Kannada News: ಮೊದಲ ಬಾರಿಗೆ ಬಹಿರಂಗವಾಗಿ ಚಪ್ಪಲಿ ಪ್ರಕರಣ ಕುರಿತು ಮಾತನಾಡಿದ ಡಿ ಬಾಸ್: ತಾಕತ್ತಿದ್ದರೆ ಈ ಪ್ರಶ್ನೆಗೆ ಉತ್ತರ ನೀಡಿ. ಖಡಕ್ ಪ್ರಶ್ನೆ ಏನು ಗೊತ್ತೇ??
Kannada News: ಹೊಸಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟ ದರ್ಶನ್ (Darshan) ಅವರಿಗೆ ಚಪ್ಪಲಿ ಎಸೆದ ಪ್ರಕರಣ ದೊಡ್ಡ ವಿವಾದಕ್ಕೆ ತಿರುಗಿತ್ತು. ಆದರೆ ಆನಂತರ ಈ ವಿಷಯದ ಕುರಿತಾಗಿ ನಟ ದರ್ಶನ್ ಯಾವುದೇ ಕಾರ್ಯಕ್ರಮದಲ್ಲಿ ಅಥವಾ ಸಂದರ್ಶನದಲ್ಲಿ ಮಾತನಾಡಿರಲಿಲ್ಲ. ಈ ವಿಷಯದ ಕುರಿತಾಗಿ ಅವರು ಬಹಿರಂಗವಾಗಿ ಎಲ್ಲೂ ಚರ್ಚಿಸಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಅವರು ತಮಗೆ ಚಪ್ಪಲಿ ಎಸೆದ ಘಟನೆಯ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ ಅವರು ಸ್ಟಾರ್ ವಾರ್ ಕುರಿತಾಗಿಯೂ ಕುರಿತಾಗಿಯೂ ಪ್ರತಿಕ್ರಿಯಿಸಿದ್ದಾರೆ. ಯೂಟ್ಯೂಬ್ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಮೊದಲ ಬಾರಿಗೆ ಈ ಎಲ್ಲಾ ವಿಚಾರಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
ದರ್ಶನ್ ಅವರ ಬಹು ನಿರೀಕ್ಷಿತ ಕ್ರಾಂತಿ ಚಿತ್ರವು ಇದೇ ಜನವರಿ 26ರಂದು ತೆರೆಕಾಣಲಿದೆ. ಚಿತ್ರದ ಪ್ರಚಾರ ಕಾರ್ಯದಲ್ಲಿ ಇಡೀ ಚಿತ್ರತಂಡವು ತೊಡಗಿಸಿಕೊಂಡಿದೆ. ಅಲ್ಲದೆ ದರ್ಶನ್ ಅವರು ವಿವಿಧ ಯುಟ್ಯೂಬ್ ವಾಹಿನಿಗಳಿಗೆ ಬ್ಯಾಕ್ ಟು ಬ್ಯಾಕ್ ಸಂದರ್ಶನ ನೀಡುತ್ತಿದ್ದಾರೆ. ಇನ್ನು ಅವರು ಇತ್ತೀಚಿಗಷ್ಟೇ ನಿರೂಪಕ ಮಯೂರ್ (Mayura Raghavendra) ಅವರ ಜೊತೆಗೆ ಸಂದರ್ಶನದಲ್ಲಿ ಭಾಗಿಯಾಗಿದ್ದಾರೆ. ಮಯೂರ್ ಅವರ ಯೂಟ್ಯೂಬ್ ಚಾನೆಲ್ ನಲ್ಲಿ ಇನ್ನು ಕೆಲವೇ ದಿನಗಳಲ್ಲಿ ಈ ಸಂದರ್ಶನ ಪ್ರಸಾರವಾಗಲಿದೆ. ಆದರೆ ಅದಕ್ಕೂ ಮೊದಲು ಮಯೂರ್ ಅವರು ತಮ್ಮ ವಾಹಿನಿಯಲ್ಲಿ ದರ್ಶನ್ ಅವರ ಸಂದರ್ಶನದ ಕೆಲವು ತುಣುಕುಗಳನ್ನು ಪ್ರೋಮೋ ರೂಪದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ಪ್ರೋಮೋ ಸಕ್ಕತ್ ಸದ್ದು ಮಾಡುತ್ತಿದೆ. ಏಕೆಂದರೆ ಇದರಲ್ಲಿ ದರ್ಶನ್ ಅವರು ಸ್ಟಾರ್ ವಾರ್ ಹಾಗೂ ತಮಗೆ ಚಪ್ಪಲಿ ಎಸೆದ ಘಟನೆಯ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ.
