ಒಂದು ಫೋಟೋಯಿಂದಾಗಿ ಭಿಕ್ಷೆ ಬೇಡುತ್ತಿದ್ದಳು ಕೋಟಿ ಕೋಟಿ ಆಸ್ತಿಯ ಒಡತಿಯಾಗಿದ್ದು ಹೇಗೆ ಗೊತ್ತಾ?? ನಿಜಕ್ಕೂ ಶಾಕ್ ಆಗುತ್ತೆ

ನಮಸ್ಕಾರ ಸ್ನೇಹಿತರೇ ಜೀವನ ಎಂಬುದು ಹಲವಾರು ಏರುಪೇರುಗಳಿಂದ ಕೂಡಿರುತ್ತದೆ. ಇಂದು ಬಡವರಾಗಿದ್ದರು ನಾಳೆ ಶ್ರೀಮಂತರಾಗಬಹುದು ಅಥವಾ ಇಂದು ಶ್ರೀಮಂತ ಇದ್ದವರು ನಾಳೆ ಬಡವರ ಆಗಬಹುದು. ವಿಧಿ ಆಟ ಬಲ್ಲವರಾರು ಯಾವಾಗ ಯಾರ ಜೀವನದಲ್ಲಿ ಏನು ನಡೆಯುತ್ತದೆ ಎಂಬುದು ಯಾರಿಗೂ ತಿಳಿದಿರುವುದಿಲ್ಲ. ಏನೋ ಜೀವನದಲ್ಲಿ ಅದೃಷ್ಟವೆಂಬುದು ಯಾವಾಗ ಹೇಗೆ ನಮ್ಮ ಜೀವನಕ್ಕೆ ಬಂದುಬಿಡುತ್ತದೆ ಎಂಬುದು ಕೂಡ ಯಾರಿಗೂ ಗೊತ್ತಿಲ್ಲ.

ಒಬ್ಬೊಬ್ಬರ ಜೀವನದಲ್ಲಿ ಒಂದೊಂದು ರೀತಿ ಅದೃಷ್ಟ ಒಲಿದು ಅವರ ಜೀವನದ ದಿಕ್ಕನ್ನೇ ಬದಲಾಯಿಸುತ್ತದೆ. ಇದೀಗ ಅಂತಹದೇ ಒಂದು ಘಟನೆ ನಡೆದಿದ್ದು ಒಂದಾನೊಂದು ಕಾಲದಲ್ಲಿ ಭಿಕ್ಷೆ ಬೇಡುತ್ತಿದ್ದ ಹೆಣ್ಣುಮಗಳು ಈಗ ಕೋಟಿ ಆಸ್ತಿಯ. ಹೌದು ಇದು ನಿಮಗೆ ಆಶ್ಚರ್ಯ ಮೂಡಿಸಿದರು ಕೂಡ ನಿಜವಾದ ಘಟನೆ. ಇನ್ನು ಆಕೆ ಕೋಟಿಕೋಟಿ ಹಣ ಸಂಪಾದಿಸಿದ್ದು ಹೇಗೆ ಎಂಬುದನ್ನು ಹೇಳಿದರೆ ನೀವು ಆಶ್ಚರ್ಯ ಆಗುವುದು ಖಂಡಿತ. ಹಾಗಾದರೆ ಆಕೆ ಯಾರು? ಅದು ಹೇಗೆ ಕೋಟಿ ಆಸ್ತಿಯ ಒಡತಿಯಾದಳು? ಎಂಬುದನ್ನು ಸಂಪೂರ್ಣವಾಗಿ ತಿಳಿದುಕೊಳ್ಳಲು ಮುಂದೆ ಓದಿ.

ಹೌದು ಐದಾರು ವರ್ಷದ ಹಿಂದೆ ಯುವತಿಯೊಬ್ಬಳು ಬೀದಿಯಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದಳು. ಆದರೆ ಇದೀಗ ಆಕೆ ಕೋಟಿ ಕೋಟಿ ಆಸ್ತಿಯ ಒಡತಿ. ಹೌದು ಆಕೆಯ ಹೆಸರು ರೀಟಾ ಗವಿಯೋಲ. 2016ರಲ್ಲಿ ರೀಟಾ ಫಿಲಿಪಿನೋ ನಗರದ ಲುಕ್ಬಾನ್ ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿದ್ದಳು. ಆಗ ಆಕೆಯ ವಯಸ್ಸು ಕೇವಲ 13 ವರ್ಷ. ಈಕೆಗೆ ಐದು ಜನ ಸಹೋದರ ಸಹೋದರಿಯರಿದ್ದಾರೆ.

