News from ಕನ್ನಡಿಗರು

Airtel Plans Kannada: ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬ: ಭರ್ಜರಿ ಆಫರ್ ಕೊಟ್ಟ ಏರ್ಟೆಲ್; ಇದರಲ್ಲಿ ಇರುವ ಲಾಭ ನೋಡಿದರೆ, ಇಂದೇ ರಿಚಾರ್ಜ್ ಮಾಡಿಸ್ತೀರಾ.

220

Airtel Plans Kannada: ಟೆಲಿಕಾಂ ವಲಯದಲ್ಲಿ ಜಿಯೋ, ಏರ್ಟೆಲ್ ಮತ್ತು ವಿ ಒಂದಕ್ಕೊಂದು ಪೈಪೋಟಿ ನೀಡುವ ಮಟ್ಟಕ್ಕೆ ಹೊಸ ಹೊಸ ಆಫರ್ ಗಳನ್ನು ಪರಿಚಯಿಸುತ್ತಿದೆ. ಬಳಕೆದಾರರಿಗೆ ವಿಶೇಷ ಕೊಡುಗೆಗಳನ್ನು ನೀಡುತ್ತಿದೆ ಎಂದೇ ಹೇಳಬಹುದು. ಜಿಯೋ ಮೊದಲಿನಿಂದಲೂ ತನ್ನ ಬಳಕೆದಾರರಿಗೆ ಕಡಿಮೆ ದರದಲ್ಲಿ ಒಳ್ಳೆಯ ಆಫರ್ ಗಳನ್ನು ಒದಗಿಸುವುದರಲ್ಲಿ ಮುಂಚೂಣಿಯಲ್ಲಿದೆ. ಇದೀಗ ಏರ್ಟೆಲ್ ಜಿಯೋ ಗೆ ಪೈಪೋಟಿ ನೀಡಲೆಂದೇ ಹೊಸ ಬಗೆಯ ಆಫರ್ ಗಳನ್ನು, ವಿಶೇಷ ಕೊಡುಗೆಗಳನ್ನು ನೀಡುತ್ತಿದೆ. ಅದರಲ್ಲೂ ಕ್ರಿಕೆಟ್ ಪ್ರೇಮಿಗಳಿಗಂತೂ ಇತ್ತೀಚಿಗೆ ಪರಿಚಯಿಸಿರುವ ಹೊಸ ಆಫರ್ ಗಳು ಭರ್ಜರಿಯಾಗಿ ಇಷ್ಟವಾಗುತ್ತದೆ ಎಂದು ಹೇಳಬಹುದು. ಏರ್ಟೆಲ್ ಕೆಲವು ದಿನಗಳ ಹಿಂದೆಯಷ್ಟೇ ಬ್ಲಾಕ್ ಪ್ಲಾನ್ 699 ರೂಗಳ ಟಿವಿ ಮತ್ತು ಫೈಬರ್ ಬ್ರಾಡ್ ಬ್ಯಾಂಡ್ ಸೇವೆಗಳನ್ನು ಬಯಸುವ ಗ್ರಾಹಕರಿಗೆ ಉತ್ತಮ ಸೌಲಭ್ಯವನ್ನು ನೀಡಿತ್ತು. ಏರ್ಟೆಲ್ ಅಮೆಜಾನ್ ಪ್ರೈಮ್ ವಿಡಿಯೋ ಚಂದಾದಾರರಿಗಾಗಿ ಮೂರು ಹೊಸ ಆಫರ್ ಗಳನ್ನು ನೀಡುತ್ತಿದೆ. ಇದು ನಿಜಕ್ಕೂ ಕ್ರಿಕೆಟ್ ಅಭಿಮಾನಿಗಳಿಗೆ ಅತ್ಯಂತ ಸಂತಸದ ವಿಷಯವಾಗಿದೆ. ಏರ್‌ಟೆಲ್ ಅಮೆಜಾನ್ ಪ್ರೈಮ್ ವಿಡಿಯೋ ಚಂದಾದಾರಿಕೆಗಾಗಿ 699 ರೂ, ರೂ 999 ರೂ, 2999 ಹಾಗೂ 3,359 ರೂ, ನಾಲ್ಕು ಕ್ರಿಕೆಟ್ ಪ್ರಿಪೇಯ್ಡ್ ಯೋಜನೆಗಳನ್ನು ನೀಡುತ್ತಿದೆ.

