ ಮಾಡುವುದಿಲ್ಲ, ನೀವು ಮಾಡುತ್ತಿದ್ದಾರೆ ಇಂದೇ ನಿಲ್ಲಿಸಿ. ಯಾವ ವಿಷಯಗಳು ಗೊತ್ತೇ??

ನಮಸ್ಕಾರ ಸ್ನೇಹಿತರೇ ಗೆಲುವು ಯಾರಿಗೆ ಸಿಗುತ್ತದೆ. ಯಾವ ರೀತಿಯ ವ್ಯಕ್ತಿತ್ವ ಹೊಂದಿರುವವರಿಗೆ ಮಾತ್ರ ಈ ಆಧುನಿಕ ಜಗತ್ತಿನಲ್ಲಿ ಅಂದುಕೊಂಡಂತೆ ಜೀವನ ನಡೆಸಲು ಸಾಧ್ಯವಾಗುತ್ತದೆ. ಇದಕ್ಕೆ ಉತ್ತರ ಬುದ್ದಿವಂತರಿಗೆ ಮಾತ್ರ ಇಲ್ಲಿ ಎಲ್ಲಾ ರೀತಿಯ ಬದುಕನ್ನ ಸಾಗಿಸಲು ಸಾಧ್ಯವಾಗುತ್ತದೆ. ಹಾಗಾದರೆ ಈ ಬುದ್ದಿವಂತರು ಯಾವೆಲ್ಲಾ ರೀತಿಯ ವ್ಯಕ್ತಿತ್ವಗಳನ್ನು ಅಳವಡಿಸಿಕೊಂಡಿಸಿಕೊಂಡಿರುತ್ತಾರೆ ಎಂದು ತಿಳಿಯುವುದಾದರೆ. ಬುದ್ದಿವಂತ ವ್ಯಕ್ತಿತ್ವವುಳ್ಳವರು ತಮ್ಮ ನಿಯಂತ್ರಣದಲ್ಲಿ ಇಲ್ಲದ ವಿಚಾರಗಳಿಗೆ ಹೆಚ್ಚು ಗಮನ ಕೊಡುವುದಿಲ್ಲ‌.

ಇದಕ್ಕೆ ಉತ್ತಮ ಉದಾಹರಣೆ ಅಂದರೆ ರಾಜಕೀಯ ವಿಚಾರಗಳ ಬಗ್ಗೆ ಗಂಟೆ ಗಟ್ಟಲೇ ಮಾತನಾಡುವ ಜನರಿಗೆ ತಮ್ಮಿಂದ ಯಾವ ರೀತಿಯಾಗಿ ಇದನ್ನ ನಿಯಂತ್ರಿಸಬಸುದು, ಬದಲಾವಣೆ ತರಬಹುದು ಎಂಬುದನ್ನ ಆಲೋಚಿಸುವುದಕ್ಕಿಂತ ಅನಗತ್ಯ ಚರ್ಚೆಗೆ ಮಾತ್ರ ತಮ್ಮ ಅಮೂಲ್ಯವಾದ ಸಮಯವನ್ನು ವಿನಿಯೋಗಿಸುತ್ತಾರೆ. ಯಾವ ವಿಷಯ ಅಥವಾ ವ್ಯಕ್ತಿ ತನ್ನ ನಿಯಂತ್ರಣದಲ್ಲಿ ಇರುವುದಿಲ್ಲವೋ ಅದರ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳುವುದು ಮೂರ್ಖತನ ಎಂಬುದು ಬುದ್ದಿವಂತರಿಗೆ ಚೆನ್ನಾಗಿಯೇ ಅರಿವಿರುತ್ತದೆ.

ratan tata vivekananda | ಬುದ್ದಿವಂತರು ಅಪ್ಪಿ ತಪ್ಪಿಯೂ ಕೂಡ ಈ 5 ವಿಷಯಗಳನ್ನು ಎಂದಿಗೂ ಮಾಡುವುದಿಲ್ಲ, ನೀವು ಮಾಡುತ್ತಿದ್ದಾರೆ ಇಂದೇ ನಿಲ್ಲಿಸಿ. ಯಾವ ವಿಷಯಗಳು ಗೊತ್ತೇ??
ಬುದ್ದಿವಂತರು ಅಪ್ಪಿ ತಪ್ಪಿಯೂ ಕೂಡ ಈ 5 ವಿಷಯಗಳನ್ನು ಎಂದಿಗೂ ಮಾಡುವುದಿಲ್ಲ, ನೀವು ಮಾಡುತ್ತಿದ್ದಾರೆ ಇಂದೇ ನಿಲ್ಲಿಸಿ. ಯಾವ ವಿಷಯಗಳು ಗೊತ್ತೇ?? 2

