ಹೀಗೆ ಬಿಸಿಬೇಳೆ ಬಾತ್ ಮಾಡಿದರೇ, ಸ್ವಲ್ಪ ಜಾಸ್ತಿ ಮಾಡಿ, ಯಾಕಂದ್ರೆ ಎರೆಡೆರಡು ಸಲ ಹಾಕಿಸಿಕೊಳ್ತಾರೆ. ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ನಾವು ಹೋಟೆಲ್ ಶೈಲಿಯ ಬಿಸಿ ಬೇಳೆ ಬಾತ್ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಹೋಟೆಲ್ ಶೈಲಿಯ ಬಿಸಿ ಬೇಳೆ ಬಾತ್ ಮಾಡಲು ಬೇಕಾಗುವ ಸಾಮಗ್ರಿಗಳು: 150 ಗ್ರಾಂ ನುಚ್ಚು ಅಕ್ಕಿ,150 ಗ್ರಾಂ ತೊಗರಿ ಬೇಳೆ,20 ಬ್ಯಾಡಿಗೆ ಮೆಣಸಿನಕಾಯಿ, 1 ಕ್ಯಾರೆಟ್,1 ನವಿಲು ಕೋಸು, 50 ಗ್ರಾಂ ಹಸಿಬಟಾಣಿ,10 ಹುರುಳಿ ಕಾಯಿ,1 ಕಾಪ್ಸಿಕಂ, 3 ಚಮಚ ತೆಂಗಿನ ಕಾಯಿ ತುರಿ,100 ml ಎಣ್ಣೆ,1 ಟೊಮೇಟೊ, 10 – 15 ಸಣ್ಣ ಈರುಳ್ಳಿ,4 ಏಲಕ್ಕಿ, 1 ಸ್ಟಾರ್ ಹೂವು,1 ಚಮಚ ಬೆಲ್ಲ, 2 ಚಮಚ ತುಪ್ಪ,ನಿಂಬೆ ಹಣ್ಣು ಗಾತ್ರದ ಹುಣಸೆ ಹಣ್ಣು ,ಸ್ವಲ್ಪ ಕರಿಬೇವು, 10 – 15 ಗೋಡಂಬಿ,1 ಚಮಚ ಗಸಗಸೆ,2 ಒಂದು ಇಂಚಿನ ಚಕ್ಕೆ, 4 ಲವಂಗ, 1 ಚಮಚ ಕಡಲೆ ಬೇಳೆ,1 ಚಮಚ ಉದ್ದಿನ ಬೇಳೆ, 1 ಚಮಚ ದನಿಯ, ಸ್ವಲ್ಪ ಅರಿಶಿನ ಪುಡಿ, ಸ್ವಲ್ಪ ಇಂಗು,ಸ್ವಲ್ಪ ಸಾಸಿವೆ, ರುಚಿಗೆ ತಕಷ್ಟು ಉಪ್ಪು.

ಹೋಟೆಲ್ ಶೈಲಿಯ ಬಿಸಿ ಬೇಳೆ ಬಾತ್ ಮಾಡುವ ವಿಧಾನ: ಮೊದಲಿಗೆ ಒಂದು ಕುಕ್ಕರ್ ನನ್ನು ಗ್ಯಾಸ್ ಮೇಲೆ ಇಟ್ಟು ಅದಕ್ಕೆ ನೀರಿನಿಂದ ತೊಳೆದ ನುಚ್ಚು ಅಕ್ಕಿ, ತೊಗರಿ ಬೇಳೆ, ಉದ್ದನೆ ಹಚ್ಚಿದ ಹುರುಳಿ ಕಾಯಿ, ಉದ್ದನೆ ಹಚ್ಚಿದ ಕ್ಯಾರೆಟ್ , ಉದ್ದನೆ ಹಚ್ಚಿದ ನವಿಲು ಕೋಸು, ಹಸಿ ಬಟಾಣಿ,1 ಲೋಟ ಅಕ್ಕಿಗೆ 5 ಲೋಟ ನೀರನ್ನು ಹಾಕಿ ಒಂದು ಬರಿ ಮಿಕ್ಸ್ ಮಾಡಿಕೊಂಡು ಮಿಚ್ಚಳವನ್ನು ಮುಚ್ಚಿ 2 ವಿಷಲ್ ಕೂಗಿಸಿಕೊಂಡು ತಣ್ಣಗಾಗಲು ಬಿಡಿ.

