ಬಹಳ ಗಟ್ಟಿಯಾಗಿ ಅಷ್ಟೇ ರುಚಿಕರವಾಗಿ ಮೊಸರನ್ನು ಮನೆಯಲ್ಲೇ ತಯಾರಿಸುವ ವಿಧಾನ. ಹೇಗೆ ಗೊತ್ತೇ???

ನಮಸ್ಕಾರ ಸ್ನೇಹಿತರೇ ಮೊಸರಿಲ್ಲದೇ ಊಟವೇ ಆಗುವುದಿಲ್ಲ ಎಷ್ಟೋ ಜನರಿಗೆ, ಅದರಲ್ಲೂ ಕರಾವಳಿ ಭಾಗದ ಜನ ಮಧ್ಯಾಹ್ನದ ಊಟಕ್ಕೆ ಕೊನೆಯಲ್ಲಿ ಮೊಸರನ್ನು ಬಳಸಿಯೇ ಬಳಸುತ್ತಾರೆ. ಅಷ್ಟೇ ಅಲ್ಲ ಉತ್ತರ ಭಾರತದಲ್ಲಿ ಗಟ್ಟಿಯಾದ ಸಿಹಿ ಮೊಸರು ಒಂದು ಮುಖ್ಯ ಆಹಾರ. ಬೆಳಿಗ್ಗೆಯಿಂದ ಸಂಜೆಯವರೆಗೂ ಮೊಸರನ್ನು ನಾನಾ ವಿಧಗಳಲ್ಲಿ ಬಳಸಲಾಗುತ್ತದೆ. ಮೊಸರನ್ನು ಮನೆಗಳಲ್ಲಿ ತಯಾರಿಸುವುದು ಸಾಮಾನ್ಯ. ಆದರೆ ಎಲ್ಲರ ಮನೆಯಲ್ಲೂ ಮೊಸರು ಅಷ್ಟು ಗಟ್ಟಿಯಾಗಿ ಇರುವುದಿಲ್ಲ. ಹಾಗಾದರೆ ಈ ರುಚಿಕರವಾದ ಗಟ್ಟಿ ಮೊಸರನ್ನು ತಯಾರಿಸುವುದು ಹೇಗೇ? ಬನ್ನಿ ನಾವು ಹೇಳಿಕೊಡ್ತಿವಿ.

ಗಟ್ಟಿ ಮೊಸರು ತಯಾರಿಸುವ ಬಗೆ: ಗಟ್ಟಿ ಮೊಸರು ತಯಾರಿಸಲು ಹಾಲು ಹಾಗೂ ಸ್ವಲ್ಪ ಮೊಸರು. ಈ ಎರಡು ವಸ್ತುಗಳು ಸಾಕು. ಮೊದಲು ಒಂದು ಪಾತ್ರೆಗೆ ನೀರನ್ನು ಹಾಕಿ ಕುದಿಸಿಕೊಳ್ಳಿ, ನಂತರ ಆ ನೀರನ್ನು ಚೆಲ್ಲಿ ಅದರಲ್ಲಿ ಹಾಲು ಕಾಯಿಸಿ. ಏಕೆಂದರೆ ಆ ಪಾತ್ರೆಯಲ್ಲಿ ಬೇರೆ ಯಾವುದೇ ಪದಾರ್ಥಗಳ ಅಂಶವೂ ಇರಬಾರದು. ಹಾಗೇಯೇ ಒಂದು ಸೌಟನ್ನು ಕೂಡ ಸ್ವಚ್ಛಗೊಳಿಸಿ ಇಟ್ಟುಕೊಳ್ಳಿ. ಈಗ ಕಾಲನ್ನು ಕುದಿಯಲು ಬಿಡಿ. ಹಾಲು ಉಕ್ಕಿದ ಮೇಲೆ ಆ ಸೌಟಿನಿಂದ ಹಾಲನ್ನು ಕಲಕಿ. ಒಟ್ಟಿಗೆ ಹಾಲನ್ನು ಕನಿಷ್ಠ 10 ನಿಮಿಷಗಳವರೆಗೆ ಕಾಯಿಸಬೇಕು. ನಂತರ ಹಾಲನ್ನು ಆರಲು ಬಿಡಿ. ಆದರೆ ಈ ಹಾಲು ಉಗುರುಬೆಚ್ಚಗೆ ಆದರೆ ಸಾಕು. ಸಂಪೂರ್ಣ ತಣ್ನಗಾಗುವುದು ಬೇಡ.

ಈಗ ತೆಗೆದಿಟ್ಟುಕೊಂಡ ಮೊಸರಿಗೆ ನೀರು ಸೇರಿಸಿ ಸ್ವಲ್ಪ ತೆಳ್ಳಗಾಗಿಸಿ. ಈ ಮೊಸರನ್ನು ಹಾಲಿಗೆ ಸೇರಿಸಿ. ಈಗ ಹಾಲಿನಲ್ಲಿ ಮೊಸರು ಸರಿಯಾಗಿ ಮಿಶ್ರಣ ಮಾಡಿ. ಈಗ ಹಾಲು ತಣ್ಣಗಾದ ಮೇಲೆ ಒಂದು ಪ್ಲೇಟ್ ನ್ನು ಮುಚ್ಚಿ ಹಾಲಿನ ಪಾತ್ರೆಯನ್ನು ಬೆಚ್ಚಗಿನ ಸ್ಥಳದಲ್ಲಿಡಿ. ಗ್ಯಾಸ್ ಬೆಚ್ಚಗಿದ್ದರೆ ಅಲ್ಲಿಡಬಹುದು. ಅಥವಾ ಅಕ್ಕಿ ಡಬ್ಬಿಯಲ್ಲಿ ಪಾತ್ರೆಯನ್ನು ಮುಚ್ಚಿ ಇಡಬಹುದು. ಪಾತ್ರೆಯ ಒಳಗೆ ಗಾಳಿ ಹೋಗದಂತೆ ಭಾರವಾದ ವಸ್ತುವನ್ನು ಹೇರಿದರೆ ಇನ್ನೂ ಉತ್ತಮ. ಇಡೀ ರಾತ್ರಿ ಹೀಗೆ ಬಿಡಿ. ನಂತರ ಬೆಳಗ್ಗೆ ಪಾತ್ರ್ಯಲ್ಲಿ ರುಚಿಕರವಾದ ಗಟ್ಟಿಯಾದ ಮೊಸರು ರೆಡಿಯಾಗಿರುತ್ತದೆ ಇದನ್ನು ಸಲಾಡ್ ಗಳಲ್ಲಿ ಅಥವಾ ಸಕ್ಕರೆ ಬೆರೆಸಿ ಹಾಗೇಯೂ ತಿನ್ನಬಹುದು.

Comments are closed.