ಯಾರು ಕೂಡ ಶಾಲೆಯ ಮುಖ ನೋಡಿದವರಲ್ಲ. ಸಂಪೂರ್ಣ ಕುಟುಂಬವನ್ನು ಸಾಕುವ ಜವಾಬ್ದಾರಿ ಈ ಬಾಲಕಿಯ ಹೆಗಲ ಮೇಲಿತ್ತು. ಒಂದು ಹೊತ್ತಿನ ಊಟಕ್ಕೂ ಕೂಡ ಪರದಾಡುವಂತಹ ಕಿತ್ತು ಬಡತನ ಇವರದಾಗಿತ್ತು. ಕುಟುಂಬದ ನಿರ್ವಹಣೆಗಾಗಿ ಆಕೆ ಭಿಕ್ಷೆ ಬಿಡುತ್ತಿದ್ದಳು. ಆದರೆ ಒಂದೇ ಒಂದು ನಡೆದ ಘಟನೆಯಿಂದ ಆಕೆ ಇಂದು ಕೋಟಿ ಕೋಟಿ ಆಸ್ತಿಯ ಒಡತಿಯಾಗಿದ್ದಾಳೆ. ಹೌದು ಈಕೆ ಈ ರೀತಿ ಶ್ರೀಮಂತ ವಾಗಬೇಕಾದರೆ ಕೇವಲ ಒಂದು ಫೋಟೋ ಕಾರಣವಾಗಿದೆ. ಹೌದು ಒಂದೇ ಒಂದು ಫೋಟೋ ಇಂದಾಗಿ ಇಂದು ಆಕೆ ಸೆಲೆಬ್ರಿಟಿಯಾಗಿದ್ದಾಳೆ.

2016ರಲ್ಲಿ ಲುಕ್ಬಾನ್ ಎಂಬಲ್ಲಿ ಭಾರಿ ದೊಡ್ಡ ಪ್ರಮಾಣದಲ್ಲಿ ಉತ್ಸವವೊಂದು ನಡೆಯುತ್ತಿತ್ತು. ಈ ಉತ್ಸವದಲ್ಲಿ ರೀಟಾ ಭಿಕ್ಷೆ ಬೇಡುತ್ತಿದ್ದಳು. ಉತ್ಸವದ ಫೋಟೋಗಳನ್ನು ತೆಗೆಯಲು ಬಂದ ಒಬ್ಬ ಛಾಯಾಗ್ರಾಹಕ ಈ ಪುಟ್ಟ ಬಾಲಕಿಯ ಸೌಂದರ್ಯ ಕಂಡು ಈಕೆಯ ಫೋಟೋಗಳನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಈ ಫೋಟೋಗಳನ್ನು ನೋಡಿದ ಸಾಕಷ್ಟು ಜನರು ತಮ್ಮ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿ ಆಕೆ ಫೇಮಸ್ ಆದಳು.

ಇನ್ನು ಈ ಪುಟ್ಟ ಬಾಲಕಿಯ ಮುಖದ ಸೌಂದರ್ಯವನ್ನು ಕಂಡ ಜನರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಹೇಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹಾಕಿ ಒಂದು ಸೆಲೆಬ್ರಿಟಿಯಾಗಿಬಿಟ್ಟಳು. ನಂತರ ಈಕೆಗೆ ಹಲವಾರು ಮಾಡೆಲ್ ಗಳು ಆರ್ಥಿಕ ಸಹಾಯ ಮಾಡಿದರು. ಆ ಸಹಾಯವನ್ನು ಪಡೆದ ಈಕೆ ಮಾಡೆಲ್ ಆದಳು. ಸಾಕಷ್ಟು ಜಾಹೀರಾತು ಸೇರಿದಂತೆ ಸಾಕಷ್ಟು ಬ್ರಾಂಡ್ ಗಳಿಗೆ ಮಾಡೆಲ್ ಆದಳು. ನಂತರದಲ್ಲಿ ಸಾಕಷ್ಟು ಅವಕಾಶಗಳು ಈಕೆಯನ್ನು ಹುಡುಕಿಕೊಂಡು ಬಂದವು. ಹೀಗೆ ಈಕೆಗೆ ಅದೃಷ್ಟ ಒಲಿದು ಬಂದು ಇಂದು ಕೋಟಿ ಕೋಟಿ ಮೌಲ್ಯದ ಆಸ್ತಿ ಒಡತಿಯಾಗಿದ್ದಾಳೆ. ಅದೃಷ್ಟ ಎಂದರೆ ಇದೇ ಇರಬೇಕು ಅಲ್ಲವೇ..?

Comments are closed.