699 ರೂಗಳ ಪ್ರಿಪೇಡ್ ರಿಚಾರ್ಜ್ 56 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಪ್ರತಿನಿತ್ಯವು ಮೂರು ಜೀಬಿ ಡಾಟಾ ಬಳಸಬಹುದಾಗಿದೆ. ಅನಿಯಮಿತ ಕರೆಯ ಯೋಜನೆಯ ಜೊತೆಗೆ ಅಮೆಜಾನ್ ಪ್ರೈಮ್ ಚಂದಾದಾರಿಕೆ ನೀಡಲಾಗಿದ್ದು, ಈ ಮೂಲಕ ಕ್ರಿಕೇಟ್ ಉಚಿತವಾಗಿ ವೀಕ್ಷಿಸಬಹುದಾಗಿದೆ. 999 ರೂ. ಗಳ ಕ್ರಿಕೆಟ್ ಪ್ರಿಪೇಯ್ಡ್ ಪ್ಲ್ಯಾನ್‌ 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಪ್ರತಿದಿನವೂ 2.5 GB ಡೇಟಾವನ್ನು ಪಡೆಯಬಹುದು. ನೂರು ದೈನಂದಿನ ಎಸ್ಎಂಎಸ್ ಅವಕಾಶವಿದೆ. ಅದೇ ರೀತಿ ಅನಿಯಮಿತ ಕರೆ ಸೌಲಭ್ಯದ ಜೊತೆಗೆ ಅಮೆಜಾನ್ ಪ್ರೈಮ್ ವೀಡಿಯೊ ಚಂದಾದಾರಿಕೆ ಆಯ್ಕೆ ನೀಡಲಾಗಿದೆ. ಈ ಮೂಲಕ ನೀವು ಕ್ರಿಕೆಟ್‌ ವೀಕ್ಷಿಸಬಹುದಾಗಿದೆ. ಇದನ್ನು ಓದಿ..Kannada News: ಮೊದಲ ಪಾದಾರ್ಪಣೆ ವಿಚಾರದಲ್ಲಿಯೇ ಪ್ರೇಮ್ ಮಗಳಿಗೆ ವಿವಾದ ಸೃಷ್ಟಿ: ಅಪ್ಪು, ದರ್ಶನ್ ರವರ ವಿಚಾರ ತೆಗೆದು ಪ್ರೇಮ್ ಹೇಳಿದ್ದೇನು ಗೊತ್ತೇ?

ಏರ್‌ಟೆಲ್‌ನ 2,999 ರೂ. ಗಳ ಕ್ರಿಕೆಟ್ ಪ್ರಿಪೇಯ್ಡ್ ಪ್ಲ್ಯಾನ್‌ ಒಂದು ವರ್ಷದ ಮಾನ್ಯತೆಯೊಂದಿಗೆ ಪ್ರತಿದಿನ 2GB ಡೇಟಾ ಬಳಕೆ ಮಾಡಬಹುದು. ಹಾಗೆಯೇ ಅನಿಯಮಿತ ಕರೆ ಜೊತೆಗೆ 100 ದೈನಂದಿನ ಎಸ್‌ಎಮ್‌ಎಸ್‌ ಪ್ರಯೋಜನ ಲಭ್ಯವಾಗಲಿದೆ. ಇನ್ನುಳಿದಂತೆ, ಅಮೆಜಾನ್ ಪ್ರೈಮ್ ವಿಡಿಯೋ ಚಂದಾದಾರಿಕೆ ಇದ್ದು ವರ್ಷಪೂರ್ತಿ ಕ್ರಿಕೆಟ್ ಅಭಿಮಾನಿಗಳು ಕ್ರಿಕೆಟ್ ನೋಡಬಹುದಾಗಿದೆ. ಏರ್‌ಟೆಲ್ 3,359ರೂ. ಗಳ ಕ್ರಿಕೆಟ್ ಪ್ರಿಪೇಯ್ಡ್ ಪ್ಲ್ಯಾನ್‌ ಮೂಲಕ ಒಂದು ವರ್ಷದ ಮಾನ್ಯತೆಯನ್ನು ಪಡೆದುಕೊಂಡಿದೆ. ಹಾಗೆಯೇ ದಿನವೂ ನಿಮಗೆ 2.5GB ಡೇಟಾ ಸಿಗಲಿದ್ದು, ಅನಿಯಮಿತ ಕರೆ ಹಾಗೂ ಪ್ರತಿದಿನ 100 ಎಸ್‌ಎಮ್ಎಸ್‌ ಕಳುಹಿಸಬಹುದಾಗಿದೆ. ಈ ಪ್ಲ್ಯಾನ್‌ ಮೂಲಕ ಒಂದು ವರ್ಷದ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋಗೆ ಚೆಂದದಾರಿಕೆ ಒಂದು ವರ್ಷಕ್ಕೆ ಪಡೆಯಬಹುದಾಗಿದೆ. ಈ ರೀತಿಯಾಗಿ ಏರ್ಟೆಲ್ ಹೊಸದಾಗಿ ಪರಿಚಯಿಸಿರುವ ಈ ವಿಶೇಷ ರಿಚಾರ್ಜ್ ಪ್ಲಾನ್ ಗಳು ಕ್ರಿಕೆಟ್ ಅಭಿಮಾನಿಗಳಿಗೆ ನಿಜಕ್ಕೂ ಸಂತಸದ ಸಂಗತಿಯಾಗಿದೆ. ಇದನ್ನು ಓದಿ..Biggboss Kannada: ಬಿಗ್ ಬಾಸ್ ನಿಂದ ಹೊರಬಂದ ಕೆಲವೇ ವಾರಗಳಲ್ಲಿ ಗಂಭೀರ ಆರೋಪ ಮಾಡಿದ ಸನ್ಯಾ ಐಯ್ಯರ್. ಬಿಗ್ ಬಾಸ್ ಬಗ್ಗೆ ಹೇಳಿದ್ದೇನು ಗೊತ್ತೇ??

Leave A Reply

Your email address will not be published.