ತಾವೊಬ್ಬರು ಟೀಚರ್ ಎಂದು ಕೂಡ ಆಲೋಚನೆ ಮಾಡದೆ ಮಕ್ಕಳ ಜೊತೆ ಮಸ್ತ್ ಡಾನ್ಸ್ . ಹೀಗಾ ಡಾನ್ಸ್ ಮಾಡೋದು?? ಹೇಗಿದೆ ವಿಡಿಯೋ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಮನೆಯಲ್ಲಿ ಪೋಷಕರು ಬಿಟ್ಟರೆ ಮಕ್ಕಳಿಗೆ ಹೆಚ್ಚು ಕಂಡುಬರುವುದೇ ಅವರ ಶಾಲೆಯ ಗುರುಗಳು ಎಂದು ಹೇಳಬಹುದಾಗಿದೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಪೋಷಕರಗಿಂತ ಹೆಚ್ಚಾಗಿ ಶಿಕ್ಷಕರು ಮಕ್ಕಳಿಗೆ ಬದುಕಿನ ಕುರಿತಂತೆ ಹೆಚ್ಚಿನ ಪಾಠಗಳನ್ನು ನೀಡುತ್ತಾರೆ. ಒಂದು ಕಾಲದಲ್ಲಿ ನಾವು ಚಿಕ್ಕ ಮಕ್ಕಳು ಇರಬೇಕಾದರೆ ಗುರುಗಳ ಕುರಿತಂತೆ ಭಯ-ಭಕ್ತಿಯನ್ನುವುದು ಹೆಚ್ಚಾಗಿತ್ತು. ಒಂದು ಕಾಲದಲ್ಲಿ ನಾವು ತಪ್ಪು ಮಾಡಿದರೂ ಕೂಡ ಶಾಲೆಗೆ ಹೋಗುವುದಕ್ಕೆ ಹಿಂಜರಿಕೆ ಮಾಡುತ್ತಿದ್ದೆವು.

ಅಂದಿನ ಕಾಲದಲ್ಲಿ ಚಿಕ್ಕ ತಪ್ಪನ್ನು ಕೂಡ ನಾವು ಗುರುಗಳ ಗಮನಕ್ಕೆ ಬಾರದು ಎನ್ನುವ ಹಾಗೆ ಅದನ್ನು ಕಾಪಾಡಿಕೊಂಡು ಬರುತ್ತಿದ್ದೆವು. ಆದರೆ ಇಂದಿನ ಕಾಲದ ಮಕ್ಕಳಿಗೆ ಗುರುಗಳ ಕುರಿತಂತೆ ನಮಗೆ ಇದ್ದಷ್ಟು ಭಯ-ಭಕ್ತಿ ಇಲ್ಲ ಎನ್ನುವುದನ್ನು ಇತ್ತೀಚಿನ ಕೆಲ ದಿನಗಳಲ್ಲಿ ನಡೆಯುತ್ತಿರುವಂತಹ ವಿದ್ಯಮಾನಗಳನ್ನು ವೀಕ್ಷಿಸಿದರೆ ಖಂಡಿತವಾಗಿ ಮನದಟ್ಟಾಗುತ್ತದೆ. ಅದರಲ್ಲೂ ಕೆಲವೊಂದು ನಿಯಮಗಳು ಶಿಕ್ಷಕರು ಮಕ್ಕಳೊಂದಿಗೆ ಹದವಾಗಿ ವರ್ತಿಸುವಂತೆ ಮಾಡಿದೆ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಹೀಗಾಗಿ ಇತ್ತೀಚಿನ ಮಕ್ಕಳು ಶಿಕ್ಷಕರೊಂದಿಗೆ ಶಿಕ್ಷಕರ ಸಂಬಂಧಕ್ಕಿಂತ ಹೆಚ್ಚಾಗಿ ಸ್ನೇಹಿತರ ಸಂಬಂಧವನ್ನು ಹೊಂದಿದ್ದಾರೆ ಎಂದು ಹೇಳಬಹುದಾಗಿದೆ. ಅದಕ್ಕೆ ಪೂರಕ ಎನ್ನುವಂತೆ ಇತ್ತೀಚಿಗಷ್ಟೇ ವೈರಲ್ ಆಗಿರುವ ವಿಡಿಯೋವೊಂದು ಇದಕ್ಕೆ ಉತ್ತಮ ಉದಾಹರಣೆ ಎಂದು ಹೇಳಬಹುದಾಗಿದೆ.

ಇಷ್ಟೊಂದು ಸಲಿಗೆ ಶಿಕ್ಷಕ ಹಾಗೂ ಶಿಷ್ಯರ ನಡುವೆ ಒಳ್ಳೆಯದಲ್ಲ ಎಂದು ಅನ್ನಬಹುದು. ಸದ್ಯಕ್ಕೆ ಇದು ಯಾವುದೇ ವ್ಯತಿರಿಕ್ತ ಪರಿಣಾಮವನ್ನು ಬೀರದೆ ಇರಬಹುದು ಆದರೆ ಮುಂದಿನ ದಿನಗಳಲ್ಲಿ ಪ್ರತಿಯೊಂದು ವಿಚಾರಗಳಲ್ಲಿ ಕೂಡ ಶಿಕ್ಷಕರನ್ನು ಗಂಭೀರವಾಗಿ ಪರಿಗಣಿಸುವ ಕೆಲಸವನ್ನು ವಿದ್ಯಾರ್ಥಿಗಳು ಮಾಡುವುದಿಲ್ಲ. ಹೌದು ಇತ್ತೀಚಿಗಷ್ಟೇ ವೈರಲ್ ಆಗಿರುವ ವಿಡಿಯೋದಲ್ಲಿ ಫೇರ್ ವೆಲ್ ಪಾರ್ಟಿಯಲ್ಲಿ ಶಿಕ್ಷಕಿಯೊಬ್ಬರ ಜೊತೆಗೆ ಹುಡುಗ ಡ್ಯಾನ್ಸ್ ಮಾಡಿರುವಂತಹ ವಿಡಿಯೋ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಹಸ್ರಾರು ವೀಕ್ಷಣೆಗಳನ್ನು ವಿಡಿಯೋ ಪಡೆದಿದೆ. ನಮ್ಮ ಪ್ರಕಾರ ಇಷ್ಟೊಂದು ಸಲಿಗೆಯನ್ನು ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ಇಟ್ಟುಕೊಳ್ಳುವುದು ಸರಿಯಲ್ಲ. ನಿಮ್ಮ ಅಭಿಪ್ರಾಯ ಹಾಗೂ ಅನಿಸಿಕೆಗಳನ್ನು ವಿಡಿಯೋ ಕುರಿತಂತೆ ಏನೆಂಬುದನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.