LIC Policy: ಹೆಚ್ಚು ಬೇಡ, ಜಸ್ಟ್ 256 ರೂಪಾಯಿ ಪಾಲಿಸಿ ತೆಗೆದುಕೊಂಡು, 54 ಲಕ್ಷ ಗಳಿಸುವ LIC ಪಾಲಿಸಿ ಯಾವುದು ಗೊತ್ತೇ? ತಿಳಿದರೆ ಇಂದೇ ಹಾಕ್ತಿರಾ.
LIC Policy: ಭಾರತದ ಅತಿ ದೊಡ್ಡ ವಿಮಾ ಸಂಸ್ಥೆಯಾದ ಭಾರತೀಯ ಜೀವ ವಿಮಾ ನಿಗಮ ಅಂದರೆ ಎಲ್ಐಸಿ ಭಾರತದಲ್ಲಿಯೇ ಬೇರೆಲ್ಲ ಇನ್ಸೂರೆನ್ಸ್ ಸಂಸ್ಥೆಗಳಿಗಿಂತಲೂ ಹೆಚ್ಚಿನ ವಿಶ್ವಾಸವನ್ನು ಹಲವಾರು ವರ್ಷಗಳಿಂದ ಪಡೆದುಕೊಂಡು ಬಂದಿದೆ. ಸಾಮಾನ್ಯವಾಗಿ ಎಲ್ಲಾ ಜನರು ಈ ವಿಮೆಯನ್ನು ವಿಶ್ವಾಸದಿಂದ ನೋಡುತ್ತಾರೆ. ಬೇರೆ ಬೇರೆ ರೀತಿಯ ಇನ್ಸೂರೆನ್ಸ್ ಸಹ ಮಾಡಿಸುತ್ತಾರೆ. ಇಷ್ಟು ಮಾತ್ರವಲ್ಲದೆ ಎಲ್ಐಸಿ ಯುವ ವೃತ್ತಿಪರ ಹಾಗೂ ನಿರುದ್ಯೋಗಿಗಳನ್ನು ಗುರಿಯಾಗಿಸಿಕೊಂಡು ಅನೇಕ ವಿಮೆಗಳು ಹಾಗೂ ಇನ್ಸೂರೆನ್ಸ್ ಅವಕಾಶಗಳನ್ನು ನೀಡುತ್ತದೆ. ಇವುಗಳಲ್ಲಿ ರೂ. 256 ಇನ್ಸೂರೆನ್ಸ್ ಮಾಡಿಸಿ 54 ಲಕ್ಷ ಹಣ ಪಡೆಯಬಹುದಾದ ವಿಮೆಯು ಸೇರಿದೆ. ಹಾಗಿದ್ದರೆ ಆ ಇನ್ಸೂರೆನ್ಸ್ ಯಾವುದು ಎನ್ನುವುದರ ಪೂರ್ತಿ ಮಾಹಿತಿ ಇಲ್ಲಿದೆ.
ಎಲ್ಐಸಿ ಜೀವನ್ ಲಾಭ ಹೆಸರಿನಲ್ಲಿ ಒಂದು ಇನ್ಶುರೆನ್ಸ್ ಇದೆ. ಇದರ ಅಡಿಯಲ್ಲಿ ಹಲವಾರು ಬೇರೆ ಬೇರೆ ರೀತಿಯ ಇನ್ಸೂರೆನ್ಸ್ ಮಾಡಿಸಿಕೊಳ್ಳುವ ಅವಕಾಶವನ್ನು ಸಂಸ್ಥೆ ನೀಡಿದೆ. ಇದರ ಅಡಿಯಲ್ಲಿ ಬೇರೆ ಬೇರೆ ವಯಸ್ಸಿನವರು ಪ್ರೀಮಿಯಂ ಮೂಲಕ ಬೇರೆ ಬೇರೆ ಯೋಜನೆಯ ಮೊತ್ತವನ್ನು ನಿಯಮಿತವಾಗಿ ಪಾವತಿಸುವ ಮೂಲಕ ವಿಮಾದಾರರಾಗಬಹುದು. ಎಲ್ಐಸಿ ಜೀವನ್ ಲಾಭ ಡೆತ್ ಬೆನಿಫಿಟ್ ನೊಂದಿಗೆ ಲಿಂಕ್ ಹೊಂದಿರುವ ಇನ್ಶೂರೆನ್ಸ್ ಆಗಿದೆ. ನಿಯಮಿತವಾಗಿ ಅತಿ ಕಡಿಮೆ ಮೊತ್ತವನ್ನು ಪಾವತಿಸುವ ಮೂಲಕ ಇನ್ಸೂರೆನ್ಸ್ ಮಾನ್ಯತೆ ಪಡೆದ ನಂತರ ಅತಿ ಹೆಚ್ಚು ಮೊತ್ತದ ವಿಮೆ ಹಣವನ್ನು ಪಡೆದುಕೊಳ್ಳುವ ಅವಕಾಶ ನೀಡಲಾಗುತ್ತದೆ. ಇದನ್ನು ಓದಿ..Business Loan: ಹೆಚ್ಚು ರಿಸ್ಕ್ ತೆಗೆದುಕೊಳ್ಳುವ ಅಗತ್ಯವೇ ಇಲ್ಲ, ನಿಮಗೆ ತಕ್ಷಣ ಹಣ ಬೇಕು ಎಂದರೆ, ಡಾಕ್ಯುಮೆಂಟ್ಸ್ ಇಲ್ಲದೆ 10 ಲಕ್ಷ ಲೋನ್ ಪಡೆಯುವುದು ಹೇಗೆ ಗೊತ್ತೇ??

