ಸಾಮಾನ್ಯ ಉಪ್ಪು ಅಲ್ಲ, ಕಪ್ಪು ಉಪ್ಪು ಸೇವನೆ ಮಾಡಿರಿ, ಈ ರೋಗಗಳಿಂದ ಸಂಪೂರ್ಣ ದೂರ ಇರಿ. ಯಾವ್ಯಾವು ಗೊತ್ತೇ??

ನಮಸ್ಕಾರ ಸ್ನೇಹಿತರೇ ’ಉಪ್ಪಿಗಿಂತ ರುಚಿ ಬೇರೆಯಿಲ್ಲ’.. ಅರೇ, ಇದೇನು ಉಪೇಂದ್ರ ಅವರ ಹಾಡು ಹೇಳುತ್ತಿದ್ದಾರೆ ಎಂದುಕೊಳ್ಳಬೇಡಿ. ನಾವು ಇಲ್ಲಿ ಮಾತನಾಡುತ್ತಿರುವುದು ನಿಜವಾಗಿ ತಿನ್ನುವ ಅಥವಾ ಆಹಾರದಲ್ಲಿ ಇರಲೇಬೇಕಾದ ಉಪ್ಪಿನ ಬಗ್ಗೆ. ನಾವು ಯಾವುದೇ ಆಡುಗೆ ಮಾಡಿದರೂ ಅದರಲ್ಲಿ ಉಪ್ಪಿನ ರುಚಿ ಇರಲೇಬೇಕು. ಖಾರಾ, ಹುಳಿ ಯಾವುದೂ ಇಲ್ಲದೇ ಊಟ ಮಾಡಬಹುದು ಆದರೆ ಉಪ್ಪಿಲ್ಲದೇ ಊಟ ಮಾಡಲು ಸಾಧ್ಯವೇ ಇಲ್ಲ. ಹಾಗಂತ ಬರಿಯ ರುಚಿಗೆ ಮಾತ್ರವಲ್ಲ ಉಪ್ಪನ್ನು ಸೇವಿಸುವುದು. ಉಪ್ಪಿನಲ್ಲಿರುವ ಸೋಡಿಯಂ ಅಂಶ ದೇಹಕ್ಕೆ ಅಗತ್ಯವಾಗಿ ಬೇಕೆ ಬೇಕು. ಹಾಗಂತ ಸೋಡಿಯಂ ಅಧಿಕವಾದರೂ ಕೂಡ ಸಮಸ್ಯೆಯೆ. ಹಾಗಾಗಿ ಹಿತಮಿತವಾಗಿ ಇರಬೇಕು ಉಪ್ಪಿನ ಸೇವನೆ!

ಕೆಲವರಿಗೆ ಅಗತ್ಯಕ್ಕಿಂತ ಹೆಚ್ಚು ಉಪ್ಪನ್ನು ತಿನ್ನುವ ರೂಢಿ ಇರುತ್ತದೆ. ಇದು ಕ್ರಮೇಣ ಹೃದಯ ಸಂಬಂಧಿ ಖಾಯಿಲೆಗೆ, ರಕ್ತದೊತ್ತಡ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾಗಿ ದೇಹದಲ್ಲಿ ಸೋಡಿಯಂ ಪ್ರಮಾಣ ಹೆಚ್ಚಾಗದಂತೆಯೂ ನೋಡಿಕೊಳ್ಳಬೇಕು. ನಾವು ನಿತ್ಯವೂ ಬಳಸುವ ಬಿಳಿ ಉಪ್ಪು ಅಥವಾ ಟೀ ಸಾಲ್ಟ್ ಬದಲು ಕಪ್ಪು ಉಪ್ಪು ಅಥವಾ ಬ್ಲಾಕ್ ಸಾಲ್ಟ್ ನ್ನು ಉಪಯೋಗಿಸುವುದು ಹೃದಯದ ಖಾಯಿಲೆ ನಿಯಂತ್ರಣಕ್ಕೆ ತುಂಬಾನೇ ಒಳ್ಳೆಯದು.

ಅಜೀರ್ಣದಿಂದಾಗಿ ಹೊಟ್ಟೆ ಉಬ್ಬರ, ಹೊಟ್ಟೆ ನೋವು, ಅಥವಾ ಗ್ಯಾಸ್ಟ್ರೀಕ್ ಸಮಸ್ಯೆ ಕಾಡಬಹುದು. ಈ ಸಮಸ್ಯೆಗೆ ಬ್ಲಾಕ್ ಸಾಲ್ಟ್ ಉತ್ತಮ ಪರಿಹಾರಕ. ಬ್ಲಾಕ್ ಸಾಲ್ಟ್ ನಲ್ಲಿರುವ ಆಲ್ಕಲೈನ್ ಗುಣ ಆಮ್ಲೀಯತೆಯನ್ನು ಕಡಿಮೆ ಮಾಡಿ ಹೊಟ್ಟೆಯ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಇನ್ನು ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಖನಿಜಾಂಶಗಳು ಸಿಗಬೇಕು. ದೇಹದಲ್ಲಿ ಪೊಟ್ಯಾಶಿಯಂ ಕಡಿಮೆಯಾದರೆ ದೇಹದಲ್ಲಿ ನೀರು ತುಂಬಿಕೊಂಡು ಮಾಂಸ ಖಂಡಗಳ ಕಾರ್ಯಕ್ಕೆ ತೊಡಕು ಉಂಟಾಗುತ್ತದೆ. ಹಾಗೆಯೇ ಕೈ ಕಾಲುಗಳ ಸೆಳೆತವೂ ಕೂಡ ಸಂಭವಿಸಬಹುದು. ಇದಕ್ಕೆ ಕಪ್ಪು ಉಪ್ಪು ಸೇವನೆ ಮಾಡುವುದು ಅತ್ಯಗತ್ಯ. ಆಹಾರದಲ್ಲಿ ಬ್ಲಾಕ್ ಸಾಲ್ಟ್ ನ್ನು ಸೇರಿಸಿದರೆ ಅಕಾಲಿಕ ವಯಸ್ಸಿನಲ್ಲಿ ಬರುವ ಕೈ ಕಾಲು ನೋವು, ಸೆಳೆತವನ್ನು ತಡೆಗಟ್ತಬಹುದು.

ಬ್ಲಾಕ್ ಸಾಲ್ಟ್ ನಲ್ಲಿ ನಾವು ನಿತ್ಯವೂ ಬಳಸುವ ಉಪ್ಪಿಗಿಂತ ಕಡಿಮೆ ಪ್ರಮಾಣದಲ್ಲಿ ಸೋಡಿಯಂ ಇದ್ದು, ಇದು ದೇಹಕ್ಕೆ ತುಂಬಾನೇ ಉಪಯುಕ್ತ. ಇದು ದೇಹದ ಒಳಭಾಗದಲ್ಲಿ ನೀರು ಶೇಖರಣೆಯಾಗುವುದನ್ನು ತಪ್ಪಿಸಿ ಬೆವರಿನ ರೂಪದಲ್ಲಿ ನೀರು ಹೊರಹೋಗುವುದಕ್ಕೆ ಸಹಾಯ ಮಾಡುತ್ತದೆ. ಇದರಿಂದ ದೇಹ ಹಗುರವಾಗಿ ಹಲವಾರು ಖಾಯಿಲೆಯಿಂದ ದೂರಇರಬಹುದು.

Comments are closed.