ಹಾಗಾಗಿ ಅವರು ತಮ್ಮ ಕೈಯಿಂದ ಸಾಧ್ಯವಾಗದ ವಿಚಾರಗಳಿಗೆ ಮನಸ್ಸು ನೀಡುವುದಿಲ್ಲ. ಇನ್ನು ಈ ಬುದ್ದಿವಂತ ವ್ಯಕ್ತಿಗಳು ತಮ್ಮ ಶಕ್ತಿಯನ್ನು ಮತ್ತೊಬ್ಬರಿಗೆ ನೀಡುವುದಿಲ್ಲ‌. ತಮ್ಮಿಂದ ಇತರರಿಗೆ ಯಾವುದಾದರೂ ರೀತಿಯಲ್ಲಿ ತೊಂದರೆ ಅಥವಾ ಅವರಿಂದ ತಮಗೆ ಅನಗತ್ಯ ತೊಂದರೆ ಆಗಿದ್ದರೆ ಒಂದು ಅವರನ್ನ ದೂರ ಇಟ್ಟು ಮುಂದೆ ಸಾಗುತ್ತಾರೆ. ಇಲ್ಲ ಅವರನ್ನು ಕ್ಷಮಿಸುತ್ತಾರೆ. ಅದೆಲ್ಲವನ್ನು ಬಿಟ್ಟು ಅದು ತನಗೆ ಯಾವ ರೀತಿಯಾಗಿಯೂ ಸಮಸ್ಯೆಯನ್ನು ಮಾಡಿಲ್ಲ. ಅದರಿಂದ ನನಗೆ ನಷ್ಟವಾಗಿಲ್ಲ ಎಂದು ಕೆಟ್ಟದನ್ನ ಮರೆತು ನೆಮ್ಮದಿ ಜೀವನದತ್ತ ಮನಸ್ಸು ಮಾಡುತ್ತಾರೆ.

ಎಲ್ಲರನ್ನು ಸಂತೋಷ ಪಡಿಸುವ ಅಗತ್ಯ ಇರುವುದಿಲ್ಲ ಎಂಬುದನ್ನ ಬುದ್ದಿವಂತ ವ್ಯಕ್ತಿಗಳು ಅಳವಡಿಸಿಕೊಂಡಿರುತ್ತಾರೆ. ಒಬ್ಬ ವ್ಯಕ್ತಿ ಎಲ್ಲಾರನ್ನು ತೃಪ್ತಿ ಪಡಿಸಲು ಸಾಧ್ಯವಾಗುವುದಿಲ್ಲ. ನಾವು ಮಾಡುವ ಕೆಲಸಗಳು ಒಬ್ಬರಿಗೆ ಖುಷಿ ಆದರೆ ಮತ್ತೊಬ್ಬರಿಗೆ ನೋವು ಅಥವಾ ಅಸೂಹೆ ಹೊಟ್ಟೆ ಕಿಚ್ಚನ್ನು ಉಂಟು ಮಾಡುತ್ತದೆ. ಇದರಿಂದ ನಮಗೆ ಆಗಬೇಕಾದ್ದು ಏನೂ ಇರುವುದಿಲ್ಲ‌. ನಮ್ಮ ಆತ್ಮ ತೃಪ್ತಿ ಮತ್ತು ಆರ್ಥಿಕ ತೃಪ್ತಿ ಆಗಿದ್ದರೆ ಸಾಕು ಎಂಬುದು ಬುದ್ದಿವಂತರ ಪ್ರಮುಖ ಗುಣದಲ್ಲಿ ಒಂದಾಗಿರುತ್ತದೆ. ಯಾವ ವ್ಯಕ್ತಿ ತನಗಿಂತ ಉತ್ತಮವಾಗಿ ಸಧೃಢ ಸಾಮರ್ಥ್ಯವಾಗಿ ಐಷಾರಾಮಿ ಜೀವನ ನಡೆಸುತ್ತಿರುತ್ತಾರೋ ಅವರನ್ನ ಕಂಡು ಅಸೂಹೆ ಪಡುವುದಿಲ್ಲ.

ಅದನ್ನು ಹೊರತು ಪಡಿಸಿ ಅವರಲ್ಲಿನ ಮೌಲ್ಯಯುತ ಗುಣಗಳನ್ನು ಅಳವಡಿಸಕೊಳ್ಳುತ್ತಾರೆ. ಅವರಿಂದ ನಮ್ಮ ಜೀವನದಲ್ಲಿ ಬದಲಾಯಿಸಿಕೊಳ್ಳಬೇಕಾದ ದೋಷಗಳನ್ನ ಸರಿ ಪಡಿಸಿಕೊಳ್ಳುತ್ತಾರೆ. ಯಾವುದಕ್ಕೂ ಕೂಡ ತಕ್ಷಣ ಪ್ರತಿಕ್ರಿಯೆ ನೀಡದೆ ಸಮಾಧಾನದಿಂದ ತಮ್ಮ ಕೆಲಸದ ಮೂಲಕ ಉತ್ತರ ನೀಡುತ್ತಾರೆ. ಬುದ್ದಿವಂತ ಜನರು ಯಾವುದೇ ಕಾರಣಕ್ಕೂ ಗತಿಸಿ ಹೋದ ದಿನಗಳನ್ನ, ಸಂಗತಿಗಳ ಬಗ್ಗೆ ಕೊರಗಿ ಕೂರುವುದಿಲ್ಲ. ಅದನ್ನು ಭೂತ ಕಾಲದಲ್ಲಿ ಆದ ಕೆಟ್ಟದ್ದು ಅಥವಾ ಒಳ್ಳೆಯದನ್ನು ಮರೆತು ಆದಷ್ಟು ಮರೆತು ಭವಿಷ್ಯದ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಇಂತಹ ಅನೇಕ ಉತ್ತಮ ಸಕರಾತ್ಮಕ ಕಾರಣಗಳಿಂದ ಬುದ್ದವಂತ ಜನರು ಸದಾ ಚಟುವಟಿಕೆಯಿಂದ ಕೂಡಿರುತ್ತಾರೆ.

Comments are closed.