ಹಸಿ ಬಟಾಣಿಯನ್ನೂ ಒಂದು ವರ್ಷದ ವರೆಗೂ ಹಾಳಾಗದಂತೆ ಸಂರಕ್ಷಿಸಬಹುದು, ಹೇಗೆ ಗೊತ್ತೇ?? ಸುಲಭ ವಿಧಾನ.

ನಮಸ್ಕಾರ ಸ್ನೇಹಿತರೇ ಹಸಿ ಬಟಾಣಿ ತಿನ್ನೋದಕ್ಕೆ ಅತ್ಯಂತ ರುಚಿಕರ. ಇದನ್ನ ಆಲೂಗಡ್ಡೆ ಉಪಯೋಗಿಸಿ ಮಾಡುವಂಥ ಎಲ್ಲಾ ಆಹಾರ ಪದಾರ್ಥಗಳಲ್ಲಿಯೂ ಸಾಮಾನ್ಯವಾಗಿ ಸೇರಿಸಿಯೇ ಸೇರಿಸುತ್ತಾರೆ. ಇನ್ನು ಸಲಾಡ್ ಗಳಲ್ಲಿ ಹಸಿ ಬಟಾಣಿಯನ್ನು ಬೇಯಿಸಿ ಸೇರಿಸುವುದು ನಿಮಗೆ ಗೊತ್ತೇ ಇದೆ. ಈ ಹಸಿ ಬಟಾಣಿ ಪ್ರೋಟಿನ್ ಗಳ ಆಗರ. ಜೊತೆಗೆ ಕಾರ್ಬೋಹೈಡ್ರೇಟ್, ವಿಟಮಿನ್ ಗಳು, ಫೈಬರ್ ಎಲ್ಲಾ ಅಂಶಗಳೂ ಹಸಿ ಬಟಾಣಿಯಲ್ಲಿದೆ. ಹಾಗಾಗಿ ಹಸಿ ಬಟಾಣಿಯನ್ನು ಆಗಾಗ್ಗೆ ತಿನ್ನುವುದು ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. ಆದರೆ ಹಸಿ ಬಟಾಣಿ ಎಲ್ಲಾ ಋತುಗಳಲ್ಲಿಯೂ ಸಿಗುತ್ತದೆಯೇ? ಖಂಡಿತ ಇಲ್ಲ, ಸಿಕ್ಕರೂ ಬೆಲೆ ಅತ್ಯಂತ ದುಬಾರಿಯಾಗಿರುತ್ತದೆ.

ನವೆಂಬರ್ ನಿಂದ ಮಾರ್ಚ್ ವರೆಗೆ ಸಾಮಾನ್ಯವಾಗಿ ಹಸಿ ಬಟಾಣಿಯನ್ನು ಮಾರುಕಟ್ಟೆಯಲ್ಲಿ ಕಾಣಬಹುದು. ಇದಾದ ನಂತರ ಫ್ರೀಜ್ ಮಾಡಿದ ಬಟಾಣಿ ಮಾತ್ರ ಸಿಗುತ್ತದೆ, ಇದರ ಬೆಲೆಯೂ ದುಬಾರಿ. ಆದರೆ ರುಚಿಕರ ಹಾಗೂ ಆರೊಗ್ಯಕರವಾದ ಹಸಿ ಬಟಾಣಿಯನ್ನು ವರ್ಷವಿಡೀ ತಿನ್ನಲು ನಮಗಿಷ್ಟ. ಆದರೆ ಹಸಿ ಬಟಾಣಿ ಅಷ್ಟು ದಿನಗಳವರೆಗೆ ಹಾಳಾಗದೆ ಇರಲು ಸಾಧ್ಯವಿಲ್ಲ. ಆದರೆ ಇದು ಕೆಡದಂತೆ ಸಂರಕ್ಷಿದಲು ಕೂಡ ಕೆಲವು ಮಾರ್ಗಗಳಿವೆ ಅದು ಹೇಗೆ ಎಂಬುದನ್ನು ನಾವಿಲ್ಲಿ ಹೇಳಿದ್ದೇವೆ ಮುಂದೆ ಓದಿ..

ಹಸಿ ಬಟಾಣಿಯನ್ನು ಸಿಪ್ಪೆ ಬಿಡಿಸಿ ಚೆನ್ನಾಗಿ ತೊಳೆದುಕೊಳ್ಳಿ. ನೆನಪಿಡಿ ಉತ್ತಮ ಗುಣಮಟ್ಟದ, ದೊಡ್ದದಾದ ಬಟಾಣಿ ಕಾಳುಗಳನ್ನು ಮಾತ್ರ ಕೆಡದಂತೆ ಸಂರಕ್ಷಿಸಿ ಇಡಲು ಸಾಧ್ಯ. ಬಟಾಣಿ ಕಾಳುಗಳನ್ನು ತೊಳೆದು ನೀರನ್ನು ಸೋಸಿ. ನಂತರ ಬಟಾಣಿ ಕಾಳುಗಳು ಮುಳುವಷ್ಟು ನೀರನ್ನು ಕುದಿಯಲು ಇಡಿ. ಇದಕ್ಕೆ 2 ಚಮಚ ಉಪ್ಪನ್ನು ಸೇರಿಸಿ. ನಂತರ ಈ ಬಿಸಿ ನೀರಿನಲ್ಲಿ 2 ನಿಮಿಷಗಳವರೆಗೆ ತೊಳೆದಿಟ್ಟ ಬಟಾಣಿಯನ್ನು ಹಾಕಿ ನೆನೆಸಿ. ನಂತರ ಈ ನೀರನ್ನು ಮತ್ತೆ ಸೋಸಿ ಐಸ್ ವಾಟರ್ ಅಥವಾ ತಣ್ಣನೆಯ ನೀರನ್ನು ಹಾಕಿ. ಇದನ್ನು ಮತ್ತೆ ಸೋಸಿ ಬಟಾಣಿ ಕಾಳುಗಳನ್ನು ಒಂದು ಬಟ್ಟೆಯ ಮೇಲೆ ಹರಡಿ. ಈ ಬಟಾಣಿ ಕಾಳುಗಳು ಸಂಪೂರ್ಣ ಒಣಗಿದ ನಂತರ ಜಿಪ್ ಲಾಕ್ ಕವರ್ ನಲ್ಲಿ ಅಥವಾ ಗಾಳಿಯಾಡದ ಡಬ್ಬದಲ್ಲಿ ಶೇಖರಿಸಿ ಫ್ರೀಜರ್ ನಲ್ಲಿಡಿ. ಇದನ್ನೆ ಬೇಕಾದಾಗ ಬಳಸಿ ಪುನಃ ಫ್ರೀಜರ್ ನಲ್ಲಿಯೇ ಇಡಿ. ಹೀಗೆ ಮಾಡುವುದರಿಂದ ಬಹಳ ಸಮಯದವರೆಗೆ ಕೆಡದಂತೆ ಹಾಗೆಯೇ ಇಡಬಹುದು.

Comments are closed.