News from ಕನ್ನಡಿಗರು

ಒಂದೇ ತರ ಚಟ್ನಿ ತಿಂದು ಬೇಜಾರಾಗಿದ್ರೆ ಈ ಹೊಸ ರೀತಿಯ ಚಟ್ನಿ ಟ್ರೈಮಾಡಿ ನೋಡಿ, ಅದ್ಬುತ ರುಚಿಯ ಜೊತೆ.

198

ನಮಸ್ಕಾರ ಸ್ನೇಹಿತರೇ, ಇಂದು ನಾವು ವಿಭಿನ್ನ ರೀತಿಯಲ್ಲಿ ದಿಡೀರ್ ಚಟ್ನಿ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಚಟ್ನಿ ಮಾಡಲು ಬೇಕಾಗುವ ಪದಾರ್ಥಗಳು: ಸ್ವಲ್ಪ ಎಣ್ಣೆ,2 ಚಮಚ ಉದ್ದಿನಬೇಳೆ,1 ಚಮಚ ಕಡಲೆಬೇಳೆ, ಅರ್ಧ ಬಟ್ಟಲು ಕಡಲೆ ಬೀಜ, 2 ಈರುಳ್ಳಿ, 5 – 6 ಬೆಳ್ಳುಳ್ಳಿ ಎಸಳು,ಸ್ವಲ್ಪ ಕರಿಬೇವು,2 ಟೊಮೇಟೊ,ಸ್ವಲ್ಪ ಕೊತ್ತಂಬರಿ ಸೊಪ್ಪು,1 ಚಮಚ ಜೀರಿಗೆ, 8 ಒಣಮೆಣಸಿನಕಾಯಿ, ರುಚಿಗೆ ತಕಷ್ಟು ಉಪ್ಪು,1 ಇಂಚು ಹುಣಸೆ ಹಣ್ಣು, ಚಿಟಿಕೆ ಇಂಗು.

ಚಟ್ನಿ ಮಾಡುವ ವಿಧಾನ: ಮೊದಲಿಗೆ ಒಂದು ಬಾಣಲಿಗೆ 2 ಚಮಚದಷ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ 1 ಚಮಚ ಉದ್ದಿನಬೇಳೆ, 1 ಚಮಚ ಕಡ್ಲೆಬೇಳೆ, ಅರ್ಧ ಬಟ್ಟಲಿನಷ್ಟು ಕಡ್ಲೇಬೀಜವನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಉದ್ದನೆ ಹಚ್ಚಿದ ಈರುಳ್ಳಿ, 5 ಬೆಳ್ಳುಳ್ಳಿ ಎಸಳು, ಸ್ವಲ್ಪ ಕರಿಬೇವುವನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಹಚ್ಚಿದ ಟೊಮಾಟೊವನ್ನು ಹಾಕಿ ಸಾಫ್ಟ್ ಆಗುವವರೆಗೂ ಮಾಡಿಕೊಳ್ಳಿ. ನಂತರ ಇದಕ್ಕೆ ಕೊತ್ತಂಬರಿ ಸೊಪ್ಪು, 1 ಚಮಚ ಜೀರಿಗೆ,8 ಮುರಿದ ಒಣಮೆಣಸಿನಕಾಯಿಯನ್ನು ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ 1 ಇಂಚು ಹುಣಸೆಹಣ್ಣು ಹಾಕಿ ಮತ್ತೆ ಫ್ರೈ ಮಾಡಿಕೊಂಡು ತಣ್ಣಗಾಗಲು ಬಿಡಿ.

ನಂತರ ಮಿಕ್ಸಿ ಜಾರಿಗೆ ಫ್ರೈ ಮಾಡಿಕೊಂಡ ಮಿಶ್ರಣ ಹಾಗೂ ಸ್ವಲ್ಪ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಂಡು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ಮತ್ತೊಂದು ಕಡೆ ಗ್ಯಾಸ್ ಮೇಲೆ ಸಣ್ಣ ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ 1 ಚಮಚದಷ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಸಾಸಿವೆ, ಉದ್ದಿನಬೇಳೆ, ಕರಿಬೇವು, 1 ಒಣಮೆಣಸಿನಕಾಯಿ, ಚಿಟಿಕೆ ಇಂಗು ಹಾಕಿ ಒಗ್ಗರಣೆ ಮಾಡಿಕೊಂಡು ರುಬ್ಬಿಕೊಂಡ ಮಿಶ್ರಣಕ್ಕೆ ಹಾಕಿ ಮಿಕ್ಸ್ ಮಾಡಿದರೆ ವಿಭಿನ್ನ ರೀತಿಯಲ್ಲಿ ದಿಡೀರ್ ಚಟ್ನಿ ಸವಿಯಲು ಸಿದ್ದ.

Leave A Reply

Your email address will not be published.