ಹೂವಿನಂತೆ ಸಾಫ್ಟ್ ಆಗಿ ಮಸಾಲಾ ಅಕ್ಕಿ ರೊಟ್ಟಿ ಹೀಗೆ ಮಾಡಿ ನೋಡಿ, ಎಲ್ಲರೂ ಎರಡು ಜಾಸ್ತಿ ತಿಂತಾರೆ. ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ನಾವು ಕೇವಲ 10 ನಿಮಿಷಗಳಲ್ಲಿ ಸಾಫ್ಟ್ ಮಸಾಲ ಅಕ್ಕಿ ರೊಟ್ಟಿ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಸಾಫ್ಟ್ ಮಸಾಲಾ ಅಕ್ಕಿ ರೊಟ್ಟಿ ಮಾಡಲು ಬೇಕಾಗುವ ಪದಾರ್ಥಗಳು: 2 ಬಟ್ಟಲು ಅಕ್ಕಿಹಿಟ್ಟು, 1 ಬಟ್ಟಲು ಸಬ್ಬಕ್ಕಿ ಸೊಪ್ಪು, 1 ಈರುಳ್ಳಿ, ಅರ್ಧ ಬಟ್ಟಲು ಸಣ್ಣಗೆ ಹಚ್ಚಿದ ಎಲೆಕೋಸು, ಅರ್ಧ ಕಟ್ಟು ಕೊತ್ತಂಬರಿ ಸೊಪ್ಪು, ಸ್ವಲ್ಪ ಕರಿಬೇವು, 4 ಹಸಿಮೆಣಸಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಎಣ್ಣೆ.

ಸಾಫ್ಟ್ ಮಸಾಲಾ ಅಕ್ಕಿ ರೊಟ್ಟಿ ಮಾಡುವ ವಿಧಾನ: ಮೊದಲಿಗೆ ಒಂದು ದೊಡ್ಡ ಬಟ್ಟಲಿಗೆ ತೆಗೆದುಕೊಂಡ ಅಕ್ಕಿ ಹಿಟ್ಟು ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಸಣ್ಣಗೆ ಹಚ್ಚಿದ ಈರುಳ್ಳಿ, ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪು, ಸಣ್ಣಗೆ ಹಚ್ಚಿದ ಸಬ್ಬಕ್ಕಿ ಸೊಪ್ಪು, ಸಣ್ಣಗೆ ಹಚ್ಚಿದ ಎಲೆಕೋಸು, ಸಣ್ಣಗೆ ಹಚ್ಚಿದ ಕರಿಬೇವು, ಸಣ್ಣಗೆ ಹಚ್ಚಿದ ಹಸಿಮೆಣಸಿನಕಾಯಿಯನ್ನು ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ.

ನಂತರ ಒಂದು ಕಾಲು ಬಟ್ಟಲಿನಷ್ಟು ನೀರನ್ನು ಬಿಸಿಮಾಡಿಕೊಂಡು ಸ್ವಲ್ಪ ಸ್ವಲ್ಪ ನೀರನ್ನು ಹಾಕುತ್ತಾ 5 – 8 ನಿಮಿಷಗಳ ಕಾಲ ಹಿಟ್ಟನ್ನು ಕೈ ನಿಂದ ಕಲಸಿಕೊಳ್ಳಿ. ನಂತರ ಉಂಡೆಗಳನ್ನು ಮಾಡಿಕೊಳ್ಳಿ. ನಂತರ ಮಣೆಯ ಮೇಲೆ ಒಂದು ಪ್ಲಾಸ್ಟಿಕ್ ಕವರ್ ನನ್ನು ಹಾಕಿ ಅದರ ಮೇಲೆ 2 – 3 ಹನಿ ಎಣ್ಣೆಯನ್ನು ಹಾಕಿ ಸವರಿಕೊಳ್ಳಿ.ನಂತರ ಇದರ ಮೇಲೆ ಹಿಟ್ಟಿನ್ನು ಹಿಟ್ಟು ಕೈನ ಸಹಾಯದಿಂದ ಹಿಟ್ಟನ್ನು ತೆಳ್ಳಗೆ ತಟ್ಟಿಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ತವಾವನ್ನು ಇಟ್ಟುಕೊಂಡು ಕಾಯಲು ಬಿಡಿ. ತವ ಕಾದ ನಂತರ ತಟ್ಟಿಕೊಂಡ ಹಿಟ್ಟನ್ನು ಹಾಕಿಕೊಳ್ಳಿ. ನಂತರ ಎರಡು ಬದಿಯಲ್ಲಿ ಎಣ್ಣೆಯನ್ನು ಸವರಿ ಬೇಯಿಸಿಕೊಂಡರೆ ಸಾಫ್ಟ್ ಮಸಾಲಾ ಅಕ್ಕಿ ರೊಟ್ಟಿ ಸವಿಯಲು ಸಿದ್ದ.

Comments are closed.