ಬೇರೆ ಬೇರೆ ಪ್ರೀಮಿಯಂ ಮೊತ್ತದ ಇನ್ಸೂರೆನ್ಸ್ ಆಯ್ಕೆಗಳು ಇಲ್ಲಿ ಲಭ್ಯವಿವೆ. ಅದರಲ್ಲಿ ಅತ್ಯಂತ ಕಡಿಮೆ ಮೊತ್ತದ ಜೊತೆಗೆ ಅತಿ ಹೆಚ್ಚು ಪ್ರಯೋಜನ ನೀಡುವ ಇನ್ಸೂರೆನ್ಸ್ ಎಂದರೆ ಅದು ರೂ 256 ರಿಂದ ಆರಂಭವಾಗುವ ವಿಮೆ ಆಗಿದೆ. ಕೇವಲ 256ರೂ ಪಾಲಿಸಿ ಮಾಡಿಸುವ ಮೂಲಕ ಈ ವಿಮೆ ಕ್ಲೈಮ್ ಆಗುವ ಅವಧಿಗೆ 54.50 ಲಕ್ಷ ಮೊತ್ತವನ್ನು ಪಡೆಯುವ ಪ್ರಯೋಜನ ಸಿಗಲಿದೆ. ವಿಮಾ ಪಾಲಿಸಿದಾರರ 50 ವರ್ಷದ ವೇಳೆಗೆ ಈ ವಿಮೆ ಕ್ಲೈಮ್ ಆಗುತ್ತದೆ. ಇದರ ಪ್ರಯೋಜನ ಪಡೆದುಕೊಳ್ಳಲು ಆದಷ್ಟು ಬೇಗನೆ ಪಾಲಿಸಿ ಮಾಡಿಸಬೇಕಾಗುತ್ತದೆ. ಪ್ರತಿದಿನ 256 ರೂಪಾಯಿ ಪಾಲಿಸಿ ಕಟ್ಟಬೇಕಾಗುತ್ತದೆ. ಅಂದರೆ ಈ ಪಾಲಿಸಿಯ ತಿಂಗಳ ಒಟ್ಟು ಮೊತ್ತ 7,700 ಆಗುತ್ತದೆ. ಈ ಪಾಲಿಸಿಯ ಪ್ರಯೋಜನ ಪಡೆದುಕೊಳ್ಳಲು ಪಾಲಿಸಿದಾರರು ತಮ್ಮ 25ನೇ ವಯಸ್ಸಿಗೆ ಹಣ ಹೂಡಿಕೆ ಮಾಡಲು ಶುರು ಮಾಡಬೇಕು. ಹೀಗೆ ಮಾಡುವುದರಿಂದ ಎಲ್ಐಸಿ ಜೀವನ್ ಲಾಭ ಮುಖಾಂತರ ಮೆಚುರಿಟಿ ಹೊತ್ತಿಗೆ ಈ ಪಾಲಿಸಿ ಎಲ್ಲಾ ಮೊತ್ತ ಮತ್ತು ಬೋನಸ್ ಜೊತೆಗೆ 54.50 ಲಕ್ಷ ಹಣ ಪಾಲಿಸಿದಾರರಿಗೆ ಸಿಗುತ್ತದೆ. ಇದನ್ನು ಓದಿ.. Bank Loan: ಜನರ ಕಷ್ಟವನ್ನು ಅರ್ಥ ಮಾಡಿಕೊಂಡ ಬ್ಯಾಂಕ್: ಜಸ್ಟ್ 15 ನಿಮಿಷದಲ್ಲಿ ಹೊಸ ಲೋನ್, ಕೊಡಲು ನಿರ್ಧಾರ. ಏನು ಮಾಡಬೇಕು ಗೊತ್ತೇ??
Comments are closed, but trackbacks and pingbacks are open.