ಪದೇ ಪದೇ ತಿನ್ನಬೇಕು ಎನಿಸುವ ಪರ್ಫೆಕ್ಟ್ ಅಕ್ಕಿ ರೊಟ್ಟಿಯನ್ನು ಮನೆಯಲ್ಲಿಯೇ ಮಾಡುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ನಾವು ಪರ್ಫೆಕ್ಟ್ ಆಗಿ ಅಕ್ಕಿ ರೊಟ್ಟಿ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ, ಕೆಳಗಡೆ ವಿಡಿಯೋ ಕೂಡ ಹಾಕಲಾಗಿದ್ದು, ಒಮ್ಮೆ ನೋಡಿ ಟ್ರೈ ಮಾಡಿ ಹೇಗಿದೆ ಎಂದು ತಿಳಿಸುವುದನ್ನು ಮರೆಯಬೇಡಿ. ಪರ್ಫೆಕ್ಟ್ ಆಗಿ ಅಕ್ಕಿ ರೊಟ್ಟಿ ಮಾಡಲು ಬೇಕಾಗುವ ಸಮಾಗ್ರಿಗಳು: 3 ಬಟ್ಟಲು ಅಕ್ಕಿ ಹಿಟ್ಟು, ರುಚಿಗೆ ತಕಷ್ಟು ಉಪ್ಪು, 1 ಬಟ್ಟಲು ರುಬ್ಬಿದ ಅನ್ನದ ಪೇಸ್ಟ್.

ಪರ್ಫೆಕ್ಟ್ ಆಗಿ ಅಕ್ಕಿ ರೊಟ್ಟಿ ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ 5 ಬಟ್ಟಲು ನೀರು ಹಾಗೂ ಸ್ವಲ್ಪ ಉಪ್ಪನ್ನು ಹಾಕಿ ಕುದಿಯಲು ಬಿಡಿ. ನೀರು ಕಾದ ನಂತರ ಇದಕ್ಕೆ 2 ಬಟ್ಟಲು ಅಕ್ಕಿ ಹಿಟ್ಟು ಹಾಗೂ ಅನ್ನದ ಪೇಸ್ಟ್ ಅನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳುತ್ತಾ ಅಂಟು ಬರುವವರೆಗೂ ಬೇಯಿಸಿಕೊಂಡು ಗ್ಯಾಸ್ ಆಫ್ ಮಾಡಿ ಸ್ವಲ್ಪ ತಣ್ಣಗಾಗಲು ಬಿಡಿ.

ನಂತರ ಹಿಟ್ಟನ್ನು ಚಪಾತಿ ಮಣೆಯ ಮೇಲೆ ಇಟ್ಟು ಸ್ವಲ್ಪ ಸ್ವಲ್ಪ ಒಣ ಅಕ್ಕಿ ಹಿಟ್ಟನ್ನು ಹಾಕುತ್ತ ಮಿಕ್ಸ್ ಮಾಡಿಕೊಂಡು ಚೆನ್ನಾಗಿ ನಾದಿಕೊಳ್ಳಿ. ಚಪಾತಿ ಹಿಟ್ಟಿನ ಅದಕ್ಕೆ ಬರುವವರೆಗೂ ಒಣ ಹಿಟ್ಟನ್ನು ಹಾಕುತ್ತ ಮಿಕ್ಸ್ ಮಾಡಿಕೊಳ್ಳಿ. ನಂತರ ಕೈ ಗೆ ಸ್ವಲ್ಪ ಎಣ್ಣೆಯನ್ನು ಹಾಕಿಕೊಂಡು ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಿ. ನಂತರ ಒಂದು ಪ್ಲಾಸ್ಟಿಕ್ ಕವರ್ ಗೆ ಎನ್ನಯನ್ನು ಸವರಿಕೊಳ್ಳಿ. ನಂತರ ಹಿಟ್ಟನ್ನು ಇಟ್ಟು ತೆಳ್ಳಗೆ ಒತ್ತಿಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ತವಾವನ್ನು ಇಟ್ಟುಕೊಂಡು ಕಾಯಲು ಬಿಡಿ. ತವ ಕಾದ ನಂತರ ಒಸೆದುಕೊಂಡ ಹಿಟ್ಟನ್ನು ಹಾಕಿ 2 ಬದಿಯಲ್ಲಿ ಬೇಯಿಸಿಕೊಂಡರೆ ಪರ್ಫೆಕ್ಟ್ ಅಕ್ಕಿ ರೊಟ್ಟಿ ಸವಿಯಲು ಸಿದ್ದ.

Comments are closed.