ದಿಡೀರ್ ಎಂದು ಕೇವಲ 10 ನಿಮಿಷಗಳಲ್ಲಿ ಬಾಯಿ ಚಪ್ಪರಿಸಿ ತಿನ್ನುವ ಜೀರಾ ರೈಸ್ ಮಾಡುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಮನೆಯಲ್ಲಿಯೇ ರುಚಿಕರವಾದ ಹಲವಾರು ಬಗೆಯ ರೈಸ್ ಬಾತ್ ಗಳನ್ನು ಮಾಡಬಹುದು. ಅದರಲ್ಲಿ ಕೆಲವು ಬಗೆಯ ರೈಸ್ ಬಾತ್ ಗಳನ್ನಂತೂ ಅತ್ಯಂತ ಬೇಗ ಮಾಡಿಬಿಡಬಹುದು. ಅದರಲ್ಲಿ ಒಂದು ಜೀರಾ ರೈಸ್. ಬನ್ನಿ ಹತ್ತೇ ಹತ್ತು ನಿಮಿಷಗಳಲ್ಲಿ ಜೀರಾ ರೈಸ್ ಹೇಗೆ ಮಾಡೋದು ಅಂತ ನೋಡೋಣ.

ಜೀರಾ ರೈಸ್ ಮಾಡಲು ಬೇಕಾಗುವ ಸಾಮಾಗ್ರಿಗಳು: 1 ಕಪ್- ಬಾಸುಮತಿ ಅಕ್ಕಿ, 2 ಕಪ್-ನೀರು, 1 ಟೇಬಲ್ ಸ್ಪೂನ್- ತುಪ್ಪ, 1-ಪಲಾವ್ ಎಲೆ, 1 ಇಂಚು ಚಕ್ಕೆ, 4-ಲವಂಗ, 1 ಟೀ ಸ್ಪೂನ್- ಜೀರಿಗೆ, 1 ಹಸಿಮೆಣಸು, ರುಚಿಗೆ ತಕ್ಕಷ್ಟು-ಉಪ್ಪು, 2 ಟೇಬಲ್ ಸ್ಪೂನ್- ಕೊತ್ತಂಬರಿಸೊಪ್ಪು.

jeera rice | ದಿಡೀರ್ ಎಂದು ಕೇವಲ 10 ನಿಮಿಷಗಳಲ್ಲಿ ಬಾಯಿ ಚಪ್ಪರಿಸಿ ತಿನ್ನುವ ಜೀರಾ ರೈಸ್ ಮಾಡುವುದು ಹೇಗೆ ಗೊತ್ತೇ??
ದಿಡೀರ್ ಎಂದು ಕೇವಲ 10 ನಿಮಿಷಗಳಲ್ಲಿ ಬಾಯಿ ಚಪ್ಪರಿಸಿ ತಿನ್ನುವ ಜೀರಾ ರೈಸ್ ಮಾಡುವುದು ಹೇಗೆ ಗೊತ್ತೇ?? 2

ಜೀರಾ ರೈಸ್ ಮಾಡುವ ವಿಧಾನ: ಬಾಸುಮತಿ ಅಕ್ಕಿಯನ್ನು ಚೆನ್ನಾಗಿ ತೊಳೆದು 20 ನಿಮಿಷಗಳ ಕಾಲ ನೆನೆಸಿಡಿ. (ಸಾಮಾನ್ಯ ಅಕ್ಕಿ ತೆಗೆದುಕೊಂಡರೆ ಗ್ಯಾಸ್ ಮೇಲೆ ಇಷ್ಟು ಹೊತ್ತು ನೆನೆಸಿಡಬೇಕಾಗಿಲ್ಲ) ಈಗ ಬಾಣಲೆ ಇಟ್ಟು ಅದಕ್ಕೆ ತುಪ್ಪ ಹಾಕಿ ಬಿಸಿ ಮಾಡಿ. ನಂತರ ಅದಕ್ಕೆ ಪಲಾವ್ ಎಲೆ, ಚಕ್ಕೆ, ಲವಂಗ ಹಾಕಿ. ಈಗ ಜೀರಿಗೆ ಹಾಕಿ. ಇದು ಸ್ವಲ್ಪ ಸಿಡಿದಾಗ ಹಸಿಮೆಣಸನ್ನು ಕತ್ತರಿಸಿ ಹಾಕಿ ಸ್ವಲ್ಪ ಫ್ರೈ ಮಾಡಿಕೊಳ್ಳಿ.

ಈಗ ಅಕ್ಕಿಯನ್ನು ಹಾಕಿ 2 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಫ್ರೈ ಮಾಡಿಕೊಳ್ಳಿ, ನಂತರ ಇದಕ್ಕೆ 2 ಕಪ್ ನೀರು ಹಾಕಿ ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನೀರು ಚೆನ್ನಾಗಿ ಒಂದು ಕುದಿ ಬರಲಿ. ಈಗ ಮುಚ್ಚಳ ಮುಚ್ಚಿ 8 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬೇಯಿಸಿ. (ಇದನ್ನೇ ನೀವು ಕುಕ್ಕರ್ ನಲ್ಲಿ ಮಾಡುವುದಾದರೆ, ಇದೇ ವಿಧಾನ, ಆದರೆ ಕುಕ್ಕರ್ ಮುಚ್ಚಳ ಮುಚ್ಚಿ ೨ ವಿಶಲ್ ಕೂಗಿಸಿ.) ಅಕ್ಕಿ ನೀರನ್ನೆಲ್ಲಾ ಹೀರಿಕೊಂಡು ಉದುರು ಉದುರಾದ ಅನ್ನವಾಗುತ್ತದೆ. ಇದರ ಮೇಲೆ ಕತ್ತರಿಸಿದ ಕೊತ್ತಂಬರಿಸೊಪ್ಪು ಹಾಕಿದರೆ ರುಚಿಯಾದ ಜೀರಾ ರೈಸ್ ಸವಿಯಲು ಸಿದ್ಧ.

Comments are closed.