ಸಂದರ್ಶನದಲ್ಲಿ ಸ್ಟಾರ್ ವಾರ್ ಕುರಿತಾಗಿ ಮಾತನಾಡಿರುವ ಅವರು “ಚಿಟಿಕೆಯನ್ನು ಹೀಗೆ ಹೊಡೆಯಲಾಗುತ್ತದೆ, ಹಾಗೆಯೇ ಚಪ್ಪಾಳೆ ಎರಡು ಕೈ ಸೇರಿದರೆ ಮಾತ್ರ ಸಾಧ್ಯ. ಒಂದೇ ಕೈಯಿಂದ ಚಪ್ಪಾಳೆ ಹೊಡೆಯಲು ಸಾಧ್ಯವಿಲ್ಲ” ಎಂದು ಉತ್ತರಿಸಿದ್ದಾರೆ. ಇನ್ನೂ ಚಪ್ಪಲಿ ಎಸೆತದ ಬಗ್ಗೆ ಮಾತನಾಡಿರುವ ಅವರು “ಚಪ್ಪಲಿಯಿಂದ ಒಡೆಸಿಕೊಳ್ಳುವಂಥದ್ದು ನಾನು ಏನು ಮಾಡಿದ್ದೇನೆ? ನನಗೆ ಇನ್ನೂ ಗೊತ್ತಾಗಿಲ್ಲ. ಹೇಗೆ ಅಭಿಮಾನಿಗಳು ಹಾಕುವ ಹಾರವನ್ನು ಪ್ರೀತಿಯಿಂದ ತೆಗೆದುಕೊಳ್ಳುತ್ತೇವೋ, ಈ ಚಪ್ಪಲಿ ಎಸೆತವನ್ನು ಅದೇ ರೀತಿಯಾಗಿ ತೆಗೆದುಕೊಂಡೆ. ಅಷ್ಟೇ” ಎಂದಿದ್ದಾರೆ. ತಮ್ಮ ಜರ್ನಿಯ ಬಗ್ಗೆ ಮಾತನಾಡಿರುವ ಅವರು “ಚಾಲೆಂಜಿಂಗ್ ಸ್ಟಾರ್ ಆಗಲಿ, ದರ್ಶನ್ ಆಗಲಿ ಇದುವರೆಗೆ ಯಾರಿಗೂ ಮೋಸ ಮಾಡಿಲ್ಲ. ನಾನು ಇಲ್ಲಿಯವರೆಗೂ ಬರಲು, ಈ ಸಾಮ್ರಾಜ್ಯ ಕಟ್ಟಲು 25 ವರ್ಷ ತೆಗೆದುಕೊಂಡಿದ್ದೇನೆ. ನೆನ್ನೆ ಮೊನ್ನೆ ಮಲಗಿ ಇಂದು ಎದ್ದು ಸ್ಟಾರ್ ಆದವನಲ್ಲ” ಎಂದು ಹೇಳಿರುವ ಸಂದರ್ಶನದ ಪ್ರೋಮೋ ವಿಡಿಯೋ ವೈರಲ್ ಆಗುತ್ತಿದೆ.
Comments are closed.