ಬಿಡದಿಯಿಂದ ಹೋಡಿ ಹೋಗಿ ತನ್ನದೇ ಕೈಲಾಸ ಕಟ್ಟಿರುವ ನಿತ್ಯಾನಂದ ದೇಶದಲ್ಲಿ ಏನೆಲ್ಲಾ ರೂಲ್ಸ್ ಗಳು ಗೊತ್ತೇ?? ಜನರು, ಹೆoಗಸರು ಹೇಗಿರುತ್ತಾರೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಹತ್ತು ವರ್ಷಗಳ ಹಿಂದೆ ನೀವು ಹೋದರೆ ಒಂದು ವಿಚಾರ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಹೌದು ಹೌದು ಯಾವುದು ಅಲ್ಲ ರಾಮನಗರದ ಬಿಡದಿ ಸಮೀಪದಲ್ಲಿರುವ ನಿತ್ಯಾನಂದ ಸ್ವಾಮೀಜಿ ಆಶ್ರಮದ ಕುರಿತಂತೆ ನಾವು ಮಾತನಾಡುತ್ತಿರುವುದು. ನಿತ್ಯಾನಂದ ಸ್ವಾಮಿ ಮೂಲತಃ ತಮಿಳುನಾಡಿನವರು. ಬಿಡದಿಯ ಸಮೀಪದಲ್ಲಿ ಆಶ್ರಮವನ್ನು ಮಾಡಿಕೊಂಡು ವಾಸಿಸುತ್ತಿದ್ದವರು. ಇಲ್ಲಿಗೆ ಅವರನ್ನು ನೋಡಲು ಕನ್ನಡ ತಮಿಳು ಚಿತ್ರರಂಗದ ಖ್ಯಾತ ನಟ-ನಟಿಯರು ಸೇರಿದಂತೆ ವಿದೇಶಿಗರು ಕೂಡ ಆಗಮಿಸುತ್ತಿದ್ದರು.

ಅವರನ್ನು ಕಳ್ಳ ಸ್ವಾಮಿ ಎಂಬುದಾಗಿ ಕೂಡ ಹಲವಾರು ವಿಚಾರಗಳಿಂದ ಅಂದರೆ ನಟಿ ರಂಜಿತ ರವರ ಸುದ್ದಿಯಿಂದ ಕರೆಯಲಾಗುತ್ತಿತ್ತು. ಆದರೆ ರಂಜಿತಾ ರವರ ಪ್ರಕರಣದಲ್ಲಿ ಸರಿಯಾದ ಸಾಕ್ಷ್ಯಾಧಾರಗಳು ಇಲ್ಲದಿದ್ದ ಕಾರಣ ಅವರನ್ನು ಬಂಧ ಮುಕ್ತರನ್ನಾಗಿ ಮಾಡಲಾಗಿತ್ತು. ನಂತರ ಇವರು ಇತ್ತೀಚೆಗೆ ಸುದ್ದಿಯಾಗಿದ್ದು ಅಮೆರಿಕದ ಈಕ್ವೆಡಾರ್ ದ್ವೀಪದ ಬಳಿ ಇರುವ ದ್ವೀಪವನ್ನು ಕೈಲಾಸ ಎನ್ನುವ ದೇಶವನ್ನಾಗಿ ಪರಿವರ್ತಿಸಿರುವ ಹಿನ್ನೆಲೆಯಲ್ಲಿ. ಈಗಾಗಲೇ ಯುನೈಟೆಡ್ ನೇಷನ್ಸ್ ನಿಂದ ಪರ್ಮಿಷನ್ ಕೂಡ ಬರುತ್ತಿದ್ದು ಮುಂದಿನ ದಿನಗಳಲ್ಲಿ ಕೈಲಾಸ ದೇಶ ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಹೊಂದಲಿದೆ ಎಂಬುದಾಗಿ ಕೇಳಿಬರುತ್ತಿದೆ. ಇನ್ನು ಈ ದೇಶದ ಕುರಿತಂತೆ ಇರುವಂತಹ ಕೆಲವೊಂದು ಗೌಪ್ಯ ವಿಚಾರಗಳನ್ನು ನಿಮ್ಮ ಮುಂದೆ ಹೇಳಲು ಹೊರಟಿದ್ದೇವೆ.

ಇಲ್ಲಿಗೆ ಹೋಗಲು ನೀವು ಮೊದಲು ಅವರನ್ನು ಇಮೇಲ್ ಮೂಲಕ ಸಂಪರ್ಕಿಸ ಬೇಕಾಗಿರುತ್ತದೆ. ನಂತರ ಅವರ ಅಧಿಕೃತ ಒಪ್ಪಿಗೆಯ ಮೇರೆಗೆ ಮೊದಲು ಆಸ್ಟ್ರೇಲಿಯಾ ಏರ್ಪೋರ್ಟ್ಗೆ ಹೋಗಬೇಕಾಗುತ್ತದೆ. ಅಲ್ಲಿಂದ ಕೈಲಾಸದ ಪ್ರೈವೇಟ್ ಜೆಟ್ ವಿಮಾನ ವಾಗಿರುವ ಗರುಡ ಬರುತ್ತದೆ ಅಲ್ಲಿಂದ ಕೈಲಾಸಕ್ಕೆ ಹೋಗಬೇಕಾಗುತ್ತದೆ. ಕೈಲಾಸದಲ್ಲಿ ನಿಮಗೆ ಇರಲು ಮೂರುದಿನ ಮಾತ್ರ ಅವಕಾಶ ನೀಡಲಾಗುತ್ತದೆ.

ಮೂರು ದಿನಕ್ಕಿಂತ ಹೆಚ್ಚಿನ ವೀಸ ನೀಡಲಾಗುವುದಿಲ್ಲ ಎನ್ನುವುದಾಗಿ ಸ್ವತಹ ನಿತ್ಯಾನಂದ ಸ್ವಾಮಿ ಅವರು ಹೇಳಿಕೊಂಡಿದ್ದಾರೆ. ಮೂರು ದಿನಗಳ ನಂತರ ವಸತಿ ಊಟ ಎಲ್ಲವನ್ನೂ ಉಚಿತವಾಗಿ ನೀಡಲಾಗುತ್ತದೆ ನಂತರ ನಿಮ್ಮನ್ನು ಮೂರು ದಿನಗಳ ನಂತರ ಆಸ್ಟ್ರೇಲಿಯಾಗೆ ಬಿಡಲಾಗುತ್ತದೆ. ಅಲ್ಲಿಂದ ಭಾರತಕ್ಕೆ ನೀವು ಬರಬಹುದಾಗಿದೆ. ಇನ್ನು ಈ ದೇಶದಲ್ಲಿ ಪ್ರತಿಯೊಬ್ಬರೂ ಕೂಡ ಅಲ್ಲಿ ಹೇಳಲಾಗಿರುವ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ದೈನಂದಿನ ಜೀವನದಲ್ಲಿ ಯೋಗಾಭ್ಯಾಸ ದೇವರ ಪೂಜೆ ನೃತ್ಯಾಭ್ಯಾಸ ಗಳನ್ನು ಹಾಗೂ ಕೆಲವು ಕೆಲಸಗಳನ್ನು ಕೂಡ ವಹಿಸಿರುತ್ತಾರೆ ಅದನ್ನು ಪೂರೈಸಿ ಬೇಕಾಗಿರುತ್ತದೆ. ಇದು ಅಲ್ಲಿ ನೆಲೆಸಿರುವ ನಾಗರಿಕರಿಗೆ ಇರುವಂತಹ ಜವಾಬ್ದಾರಿಯಾಗಿದೆ.

Comments are closed.