ಯಾವುದೇ ಫ್ರಿಡ್ಜ್ ಇಲ್ಲದೇ ದೀರ್ಘಕಾಲದ ವರೆಗೆ ಹಸಿಮೆಣಸು ಕೆಡದಂತೆ ಇಡಬಹುದು, ಹೇಗೆ ಗೊತ್ತೇ?? ಸರಳ ಟ್ರಿಕ್.

ನಮಸ್ಕಾರ ಸ್ನೇಹಿತರೇ ಹಸಿ ಮೆಣಸಿನಕಾಯಿಯನ್ನು ಬಳಸದೇ ಇರುವವರ್ಯಾರು!? ಕೆಲವರಿಗೆ ಹೆಚ್ಚಿನ ಖಾರ ಬೇಕಾದರೆ ಇನ್ನೂ ಕೆಲವರಿಗೆ ಕಡಿಮೆ ಖಾರ ಸಾಕಾಗುತ್ತದೆ. ಆದರೆ ಹಸಿ ಮೆಣಸಿಗೆ ಇರುವ ಸುವಾಸನೆಯೇ ಬೇರೆ, ಕೆಲವು ಪದಾರ್ಥಗಳಿಗೆ ಹಸಿ ಮೆಣಸನ್ನು ಹಾಕಿದರೆ ಮಾತ್ರ ರುಚಿ. ಕೇವಲ ಖಾರಕ್ಕೆ ಮಾತ್ರವಲ್ಲ ಅದರ ಪರಿಮಳಕ್ಕೂ ಕೂಡ ಬಳಸುತ್ತಾರೆ. ಸಾಮಾನ್ಯವಾಗಿ ದಿನ ನಿತ್ಯ ತಯಾರಿಸುವ ಎಲ್ಲಾಅಡ್ಗೆಗಳಲ್ಲಿಯೂ ಒಂದು ತುಂಡು ಹಸಿಮೆಣಸು ಹಾಕುವುದು ಫಿಕ್ಸ್.

ಇನ್ನು ಉತ್ತರ ಕರ್ನಾಟಕದ ಕಡೆಗೆ ಬಂದರೆ ಅಲ್ಲಿ ಹಸಿ ಮೆಣಸು ಇಲ್ಲದೇ ಅಡುಗೆಯೇ ಇಲ್ಲ. ಇನ್ನು ನಮ್ಮ ಪಕ್ಕದ ರಾಜ್ಯ ಆಂದ್ರ ಪ್ರದೇಶದಲ್ಲಿ ಬೇರೆ ಯಾವ ತರಕಾರಿ ಇಲ್ಲದಿದ್ದರೂ ಪರವಾಗಿಲ್ಲ ಹಸಿಮೆಣಸು ಬೇಕೇ ಬೇಕು ಅಡುಗೆಗೆ. ಆದರೆ ಹಸಿ ಮೆಣಸು ಬೇಗ ಹಾಳಾಗಿ ಬಿಡುತ್ತದೆ. ಕೊಳೆತುಹೋಗುತ್ತದೆ. ಆದ್ದರಿಂದ ಮತ್ತೆ ಮತ್ತೆ ಮಾರುಕಟ್ಟೆಗೆ ಹಸಿಮೆಣಸು ತರಲು ಹೋಗದಂತೆ ಈ ಟಿಪ್ಸ್ ಗಳನ್ನು ಅನುಸರಿಸಿ.

ಹಸಿ ಮೆಣಸನ್ನು ವಾರಗಟ್ಟಲೇ ಹಾಳಾಗದಂತೆ ಹೇಗಿಡಬೇಕು ಎಂದರೆ, ಹಸಿಮೆಣಸನ್ನು ಒಂದು ಕಾಗದದಲ್ಲಿ ಸುತ್ತಿ ನಂತರ ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿಡಿ. ನಂತರ ಫ್ರಿಡ್ಜ್ ನಲ್ಲಿಡಿ. ಹೀಗೆ ಮಾಡಿದರೆ ಒಂದು ವಾರದ ವರೆಗೆ ಹಸಿ ಮೆಣಸು ಹಾಳಾಗುವುದಿಲ್ಲ. ಇನ್ನು ಸುಮಾರು 15 ದಿನಗಳವರೆಗೆ ಹಸಿ ಮೆಣಸು ಕೆಡದಂತೆ ಹೇಗಿಡಬೇಕು? ಇಲ್ಲಿದೆ ಟಿಪ್ಸ್.

ಹಸಿ ಮೆಣಸಿನ ಕಾಯನ್ನು ತಂದು ಮೊದಲು ಚೆನ್ನಾಗಿ ತೊಳೆಯಿರಿ. ಅದರಲ್ಲಿ ಈಗಾಗಲೇ ಕೊಳೆತ ಅಥವಾ ಹಾಳಾದ ಹಸಿಮೆಣಸಿದ್ದರೆ ತೆಗೆದು ಹಾಕಿ. ಇನ್ನು ತೊಳೆದ ಹಸಿಮೆಣಸನ್ನು ಒಂದು ಬಟ್ಟೆಯ ಮೇಲೆ ಹಾಕಿ. ಅದರಲ್ಲಿರುವ ಸಂಪೂರ್ಣ ನೀರಿನ ಅಂಶವನ್ನು ತೆಗೆಯಿರಿ. ಇದರ ತೊಟ್ಟನ್ನು ತೆಗೆದು ಜೀಪ್ ಲ್ಯಾಕ್ ಇರುವ ಕವರ್ ನಲ್ಲಿ ಹಾಕಿ ಫ್ರಿಡ್ಜ್ ನಲ್ಲಿಡಿ. ಇನ್ನು ಒಂದು ತಿಂಗಳವರೆಗೂ ಹಸಿ ಮೆಣಸು ಕೆಡದೆ ಇಡಲು ಹಸಿಮೆಣಸಿನ ಪೇಸ್ಟ್ ತಯಾರಿಸಿ ಗಾಳಿಯಾಡದ ಚೀಲ ಅಥವಾ ಡಬ್ಬದಲ್ಲಿ ಸಂಗ್ರಹಿಸಿಡಿ. ಈ ಎಲ್ಲಾ ಟಿಪ್ಸ್ ಗಳನ್ನು ಅನುಸರಿಸಿದರೆ ಹಸಿ ಮೆಣಸನ್ನು ಬೇಕಾದಾಗ ಬಳಸಬಹುದು.

Comments are closed.