BSNL ಹೊಸ ಯೋಜನೆ ಸಿಗುತ್ತೆ ಎರಡು 2ಜಿಬಿ ಡೇಟಾ, ಕರೆ ಕೂಡ ಮಾಡಬಹುದು, ಅದು ಕೇವಲ 49 ರುಪಾಯಿಗೆ, ಎಷ್ಟೆಲ್ಲ ಲಾಭ ಇದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ದೇಶದ ಎಲ್ಲಾ ಖಾಸಗಿ ಟೆಲಿಕಾಂ ಕಂಪನಿಗಳಿಗೂ ಸ್ಪರ್ಧೆ ನೀಡುವ ರೀತಿಯಲ್ಲಿ ಸರ್ಕಾರದ ಸ್ವಾಮ್ಯದಲ್ಲಿರುವ ಬಿ ಎಸ್ ಎನ್ ಎಲ್ ತನ್ನ ರೀಚಾರ್ಜ್ ಯೋಜನೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿದೆ. ಅದರಲ್ಲಿ ಕೆಲವು ಗ್ರಾಹಕಸ್ನೇಹಿ ಪ್ರಿಪೇಯ್ಡ್ ಯೋಜನೆಗಳಾಗಿವೆ. ಇತ್ತೀಚಿಗೆ ಪರಿಚಯಿಸಿರುವ 49 ರೂ. ಗಳ ಯೋಜನೆಯಲ್ಲಿ ದೈನಂದಿನ 2ಜಿಬಿ ಡೇಟಾ ನೀಡುತ್ತಿರುವುದು ವಿಶೇಷ. ಈ ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿ ಈ ಕೆಳಗಿನಂತಿದೆ.

ಇದು ಬಿಎಸ್ ಎನ್ ಎಲ್ ನ ಅತೀ ಅಗ್ಗದ 49ರೂ. ಗಳ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಬಳಕೆದಾರರಿಗೆ 2ಜಿಬಿ ಹೈ ಸ್ಪೀಡ್ ಇಂಟರ್ನೆಟ್ ಮತ್ತು ಒಟ್ಟು 100 ನಿಮಿಷಗಳ ದ್ವನಿ ಕರೆಯನ್ನು ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ. ಇದು 24 ದಿನಗಳ ವ್ಯಾಲಿಡಿಟಿ ಹೊಂದಿರುವ ಯೋಜನೆಯಾಗಿದೆ. ಇನ್ನು ಬಿ ಎಸ್ ಎನ್ ಎಲ್ ನ 99 ರೂ.ವಿನ ಯೋಜನೆಯನ್ನು ನೋಡುವುದಾದರೆ, ಇದು 22 ದಿನಗಳ ವ್ಯಾಲಿಡಿಟಿಯನ್ನು ಗ್ರಾಹಕರಿಗೆ ನೀಡುತ್ತದೆ. ಈ ಯೋಜನೆಯಲ್ಲಿ ನೀವು ಯಾವುದೇ ನೆಟ್ವರ್ಕ್ನಲ್ಲಿ ಅನಿಯಮಿತ ಧ್ವನಿ ಕರೆ ಸೌಲಭ್ಯವನ್ನು ಪಡೆಯಬಹುದು. ಇದು ಕರೆಗೆ ಸೀಮಿತವಾದ ಯೋಜನೆಯಾಗಿದ್ದು, ಇದರಲ್ಲಿ ಡೇಟಾದಂತಹ ಇತರ ಪ್ರಯೋಜನಗಳನ್ನು ಅಳವಡಿಸಲಾಗಿಲ್ಲ.

bsnl | BSNL ಹೊಸ ಯೋಜನೆ ಸಿಗುತ್ತೆ ಎರಡು 2ಜಿಬಿ ಡೇಟಾ, ಕರೆ ಕೂಡ ಮಾಡಬಹುದು, ಅದು ಕೇವಲ 49 ರುಪಾಯಿಗೆ, ಎಷ್ಟೆಲ್ಲ ಲಾಭ ಇದೆ ಗೊತ್ತೇ??
BSNL ಹೊಸ ಯೋಜನೆ ಸಿಗುತ್ತೆ ಎರಡು 2ಜಿಬಿ ಡೇಟಾ, ಕರೆ ಕೂಡ ಮಾಡಬಹುದು, ಅದು ಕೇವಲ 49 ರುಪಾಯಿಗೆ, ಎಷ್ಟೆಲ್ಲ ಲಾಭ ಇದೆ ಗೊತ್ತೇ?? 2

ಇನ್ನು 24 ದಿನಗಳ ವ್ಯಾಲಿಡಿಟಿ ಹೊಂದಿರುವ 135 ರೂ. ನ ಯೋಜನೆ. ಇದರಲ್ಲಿ ಗ್ರಾಹಕರು 1,440 ನಿಮಿಷಗಳ ಧ್ವನಿ ಕರೆ ಸೌಲಭ್ಯವನ್ನು ಪಡೆಯುತ್ತಾರೆ. ಹಾಗೆಯೇ ಕಂಪನಿಯ ಇನ್ನೊಂದು ಯೋಜನೆ 118 ರೂ.ನದ್ದು. ಇದು 26 ದಿನಗಳ ವರೆಗಿನ ವ್ಯಾಲಿಡಿಟಿ ನೀಡುವ ಪ್ರಿಪೇಯ್ಡ್ ಯೋಜನೆಯಾಗಿದ್ದು, ಇದರಲ್ಲಿ ಅನಿಯಮಿತ ಧ್ವನಿ ಕರೆ ಮತ್ತು ಪ್ರತಿದಿನ 0.5ಜಿಬಿ ಡೇಟಾವನ್ನು ಪಡೆಯಬಹುದು. ಬಿ ಎಸ್ ಎನ್ ಎಲ್ ಪರಿಚಯಿಸಿರುವ 147 ರೂ.ವಿನ ಪ್ರಿಪೇಯ್ಡ್ ಯೋಜನೆಯಲ್ಲಿ ಒಟ್ಟು 10ಜಿಬಿ ಹೈ ಸ್ಪೀಡ್ ಇಂಟರ್ನೆಟ್, ಬಿ ಎಸ್ ಎನ್ ಎಲ್ ಟ್ಯೂನ್ಗಳಿಗೆ ಉಚಿತ ಪ್ರವೇಶ ಮತ್ತು ಯಾವುದೇ ನೆಟ್ವರ್ಕ್ನಲ್ಲಿ ಅನಿಯಮಿತ ಧ್ವನಿ ಕರೆಯನ್ನು ಮಾಡಬಹುದು. ಈ ಯೋಜನೆಯ ಅವಧಿ ಒಂದು ತಿಂಗಳು. ಇವಿಷ್ಟು ಬಿ ಎಸ್ ಎನ್ ಎಲ್ ನ ಅತ್ಯಂತ ಅಗ್ಗದ ಪ್ರಿಪೇಯ್ಡ್ ಯೋಜನೆಗಳಾಗಿದ್ದು ನೀವಿ ಬಿ ಎಸ್ ಎನ್ ಎಲ್ ಗ್ರಾಹಕರಾಗಿದ್ದರೆ, ನಿಮ್ಮ ಅಗತ್ಯದ ಯೋಜನೆಯನ್ನು ಆಯ್ದುಕೊಳ್ಳಬಹುದು.

Comments are closed.