ನಂತರ ಗ್ಯಾಸ್ ಮೇಲೆ ಬಾಣಲೆಯನ್ನು ಇಟ್ಟುಕೊಂಡು ಕಡಲೆ ಬೇಳೆ, ಚಕ್ಕೆ ,ಲವಂಗ, ಸ್ಟಾರ್ ಹೂವು, ಉದ್ದಿನ ಬೇಳೆ,ಧನಿಯಾ, ಬ್ಯಾಡಿಗೆ ಮೆಣಸಿನಕಾಯಿಯನ್ನು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಗಸಗಸೆಯನ್ನು ಹಾಕಿ ಒಂದು ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಇಂಗು, ಸ್ವಲ್ಪ ಅರಿಶಿನ ಪುಡಿಯನ್ನು ಹಾಕಿ ಮಿಕ್ಸ್ ಮಾಡಿಕೊಂಡು ಗ್ಯಾಸ್ ಆಫ್ ಮಾಡಿ ತಣ್ಣಗಾಗಲು ಬಿಡಿ.

ಒಂದು ಮಿಕ್ಸ್ ಜಾರಿಗೆ ಫ್ರೈ ಮಾಡಿಕೊಂಡ ಮಿಶ್ರಣವನ್ನು ಹಾಕಿ ನುಣ್ಣಗೆ ಪುಡಿಮಾಡಿಕೊಂಡರೆ ಬಿಸಿ ಬೇಳೆ ಬಾತ್ ಪುಡಿ ಸಿದ್ದವಾಗುತ್ತದೆ.ಮತ್ತೆ ಗ್ಯಾಸ್ ಮೇಲೆ ಒಂದು ಪಾತ್ರೆಯನ್ನು ಇಟ್ಟುಕೊಂಡು ಬಿಸಿಯಾಗಲು ಬಿಡಿ. ಬಿಸಿಯಾದ ನಂತರ ಇದಕ್ಕೆ ತುಪ್ಪವನ್ನು ಹಾಕಿ ಬಿಸಿಯಾಗಲು ಬಿಡಿ.ನಂತರ ಇದಕ್ಕೆ ಗೋಡಂಬಿಯನ್ನು ಹಾಕಿ ಫ್ರೈ ಮಾಡಿಕೊಂಡು ಒಂದು ಬಟ್ಟಲಿಗೆ ಹಾಕಿಕೊಳ್ಳಿ.ನಂತರ ಇದೇ ಪಾತ್ರೆಗೆ ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಇದಕ್ಕೆ ಸಾಸಿವೆ,ಕರಿಬೇವು,ಬ್ಯಾಡಿಗೆ ಮೆಣಸಿನಕಾಯಿಯನ್ನು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಹಚ್ಚಿದ ಈರುಳ್ಳಿಯನ್ನು ಹಾಕಿ ಫ್ರೈ ಮಾಡಿಕೊಳ್ಳಿ.ನಂತರ ಒಣ ಕೊಬ್ಬರಿ ತುರಿ ಹಾಕಿ ಫ್ರೈ ಮಾಡಿಕೊಳ್ಳಿ.

ನಂತರ ಇದಕ್ಕೆ ಹಚ್ಚಿದ ಕ್ಯಾಪ್ಸಿಕಂ ಅನ್ನು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಬಿಸಿಬೇಳೆ ಬಾತ್ ಪುಡಿಯನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಸಣ್ಣಗೆ ಹಚ್ಚಿದ ಟೊಮ್ಯಾಟೊವನ್ನು ಹಾಕಿ ಟೊಮೇಟೊ ಬೇಯಿಸುವವರೆಗೂ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಬೆಲ್ಲ, ಹುಣಸೆ ಹಣ್ಣಿನ ರಸವನ್ನು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಕುಕ್ಕರ್ ನಲ್ಲಿ ಬೇಯಿಸಿಕೊಂಡ ಮಿಶ್ರಣವನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ನೀರನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ರುಚಿಗೆ ತಕಷ್ಟು ಉಪ್ಪನ್ನು ಹಾಕಿ ಮಿಕ್ಸ್ ಮಾಡಿಕೊಂಡು ಮುಚ್ಚ್ಚಳವನ್ನು ಮುಚ್ಚಿ ಕಡಿಮೆ ಉರಿಯಲ್ಲಿ 5 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ಕೊನೆಯದಾಗಿ ಫ್ರೈ ಮಾಡಿಕೊಂಡ ಗೋಡಂಬಿ, ಕರಿಬೇವು, ಬ್ಯಾಡಿಗೆ ಮೆಣಸಿನಕಾಯಿಯನ್ನು ಹಾಕಿ ಮಿಕ್ಸ್ ಮಾಡಿದರೆ ಹೋಟೆಲ್ ಶೈಲಿಯ ಬಿಸಿಬೇಳೆ ಬಾತ್ ಸವಿಯಲು ಸಿದ್ದ.

Comments are closed.