ಅತಿ ಸುಲಭವಾಗಿ ಆರೋಗ್ಯಕರ ಪನೀರ್ ಪಕೋಡ ಮಾಡುವುದು ಹೇಗೆ ಗೊತ್ತೇ?? ರೆಸಿಪಿ ನೋಡಿ.

ನಮಸ್ಕಾರ ಸ್ನೇಹಿತರೇ ಸಂಜೆಯಾದರೇ ಸಾಕು ಏನಾದ್ರೂ ಬಿಸಿ ಬಿಸಿ ಚಾಟ್ಸ್ ತಿನ್ನಬೇಕು ಎನ್ನೋರಿಗೆ ನಾವು ಒಂದು ಹೊಸ ರುಚಿಯನ್ನ ಪರಿಚಯಿಸುತ್ತಿದ್ದೆವೆ. ಮನೆಯಲ್ಲೇ ಸುಲಭವಾಗಿ ಫಟಾಫಟ್ ಆಗಿ ಮಾಡುವ ಸಂಜೆ ತಿಂಡಿ ಅಂದರೇ ಅದು ಪನ್ನೀರ್ ಪಕೋಡ. ಈರುಳ್ಳಿ ಪಕೋಡ, ಪಾಲಕ್ ಸೊಪ್ಪಿನ ಪಕೋಡ ತಿಂದು ಬೇಜಾರ್ ಆದವರಿಗೆ ಪನ್ನೀರ್ ಪಕೋಡ ಟ್ರೈ ಮಾಡಿ.

ಪನ್ನೀರ್ ಪಕೋಡ ಮಾಡಲು ಬೇಕಾಗುವ ಸಾಮಗ್ರಿಗಳು ಈ ಕೆಳಗಿನಂತಿವೆ. ಶುಂಠಿ ಬೆಳ್ಳುಳ್ಳಿ ಪೇಸ್ಟ್- ಅರ್ಧ ಟೀ ಸ್ಪೂನ್, ಖಾರದ ಪುಡಿ 2 ಟೀ ಸ್ಪೂನ್, ಚಾಟ್ ಮಸಾಲ ಅರ್ಧ ಟೀ ಸ್ಪೂನ್, ಕಸೂರಿ ಮೆಥಿ, ಪನ್ನೀರ್ 1 ಕಪ್, ಕಡಲೆ ಹಿಟ್ಟು ಅರ್ಧ ಕಪ್ , ಅಕ್ಕಿ ಹಿಟ್ಟು- ಅರ್ಧ ಕಪ್ ,ಅರಿಶಿಣ- 1 ಟೀ ಸ್ಪೂನ್ , ಅಡುಗೆ ಎಣ್ಣೆ- 1ಕಪ್ ರುಚಿಗೆ ಉಪ್ಪು.

ಒಂದು ದೊಡ್ಡ ಬೌಲ್ ನಲ್ಲಿ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಮೆಣಸಿನ ಪುಡಿ, ಚಾಟ್ ಮಸಾಲ, ಕಸೂರಿ ಮೆಥಿ, ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಅದಕ್ಕೆ ಚಿಕ್ಕ ಚಿಕ್ಕ ಕಟ್ ಮಾಡಿದ ಪನ್ನೀರ್ ತುಂಡುಗಳನ್ನ ಸೇರಿಸಿ ಕಲಿಸಿಕೊಳ್ಳಬೇಕು.

ಮತ್ತೊಂದು ಬಟ್ಟಲಿನಲ್ಲಿ ಅರಿಶಿಣ, ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಮೆಣಸಿನ ಪುಡಿ, ಚಾಟ್ ಮಸಾಲಾ,ಅಡುಗೆ ಸೋಡಾ ಸೇರಿಸಿ ಚೆನ್ನಾಗಿ ಕಲಸಿ ಮಿಕ್ಸ್ ಮಾಡಿ ಇಟ್ಟುಕೊಳ್ಳಬೇಕು. ನಂತರ ಮಿಕ್ಸ್ ಮಾಡಿಟ್ಟುಕೊಂಡ ಪನ್ನೀರ್ ತುಂಡುಗಳನ್ನ , ಕಲಸಿಟ್ಟ ಹಿಟ್ಟಿನ ಜೊತೆಗೆ ಮಿಕ್ಸ್ ಮಾಡಬೇಕು. ನಂತರ ಬಿಸಿ ಎಣ್ಣೆಯಲ್ಲಿ ಚಿಕ್ಕ ಚಿಕ್ಕ ಉಂಡೆಗಳನ್ನ ಮಾಡಿ, ಕಂದು ಬಣ್ಣ ಬರುವ ತನಕ ಕರಿಯಬೇಕು. ನಂತರ ಬಿಸಿ ಬಿಸಿ ಪನ್ನೀರ್ ಪಕೋಡಾ ಸವಿಯಲು ಸಿದ್ದ. ಪನ್ನೀರ್ ಪಕೋಡಾಗೆ ಹಸಿ ಮೆಣಸಿನಕಾಯಿ ಚಟ್ನಿ ಇದ್ದರೇ ಸವಿಯಲು ಚಂದ. ಜೊತೆಗೊಂದು ಲೋಟ ಬಿಸಿ ಬಿಸಿ ಕಾಫಿ ಇದ್ದರೇ ಸ್ವರ್ಗಕ್ಕೆ ಮೂರು ಗೇಣು.

Comments are closed.